X
ഹോം ടോപ് ലിസ്റ്റിങ്ങ്‌

ತರ್ಲೆ ನನ್ಮಗ to ಎದ್ದೇಳು ಮಂಜುನಾಥ: ನವರಸನಾಯಕ ಜಗ್ಗೇಶ್ ಸಿನಿಜೀವನದ ಬೆಸ್ಟ್ ಸಿನಿಮಾಗಳ ಪಟ್ಟಿ

Author: Sowmya Bairappa | Updated: Saturday, March 16, 2024, 11:29 PM [IST]

ನವರಸ ನಾಯಕ ಜಗ್ಗೇಶ್ ಕಷ್ಟದಿಂದಲೇ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡವರು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಇಂದು ತಮ್ಮದೇಯಾದ ನಟನಾ ಶೈಲಿಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮದೇಯಾದ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ನಕ್ಕುನಲಿಸುವ ಜಗ್ಗೇಶ್, ಸಿನಿಮಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಅನುಭವ ಹೊಂದಿದ್ದಾರೆ. ಆರಂಭದಲ್ಲಿ ಚಿಕ್ಕ ಚಿಕ್ಕ ಪಾತ್ರ ಮಾಡುತ್ತಿದ್ದ ಇವರಿಗೆ ನಂತರ ನಾಯಕನಾಗುವ ಅವಕಾಶ ಸಿಕ್ಕಿತು. ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು ಸಿನಿರಸಿಕರಿಗೆ ಮನೋರಂಜನೆ ನೀಡುತ್ತಾ ಬಂದಿದ್ದಾರೆ. ಇಲ್ಲಿ ಅವರ ಅಭಿನಯದ ಬೆಸ್ಟ್ ಚಿತ್ರಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ತರ್ಲೆ ನನ್ನ ಮಗ
1

30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಚಿಕ್ಕ-ಚಿಕ್ಕ ಪಾತ್ರಗಳನ್ನು ಮಾಡಿಕೊಂಡಿದ್ದ ಜಗ್ಗೇಶ್ ಅವರು, 'ತರ್ಲೆ ನನ್ಮಗ' ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಈ ಸಿನಿಮಾವನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ನಿರ್ದೇಶನ. ಆದರೆ, ತರ್ಲೆ ನನ್ಮಗ ಚಿತ್ರ ಜಗ್ಗೇಶ್ ಹಾಗೂ ಉಪೇಂದ್ರ ಇಬ್ಬರಿಗೂ ದೊಡ್ಡ ಬ್ರೇಕ್ ನೀಡಿತು.  ಗಲ್ಲಾಪೆಟ್ಟಿಗೆಯಲ್ಲೂ ಈ ಚಿತ್ರ ಸೂಪರ್ ಹಿಟ್ ಆಗಿ, ಜಗ್ಗೇಶ್ ಮತ್ತು ಉಪೇಂದ್ರ ಅವರಿಗೆ ನೆಲೆಕಂಡುಕೊಳ್ಳಲು ಅವಕಾಶ ನೀಡಿದವು.  

കൂടുതല്‍ കാണാം


ಬಂಡ ನನ್ನ ಗಂಡ
2

ತರ್ಲೆ ನನ್ಮಗ ಸಿನಿಮಾ ರಿಲೀಸ್ ಆದ ವರ್ಷವೇ ಜಗ್ಗೇಶ್ ನಟನೆಯ ಇನ್ನೊಂದು ಸಿನಿಮಾ 'ಭಂಡ ನನ್ನ ಗಂಡ' ಸಿನಿಮಾ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಹಳ್ಳಿ ಹೈದನ ಅವರ ಪಾತ್ರಕ್ಕೆ ಎಲ್ಲರೂ ಮನಸೋತರು. 'ಭಂಡ ನನ್ನ ಗಂಡ' ಚಿತ್ರದಲ್ಲಿ ವಿಶೇಷಪಾತ್ರದಲ್ಲಿ ಅಂಬರೀಶ್ ಕಾಣಿಸಿಕೊಂಡಿದ್ದರು.  ಈ ಚಿತ್ರ 'ಅಂತಿಂಥ ಗಂಡು ನಾನಲ್ಲ' ಹಾಡು ಸಖತ್ ಹಿಟ್ ಆಗಿತ್ತು. ಇಡೀ ಚಿತ್ರದ ಹೈಲೈಟ್ ಈ ಹಾಡಾಗಿತ್ತು. ೧೯೯೨ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.   

കൂടുതല്‍ കാണാം

3

ಜಗ್ಗೇಶ್ ಸಿನಿಕರಿಯರ್ ನಲ್ಲಿ ಪ್ರೇಕ್ಷಕರ ಮನಗೆದ್ದ ಮತ್ತೊಂದು ಸಿನಿಮಾ 'ಸರ್ವರ್ ಸೋಮಣ್ಣ'. ಈ ಚಿತ್ರದಲ್ಲಿ ಅಭಿಜಿತ್ ಕೂಡ ತೆರೆಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ರಂಭಾ ನಾಯಕಿಯಾಗಿ ನಟಿಸಿದ್ದರು. ಇದು ಅವರ ನಟನೆಯ ಮೊದಲ ಕನ್ನಡ ಸಿನಿಮಾ.  ಇದು ತಮಿಳಿನ ಸರ್ವರ್ ಸುಂದರಂ ಚಿತ್ರದ ರಿಮೇಕ್ ಆಗಿತ್ತು. ಖ್ಯಾತ ನಿರ್ದೇಶಕ ಬಾಲಚಂದರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಜಗ್ಗೇಶ್ ವಿಶೇಷ ಮ್ಯಾನರಿಸಂನಿಂದ ಪ್ರೇಕ್ಷಕರ ಮನಗೆದ್ದಿದ್ದರು.  ಬಾಕ್ಸಾಫೀಸಿನಲ್ಲೂ ಈ ಚಿತ್ರ ಉತ್ತಮ ಕಲೆಕ್ಷನ್ ಮಾಡಿತ್ತು. 


ಮಠ
4

ಜಗ್ಗೇಶ್ ಸಿನಿಜೀವನದ ಮತ್ತೊಂದು ಬೆಸ್ಟ್ ಸಿನಿಮಾ ಅಂದರೆ ಅದು ಮಠ. ಇದೊಂದು ಸೂಕ್ಷ್ಮ ಕಥೆಯುಳ್ಳ ಚಿತ್ರವಾಗಿದ್ದು, ನವರಸ ನಾಯಕ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದರು.  ಈ ಸಿನಿಮಾಗೆ ಗುರುಪ್ರಸಾದ್ ಆಕ್ಷನ್ ಕಟ್ ಹೇಳಿದ್ದರು. ಇದು ಅವರ ಚೊಚ್ಚಲ ಚಿತ್ರವಾಗಿತ್ತು. ಮಠ-ಮಾನ್ಯಗಳಲ್ಲಿ ನೆಡೆಯುವ ಬೆಳವಣಿಗೆಗಳನ್ನು ಹಾಸ್ಯದ ಕನ್ನಡಿ ಮೂಲಕ ತೋರಿಸಲಾಗಿತ್ತು. ಚಿತ್ರದಲ್ಲಿ ಮುಖ್ಯ ಕಥೆಯ ಜೊತೆಗೆ ಹಲವು ಉಪಕಥೆಗಳು ಬರುತ್ತವೆ. ಮನುಷ್ಯನಲ್ಲಿರುವ ಅವಗುಣಗಳನ್ನು ದಾಟುವ ಬಗೆಯನ್ನು ಒಂದು ಆಲಸಿ ಯುವಕ ತಂಡದ ಮೂಲಕ ತೋರಿಸಿಕೊಟ್ಟಿತು. 

കൂടുതല്‍ കാണാം

ಎದ್ದೇಳು ಮಂಜುನಾಥ
5

ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಎರಡನೇ ಸಿನಿಮಾ ಎದ್ದೇಳು ಮಂಜುನಾಥ.  ವಿಭಿನ್ನ ಟೈಟಲ್ ಮತ್ತು ಅಲೋಚನೆಯೊಂದಿಗೆ ಬಂದ ಸಿನಿಮಾ 'ಎದ್ದೇಳು ಮಂಜುನಾಥ' ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಮೂಜಗ್ಗೇಶ್ ಲಕ ಜಗ್ಗೇಶ್ ಅವರ ಅದೃಷ್ಟ ಖುಲಾಯಿಸಿತು ಎಂದೇ ಹೇಳಬಹುದು. ಯಾಕೆಂದರೆ ನಟ ಜಗ್ಗೇಶ್‌ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದರು, ಒಂದು ಸಮಯದಲ್ಲಿ ಅವರ ಸಿನಿಮಾಗಳು ನೆಲಕಚ್ಚಿದ್ದವು. ಅಂತಹ ಸಮಯದಲ್ಲಿ ಬಂದ ಈ 'ಎದ್ದೇಳು ಮಂಜುನಾಥ' ಚಿತ್ರ ಜಗ್ಗೇಶ್ ಅವರಿಗೆ ಹೊಸ ಹುರುಪು ತಂದುಕೊಟ್ಟಿತು. ಈ ಸಿನಿಮಾರಂಗದ ಬಳಿಕ ಜಗ್ಗೇಶ್ ಅವರು ಮತ್ತೆ ಸಾಲು, ಸಾಲು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಬ್ಯುಸಿ ಆಗಿ ಬಿಟ್ಟರು. 

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+