X
ഹോം ടോപ് ലിസ്റ്റിങ്ങ്‌

ಸಿನಿಮಾ ಇತಿಹಾಸದಲ್ಲಿಯೇ 400 ಕೋಟಿ ಕ್ಲಬ್ ಸೇರಿದ 9 ಸೌತ್ ಸಿನಿಮಾಗಳ ಪಟ್ಟಿ ಇಲ್ಲಿದೆ.

Author: Sowmya Bairappa | Published: Thursday, November 24, 2022, 05:33 PM [IST]

ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಕಾಂತಾರ ಸಿನಿಮಾ ಇದೀಗ 400 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿದೆ. ಈ ಮೂಲಕ ಸಿನಿಮಾವೊಂದರ ಕಂಟೆಂಟ್ ಚೆನ್ನಾಗಿದ್ದರೆ ಅದಕ್ಕೆ ಜಯ ಸಿಗಲಿದೆ. ಬಿಗ್ ಬಜೆಟ್ ಚಿತ್ರ ಅಥವಾ ಸ್ಮಾಲ್ ಬಜೆಟ್ ಚಿತ್ರ ಎಂಬುದು ಲೆಕ್ಕಕ್ಕೆ ಬರುವುದಿಲ್ಲ ಎಂಬುದನ್ನು ಸಾಬೀತು ಪಡಿದಿಸಿದೆ. ಈ ಮೂಲಕ 400 ಕೋಟಿ ಗಳಿಸಿದ ದಕ್ಷಿಣ ಭಾರತದ 9ನೇ ಸಿನಿಮಾವಾಗಿ ಹೊರಹೊಮ್ಮಿದೆ. ಸಿನಿಮಾ ಇತಿಹಾಸದಲ್ಲಿ ಈವರೆಗೂ ಇತ್ತು ಎಂಟು ಸಿನಿಮಾಗಳು 400 ಕೋಟಿ ಕ್ಲಬ್ ಸೇರಿದ್ದವು. ಇದೀಗ ಕಾಂತಾರ ಸಿನಿಮಾ ಮೂಲಕ ಈ ಆ ಸಂಖ್ಯೆ 9ಕ್ಕೆ ಏರಿದೆ. ಹೀಗೆ ಸಿನಿಮಾ ಇತಿಹಾಸದಲ್ಲಿಯೇ 400 ಕೋಟಿ ಗಳಿಸಿದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಇಲ್ಲಿದೆ.

Share:
cover image
Video Thumbnail

- ಬಾಹುಬಲಿ ದ ಬಿಗಿನಿಂಗ್

ಬಾಹುಬಲಿ ದ ಬಿಗಿನಿಂಗ್ ಇದು 400 ಕೋಟಿ ಕ್ಲಬ್ ಸೇರಿದ ದಕ್ಷಿಣ ಭಾರತದ ಮೊದಲ ಸಿನಿಮಾ. ಇದು ಎಸ್.ಎಸ್.ರಾಜಮೌಳಿ ನಿರ್ದೇಶನದ ಐತಿಹಾಸಿಕ ಸಿನಿಮಾ. 2015ರಲ್ಲಿ ಬಿಡುಗಡೆಯಾದ ಬಾಹುಬಲಿ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಬಾಕ್ಸಾಫೀಸ್ ಕಲೆಕ್ಷನ್ ನಲ್ಲೂ ಬಿರುಗಾಳಿ ಎಬ್ಬಿಸಿತ್ತು. ಇದರಲ್ಲಿ ನಟಿಸಿದ ಪ್ರತಿ ಕಲಾವಿದರಿಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದು ಕೊಟ್ಟಿತ್ತು. ಈ ಸಿನಿಮಾ ಬೇರೆ ಚಿತ್ರರಂಗದವರು ದಕ್ಷಿಣ ಭಾರತದ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿತ್ತು. ಬಾಹುಬಲಿ ಸಿನಿಮಾ 600 ಕೋಟಿ ಗಳಿಸಿತ್ತು. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.  

Video Thumbnail

- ಬಾಹುಬಲಿ ದ ಕನ್‌ಕ್ಲೂಷನ್

ಬಾಹುಬಲಿ ದ ಬಿಗಿನಿಂಗ್ ಸಿನಿಮಾ ಬಿಡುಗಡೆ ಆದ ಬಳಿಕ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆ ಎಂಬುದು ದೊಡ್ಡ ಕುತೂಹಲ ಕೆರಳಿಸಿತ್ತು. ಹಲವು ಮೀಮ್‌ಗಳು ಇದರ ಸುತ್ತ ಹರಿದಾಡಿದವು. ಹೋದಲ್ಲೆಲ್ಲ ಇದೇ ಪ್ರಶ್ನೆಯನ್ನೇ ಕೇಳಲಾಗುತ್ತಿತ್ತು. ಕೊನೆಗೆ  2017ರ ಏಪ್ರಿಲ್ 28ರಂದು ಬಾಹುಬಲಿ ದ ಕನ್‌ಕ್ಲೂಷನ್ ಬಿಡುಗಡೆಯಾಗಿ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿತ್ತು. ಈ ಸಿನಿಮಾ 1800 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಜೊತೆಗೆ ಮೂರು ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿತ್ತು. ಪ್ರೇಕ್ಷಕರನ್ನು ಹೊಸ ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗಿಬಿಟ್ಟಿತ್ತು.

 

Video Thumbnail

- ರೋಬೋ 2.0

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ರೋಬೋ 2.0 ಸಿನಿಮಾವನ್ನು ಶಂಕರ್ ನಿರ್ದೇಶನ ಮಾಡಿದ್ದರು. ಈ ಚಿತ್ರ 625 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.  

Video Thumbnail

- ಸಾಹೋ

ಟಾಲಿವುಡ್‍ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ 439 ಕೋಟಿ ರೂ. ಗಳಿಕೆ ಮಾಡಿತ್ತು. ಈ ಸಿನಿಮಾವನ್ನು ಸುಜಿತ್ ನಿರ್ದೇಶನ ಮಾಡಿದ್ದು , ನಟ ಪ್ರಭಾಸ್​ ಬಾಹುಬಲಿ ಸಿನಿಮಾದ ನಂತರ ಈ ಸಿನಿಮಾದಲ್ಲಿ ನಟಿಸಿದ್ದರು. ಸುಮಾರು 350 ಕೋಟಿ ಬಜೆಟ್ನಲ್ಲಿ ಈ ಸಿನಿಮಾ ಮಾಡಲಾಗಿತ್ತು. ಬಾಲಿವುಡ್ ನಟಿ ಶ್ರದ್ದಾ ಕಪೂರ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.  


Video Thumbnail

RRR (ಆರ್.ಆರ್.ಆರ್)

ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದಲ್ಲಿ ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಡಿ.ವಿ.ವಿ ದಾನಯ್ಯ ಬಂಡವಾಳ ಹೂಡಿರುವ ಈ ಚಿತ್ರ ಸ್ವಾತಂತ್ಯ ಹೋರಾಟಗಾರರಾದ ಕೋಮರಾನ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ಜೀವನಾಧಾರಿತವಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹೀರೋಗಳಾಜಿ ನಟಿಸಿರುವ ಆರ್​ಆರ್​ಆರ್ ಸಿನಿಮಾ 1200  ಕೋಟಿ ರೂಪಾಯಿ ಗಳಿಕೆ ಕಂಡಿತ್ತು.

കൂടുതല്‍ കാണാം
Video Thumbnail

ಕೆಜಿಎಫ್: ಚಾಪ್ಟರ್ 2

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ 2022 ಏಪ್ರಿಲ್ 14ರಂದು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಇದು ಕೆಜಿಎಫ್ ಚಾಪ್ಟರ್ 1ನ ಮುಂದುವರೆದ ಭಾಗ. ರಾಕಿ ಭಾಯ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯನ್ ಬಾಕ್ಸ್ ಆಫೀಸ್ ನಡುಗುವಂತೆ ಮಾಡಿತ್ತು. ಬಾಲಿವುಡ್ ಅಲ್ಲೂ ಸಖತ್ ಸೌಂಡ್ ಮಾಡಿತ್ತು. ಕೆಜಿಎಫ್-2 ಸಿನಿಮಾ 1250 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿತ್ತು.  

കൂടുതല്‍ കാണാം
Video Thumbnail

- ವಿಕ್ರಮ್

ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 420 ಕೋಟಿ ರೂಪಾಯಿ ಗಳಿಸಿದೆ. ಲೊಕೇಶ್ ಕನಕರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಕಮಲ್ ಹಾಸನ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು.  ಹಲವು ವರ್ಷಗಳ ಗ್ಯಾಪ್ ಬಳಿಕ ಕಮಲ್ ಹಾಸನ್ ಅಭಿಮಾನಿಗಳಿಗೆ ತಮ್ಮ ಪಾತ್ರದ ಮೂಲಕ ಕಿಕ್ ಕೊಟ್ಟಿದ್ದರು.   

Video Thumbnail

ಪೊನ್ನಿಯನ್ ಸೆಲ್ವನ್ ಭಾಗ-1

ಸೆಪ್ಟೆಂಬರ್ 30ಕ್ಕೆ ಮಣಿರತ್ನಂ ನಿರ್ದೇಶನದ 'ಪೊನ್ನಿಯಿಲ್ ಸೆಲ್ವನ್ ಭಾಗ-1' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ತೆರೆಗಪ್ಪಳಿಸಿತ್ತು. ಬಹುಕೋಟಿ ವೆಚ್ಚದ ಈ ಸಿನಿಮಾ ಐತಿಹಾಸಿಕ ಕಥಾಹಂದರ ಹೊಂದಿತ್ತು. ಪೊನ್ನಿಯಿನ್ ಸೆಲ್ವನ್' ಕಾದಂಬರಿ ಓದಿದವರು ದೃಶ್ಯರೂಪದಲ್ಲಿ ಚೋಳ ಸಾಮ್ರಾಜ್ಯದ ವೈಭವ ಕಂಡು ಬೆರಗಾಗಿದ್ದರು.  ಈ ಸಿನಿಮಾಗೆ ಹಿಂದಿ ವಲಯದಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಈ ಸಿನಿಮಾ 450 ರೂ. ಕೋಟಿ ಗಳಿಸಿದೆ. 

 

കൂടുതല്‍ കാണാം

Video Thumbnail

ಕಾಂತಾರ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಸೆಪ್ಟೆಂಬರ್ ೩೦ರಂದು ರಿಲೀಸ್ ಆಗಿ ಕನ್ನಡಿಗರ ಮನಗೆದ್ದಿತ್ತು. ಕನ್ನಡ ವರ್ಷನ್‌ನಿಂದಲೇ ವಿಶ್ವಾದ್ಯಂತ ಸಿನಿಪ್ರಿಯರ ಪ್ರೀತಿಯನ್ನು ಸಂಪಾದಿಸಿತ್ತು. ಈ ಮಧ್ಯೆ ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ 'ಕಾಂತಾರ' ಚಿತ್ರವನ್ನು ಡಬ್ ಮಾಡಲಾಗಿತ್ತು. ಕಾಂತಾರದ ಹಿಂದಿ ವರ್ಷನ್‌ ಅಕ್ಟೋಬರ್ 14ರಂದೇ ತೆರೆಕಂಡಿತ್ತು. ಕಾಂತಾರ ಸಿನಿಮಾ ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದು,  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿದೆ. ಕನ್ನಡದ ಕಾಂತಾರ 401 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿದೆ. 

 

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+