ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!
Author: Sowmya Bairappa | Updated: Monday, September 2, 2024, 09:23 AM [IST]
ಕನ್ನಡ, ತೆಲುಗು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಶಿವಮೊಗ್ಗದಲ್ಲಿ ಜನಿಸಿದ ಕಿಚ್ಚ ಸುದೀಪ್ ಇಂದು ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದಾರೆ. ಕಿಚ್ಚ, ಹುಚ್ಚ, ಈಗ, ಮೈ ಆಟೋಗ್ರಾಫ್, ಕೆಂಪೇಗೌಡ, ಕೋಟಿಗೊಬ್ಬದಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಅಭಿನಯ ಚಕ್ರವರ್ತಿ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳು ಇಲ್ಲಿವೆ...
ಹೋಟೆಲ್ ಉದ್ಯಮಿಯ ಮಗನಾದ ಸುದೀಪ್ ಅವರಿಗೆ ಯಾವುದೇ ಸಿನಿಮಾ ಹಿನ್ನೆಲೆ ಇರಲಿಲ್ಲ. ಆದರೆ, ಹಾಡುಗಾರಿಕೆ ಮತ್ತು ಸಂಗೀತದ ಮೇಲೆ ಅವರಿಗಿದ್ದ ಆಸಕ್ತಿ ಅವರನ್ನು ಚಿತ್ರರಂಗದತ್ತ ಸೆಳೆಯಿತು. ಆರಂಭಿಕ ದಿನಗಳಲ್ಲಿ ಸುದೀಪ್ ಕೇವಲ ತಿಂಗಳಿಗೆ 500 ರೂಪಾಯಿ ಖರ್ಚು ಮಾಡುತ್ತಿದ್ದರು. ನಂತರ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಸ್ಪರ್ಶ' ಎಂಬ ಸಿನಿಮಾದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2001ರಲ್ಲಿ ತೆರೆಗೆ ಬಂದ ಓಂ ಪ್ರಕಾಶ್ ರಾವ್ ನಿರ್ದೇಶನದ 'ಹುಚ್ಚ' ಸಿನಿಮಾ ಸುದೀಪ್ ಗೆ ಬಿಗ್ ಬ್ರೇಕ್ ನೀಡಿತು. ಅದು ಹಿಂದಿಯಲ್ಲಿ ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ 'ತೇರೆ ನಾಮ್' ಆಯಿತು.
ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!-ಆರಂಭದ ದಿನಗಳಲ್ಲಿ ತಿಂಗಳಿಗೆ 500 ರೂ. ಖರ್ಚು ಮಾಡುತ್ತಿದ್ದ ಕಿಚ್ಚ/top-listing/9-interesting-unknown-facts-about-sandalwood-actor-sudeep-3-1641.html#ಆರಂಭದ-ದಿನಗಳಲ್ಲಿ-ತಿಂಗಳಿಗೆ-500-ರೂ-ಖರ್ಚು-ಮಾಡುತ್ತಿದ್ದ-ಕಿಚ್ಚ
2
ತಮ್ಮ ತಂದೆ ಚೆನ್ನಾಗಿ ನೆಲೆಸಿರುವ ಹೋಟೆಲ್ ಉದ್ಯಮಿಯಾಗಿದ್ದರೂ ಕೂಡ ಸುದೀಪ್ ಕುಟುಂಬಸ್ಥರಿಂದ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಅವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ, ಫೋಟೋಶೂಟ್ ಮಾಡಿ ಹಾಗೂ ಕ್ರಿಕೆಟ್ ಆಡಿ ತಮ್ಮ ದಿನನಿತ್ಯದ ಖರ್ಚಿಗೆ ಹಣ ಸಂಪಾದಿಸುತ್ತಿದ್ದರು. ಈ ಅನುಭವವೇ ತಮಗೆ ನಟನಾಗಲು ಸ್ಪೂರ್ತಿ ನೀಡಿತು ಎಂದು ಸುದೀಪ್ ಹೇಳಿದ್ದಾರೆ.
ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!-ಕುಟುಂಬದವರಿಂದ ಹಣ ಪಡೆಯುತ್ತಿರಲಿಲ್ಲ ಕಿಚ್ಚ ಸುದೀಪ್/top-listing/9-interesting-unknown-facts-about-sandalwood-actor-sudeep-3-1641.html#ಕುಟುಂಬದವರಿಂದ-ಹಣ-ಪಡೆಯುತ್ತಿರಲಿಲ್ಲ-ಕಿಚ್ಚ-ಸುದೀಪ್
3
ಇಂದು ನಾವು ಸುದೀಪ್ ಅವರನ್ನು ಕಿಚ್ಚ ಸುದೀಪ್, ಅಭಿನಯ ಚಕ್ರವರ್ತಿ, ಸ್ಯಾಂಡಲ್ವುಡ್ ಬಾದ್ಷಾ ಎಂದು ಕರೆಯುತ್ತೇವೆ. ಆದರೆ, ಅವರ ಸಾಧನೆಯ ಹಾದಿ ಸುಲಭವಾಗಿರಲಿಲ್ಲ. ಹುಚ್ಚ ಸಿನಿಮಾ ನಂತರದಲ್ಲಿ ಹಿಟ್ ಸಿನಿಮಾಗಳನ್ನು ನೀಡಲು ಅವರು ಸಾಕಷ್ಟು ಶ್ರಮಪಡಬೇಕಾಯಿತು. ಸುದೀಪ್ ಆರು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಕಠಿಣ ಹೋರಾಟ ಮಾಡಿದರು. ವರ್ಷಗಳ ನಂತರ ಕಿಚ್ಚ, ಸ್ವಾತಿ ಮುತ್ತು, ಹುಬ್ಬಳ್ಳಿ, ನಲ್ಲ ಸಿನಿಮಾಗಳು ಸೂಪರ್ ಹಿಟ್ ಆದವು. ನಂತರ ಬ್ಯಾಕ್-ಟು-ಬ್ಯಾಕ್ ಹಿಟ್ ಸಿನಿಮಾಗಳ ಮೂಲಕ ಸ್ಟಾರ್ ನಟನಾಗಿ ಗುರುತಿಸಿಕೊಂಡರು.
ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!-ಕನ್ನಡ ಚಿತ್ರರಂಗದಲ್ಲಿ ಆರು ವರ್ಷಗಳ ಕಠಿಣ ಹೋರಾಟ/top-listing/9-interesting-unknown-facts-about-sandalwood-actor-sudeep-3-1641.html#ಕನ್ನಡ-ಚಿತ್ರರಂಗದಲ್ಲಿ-ಆರು-ವರ್ಷಗಳ-ಕಠಿಣ-ಹೋರಾಟ
4
ಸುದೀಪ್ ಅವರು ರಾಮ್ ಗೋಪಾಲ್ ವರ್ಮಾ ಅವರ ನಿರ್ದೇಶನದ ಫೂಂಕ್ ಸಿನಿಮಾದ ಮೂಲಕ ಬಾಲಿವುಡ್ ಗೆ ಚೊಚ್ಚಲ ಪ್ರವೇಶ ಮಾಡಿದರು. ನಂತರ ಫೂಂಕ್ 2, ರಕ್ತಚರಿತ , ರಕ್ತಚರಿತ -2 ಹಾಗೂ ದಬ್ಬಂಗ್-3 ಸಿನಿಮಾಗಳಲ್ಲಿ ನಟಿಸಿದ್ದು, ಬಾಲಿವುಡ್ ಅಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದರು. ಬಳಿಕ ಅಮಿತಾಭ್ ಬಚ್ಚನ್ ಅವರೊಂದಿಗೆ 'ರನ್' ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದರು. ಇದು ರಾಜಮೌಳಿ ಅವರ ಗಮನವನ್ನು ಸೆಳೆಯುವಷ್ಟು ಮಂತ್ರಮುಗ್ಧವಾಗಿತ್ತು. ನಂತರ ರಾಜಮೌಳಿ ಅವರ ನಿರ್ದೇಶನದ 'ಈಗ' ಸಿನಿಮಾದಲ್ಲಿ ನಟಿಸಿದರು.
ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!-ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಸುದೀಪ್ ಜರ್ನಿ/top-listing/9-interesting-unknown-facts-about-sandalwood-actor-sudeep-3-1641.html#ಬಾಲಿವುಡ್-ಮತ್ತು-ಟಾಲಿವುಡ್‌ನಲ್ಲಿ-ಸುದೀಪ್-ಜರ್ನಿ
5
ಮೈ ಆಟೋಗ್ರಾಫ್, ಮದಕರಿ, ಕೆಂಪೇಗೌಡ, ವಿಷ್ಣುವರ್ಧನ, ಕೋಟಿ ಗೊಬ್ಬ-2 ಮತ್ತು ಹೆಬ್ಬುಲಿಯಂತಹ ಚಲನಚಿತ್ರಗಳು ಸುದೀಪ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡ್ಯೂಯಿತು. ನಟ, ಗಾಯಕ, ನಿರ್ದೇಶಕ, ನಿರೂಪಕರಾಗಿಯೂ ಸುದೀಪ್ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಕ್ರಿಕೆಟ್ (CCL)ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗೆ ಬಹುಮುಖ ಪ್ರತಿಭೆಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!-ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ಮೆಗಾ ಹಿಟ್/top-listing/9-interesting-unknown-facts-about-sandalwood-actor-sudeep-3-1641.html#ಸ್ಯಾಂಡಲ್‌ವುಡ್‌ನಲ್ಲಿ-ಬ್ಯಾಕ್-ಟು-ಬ್ಯಾಕ್-ಮೆಗಾ-ಹಿಟ್
6
ನಟ ಸುದೀಪ್ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳಿಗೆ ಅಡುಗೆ ಮಾಡಿ ಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಸುದೀಪ್ ಅವರಿಗೆ ಮನೆಯಲ್ಲಿ ಅವರದೇಯಾದ ಅಡುಗೆ ಮನೆ ಕೂಡ ಇದೆ. ಅವರು ತಮ್ಮ ಸ್ನೇಹಿತರಿಗೆ ಅಡುಗೆ ಮಾಡುವುದನ್ನು ಇಷ್ಟಪ್ಪಡುತ್ತಾರೆ. ಅದು ಪಾರ್ಟಿಯಾಗಿರಲಿ, ಕುಟುಂಬ ಕೂಟವಾಗಲಿ ಅಥವಾ ಸಂಭ್ರಮದ ಯಾವುದೇ ಕ್ಷಣವಾಗಿರಲಿ. ಸುದೀಪ್ ಗೆ ವೆಜ್ ಬಿರಿಯಾನಿ, ರಾಗಿ ಮುದ್ದೆ ಮತ್ತು ರೊಟ್ಟಿ ಎಂದರೆ ತುಂಬಾ ಇಷ್ಟ.
ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!-ವೆಜ್ ಬಿರಿಯಾನಿ, ರಾಗಿ ಮುದ್ದೆ ಮತ್ತು ರೊಟ್ಟಿ ಸುದೀಪ್ ಇಷ್ಟದ ತಿನ/top-listing/9-interesting-unknown-facts-about-sandalwood-actor-sudeep-3-1641.html#ವೆಜ್-ಬಿರಿಯಾನಿ-ರಾಗಿ-ಮುದ್ದೆ-ಮತ್ತು-ರೊಟ್ಟಿ-ಸುದೀಪ್-ಇಷ್ಟದ-ತಿನ
7
ಸುದೀಪ್ ನಟನು ವಿವಿಧ ಬ್ರಾಂಡ್‌ಗಳ ಬಹಳಷ್ಟು ಕಾರುಗಳನ್ನು ಹೊಂದಿದ್ದಾರೆ. ಆದರೆ, ಅವರಿಗೆ ಮರ್ಸಿಡಿಸ್ ಬೆಂಜ್ ಕಾರು ನೆಚ್ಚಿನದು ಎಂದು ಹೇಳಲಾಗುತ್ತದೆ.
ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!-ಸುದೀಪ್ ಅವರ ನೆಚ್ಚಿನ ಕಾರು/top-listing/9-interesting-unknown-facts-about-sandalwood-actor-sudeep-3-1641.html#ಸುದೀಪ್-ಅವರ-ನೆಚ್ಚಿನ-ಕಾರು
8
ಸುದೀಪ್ ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನವರು. ಆದರೆ, ಸುದೀಪ್ ಅವರ ನೆಚ್ಚಿನ ನಟರು ವಿಷ್ಣುವರ್ಧನ್, ಉಪೇಂದ್ರ, ರಜನಿಕಾಂತ್ ಮತ್ತು ಬ್ರಾಡ್ ಪಿಟ್. ನೆಚ್ಚಿನ ನಾಯಕಿಯರ ವಿಚಾರಕ್ಕೆ ಬಂದರೆ ಭಾರತಿ ವಿಷ್ಣುವರ್ಧನ್ ಮತ್ತು ಐಶ್ವರ್ಯ ರೈ.
ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!-ಕಿಚ್ಚನ ನೆಚ್ಚಿನ ನಟರು/top-listing/9-interesting-unknown-facts-about-sandalwood-actor-sudeep-3-1641.html#ಕಿಚ್ಚನ-ನೆಚ್ಚಿನ-ನಟರು
9
ಸುದೀಪ್ ಅವರಿಗೆ ಡಾ.ರಾಜ್‌ಕುಮಾರ್ ಅವರ ಆಕಸ್ಮಿಕ, ಅವತಾರ್ ಮತ್ತು ಅವರದೇ ಈಗಾ ಸಿನಿಮಾ ಇಷ್ಟ. ಸುದೀಪ್ ಯೋಗರಾಜ್ ಭಟ್ ಮತ್ತು ರಾಮ್ ಗೋಪಾಲ್ ವರ್ಮಾ ಅವರ ದೊಡ್ಡ ಅಭಿಮಾನಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ.
ಕಿರುತೆರೆಯಿಂದ ಪ್ಯಾನ್ ಇಂಡಿಯಾವರೆಗೆ: ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳಿವು!-ಅಭಿನಯ ಚಕ್ರವರ್ತಿ ನೆಚ್ಚಿನ ಸಿನಿಮಾಗಳು/top-listing/9-interesting-unknown-facts-about-sandalwood-actor-sudeep-3-1641.html#ಅಭಿನಯ-ಚಕ್ರವರ್ತಿ-ನೆಚ್ಚಿನ-ಸಿನಿಮಾಗಳು
Disclaimer
The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.