X
ഹോം ടോപ് ലിസ്റ്റിങ്ങ്‌

ಫ್ಯಾಟ್ ಸರ್ಜರಿ ಮಾಡಿಸಿಕೊಂಡು ಅನಾಹುತ ಮಾಡಿಕೊಂಡ ಸಿನಿಮಾ ತಾರೆಯರಿವರು!

Author: Sowmya Bairappa | Updated: Friday, April 18, 2025, 10:27 AM [IST]

ಸಿನಿಮಾ ಕಲಾವಿದರಿಗೆ ಪ್ರತಿಭೆ ಜೊತೆಗೆ ಸೌಂದರ್ಯ ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ಆಕರ್ಷಕವಾಗಿ ಕಾಣಲು ನಾನಾ ಕಸರತ್ತು ನಡೆಸುತ್ತಾರೆ. ಕೆಲವರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಸರ್ಜರಿಗೆ ಒಳಗಾಗಿದ್ದಾರೆ. ಇದರಿಂದ ಅನೇಕರಿಗೆ ಅಡ್ಡ ಪರಿಣಾಮಗಳು ಉಂಟಾಗಿವೆ. ಅವಕಾಶಕ್ಕಾಗಿ ಇರುವ ಸೌಂದರ್ಯವನ್ನು ಸರ್ಜರಿ ಮಾಡಿಸಿಕೊಂಡು ಮತ್ತಷ್ಟು ತೊಂದರೆಗಳಿಗೆ ತುತ್ತಾದವರೂ ಇದ್ದಾರೆ. ಸೌಂದರ್ಯ ಹೆಚ್ಚಿಸಿಕೊಳ್ಳಯವ ಸಲುವಾಗಿ ಸರ್ಜರಿ ಮಾಡಿಸಿಕೊಂಡು ಸಾವನ್ನಪ್ಪಿದವರೂ ಇದ್ದಾರೆ. ಇಲ್ಲಿ ಫ್ಯಾಟ್ ಸರ್ಜರಿ ಮಾಡಿಸಿಕೊಂಡು ಅನಾಹುತ ಮಾಡಿಕೊಂಡ ಸಿನಿಮಾ ತಾರೆಯರ ಪಟ್ಟಿ ಇಲ್ಲಿದೆ.

Share:
cover image
ನೀತು
1

2004ರಲ್ಲಿ ತೆರೆಕಂಡ 'ಯಾಹೂ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನೀತು ಶೆಟ್ಟಿ, ನಂತರ ಜೋಕ್ ಫಾಲ್ಸ್, ಗೋವಿಂದ ಗೋಪಾಲ, ಪೂಜಾರಿ, ಗಾಳಿಪಟ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಜೊತೆಗೆ ಮಲಯಾಳಂನಲ್ಲಿ `ಪೋಟೊಗ್ರಾಫರ್ ' ಎಂಬ ಚಿತ್ರದಲ್ಲಿ ಮೋಹನಲಾಲ್ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಬಿಗ್‌ಬಾಸ್ 2ರಲ್ಲಿ ಭಾಗವಹಿಸಿದ್ದರು.ನಂತರದ ದಿನಗಳಲ್ಲಿ ನೀತು ಅವರ ದೇಹದ ತೂಕ ಹೆಚ್ಚಾಯಿತು. ಇದರಿಂದ ಅವರಿಗೆ ಅವಕಾಶಗಳು ಕೂಡ ಕಡಿಮೆಯಾಗತೊಡಗಿದವು. ಹೀಗಾಗಿ, ಅವರು ಸರ್ಜರಿ ಮೊರೆ ಹೋಗಿದ್ದರು. ಇದರಿಂದ ನೀತು ತೂಕ ಇನ್ನೂ ಜಾಸ್ತಿಯಾಗಿದ್ದಾಗಿ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

കൂടുതല്‍ കാണാം


ಚೇತನಾ ರಾಜ್‌
2

ದೊರೆಸಾನಿ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಕನ್ನಡ ನಟಿ ಚೇತನಾ ರಾಜ್‌, ಸೊಂಟದ ಬೊಜ್ಜನ್ನು ಕರಗಿಸಲು ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಆದರೆ, ದುರಾದೃಷ್ಟವಶಾತ್ ಸರ್ಜರಿ ನಡೆಯುವಾಗಲೇ ಸಾವನ್ನಪ್ಪಿದ್ದರು. ಆನಂತರ ವೈದ್ಯರ ನಿರ್ಲಕ್ಷ್ಯದಿಂದ ಅವರು ಸಾವನ್ನಪ್ಪಿರುವುದಾಗಿ ಆರೋಪಗಳು ಕೇಳಿಬಂದಿದ್ದವು. 2022ರಲ್ಲಿ ನಿಧನರಾದ ಈ ನಟಿಗೆ ಕೇವಲ 21 ವರ್ಷ ವಯಸ್ಸಾಗಿತ್ತು.

ಆರತಿ ಅಗರ್‌ವಾಲ್
3

ಟಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ನಟಿಯಾಗಿದ್ದ ಆರತಿ ಅಗರ್‌ವಾಲ್ ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಲಿಪೋಸೆಕ್ಷನ್ ಸರ್ಜರಿಗೆ ಒಳಗಾಗಿದ್ದರು. ಇದಾದ ಕೆಲ ಸಮಯದ ಬಳಿಕ ತಮ್ಮ 31ನೇ ವಯಸ್ಸಿನಲ್ಲಿ ಅವರು ಸಾವನ್ನಪ್ಪಿದರು. ಆದರೆ, ಶಸ್ತ್ರಚಿಕಿತ್ಸೆಯ ಪರಿಣಾಮದಿಂದಲೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂಬ ವದಂತಿಗಳು ಹರಿದಾಡಿದ್ದವು. ಇಂದಿಗೂ ಈ ನಟಿಯ ಸಾವಿಗೆ ಸರ್ಜರಿಯೇ ಕಾರಣ ಎನ್ನಲಾಗಿದೆ. ಕೆಲ ವರದಿಗಳ ಪ್ರಕಾರ, ತೂಕ ಇಳಿಕೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಅವರ ಆರೋಗ್ಯದಲ್ಲಿ ಅಡ್ಡ ಪರಿಣಾಮ ಉಂಟಾಗಿ ಸಾವನ್ನಪ್ಪಿದರು ಅಂತ ಹೇಳಲಾಗ್ತಿದೆ.


ಬುಲೆಟ್ ಪ್ರಕಾಶ್
4

ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಕೂಡ ಅತಿಯಾದ ತೂಕ ಇಳಿಸಿಕೊಳ್ಳಲು 2018ರಲ್ಲಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ಬಳಿಕ ೩೫ ಕೆಜಿ ತೂಕ ಕಳೆದುಕೊಂಡಿದ್ದ ಅವರಿಗೆ ಹಲವು ಅನಾರೋಗ್ಯ ಸಮಸ್ಯೆಗೆ ಒಳಗಾದರು. ಇದರಿಂದ ಅವರ ಆರೋಗ್ಯ ಸಮಸ್ಯೆ ಇನ್ನಷ್ಟು ಹದಗೆಡುತ್ತಾ ಬಂತು. ಇದರ ಜೊತೆಗೆ ಕಿಡ್ನಿ, ಲಿವರ್ ವೈಫಲ್ಯ ಸಮಸ್ಯೆಯಿಂದ ಅವರ ಆರೋಗ್ಯ ಇನ್ನಷ್ಟು ಹೈರಾಣಾಗಿಸಿತ್ತು. ನಂತರ 2020ರ ಏಪ್ರಿಲ್ 6ರಂದು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು.

കൂടുതല്‍ കാണാം

ಅನುಷ್ಕಾ ಶೆಟ್ಟಿ
5

ಟಾಲಿವುಡ್ ಚಿತ್ರರಂಗದಲ್ಲಿ ಸ್ವೀಟಿ ಎಂದೇ ಕರೆಯಿಸಿಕೊಳ್ಳುವ ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ, ತಮ್ಮ ಅದ್ಭುತ ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅನುಷ್ಕಾ ಲಿಫೋಸೆಕ್ಷನ್ ಸರ್ಜರಿ ಮೂಲಕ ಬೆನ್ನು ಮತ್ತು ಸೊಂಟದ ಭಾಗದ ಕೊಬ್ಬನ್ನು ಕಡಿಮೆ ಮಾಡಿಸಿಕೊಂಡಿದ್ದರು. ಸರ್ಜರಿ ಬಳಿಕ ಅವರ ದೇಹದಲ್ಲಿ ಅಡ್ಡ ಪರಿಣಾಮಗಳು ಉಂಟಾಗಿದ್ದವು. ಇದರಿಂದಾಗಿ ಮತ್ತೆ ಅವರ ದೇಹದಲ್ಲಿ ಫ್ಯಾಟ್ ಹೆಚ್ಚಾಗಿತ್ತು. ಇದರಿಂದ ಅವರಿಗೆ  ಸಿನಿಮಾ ಆಫರ್ ಕೂಡ ಕಡಿಮೆಯಾಗಿದ್ದವು. ಇನ್ನು ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ಲಿಫೋಸೆಕ್ಷನ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತ ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+