X
ഹോം ടോപ് ലിസ്റ്റിങ്ങ്‌

ದಕ್ಷಿಣ ಭಾರತದ ಮುಂಬರುವ ಸೀಕ್ವೆಲ್ & ಪ್ರಿಕ್ವೇಲ್ ಸಿನಿಮಾಗಳ ಪಟ್ಟಿ!

Author: Sowmya Bairappa | Updated: Monday, March 10, 2025, 10:08 AM [IST]

ದಕ್ಷಿಣ ಭಾರತದ ಸಿನಿಮಾಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಸೌತ್ ಸಿನಿಮಾಗಳ ಮುಂದೆ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿವೆ. ದಕ್ಷಿಣ ಭಾರತದ ಕೆಲ ಚಿತ್ರಗಳನ್ನು ಕಡಿಮೆ ವೆಚ್ಚದಲ್ಲಿ ಮಾಡಿದ್ದರೂ ಕೂಡ ಅವು ಬಾಕ್ಸಾಫೀಸ್‌ನಲ್ಲಿ ಕೋಟಿ-ಕೋಟಿ ಗಳಿಕೆ ಕಂಡಿವೆ. ಹೀಗಾಗಿ ಸೌತ್ ಸಿನಿಮಾಗಳ ಮೇಲೆ ನಿರೀಕ್ಷೆಗಳು ಹೆಚ್ಚುತ್ತಲೇ ಇವೆ. ಕನ್ನಡದ ಕಾಂತಾರ ಸೇರಿದಂತೆ ಇತ್ತೀಚಿನ ಅನೇಕ ಜನಪ್ರಿಯ ಸಿನಿಮಾಗಳು ಶೀಘ್ರದಲ್ಲಿಯೇ ಎರಡನೇ ಭಾಗಗಳನ್ನು ಎಂದರೆ ಸಿಕ್ವೆಲ್‌ಗಳನ್ನು ಹೊರತರಲು ಸಜ್ಜಾಗಿವೆ. ಹಾಗಾದರೆ, ಇಲ್ಲಿ ದಕ್ಷಿಣ ಭಾರತದ ಮುಂಬರುವ ಸೀಕ್ವೆಲ್ & ಪ್ರಿಕ್ವೇಲ್ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

Share:
cover image
ಆರ್‌ಆರ್‌ಆರ್ 2
1

2022ರಲ್ಲಿ ತೆರೆಗೆ ಬಂದ ರಾಜಮೌಳಿ ನಿರ್ದೇಶನದ  ಆರ್‌ಆರ್‌ಆರ್ ಸಿನಿಮಾ ಬ್ಲಾಕ್‌ಬಸ್ಟರ್ ಆಗಿತ್ತು. ಸ್ವಾತಂತ್ಯ ಹೋರಾಟಗಾರರಾದ ಕೋಮರಾನ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ಜೀವನಾಧಾರಿತ ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್‌ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ 'ನಾಟು ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಸಿಕ್ಕಿದೆ.  ಆರ್‌ಆರ್‌ಆರ್ ಯಶಸ್ಸಿನ ಹಿನ್ನೆಲೆ ನಿರ್ದೇಶಕ ರಾಜಮೌಳಿ  ಸೀಕ್ವೆಲ್ ಮಾಡುತ್ತಿದ್ದಾರೆ.


ಕಾಂತಾರ ಚಾಪ್ಟರ್ 1
2

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ 2022ರ ಸೆಪ್ಟೆಂಬರ್ 30ರಂದು ರಿಲೀಸ್ ಆಗಿ ಕನ್ನಡಿಗರ ಮನಗೆದ್ದಿತ್ತು. ಕನ್ನಡ ವರ್ಷನ್‌ನಿಂದಲೇ ವಿಶ್ವಾದ್ಯಂತ ಸಿನಿಪ್ರಿಯರ ಪ್ರೀತಿಯನ್ನು ಸಂಪಾದಿಸಿತ್ತು. ಈ ಮಧ್ಯೆ ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ 'ಕಾಂತಾರ' ಚಿತ್ರವನ್ನು ಡಬ್ ಮಾಡಲಾಗಿತ್ತು. ಕಾಂತಾರ ಸಿನಿಮಾ ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದು,  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿತ್ತು. ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲೇ ರಿಷಬ್ ಶೆಟ್ಟಿ ಕಾಂತಾರ ಪ್ರಿಕ್ವೇಲ್ ಮಾಡುತ್ತಿದ್ದು, ಅಕ್ಟೋಬರ್ ೨ರಂದು ಬಿಡುಗಡೆ ಆಗಲಿದೆ.

കൂടുതല്‍ കാണാം

 ವಿಕ್ರಮ್ 2
3

ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಾಕ್ಸಾಫಿಸ್‌ನಲ್ಲಿ 420 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಲೊಕೇಶ್ ಕನಗರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ವಿಕ್ರಮ್‌ ಸಿನಿಮಾದಲ್ಲಿ ಕಮಲ್ ಹಾಸನ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು.  ಹಲವು ವರ್ಷಗಳ ಗ್ಯಾಪ್ ಬಳಿಕ ಕಮಲ್ ಹಾಸನ್ ಅಭಿಮಾನಿಗಳಿಗೆ ತಮ್ಮ ಪಾತ್ರದ ಮೂಲಕ ಕಿಕ್ ಕೊಟ್ಟಿದ್ದರು. ಈ ಸಿನಿಮಾದ ಸೀಕ್ವೆಲ್ ಕೂಡ ಬರಲಿದೆ.


ಕೈಥಿ 2
4

2019ರಲ್ಲಿ ಬಿಡುಗಡೆಯಾದ ಕಾಲಿವುಡ್ ನಟ  ಕಾರ್ತಿ ನಟನೆಯ 'ಕೈಥಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಒಂದು ರಾತ್ರಿ ಕಥೆಯನ್ನು ಹೊಂದಿದ್ದ ಈ ಸಿನಿಮಾವನ್ನು ಲೊಕೇಶ್ ಕನಗರಾಜ್ ನಿರ್ದೇಶಿಸಿದ್ದರು. ಈ ಸಿನಿಮಾದ ಯಶಸ್ಸಿನ ಬೆನ್ನಲೇ ಸೀಕ್ವೆಲ್ ಅನೌನ್ಸ್ ಮಾಡಲಾಗಿದೆ. ವಿಕ್ರಮ್ 2 ಸಿನಿಮಾ ಮಾಡುವುದಕ್ಕಿಂತ ಮೊದಲು ನಿರ್ದೇಶಕ ಲೋಕೇಶ್ ಕನಗರಾಜ್ ಕೈಥಿಯ ಮುಂದುವರೆದ ಭಾಗ ಮಾಡಲಿದ್ದಾರೆ.   

ಎಲ್ 2: ಎಂಪೂರನ್
5

ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮೆಗಾ ಪ್ರಾಜೆಕ್ಟ್ ಎಲ್ 2: ಎಂಪೂರನ್. ಇದು 2019ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಲೂಸಿಫರ್‌ನ ಮುಂದುವರೆದ ಭಾಗವಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ಇದೊಂದು ಬಹುನಿರೀಕ್ಷಿತ ಸಿನಿಮಾ. ಬೃಹತ್ ಪ್ರಮಾಣದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಈ ವರ್ಷವೇ ಬಿಡುಗಡೆ ಆಗಲಿದೆ.


ಜೈ ಭೀಮ್  2
6

ಜೈ ಭೀಮ್ ಸಿನಿಮಾ ನಿರ್ಮಾಪಕರು ಇತ್ತೀಚೆಗಷ್ಟೇ ತಮಿಳು ನಟ ಸೂರ್ಯ ಅಭಿನಯದ ಈ ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಮಾಹಿತಿಯನ್ನು ದೃಢಪಡಿಸಿದ್ದಾರೆ. ಈ ಸಿನಿಮಾ ರಾಷ್ಟ್ರ ಪ್ರಸ್ತಿಯನ್ನು ಪಡೆದುಕೊಂಡಿತ್ತು. ಇದೀಗ ಜೈ ಭೀಮ್ ಸಿನಿಮಾದ 2ನೇ ಭಾಗ ತೆರೆಮೇಲೆ ತರಲು ನಿರ್ಧರಿಸಲಾಗಿದೆ.  

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+