X
ഹോം ടോപ് ലിസ്റ്റിങ്ങ്‌

ಬಿಗ್‌ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಜೀವನದ ಕುರಿತ ಕುತೂಹಲಕಾರಿ ವಿಷಯಗಳಿವು!

Author: Sowmya Bairappa | Updated: Wednesday, October 11, 2023, 01:12 PM [IST]

ಅಕ್ಟೋಬರ್ ಎಂಟರಿಂದ ಕನ್ನಡ ಕಿರುತೆರೆ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್‌ಬಾಸ್‌ ಸೀಸನ್ 10' ಆರಂಭವಾಗಿದೆ. ದೊಡ್ಮನೆಗೆ ಯುವ ವಿಜ್ಞಾನಿ ಅಂತಲೇ ಹೈಲೈಟ್ ಆಗಿದ್ದ ಡ್ರೋನ್ ಪ್ರತಾಪ್ ಆಗಮಿಸಿದ್ದಾರೆ. ಪ್ರತಾಪ್ ೮೦ಕ್ಕಿಂತ ಕಡಿಮೆ ವೋಟ್ ಪಡೆದು ಅಸಮರ್ಥರ ಸಾಲಿನಲ್ಲಿದ್ದಾರೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಡ್ರೋನ್ ಪ್ರತಾಪ್ ಜೀವನದ ಕುರಿತ ಕೆಲ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

Share:
cover image
ಊರು ಮತ್ತು ಶಿಕ್ಷಣ

ಡ್ರೋನ್ ಪ್ರತಾಪ್ ಮೂಲತಃ ಮಂಡ್ಯ ಜಿಲ್ಲೆಯ ನೆಟ್ಕಲ್ ಗ್ರಾಮದವರಾಗಿದ್ದು, ಇವರು ಸಾಮಾನ್ಯ ರೈತರೊಬ್ಬರ ಮಗನಾಗಿದ್ದಾರೆ. ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಪಡೆದಿರುವ ಪ್ರತಾಪ್, ಭಾರತೀನಗರದ ಜಿ.ಮಾದೇಗೌಡ ಪದವಿಪೂರ್ಣ ಕಾಲೆಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ನಂತರ ಸಾಂಸ್ಕೃತಿಕ ನಗರಿ ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಬಿಎಸ್‌ಸಿ (ಸಿಬಿಜಡ್) ಓದಿದ್ದಾರೆ. 


ಡ್ರೋನ್ ವಿಜ್ಞಾನಿ ಎಂದೇ ಜನಪ್ರಿಯ

ಡ್ರೋನ್ ಪ್ರತಾಪ್ ಕಳೆದ ನಾಲ್ಕೈದು ವರ್ಷಗಳ ಹಿಂದೆ 'ಡ್ರೋನ್ ವಿಜ್ಞಾನಿ' ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತಾದ್ಯಂತ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದರು. ತಾವು 22ರ ವಯಸ್ಸಿನಲ್ಲಿಯೇ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ತಯಾರಿದ್ದೆ ಎಂದು ಹೇಳಿಕೊಂಡಿದ್ದರು. ಜೊತೆಗೆ 2017ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆದ ಅಂತರಾಷ್ಟ್ರೀಯ ಡ್ರೋನ್ ಪ್ರದರ್ಶನದಲ್ಲಿ ತಾವೇ ತಯಾರಿಸಿರುವ ಡ್‌ರೋನ್ ಪ್ರದರ್ಶಿಸಿದ್ದೆ. ನೂರಕ್ಕೂ ಹೆಚ್ಚು ದೇಶಗಳ ಪ್ರತಿಭಾನ್ವಿತರು ಭಾಗವಹಿಸಿದ್ದ ಆ ಸ್ಪರ್ಧೆಯಲ್ಲಿ ನನಗೆ ಗೋಲ್ಡ್ ಮೆಡಲ್ ದೊರಕಿತ್ತು ಎಂದು ಹೇಳಿದ್ದರು. ಇವರ ಮಾತು ನಂಬಿದ್ದ ಹಲವರು ಸಾಧನೆ ಅಂದರೆ ಇದು ಎಂದಿದ್ದರು. 

 

ದಾಖಲೆ ಒದಗಿಸುವಲ್ಲಿ ವಿಫಲ

ಪ್ರತಾಪ್ ಅವರ ಸಾಧನೆ ಕುರಿತು ಪ್ರಚಾರ ಹೆಚ್ಚಾಸ ಸಮಯದಲ್ಲಿ ಹಲವರಿಗೆ ಹಾಗೂ ಮಾಧ್ಯಮಗಳಿಗೆ ಸಂದೇಹ ಉಂಟಾಗಿತ್ತು. ಇವರ ಸಾಧನೆಯ ಕುರಿತ ವರದಿಗಳನ್ನು ನೋಡಿದ ಬಳಿಕ ಡಿಆರ್‌ಡಿಒಗೆ ಸೇರ್ಪಡೆ ಮಾಡಬೇಕು ಎಂಬ ಕೂಗು ಸಹ ಕೇಳಿಬಂದಿತ್ತು. ಆದರೆ, ಪ್ರತಾಪ್‌ಗೆ ತಮ್ಮ ಸಾಧನೆಯ ಯಾವುದೇ ದಾಖಲೆ ಒದಗಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಅವರು ಸುಳ್ಳು ಹೇಳಿರುವುದು ಎಲ್ಲರಿಗೂ ತಿಳಿದಿತ್ತು. 


ಟೀಕೆ ಮತ್ತು ಟ್ರೋಲ್

ಪ್ರತಾಪ್ ಹೇಳಿರುವುದು ಸುಳ್ಳು ಎಂದು ಗೊತ್ತಾಗುತ್ತಿದ್ದಂತೆ ಟೀಕೆ ಮತ್ತು ಟ್ರೋಲ್‌ಗಳು ಆರಂಭವಾದವು. ಡ್ರೋನ್ ತಯಾರಿಸಿ ಸಾಧನೆ ಮಾಡಿದ್ದಾರೆ ಎಂದು ಅಭಿನಂದಿಸಿದವರು, ಸನ್ಮಾನಿಸಿದ್ದವರು ಹಾಗೂ ಅವರ ಸಾಧನೆ ಹೊಗಳಿದ್ದವರು ಕೂಡ ಇವರ ವಿರುದ್ಧ ತಿರುಗಿ ಬಿದ್ದಿದ್ದರು. ಪ್ರತಾಪ್ ಹೇಳಿದ್ದೆಲ್ಲಾ ಸುಳ್ಳು, ಆತ ಯಾವ ಡ್ರೋನ್ ಕಂಡು ಹಿಡಿದಿಲ್ಲ ಎಂಬ ವಿಷಯವನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಆರಂಭವಾದವು. ಒಂದು ಕಾಲದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಪ್ರತಾಪ್ ನಂತರ ದಿನಗಳಲ್ಲಿ ಟ್ರೋಲ್‌ಗಳಿಗೆ ಆಹಾರವಾಗಿಬಿಟ್ಟಿದ್ದರು.  

 

ತಮ್ಮದೇ ಆಫೀಸ್ ಆರಂಭಿಸಿರುವ ಪ್ರತಾಪ್

ಸದ್ಯ ಡ್ರೋನ್ ಪ್ರತಾಪ್ ತಮ್ಮದೇಯಾದ ಆಫೀಸ್ ಆರಂಭಿಸಿದ್ದಾರೆ. ಅಲ್ಲಿ ಡ್ರೋನ್‌ಗಳಿದ್ದು, ಕೃಷಿ ಭೂಮಿಗೆ ಔಷಧ ಸಿಂಪಡಣೆ ಮಾಡಲು ಇವರು ತಯಾರಿಸಿರುವ ಡ್ರೋನ್ ಉಪಯೋಗವಾಗಲಿದೆಯಂತೆ. ಸದ್ಯ ಅವರು ಬಿಗ್‌ಬಾಸ್‌ ಸೀಸನ್ ೧೦ಕ್ಕೆ ಎಂಟ್ರಿಕೊಟ್ಟಿದ್ದು, ಟ್ರೋಫಿ ಗೆಲ್ಲಾಲಿದ್ದಾರ? ಎಂಬುದನ್ನು ಕಾದು ನೋಡಬೇಕು. 

 


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+