X
ഹോം ടോപ് ലിസ്റ്റിങ്ങ്‌

Happy Birthday: ಸತೀಶ್ ನೀನಾಸಂ ನಟನೆಯ ಟಾಪ್ 5 ಸಿನಿಮಾಗಳಿವು!

Author: Sowmya Bairappa | Updated: Friday, June 21, 2024, 10:33 AM [IST]

ಅಭಿನಯ ಚತುರ ಎಂದೇ ಖ್ಯಾತಿಗಳಿಸಿರುವ ಸತೀಶ್ ನೀನಾಸಂ, ಜನಿಸಿದ್ದು ಮಂಡ್ಯ ಜಿಲ್ಲೆಯ ಯಳದಹಳ್ಳಿ. ಮೊದಲಿನಿಂದಲೂ ಸಿನಿಮಾರಂಗದಲ್ಲಿ ಆಸಕ್ತಿಯಿದ್ದ ಇವರು ರಂಗಭೂಮಿಯಲ್ಲಿ ತೊಡಗಿಕೊಂಡರು. ರಂಗಭೂಮಿಯಲ್ಲಿ ವೃತ್ತಿಜೀವನ ಆರಂಭಿಸಿದ ಬಳಿಕ ಪರಮಪದ, ಸಿಲ್ಲಿಲಲ್ಲಿ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಲೈಫ್ ಇಷ್ಟೇನೇ, ಪಂಚರಂಗಿ, ಅಣ್ಣಾಬಾಂಡ್, ಎನೋ ಒಂಥರಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸಿದರು. ೨೦೧೩ರಲ್ಲಿ ಲೂಸಿಯಾ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಕ್ಕೆ ಎಂಟ್ರಿಕೊಟ್ಟರು. ಸತೀಶ್ ನೀನಾಸಂ ಈ ವರ್ಷ ಅಶೋಕ ಬ್ಲೇಡ್, ದಸರಾ, ಮ್ಯಾಟ್ನಿ ಸೇರಿದಂತೆ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಲ್ಲಿ ಸತೀಶ್ ನೀನಾಸಂ ನಟನೆಯ ಟಾಪ್ 5 ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ಲೂಸಿಯಾ

ಸತೀಶ್ ನೀನಾಸಂ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಲೂಸಿಯಾ. 2013ರಲ್ಲಿ ತೆರೆಕಂಡ ಈ ಸೂಪರ್ ಹಿಟ್ ಸಿನಿಮಾವನ್ನು  ಪವನ್ ಕುಮಾರ್ ನಿರ್ದೇಶನ ಮಾಡಿದ್ದರು, ಶ್ರುತಿ ಹರಿಹರನ್ ನಾಯಕಿಯಾಗಿ ನಟಿಸಿದ್ದರು. ಚಿತ್ರದಲ್ಲಿ ನಾಯಕ ಕನಸು ಕಾಣಲು ಮಾತ್ರೆ ತೆಗೆದುಕೊಳ್ಳುವ ಕಥೆಯಿದ್ದು,  ಕನಸನ್ನೇ ನಿಜ ಎಂದುಕೊಂಡು ಅನುಭವಿಸುವ ಮಾನಸಿಕ ಯಾತನೆಯನ್ನು ತೋರಿಸಲಾಗಿತ್ತು. ತನ್ನ ವಿಭಿನ್ನ ಹಾಡುಗಳು ಹಾಗೂ ಮೇಕಿಂಗ್ ಮೂಲಕ ಈ ಸಿನಿಮಾ ಪ್ರೇಕ್ಷಕರ ನಿದ್ದೆಗೆಡಿಸಿತ್ತು. ಕನ್ನಡ ಚಿತ್ರೋದ್ಯಮದಲ್ಲೂ ಸಾಕಷ್ಟು ನಿರೀಕ್ಷೆಗಳನ್ನು ಹಾಗೂ ಭರವಸೆಗಳನ್ನು ಹುಟ್ಟುಹಾಕಿತ್ತು.

 

കൂടുതല്‍ കാണാം


ಬ್ಯುಟಿಫುಲ್ ಮನಸುಗಳು

ಬ್ಯೂಟಿಫುಲ್ ಮನಸುಗಳು ಸಿನಿಮಾದಲ್ಲಿ ಎರಡನೇ ಬಾರಿಗೆ ಶ್ರುತಿ ಹರಿಹರನ್ ಹಾಗೂ ಸತೀಶ್ ನೀನಾಸಂ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಬ್ಯೂಟಿಫುಲ್ ಮನಸುಗಳು ಸಿನಿಮಾ ಸಮಾಜದ ಹುಳುಕುಗಳನ್ನು ತೋರಿಸುತ್ತಲೇ, ಅದೇ ಸಮಾಜದ ಭಾಗವಾಗಿರುವ ಚಂದದ ಮನಸುಗಳನ್ನು ಅನಾವರಣಗೊಳಿಸುವ ಕಥೆಯನ್ನು ಒಳಗೊಂಡಿತ್ತು. ಜಯತೀರ್ಥ ನಿರ್ದೇಶನದ ಈ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆ ಸಿಕ್ಕಿತ್ತು. 

 

കൂടുതല്‍ കാണാം

ಚಂಬಲ್

ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಚಂಬಲ್ ಸಿನಿಮಾದಲ್ಲಿ ಸತೀಶ್ ನೀನಾಸಂ ಮತ್ತು ಸೋನು ಗೌಡ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದು ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಜೀವನದಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಚಿತ್ರದ 90 ರಷ್ಟು ದೃಶ್ಯಗಳು ಅವರಿಗೆ ಸಂಬಂಧಪಡುತ್ತದೆ.  ಇದೊಂದು ಸೂಕ್ಷ್ಮ ಸಿನಿಮಾವಾಗಿದ್ದು, ಸತೀಶ್ ನೀನಾಸಂ ಅದ್ಭುತವಾಗಿ ನಟಿಸಿದ್ದರು. 

കൂടുതല്‍ കാണാം


ಅಯೋಗ್ಯ

ಅಯೋಗ್ಯ ಸಿನಿಮಾದಲ್ಲಿ ಸತೀಶ್ ನೀನಾಸಂಗೆ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದರು. ಮಹೇಶ್ ಕುಮಾರ್ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಆಗುವುದಲ್ಲದೇ ಹಾಡುಗಳು ಕೂಡ ಸಖತ್ ಹಿಟ್ ಆಗಿದ್ದವು. ಮಂಡ್ಯದ ಒಂದು ಹಳ್ಳಿಯ ಯುವಕ ಸಿದ್ದೇಗೌಡ (ಸತೀಶ್ ನೀನಾಸಂ) ನಿಗೆ ಸಣ್ಣ ವಯಸ್ಸಿನಿಂದ ಒಂದೇ ಕನಸು ಅದು 'ಗ್ರಾಮ ಪಂಚಾಯ್ತಿ ಸದಸ್ಯ' ಆಗಬೇಕು ಎಂಬುದು. ಚಿಕ್ಕವಯಸ್ಸಿನಲ್ಲಿ ತನ್ನ ತಾಯಿಗೆ ಆದ ಅವಮಾನ ಹಾಗೂ ಊರಿಗೆ ಒಳ್ಳೆಯದು ಮಾಡುವ ದೃಷ್ಟಿಯಿಂದ ಈ ಯುವಕ ಚುನಾವಣೆಗೆ ನಿಲ್ಲುವ ಆಸೆ ಇಟ್ಟುಕೊಂಡಿರುತ್ತಾನೆ. ಶೌಚಾಲಯವೂ ಇಲ್ಲದ ಊರಿನಲ್ಲಿ ಹುಟ್ಟಿದ ಸಿದ್ದೇಗೌಡ ಆ ಊರನ್ನು ಉದ್ಧಾರ ಮಾಡಬೇಕು ಎಂದು ಹೊರಡುತ್ತಾನೆ. ಸಿದ್ದೇಗೌಡ ಗ್ರಾಮ ಪಂಚಾಯ್ತಿ ಸದಸ್ಯ ಆಗುತ್ತಾನೋ ಇಲ್ವೋ ಎನ್ನುವುದು ಚಿತ್ರದ ಕುತೂಹಲಕಾರಿ ಅಂಶವಾಗಿತ್ತು. 

കൂടുതല്‍ കാണാം

ಲವ್ ಇನ್ ಮಂಡ್ಯ

ಅರಸು ಅಂತಾರೆ ಸಿನಿಮಾದ ಲವ್ ಇನ್ ಮಂಡ್ಯ ಸಿನಿಮಾದಲ್ಲಿ ಸತೀಶ್ ನೀನಾಸಂ ನಾಯಕನಾಗಿ ಹಾಗೂ ಸಿಂಧು ಲೋಕನಾಥ್ ನಾಯಕಿಯಾಗಿ ಅಭಿನಯಿಸಿದ್ದರು. ಇದೊಂದು ಪ್ರೇಮಕಥೆ ಹೊಂದಿರುವ ಸಚಿತ್ರವಾಗಿದ್ದು, ಸತೀಶ್ ನೀನಾಸಂ ಕೇಬಲ್ ಅಪರೇಟರ್ ಆಗಿ ಕಾಣಿಸಿಕೊಂಡಿದ್ದರು. 

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+