X
ഹോം ടോപ് ലിസ്റ്റിങ്ങ്‌

ಬಿಗ್‌ಬಾಸ್‌ ಸೀಸನ್ 10ರ ಸ್ಪರ್ಧಿಗಳ ಫಸ್ಟ್ ಸೀರಿಯಲ್ ಯಾವುದು ಗೊತ್ತಾ? ಇಲ್ಲಿದೆ ಲಿಸ್ಟ್

Author: Sowmya Bairappa | Published: Saturday, December 16, 2023, 04:09 PM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10 ಈ ಬಾರಿ ಹಲವಾರು ವಿಷಯಗಳಿಂದ ಗಮನ ಸೆಳೆದಿದೆ. ಸಾಕಷ್ಟು ಜಗಳ-ಗಲಾಟೆಗಳಿಂದ ಸುದ್ದಿಯಾದ ಸೀಸನ್ ಕೂಡ ಇದೇ. ಈ ಬಾರಿ ದೊಡ್ಮನೆ ಪ್ರವೇಶಿಸಿರುವ ಬಹುತೇಕರು ನಟ-ನಟಿಯರೇ ಆಗಿದ್ದಾರೆ. ಹಾಗಾದರೆ, ಬಿಗ್‌ಬಾಸ್‌ ಸ್ಪರ್ಧಿಗಳು ನಟಿಸಿದ ಮೊದಲ ಧಾರಾವಾಹಿಗಳು ಯಾವುವು ಎಂಬ ಮಾಹಿತಿಯನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Share:
cover image
ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಕಳೆದ ಹಲವಾರು ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಯಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿರುವ ಕಾರ್ತಿಕ್, ಈವರೆಗೂ ೩೦ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.  ಅಂದಹಾಗೆ ಕಾರ್ತಿಕ್ ಮಹೇಶ್ ಮೊದಲು ನಾಯಕನಾಗಿ ಅಭಿನಯಿಸಿದ ಧಾರಾವಾಹಿ 'ಖುಷಿ'. ಇದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು.

കൂടുതല്‍ കാണാം


ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ ಕೂಡ ಕಿರುತೆರೆ ಮೂಲಕವೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ಇವರ ಮೊದಲ ಸೀರಿಯಲ್ 'ಹರ ಹರ ಮಹಾದೇವ'. ಈ ಧಾರಾವಾಹಿಯಲ್ಲಿ ಸತಿಯ ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ನಂತರ ಎ+ ಎಂಬ ಸಿನಿಮಾಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು, ಚಾರ್ಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚಿದರು. 

കൂടുതല്‍ കാണാം

ತನಿಷಾ ಕುಪ್ಪಂಡ

ತನಿಷಾ ಕುಪ್ಪಂಡ 2012ರಲ್ಲಿ ದಿಗಂತ್ ನಾಯಕನಾಗಿ ನಟಿಸಿರುವ 'ಪಾರಿಜಾತ' ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದನ್ನು ನಿರ್ವಹಿಸಿದ್ದರು. ನಂತರ 2013ರಲ್ಲಿ ನಡೆದ 'ಹಳ್ಳಿ ದುನಿಯಾ' ಎಂಬ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಜನರಿಗೆ ಪರಿಚಿತರಾದರು. 2012ರಲ್ಲಿ ಪ್ರಸಾರವಾದ 'ಮಂಗಳಗೌರಿ ಮದುವೆ' ಅವರ ನಟನೆಯ ಮೊದಲ ಸೀರಿಯಲ್. 

കൂടുതല്‍ കാണാം


ವಿನಯ್ ಗೌಡ (ನಟ)

ವಿನಯ್ ಗೌಡ ಕನ್ನಡ ಕಿರುತೆರೆಯಲ್ಲಿ 'ಶಿವ' ಅಂತಲೇ ಖ್ಯಾತಿ ಪಡೆದಿದ್ದಾರೆ. ವಿನಯ್ 2010ರಲ್ಲಿ 'ಚಿಟ್ಟೆ ಹೆಜ್ಜೆ' ಎಂಬ ಧಾರವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟರು. ನಂತರ ಸಿಐಡಿ ಕರ್ನಾಟಕ, ಅಂಬಾರಿ, ಶುಭವಿವಾಹ, ಅಮ್ಮ, ಹರ ಹರ ಮಹಾದೇವ, ಯಡಿಯೂರು ಸಿದ್ದಲಿಂಗೇಶ್ವರ, ನಮ್ಮ ಲಚ್ಚಿ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ತೆಲುಗು ಸೀರಿಯಲ್‌ನಲ್ಲೂ ಬಣ್ಣ ಹಚ್ಚಿದ್ದಾರೆ.

 

കൂടുതല്‍ കാണാം

ನಮ್ರತಾ ಗೌಡ

ಬಾಲನಟಿಯಾಗಿ ಗುರುತಿಸಿಕೊಂಡಿರುವ ನಮ್ರತಾ ಗೌಡ, ಪುಟ್ಟಗೌರಿ ಮದುವೆ ಹಾಗೂ ನಾಗಿಣಿ ೨ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದರು. ಆದರೆ, ಇವರು ನಟನೆಯ ಮೊದಲ ಧಾರಾವಾಹಿ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ'.  ನಮ್ರತಾ ಬಾಲನಟಿಯಾಗಿ 'ನಾಕುತಂತಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಎಕ್ಸ್ ಕ್ಯೂಸ್ ಮಿ, ಮಿಲನ, ತುತ್ತೂರಿ ಮುಂತಾದ ಸಿನಿಮಾಗಳಲ್ಲಿಯೂ ಬಣ್ಣಹಚ್ಚಿದ್ದರು. 

കൂടുതല്‍ കാണാം


ಸ್ನೇಹಿತ್ ಗೌಡ

ಸ್ನೇಹಿತ್ ಗೌಡ ಇದುವರೆಗೂ ನಟಿಸಿರುವುದು ಕೇವಲ ಒಂದು ಸೀರಿಯಲ್‌ನಲ್ಲಿ ಮಾತ್ರ. ಕಲರ್ಸ್‌ ಕನ್ನಡದ ಪ್ರಸಾರವಾಗಿದ್ದ 'ನಮ್ಮನೆ ಯುವರಾಣಿ' ಸೀರಿಯಲ್‌ನಲ್ಲಿ ಪ್ರಣವ್ ಎಂಬ ಪಾತ್ರ ಮಾಡಿದ್ದರು. ಅದಕ್ಕೂ ಮೊದಲು 2016 ರಲ್ಲಿ ತೆರೆಕಂಡ `ಚಿರವಾದ ನೆನಪು' ಚಿತ್ರದಲ್ಲಿ ಅಭಿನಯಿಸಿದ್ದರು. 

കൂടുതല്‍ കാണാം

ಸಿರಿಜಾ

ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಸಿರಿ, ಕೆಲ ವರ್ಷಗಳ ಹಿಂದೆ ಬಹುಬೇಡಿಕೆಯ ನಟಿಯಾಗಿದ್ದರು. ಸಿರಿ ನಟನೆಯ ಮೊದಲ ಧಾರಾವಾಹಿ 'ಅಂಬಿಕಾ'. ಈ ಸೀರಿಯಲ್‌ನಲ್ಲಿ ನಟಿಸುವಾಗ ಅವರು  9ನೇ ತರಗತಿಯಲ್ಲಿ ಓದುತ್ತಿದ್ದರು. ನಂತರ ಮನೆಯೊಂದು ಮೂರು ಬಾಗಿಲು, ಬಂದೇ ಬರತಾವ ಕಾಲ, ರಂಗೋಲಿ, ಸಂಬಂಧ, ಕೋಗಿಲೆ, ಈ ಬಂಧನ, ಬದುಕು, ಕೋಗಿಲೆ, ಗೀತಾಂಜಲಿ ಜೋಡಿಹಕ್ಕಿ, ಅಂಜಲಿ ಸೇರಿದಂತೆ ಹಲವು ಹಿಟ್ ಧಾರಾವಾಹಿಗಳಲ್ಲಿ ನಟಿಸಿದರು. ನಟಿ ಸಿರಿ ಏಕಕಾಲಕ್ಕೆ ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ್ದ ದಾಖಲೆಯಿದೆ. 

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+