X
ഹോം ടോപ് ലിസ്റ്റിങ്ങ്‌

ವಿನಯ್ ತುಂಬಾ ಸ್ವೀಟ್ ಪರ್ಸನ್: ಅವರಿಗೆ ಈ ಮುಖ ಇದೆಯೆಂದು ಗೊತ್ತೇ ಇರಲಿಲ್ಲ ಎಂದ ಸಂಗೀತಾ!

Author: Sowmya Bairappa | Published: Friday, November 24, 2023, 11:36 AM [IST]

ಸದ್ಯ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಬಿಗ್‌ಬಾಸ್ ಮನೆಯಲ್ಲಿ ಯಾರು ಯಾರಿಗೆ ಯಾವಾಗ ಬೇಕಾದರೂ ಆತ್ಮೀಯರಾಗಬಹುದು. ಇಂದು ಸ್ನೇಹಿತರುಅ ನಿಸಿಕೊಂಡವರು ನಾಳೆ ಬದ್ಧ ವೈರಿಗಳಾಗಬಹುದು. ಆರಂಭದಲ್ಲಿ ತನಿಷಾ, ಕಾರ್ತಿಕ್ ಹಾಗೂ ಸಂಗೀತಾ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಆದ್ರೀಗ ಸಂಗೀತಾ ಅವರಿಂದ ದೂರವಾಗಿ ವಿನಯ್ ಟೀಂ ಸೇರಿಕೊಂಡಿದ್ದಾರೆ. ಸದ್ಯ ಮೂವರು ಬದ್ಧ ವೈರಿಗಳಾಗಿದ್ದಾರೆ. ವಿನಯ್ ಅವರನ್ನು ಬದ್ಧ ವೈರಿಯಂತೆ ನೋಡ್ತಿದ್ದ ಸಂಗೀತಾ, ಈಗ ಅವರನ್ನು ಸಖತ್ ಸ್ವೀಟ್ ಅಂತ ಹೇಳಿದ್ದಾರೆ.

Share:
cover image
ವಿನಯ್ ಸ್ವೀಟ್ ಪರ್ಸನ್

ಬಿಗ್‌ಬಾಸ್ ಆರಂಭದಲ್ಲಿ ವಿನಯ್ ಜೋರಾಗಿ ಮಾತನಾಡ್ತಾರೆ. ಅವರ ಮಾತು ಥ್ರೆಟ್ ಆಗ್ತಿದೆ ಅಂತ ಸಂಗೀತಾ ಜಗಳ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಕಾರ್ತಿಕ್ ಸಂಗೀತಾಗೆ ಬೆಂಬಲವಾಗಿ ನಿಂತು ವಿನಯ್ ಅವರನ್ನು ಎದುರಿಸಿದ್ದರು. ಇದೀಗ ಸಂಗೀತಾ ಅವರು ಕಾರ್ತಿಕ್‌ನಿಂದ ದೂರವಾಗಿ ವಿನಯ್ ಟೀಂ ಜೊತೆ ಸ್ನೇಹ ಬೆಳಸಿಕೊಂಡಿದ್ದಾರೆ. ಸಂಗೀತಾ ಬೇಸರಲ್ಲಿದ್ದಾಗ ವಿನಯ್ ಊಟ ಮಾಡಿಸಿದ್ದಾರೆ. ಅವರ ದುಃಖನ್ನು ಆಲಿಸಿದ್ದಾರೆ. ಹೀಗಾಗಿ ಸಂಗೀತಾಗೆ ಅವರ ಇನ್ನೊಂದು ಮುಖ ಕಂಡಿದ್ಯಂತೆ. ಈ ಬಗ್ಗೆ ನಮ್ರತಾ ಜೊತೆ ಮಾತನಾಡುತ್ತಾ, ವಿನಯ್ ಅವರಿಗೆ ಈ ಮುಖ ಇದೆಯಂದು ಗೊತ್ತಿರಲಿಲ್ಲ. ಇಷ್ಟು ಸ್ವೀಟ್ ಆಗಿರುವ ವ್ಯಕ್ತಿಯನ್ನು ಬಿಗ್‌ಬಾಸ್ ಮನೆಯಲ್ಲಿ ನೋಡೇ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ನಮ್ರತಾ, ನಾನು ಮೊದನಿಂದಲೂ ಅವರ ಈ ಮುಖವನ್ನು ಮಾತ್ರ ನೋಡುತ್ತಿರುವುದು ಎಂದಿದ್ದಾರೆ. 


ಪ್ರತಾಪ್ ಬಗ್ಗೆ ಚುಚ್ಚು ಮಾತು

ಬಾತ್‌ರೂಮ್ ಹೋಗುವ ವಿಚಾರಕ್ಕೆ ವಿನಯ್ ಹಾಗೂ ಸ್ನೇಹಿತ್ ಅಡ್ಜಸ್ಟಮೆಂಟ್ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ಡ್ರೋನ್ ಪ್ರತಾಪ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕಡ ಸ್ನೇಹಿತ್ ಹಾಗೆಯೇ ಮಾಡುತ್ತೇವೆ ಏನೀಗ ಅಂತ ಏರುಧ್ವನಿಯಲ್ಲಿ ಮಾತನಾಡಿದ್ದಾರೆ. ಜೊತೆಗೆ ಈ ವಿಷಯವನ್ನು ತಮ್ಮ ಗುಂಪಿನಲ್ಲಿ ಹೇಳಿಕೊಂಡು ವಿನಯ್ ನಕ್ಕಿದ್ದಾರೆ. ಅದಕ್ಕೆ ನಮ್ರತಾ, ಇದೊಂದು ವಿಚಾರವನ್ನಿಟ್ಟುಕೊಂಡು ಕೊನೆವರೆಗೂ ಇದನ್ನೇ ಹೇಳುತ್ತಿರುತ್ತಾನೆ ಅಂದಿದ್ದಾರೆ. ಅದಕ್ಕೆ ಸಂಗೀತಾ ಒಂದು ವಿಚಾರ ಕಷ್ಕೊಂಡ್ರೆ ಮುಗ್ದೋಯ್ತು ಅಂತ ನಗುತ್ತಾ ಚುಚ್ಚಿ ಮಾತನಾಡಿದ್ದಾರೆ. ಇದು ಅನೇಕರ ಬೇಸರಕ್ಕೆ ಕಾರಣವಾಗಿದೆ. ತಮ್ಮನಂತಿದ್ದ ಪ್ರತಾಪ್ ಬಗ್ಗೆ ಸಂಗೀತಾ ಆಡಿಕೊಂಡಿರುವುದು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ. 

ಕಾರ್ತಿಕ್ ಇಲ್ಲಿ ಆಕ್ಟಿಂಗ್ ಮಾಡ್ತಿದ್ದಾನೆ ಎಂದ ವಿನಯ್

ಕಾರ್ತಿಕ್ ಬಗ್ಗೆ ವಿನಯ್ ಹಾಗೂ ನಮ್ರತಾ ಮಾತನಾಡುತ್ತಿದ್ದರು. ಈ ಸಂದರ್ಭ ವಿನಯ್, ನಾನು ಕಳೆದ ಹತ್ತು ವರ್ಷಗಳಿಂದ ಅವನನ್ನು ನೋಡುತ್ತಿದ್ದೇನೆ. ಇದು ಅವನ ಮಾಸ್ಕ್. ಅವನು ಇಲ್ಲಿ ಮಾಸ್ಕ್ ಹಾಕಿಕೊಂಡಿದ್ದಾನೆ. ಮೊದಲ ದಿನದಿಂದಲೂ ಅವನು ಇಲ್ಲಿ ಆಕ್ಟಿಂಗ್ ಮಾಡುತ್ತಿರುವುದು ಎಂದರು. ಅದಕ್ಕೆ ಸಂಗೀತಾ ಆರ್‌ಯು ಸೀರಿಯಸ್. ನೋ.. ಅವರು ಹೊರಗಡೆ ಹೇಗಂತ ನನಗೆ ಗೊತ್ತಿಲ್ಲ. ಆದರೆ, ಇಲ್ಲಿ ನನಗೆ ಹಾಗನಿಸಿಲ್ಲ. ಈಗೀಗ ಮಾಡುತ್ತಿರುವುದು obvious ಅನಿಸುತ್ತಿದೆ. ಆದರೆ, ಮಾಸ್ಕ್ ಅನ್ನೋದು ನನಗೆ ತಿಳಿದಿಲ್ಲ ಎಂದರು. 


ದಿನ ಕಳೆದಂತೆ ಕುಸಿಯುತ್ತಿರುವ ಫಾಲೋವರ್ಸ್ ಸಂಖ್ಯೆ

ಸಂಗೀತಾ ಶೃಂಗೇರಿ ವಿನಯ್ ಅವ ತಂಡಕ್ಕೆ ಸೇರಿಕೊಂಡ ಮೇಲೆ ಅವರನ್ನು ವೀಕ್ಷಕರು ನೋಡುತ್ತಿರುವ ರೀತಿಯೇ ಬದಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್‌ಸ್ಟಾಗ್ರಾಮ್‌ನಲ್ಲೂ ಅವರ ಫಾಲೋವರ್ಸ್ ಸಂಖ್ಯೆ ಕುಸಿಯುತ್ತಿದೆ. ತಲೆ ಬೋಳಿಸುವ ಚಾಲೆಂಜ್ ನೀಡುವುದಕ್ಕೂ ಮೊದಲು ಸಂಗೀತಾಗೆ  4.49 ಹಿಂಬಾಲಕರಿದ್ದರು. ಬಳಿಕ 4.38 ಲಕ್ಷಕ್ಕೆ ಇಳಿಕೆಯಾಗಿತ್ತು. ಇದೀಗ ಫಾಲೋವರ್ಸ್ ಸಂಖ್ಯೆ  4.37ಕ್ಕೆ ಕುಸಿದಿದೆ. ಬಿಗ್‌ಬಾಸ್ ಮನೆಯಲ್ಲಿನ ಸಂಗೀತಾ ಆಟ ಅಭಿಮಾನಿಗಳ ಮೇಲೂ ನೇರ ಪರಿಣಾಮ ಬೀರುತ್ತಿದ್ದು, ಹಿಂಬಾಲಕರ ಸಂಖ್ಯೆ ದಿನ ಕಳೆದಂತೆ ಇಳಿಕೆಯಾಗುತ್ತಲೇ ಇದೆ. ಇದೇ ರೀತಿಯಾದರೆ ಅವರು ಶೀಘ್ರದಲ್ಲೇ ಎಲಿಮಿನೇಟ್ ಆದರೂ ಆಶ್ಚರ್ಯವಿಲ್ಲ.   

ಕಾರ್ತಿಕ್-ತುಕಾಲಿ ಸಂತು ಕಿತ್ತಾಟ

ಸಂಪತ್ತಿಗೆ ಸವಾಲ್ ತಂಡ ಗಜಕೇಸರಿ ತಂಡವನ್ನ ಮಣಿಸಿ ಮೂರು ಟಾಸ್ಕ್‌ಗಳನ್ನ ಗೆದ್ದಿದೆ.ಹೀಗಾಘಿ, ಬಿಗ್‌ಬಾಸ್ ಸಂಪತ್ತಿಗೆ ಸವಾಲ್ ತಂಡದ ಇಬ್ಬರನ್ನು ಹೊರತುಪಡಿಸಿ 4 ಮಂದಿ ಮಾತ್ರ ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದು. ಆ ಇಬ್ಬರನ್ನು ನೀವೇ ಗುರುತು ಮಾಡಬೇಕು ಎಂದು ಹೇಳಿದ್ದರು. ಈಗಾಗಲೇ ಮೈಕಲ್-ಕಾರ್ತಿಕ್ ಕ್ಯಾಪ್ಟನ್ ಆಗಿದ್ದು ನೀತು, ವರ್ತೂರು, ತುಕಾಲಿ ಸಂತು ಹಾಗೂ ತನಿಷಾ ಮಾತ್ರ ಕ್ಯಾಪ್ಟನ್ ಆಗಿಲ್ಲ. ಇಬ್ಬರನ್ನು ಬಿಟ್ಟರೆ ಈ ನಾಲ್ಕು ಮಂದಿ ಆಡಲು ಅರ್ಹರಾಗಿದ್ದರು. ಆದರೆ, ಕಾರ್ತಿಕ್ ತಾನು ಮತ್ತೊಮ್ಮೆ ಕ್ಯಾಪ್ಟನ್ ಆಗಬೇಕು ಎಂದು ನಾನು ಸಹ ಕ್ಯಾಪ್ಟನ್ ಟಾಸ್ಕ್ ಆಡುವೆ ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ವಿರೋಧ ವ್ಯಕ್ತಪಡಿಸಿದ್ದು, ನಿನ್ನ ಒಬ್ಬನಿಂದಲೇ ನಾವ್ಯಾರು ಟಾಸ್ಕ್‌ಗಳನ್ನ ಗೆಲ್ಲಿಲ್ಲ. ತಂಡದ ಸದಸ್ಯರು ಆಡಿದ್ದಕ್ಕೆ ಎಲ್ಲಾ ಟಾಸ್ಕ್‌ಗಳಲ್ಲೂ ವಿನ್ ಆಗಿದ್ದೇವೆ ಎಂದಿದ್ದಾರೆ. ಆದರೆ, ಕಾರ್ತಿಕ್ ನನ್ನಿಂದಲೇ ಆಟ ಗೆದ್ದಿದ್ದು ಅಂದಿದ್ದಾರೆ. ಟಾಸ್ಕ್‌ಗಾಗಿ ನಾನು ಸಹ ತಲೆ ಬೋಳಿಸಿಕೊಂಡಿದ್ದೇನೆ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಎದುರಾಳಿ ತಂಡದವರು ಅವರಿಬ್ಬರ ಕಿತ್ತಾಟ ನೋಡಿ ಮಜಾ ತೆಗೆದುಕೊಂಡಿದ್ದಾರೆ. 


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+