ಇತ್ತೀಚಿನ ದಿನಗಳಲ್ಲಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೇರೆಯವರ ಮಗುವನ್ನು ಯಾರು ತಮ್ಮ ಗರ್ಭದೊಳಗಿಟ್ಟುಕೊಂಡು ಪೋಷಿಸಿ, ಜನನ ನೀಡುತ್ತಾರೋ ಅವರಿಗೆ ಬಾಡಿಗೆ ತಾಯಿ ಎಂದು ಕರೆಯಲಾಗುತ್ತೆ. ಈ ವಿಧಾನ ಅನುಸರಿಸಿ ಈಗಾಗಲೇ ಅನೇಕ ನಟ-ನಟಿಯರು ಮಕ್ಕಳನ್ನು ಪಡೆದಿದ್ದಾರೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಈ ವಿಧಾನವನ್ನು ಹೆಚ್ಚು ಅನುಸರಿಸುತ್ತಾರೆ. ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳು ಪಟ್ಟಿ ಕೆಳಗಿದೆ.
ನಾಲ್ಕು ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಕಾಲಿವುಡ್ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇದೀಗ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ. ಈ ಕುರಿತು ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Mother's Day Special: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳಿವರು!-ನಯನತಾರಾ ಮತ್ತು ವಿಘ್ನೇಶ್ ಶಿವನ್/top-listing/mothers-day-special-indian-actresses-who-became-parents-through-surrogacy-3-1767.html#ನಯನತಾರಾ-ಮತ್ತು-ವಿಘ್ನೇಶ್-ಶಿವನ್
2
2021ರಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಜಿನ್ ಗುಡ್‍ಎನಾಫ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಅವರು ತಮ್ಮ ಅವಳಿ ಮಕ್ಕಳಿಗೆ ಜಿಯಾ ಹಾಗೂ ಜೈ ಎಂದು ಹೆಸರಿಟ್ಟಿದ್ದಾರೆ. ನಟಿ ಪ್ರೀತಿ ಜಿಂಟಾ 2016ರಲ್ಲಿ ಜಿನ್ ಗುಡ್‍ಎನಾಫ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Mother's Day Special: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳಿವರು!-ಪ್ರೀತಿ ಜಿಂಟಾ/top-listing/mothers-day-special-indian-actresses-who-became-parents-through-surrogacy-3-1767.html#ಪ್ರೀತಿ-ಜಿಂಟಾ
3
2013ರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಬಾಡಿಗೆ ತಾಯ್ತನದ ಮೂಲಕ ತಮ್ಮ ಮಗನಾದ ಅಬ್ರಹಾಂನನ್ನು ಪಡೆದಿದ್ದರು. ಶಾರುಖ್ ಖಾನ್ ಹಾಗೂ ಗೌರಿ ದಂಪತಿಗೆ ಒಟ್ಟು ಮೂವರು ಮಕ್ಕಳಿದ್ದಾರೆ.
Mother's Day Special: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳಿವರು!-ಶಾರುಖ್ ಖಾನ್/top-listing/mothers-day-special-indian-actresses-who-became-parents-through-surrogacy-3-1767.html#ಶಾರುಖ್-ಖಾನ್
4
ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ದಂಪತಿ ಸಹ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಂಡಿದ್ದಾರೆ.
Mother's Day Special: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳಿವರು!-ಪ್ರಿಯಾಂಕಾ ಚೋಪ್ರಾ/top-listing/mothers-day-special-indian-actresses-who-became-parents-through-surrogacy-3-1767.html#ಪ್ರಿಯಾಂಕಾ-ಚೋಪ್ರಾ
5
2020ರ ಫೆಬ್ರವರಿ 15ರಂದು ನಟಿ ಶಿಲ್ಪಾ ಶೆಟ್ಟಿ ಸಹ ತಮ್ಮ ಎರಡನೇ ಮಗುವಾದ ಸಮಿಶಾ ಅವರನ್ನು ಬಾಡಿಗೆ ತಾಯ್ತನದ ಮೂಲಕ ಪಡೆದರು. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿಗೆ ವಿಯಾನ್ ಎಂಬ ಮಗನಿದ್ದಾನೆ. ಸಮಿಶಾ ಜನಿಸುವ ಸಂದರ್ಭದಲ್ಲಿ ವಿಯಾನ್ಗೆ ಏಳು ವರ್ಷ ವಯಸ್ಸಾಗಿತ್ತು .
Mother's Day Special: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳಿವರು!-ಶಿಲ್ಪಾ ಶೆಟ್ಟಿ/top-listing/mothers-day-special-indian-actresses-who-became-parents-through-surrogacy-3-1767.html#ಶಿಲ್ಪಾ-ಶೆಟ್ಟಿ
6
ನಟಿ ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ದಂಪತಿ ತಮ್ಮ ಮೊದಲ ಮಗು ನಿಶಾ ಕೌರ್ ವೆಬರ್ ವೆಬರ್ ಅವರನ್ನು 2017ರ ಜೂನ್ ತಿಂಗಳಲ್ಲಿ ದತ್ತು ಪಡೆದರು. ನಂತರ ಅವರು ಬಾಡಿಗೆ ತಾಯ್ತನದ ಮೂಲಕ ಆಶರ್ ಸಿಂಗ್ ವೆಬರ್ ಮತ್ತು ನೋಹ್ ಸಿಂಗ್ ವೆಬರ್ ಎಂಬ ಇಬ್ಬರು ಮಕ್ಕಳನ್ನು ಪಡೆದರು.
Mother's Day Special: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳಿವರು!-ಸನ್ನಿ ಲಿಯೋನ್/top-listing/mothers-day-special-indian-actresses-who-became-parents-through-surrogacy-3-1767.html#ಸನ್ನಿ-ಲಿಯೋನ್
7
ಅಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರಿಗೆ ಗರ್ಭಶಯದ ತೊಂದರೆಗಳಿದ್ದ ಕಾರಣ 2011ರ ಡಿಸೆಂಬರ್ ತಿಂಗಳಲ್ಲಿ ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರು. ಆ ಮುಗುವಿಗೆ ಆಜಾದ್ ಎಂದು ಹೆಸರಿಡಲಾಗಿದೆ. ಅಮಿರ್ ಖಾನ್ ಈಗಾಗಲೇ ಜುನೈದ್ ಮತ್ತು ಇರಾ ಎಂಬ ಮಕ್ಕಳನ್ನು ಹೊಂದಿದ್ದಾರೆ.
Mother's Day Special: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳಿವರು!-ಅಮಿರ್ ಖಾನ್/top-listing/mothers-day-special-indian-actresses-who-became-parents-through-surrogacy-3-1767.html#ಅಮಿರ್-ಖಾನ್
8
ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಕೂಡ 2017ರ ಫೆಬ್ರವರಿ 7ರಂದು ರೂಹಿ ಜೋಹರ್ ಮತ್ತು ಯಶ್ ಜೋಹರ್ ಎಂಬ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ.
Mother's Day Special: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳಿವರು!-ಕರಣ್ ಜೋಹರ್/top-listing/mothers-day-special-indian-actresses-who-became-parents-through-surrogacy-3-1767.html#ಕರಣ್-ಜೋಹರ್
9
ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ 43ನೇ ವಯಸ್ಸಿನಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ನಿರ್ಧರಿಸಿದ್ದರು.ಅದರಂತೆ 2019ರ ಜನವರಿ 27ರಂದು ಮಗ ರವಿಯನ್ನು ಬಾಡಿಗೆ ತಾಯ್ತನದ ಮೂಲಕ ಪಡೆದರು.
Mother's Day Special: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಸೆಲೆಬ್ರೆಟಿಗಳಿವರು!-ಏಕ್ತಾ ಕಪೂರ್/top-listing/mothers-day-special-indian-actresses-who-became-parents-through-surrogacy-3-1767.html#ಏಕ್ತಾ-ಕಪೂರ್
Disclaimer
The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.