X
ഹോം ടോപ് ലിസ്റ്റിങ്ങ്‌

Thangalaan OTT Release: ಕನ್ನಡದಲ್ಲೇ ನೋಡಿ ಕೆಜಿಎಫ್ ಪೂರ್ವಜರ ಕಥೆ ಹೊಂದಿರುವ ತಂಗಲಾನ್

Author: Sowmya Bairappa | Updated: Wednesday, December 11, 2024, 09:59 AM [IST]

ಈ ವರ್ಷದ ಕಾಲಿವುಡ್ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ 'ತಂಗಲಾನ್' ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ತಂಗಲಾನ್ ಒಟಿಟಿಗೆ ಬರುವಷ್ಟರಲ್ಲಿ ಕಾನೂನು ತೊಡಕು ಉಂಟಾಗಿತ್ತು. ಹೀಗಾಗಿ, ಸಿನಿಮಾ ಬಿಡುಗಡೆಯಾಗಿರಲಿಲ್ಲ. ಇದೀಗ ತಂಗಲಾನ್ ಒಟಿಟಿಗೆ ಕಾಲಿಟ್ಟಿದೆ. ಈ ಚಿತ್ರವನ್ನು ಯಾವ ಒಟಿಟಿಯಲ್ಲಿ ಹಾಗೂ ಯಾವಾಗ ವೀಕ್ಷಿಸಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Share:
cover image
ತಂಗಲಾನ್ ಕಥೆ

1850ರ ಕಾಲಘಟ್ಟದಲ್ಲಿ ತಂಗಲಾನ್ ಕಥೆ ಸಾಗಲಿದೆ.  ವೆಪ್ಪುರ್ ಎನ್ನುವ ಹಳ್ಳಿಯ ಒಂದು ಬುಡಕಟ್ಟಿನ ನಾಯಕ ತಂಗಲಾನ್. ಈತನ ಪತ್ನಿ ಗಂಗಮ್ಮ. ಈ ದಂಪತಿಗೆ ಐವರು ಮಕ್ಕಳು. ತಂಗಲಾನ್ ದಂಪತಿ ತಮಗಿರುವ ತುಂಡು ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿರುತ್ತಾರೆ. ಆದರೆ, ಆ ಜಾಗವನ್ನು ಜಮೀನ್ದಾರ ಕಿತ್ತುಕೊಳ್ಳುತ್ತಾನೆ. ಅದೇ ಸಂದರ್ಭ ಬ್ರೀಟಿಷ್ ಅಧಿಕಾರಿ ಕ್ಲೆಮೆಂಟ್ ಕೋಲಾರ ಚಿನ್ನದ ಮೇಲಿನ ಆಸೆಯಿಂದ ಬರ್ತಾನೆ. ಅಲ್ಲಿ ಚಿನ್ನ ತೆಗೆಯುವುದಕ್ಕಾಗಿ ಬುಡಕಟ್ಟು ಜನರನ್ನು ಬಳಸಿಕೊಳ್ಳುತ್ತಾನೆ. ಕಾಡಿನಲ್ಲಿ ಚಿನ್ನದ ಗಣಿಯನ್ನು ನಾಗಸಂಕುಲ ಕಾಯುತ್ತಿರುತ್ತದೆ. ಅತೇಂದ್ರಿಯ ಶಕ್ತಿಗಳಿರುವ ಆರತಿ, ತಂಗಲಾನ್ ಚಿನ್ನ ತೆಗೆಯಲು ಬರುವುದಕ್ಕೆ ಪ್ರತಿರೋಧ ಒಡ್ಡುತ್ತಿರುತ್ತಾಳೆ. ಹಾಗಾದ್ರೆ, ತಂಗಲಾನ್ ಬ್ರೀಟಿಷರಿಗಾಗಿ ತನ್ನವರ ಜೊತೆ ಸೇರಿ ಚಿನ್ನ ಹುಡುಕಿ ಕೊಡುತ್ತಾನಾ? ಈ ಹಾದಿಯಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋದೆ ಸಿನಿಮಾ ಕಥೆ.


ಸಿನಿಮಾ ಕಲಾವಿದರು

ನಿರ್ದೇಶಕ ಪಾ.ರಂಜಿತ್ ಅವರು ತಂಗಲಾನ್ ಸಿನಿಮಾದಲ್ಲಿ ಚಿನ್ನ ಹುಡುಕುವ ಕಥೆಗೆ ಈ ದೇಶದ ಶೋಷಿತರು, ಅಸ್ಪೃಶ್ಯರ ವಿಚಾರಗಳನ್ನು ಸೇರಿಸಿ ಕಥೆ ಕಟ್ಟಿಕೊಟ್ಟಿದ್ದರು.  ಚಿತ್ರದಲ್ಲಿ ಚಿಯಾನ್ ವಿಕ್ರಂ, ಪಾರ್ವತಿ ಮೆನನ್, ಮಾಳವಿಕಾ ಮೋಹನನ್, ಪ್ರೀತಿ ಕರಣ್, ಮುತ್ತು ಕುಮಾರ್, ಹರಿಕೃಷ್ಣನ್ ಮುಂತಾದವರು ನಟಿಸಿದ್ದಾರೆ. ಜಿ.ವಿ ಪ್ರಕಾಶ್ ಕುಮಾರ್ ಸಂಗೀತ, ಕಿಶೋರ್ ಕುಮಾರ್ ಛಾಯಾಗ್ರಹಣ ಸಿನಿಮಾಗಿದೆ. ಕೆ.ಇ ಜ್ಞಾನವೇಲ್ ರಾಜಾ ನಿರ್ಮಾಣ ಮಾಡಿದ್ದರು.

ಬಾಕ್ಸಾಫೀಸ್ ಕಲೆಕ್ಷನ್

ಭಾರೀ ಕುತೂಹಲ ಮೂಡಿಸಿದ್ದ ತಂಗಲಾನ್ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರಿಗೆ ಸಿನಿಮಾ ಬಹಳ ಇಷ್ಟವಾದರೆ, ಇನ್ನೂ ಕೆಲವರಿಗೆ ಬೋರ್ ಹೊಡೆಸಿತ್ತು.  100 ರಿಂದ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 72 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ನಿರೀಕ್ಷೆ ತಕ್ಕ ಗಳಿಕೆ ಕಾಣದಿದ್ದರೂ ಸ್ಕ್ರೀನ್ ಪ್ಲೇ, ನಟನೆಯಿಂದ ಮೆಚ್ಚುಗೆ ಗಳಿಸಿತ್ತು.


ಒಟಿಟಿ ಬಿಡುಗಡೆ ಯಾವಾಗ & ಎಲ್ಲಿ?

2024ರ ಆಗಸ್ಟ್ 15 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದ ತಂಗಲಾನ್, ಮೂರು ತಿಂಗಳ ಬಳಿಕ ಇಂದಿನಿಂದ (ಡಿಸೆಂಬರ್ 10) ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ  ತಂಗಲಾನ್ ಬಿಡುಗಡೆಯಾಗಿದ್ದು, ಕರ್ನಾಟಕದ ಕೆಜಿಎಫ್ ಪೂರ್ವಜನರ ಕಥೇ ಹೊಂದಿರುವ ಈ ಚಿತ್ರವನ್ನು ನೀವು ಮನೆಯಲ್ಲೇ ಕುಳಿತು ಸಿನಿಮಾ ವೀಕ್ಷಿಸಬಹುದು.

ಒಟಿಟಿ ಬಿಡುಗಡೆ ತಡವಾಗಿದ್ಯಾಕೆ?

ತಂಗಲಾನ್ ಸಿನಿಮಾದಲ್ಲಿ ಬೌದ್ಧ ಧರ್ಮವನ್ನು ಪವಿತ್ರವೆಂಬಂತರ ಚಿತ್ರಿಸುವ ಸಮಯದಲ್ಲಿ ವೈಷ್ಣವ ಧರ್ಮವನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ ಎಂದು ತಿರುವಲ್ಲೂರ್‌ನ ಪೊರ್ಕೋಡಿ ಎಂಬುವವರು ಮದ್ರಾಸ್ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಜೊತೆಗೆ ಇಂತಹ ದೃಶ್ಯಗಳಿರುವ ತಂಗಲಾನ್ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡುವುದರಿಂದ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಬಹುದೆಂದು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ, ಒಟಿಟಿ ಬಿಡುಗಡೆ ತಡವಾಗಿತ್ತು.





Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+