X
ഹോം ടോപ് ലിസ്റ്റിങ്ങ്‌

ಯೂಟ್ಯೂಬ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿರುವ ಕನ್ನಡ ರ‍್ಯಾಪ್ ಸಾಂಗ್ಸ್

Author: Administrator | Updated: Wednesday, June 10, 2020, 08:09 PM [IST]

ಸಂಗೀತದಲ್ಲಿ ನೂರಾರು ವಿಧಗಳಿದ್ದರೂ, ಪ್ರಸ್ತುತ ರ‍್ಯಾಪ್ ಗೀತೆಗಳು ಯುವಜನತೆಯ ಹಾಟ್ ಫೇವರೇಟ್ ಆಗಿವೆ. ಎಮಿನೆಮ್, ಜೇ ಜೆಡ್, ಡ್ರೇಕ್ ಮುಂತಾದ ರ‍್ಯಾಪರ್ ಗಳಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿಧಾನವಾಗಿ ಭಾರತದಲ್ಲಿ ಕೂಡ ಹಲವು ರ‍್ಯಾಪರ್ ಗಳು ಹುಟ್ಟಿದ್ದರು. ಕನ್ನಡದಲ್ಲಿ ಕೂಡ ಚಂದನ್ ಶೆಟ್ಟಿ, ಆಲ್ ಓಕೆ, ರಾಹುಲ್ ಡೀಟೋ, ವಿರಾಜ್ ಮುಂತಾದ ಪ್ರತಿಭೆಗಳು ತಮ್ಮ ಕನ್ನಡ ರ‍್ಯಾಪ್ ಗೀತೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸತೊಡಗಿದರು. ಇಲ್ಲಿ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ರ‍್ಯಾಪ್ ಗೀತೆಗಳನ್ನು ನೀಡಲಾಗಿದೆ.

Share:
cover image
Video Thumbnail

3 Peg - 3 Peg: ಯೂಟ್ಯೂಬ್ ವೀಕ್ಷಣೆ - 83+ ಮಿಲಿಯನ್

ಚಂದನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಮೂರೇ ಮೂರು ಪೆಗ್ ಗೀತೆ ಕನ್ನಡದ ಮೊದಲ ಪ್ರಸಿದ್ಧ ರ‍್ಯಾಪ್ ಗೀತೆ ಎನ್ನಬಹುದು. ಈ ಗೀತೆ ಬರೆದು ಹಾಡಿದ್ದ ಚಂದನ್ ಜೊತೆಗೆ ಐಂದ್ರಿತಾ ರೇ ಹೆಜ್ಜೆ ಹಾಕಿದ್ದರು. ಯೂಟ್ಯೂಬ್ ನಲ್ಲಿ 83 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

Video Thumbnail

Tequila - ಟಕಿಲ್: ಯೂಟ್ಯೂಬ್ ವೀಕ್ಷಣೆ - 58 ಮಿಲಿಯನ್

ಚಂದನ್ ಶೆಟ್ಟಿ ನಿರ್ದೇಶನ ಮತ್ತು ಕಂಠದಲ್ಲಿ ಮೂಡಿಬಂದ ಟಕಿಲ್ ಗೀತೆಯಲ್ಲಿ ಚಂದನ್ ಜೊತೆ ಶಾಲಿನಿ ಗೌಡ ಹೆಜ್ಜೆ ಹಾಕಿದ್ದರು. ಯೂಟ್ಯೂಬ್ ನಲ್ಲಿ 58 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

Video Thumbnail

Chacolate Girl - ಚಾಕೋಲೇಟ್ ಗರ್ಲ್: ಯೂಟ್ಯೂಬ್ ವೀಕ್ಷಣೆ - 29 ಮಿಲಿಯನ್

ಚಂದನ್ ಶೆಟ್ಟಿ ಕಂಠದಲ್ಲಿ ಮೂಡಿಬಂದ ಮತ್ತೊಂದು ರ‍್ಯಾಪ್ ಗೀತೆ ಚಾಕೋಲೇಟ್ ಗರ್ಲ್ ನಲ್ಲಿ ಚಂದನ್ ಜೊತೆ ಮುಂಗಾರು ಮಳೆ 2 ಚಿತ್ರದ ಖ್ಯಾತಿ ನೇಹಾ ಶೆಟ್ಟಿ ಹೆಜ್ಜೆ ಹಾಕಿದ್ದರು. ಯೂಟ್ಯೂಬ್ ನಲ್ಲಿ 29 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

Video Thumbnail

Dont Worry - ಡೋಂಟ್ ವರಿ : ಯೂಟ್ಯೂಬ್ ವೀಕ್ಷಣೆ - 14+ ಮಿಲಿಯನ್

ಆಲ್ ಓಕೆ ಅಲಿಯಾಸ್ ಅಲೋಕ್ ಬಾಬು ಕಂಠದಲ್ಲಿ ಮೂಡಿಬಂದ ಡೋಂಟ್ ವರಿ ರ‍್ಯಾಪ್ ಗೀತೆಯಲ್ಲಿ ಕನ್ನಡದ ಬಹುತೇಕ ನಟ- ನಟಿಯರು ಕಾಣಿಸಿಕೊಂಡಿದ್ದಾರೆ. ಯೂಟ್ಯೂಬ್ ನಲ್ಲಿ 14 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.


Video Thumbnail

Juice Kuditiyaa - ಜ್ಯೂಸ್ ಕುಡಿತೀಯಾ: ಯೂಟ್ಯೂಬ್ ವೀಕ್ಷಣೆ - 14 ಮಿಲಿಯನ್

ಜ್ಯೂಸ್ ಕುಡಿತೀಯಾ ರ‍್ಯಾಪ್ ಗೀತೆ ವಿರಾಜ್ ಕನ್ನಡಿಗ ಸಂಗೀತ ಮತ್ತು ಕಂಠದಲ್ಲಿ ಮೂಡಿಬಂದಿದೆ. ಯೂಟ್ಯೂಬ್ ನಲ್ಲಿ 14 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

Video Thumbnail

Halagode - ಹಾಳಾಗೋದೆ - ಯೂಟ್ಯೂಬ್ ವೀಕ್ಷಣೆ - 12+ ಮಿಲಿಯನ್

ಚಂದನ್ ಶೆಟ್ಟಿ ನಿರ್ದೇಶನ ಮತ್ತು ಸಂಗೀತದಲ್ಲಿ ಮೂಡಿ ಬಂದಿರುವ ಹಾಳಾಗೋದೆ ಹಿಪ್ ಹಾಪ್ ಗೀತೆ 2015 ರಲ್ಲಿ ತೆರೆ ಕಂಡಿತ್ತು. ಈ ಗೀತೆ ಯೂಟ್ಯೂಬ್ ನಲ್ಲಿ 12 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

Video Thumbnail

Rocky Bhai - ರಾಕಿ ಭಾಯ್- ಯೂಟ್ಯೂಬ್ ವೀಕ್ಷಣೆ - 10 ಮಿಲಿಯನ್

ಕೆಜಿಎಫ್ ಚಿತ್ರದಲ್ಲಿನ ಯಶ್ ರ ರಾಕಿ ಪಾತ್ರದ ಗೌರವ ಹಾಡಾಗಿ ಮೂಡಿ ಬಂದ ರಾಕಿ ಭಾಯ್ ರ‍್ಯಾಪ್ ಗೀತೆ ರಾಹುಲ್ ಡಿಟೋ ಗಾಯನದಲ್ಲಿ ಮೂಡಿ ಬಂದಿತು. ಈ ಗೀತೆ ಯೂಟ್ಯೂಬ್ ನಲ್ಲಿ 10 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

Video Thumbnail

Local Boys Party - ಲೋಕಲ್ ಬಾಯ್ಸ್ ಪಾರ್ಟಿ: ಯೂಟ್ಯೂಬ್ ವೀಕ್ಷಣೆ - 10 ಮಿಲಿಯನ್

ವಿರಾಜ್ ಕನ್ನಡಿಗ ನಿರ್ದೇಶನ ಮತ್ತು ಸಂಗೀತದಲ್ಲಿ ಮೂಡಿ ಬಂದಿರುವ ಲೋಕಲ್ ಬಾಯ್ಸ್ ಗೀತೆ 2018 ರಲ್ಲಿ ತೆರೆ ಕಂಡಿತ್ತು. ಈ ಗೀತೆ ಯೂಟ್ಯೂಬ್ ನಲ್ಲಿ 10 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.


Video Thumbnail

Top to bottom ganchali - ಟಾಪ್ ಟು ಬಾಟಮ್ ಗಾಂಚಾಲಿ: ಯೂಟ್ಯೂಬ್ ವೀಕ್ಷಣೆ - 9 ಮಿಲಿಯನ್

ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮತ್ತು ಗಾಯನದಲ್ಲಿ ಮೂಡಿಬಂದ ಟಾಪ್ ಟು ಬಾಟಮ್ ಗಾಂಚಾಲಿ ಗೀತೆ ಯೂಟ್ಯೂಬ್ ನಲ್ಲಿ 9 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

Video Thumbnail

- ಯಾಕಿಂಗೆ: ಯೂಟ್ಯೂಬ್ ವೀಕ್ಷಣೆ - 7ಮಿಲಿಯನ್

ಆಲ್ ಓಕೆ ಸಂಗೀತ ನಿರ್ದೇಶನ ಮತ್ತು ಗಾಯನದಲ್ಲಿ ಮೂಡಿಬಂದ ಯಾಕಿಂಗೆ ಗೀತೆ ಯೂಟ್ಯೂಬ್ ನಲ್ಲಿ 7 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ. ಈ ಹಾಡಿನಲ್ಲಿ ಹಾಸ್ಯನಟ ಟೆನ್ನಿಸ್ ಕೃಷ್ಣ ಕಾಣಿಸಿಕೊಂಡಿದ್ದರು.

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+