X
ഹോം ടോപ് ലിസ്റ്റിങ്ങ്‌

ಬಿಗ್‌ಬಾಸ್ ಮನೆಯಿಂದ ಲಾಯರ್ ಜಗದೀಶ್ & ರಂಜಿತ್ ಹೊರಬರಲು ಕಾರಣವೇನು ಗೊತ್ತಾ?

Author: Administrator | Published: Wednesday, October 16, 2024, 05:03 PM [IST]

ಬಿಗ್‌ಬಾಸ್ ಮನೆಯಲ್ಲಿ ಮೊದಲ ವಾರ ರಂಪಾಟ ಮಾಡಿದ್ದ ಲಾಯರ್ ಜಗದೀಶ್, ಎರಡನೇ ವಾರ ಲವರ್ ಬಾಯ್ ತರಹ ಕಾಣಿಸಿಕೊಂಡಿದ್ದರು. ಆದರೆ, 15ನೇ ದಿನ ದೊಡ್ಮನೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಬಿಗ್‌ಬಾಸ್ ಕಾರ್ಯಕ್ರಮದ ಬಗ್ಗೆ ಬಿಪ್ ಪದಗಳನನ್ನು ಬಳಿಸಿದ್ದ ಜಗದೀಶ್, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಲಾಯರ್ ಜಗದೀಶ್ ಹಾಗೂ ರಂಜಿತ್ ದೊಡ್ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಕಾರಣ ಇಲ್ಲಿದೆ.

Share:
cover image
ಲಾಯರ್ ಸಾಬ್ & ರಂಜಿತ್ ಔಟ್

ಕಳೆದ ಸಂಚಿಕೆಯಲ್ಲಿ ಜಗದೀಶ್ ಅವರು ಬಿಗ್‌ಬಾಸ್ ಕಾರ್ಯಕ್ರಮದ ಬಗ್ಗೆ ಬಿಪ್ ಪದಗಳನನ್ನು ಬಳಸಿದ್ದರು. ಬಳಿಕ ಮನೆಯ ಸದಸ್ಯರೆಲ್ಲರೂ ಲಾಯರ್ ಜಗದೀಶ್ ಮೇಲೆ ಮುಗಿಬಿದ್ದು ಕಿಡಿಕಾರಿದ್ದರು. ಈ ಜಗಳ ಮುಂದುವರೆದು ಜಗದೀಶ್ ಹಾಗೂ ರಂಜಿತ್ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಇಬ್ಬರನ್ನು ದೊಡ್ಮನೆಯಿಂದ ಹೊರ ಕಳುಹಿಸಲಾಗಿದೆ. 


ನಿನ್ನೆ ನಡೆದ ಘಟನೆ

15ನೇ ದಿನ ರಾತ್ರಿ ಜಗದೀಶ್ ಕ್ಯಾಮರಾ ಮುಂದೆ 'ನಾನು ಕಾಣಿಸಿದ್ರೆ ಅವನ್ಯಾರೀ ಈಡಿಯೆಟ್, ರಾಸ್ಕಲ್ ವಲ್ಗರ್ ಆಗಿ ಮಾತನಾಡ್ತಾನೆ. ಏಯ್...ಗತಿ ಇಲ್ಲದೇ ಬಂದಿಲ್ಲ ನಾನು. ಡೋರ್ ಓಪನ್ ಮಾಡಿ, ಈಗಲೇ ಹೋಗ್ತೀನಿ. ಲಗೇಜ್ ಅಲ್ಲೇ ಬಿದ್ದು ಸಾಯಲಿ. ಊಟಕ್ಕೆ ಒಬ್ಬಳು ಕೇಳ್ತಾಳೆ. ಯಾವ ರೂಲ್ಸ್ ನಿಮ್ಮದು? ನನಗೆ 100 ಜನಕ್ಕೆ ಊಟ ಹಾಕುವ ಯೋಗ್ಯತೆಯಿದೆ. ಅವನ್ಯಾರೋ ಹೇಳ್ತಾನೆ ಮೆಂಟಲ್ ನನ್ ಮಗನೇ ಅಂತ.. ನಾನು ರಿಯಾಕ್ಟ್ ಮಾಡಿದ್ರೆ ಎಲ್ಲಿ ಹೋಗ್ತೀರಾ ನೀವು? ನನಗೆ ಈಗಲೇ ವಿವರಣೆ ಬೇಕು. ಐ ವಿಲ್ ವಾಕ್ ಔಟ್.. ನಿನ್ನ ಪ್ರೋಗ್ರಾಂ ನೀನೇ ಮಾಡ್ಕೋ ಅಂತ ಕಿಡಿಕಾರಿದ್ದರು. ಮತ್ತೆ ಸ್ವಲ್ಪ ಹೊತ್ತಿನ ಬಳಿಕ ಬೀಪ್ ಪದಗಳನ್ನು ಉಪಯೋಗಿಸಿದ್ದರು. ಇದರಿಂದಾಗಿ ಉಗ್ರಂ ಮಂಜು, ರಂಜಿತ್ ಸಿಡಿದೆದ್ದಿದ್ದರು. ಈ ಸಂದರ್ಭ ಬಿಗ್‌ಬಾಸ್ ಕರೆಮಾಡಿ, ಇದು ಸೂಕ್ಷ್ಮವಾದ ವಿಚಾರ. ಮನೆಯ ಸದಸ್ಯರು ಮಧ್ಯೆ ಪ್ರವೇಶಿಸುವ ಅವಶ್ಯಕತೆಯಿಲ್ಲ ಎಂದಿದ್ದರು. ಆದ್ರೀಗ ಪರಿಸ್ಥಿತಿ ಕೈಮೀರಿ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. 

ಜಗದೀಶ್ ಹಿನ್ನಲೆ

ಕೊಡಿಗೇಹಳ್ಳಿಯಲ್ಲಿ ನೆಲೆಸಿರುವ ಜಗದೀಶ್, ಶ್ರೀಮಂತ ಒಕ್ಕಲಿಗ ಕುಟುಂಬದವರು. ಚಿಕ್ಕ ವಯಸ್ಸಿನಲ್ಲೇ ಪೊಲೀಸರು ತಮ್ಮ ಮೇಲೆ ಸುಳ್ಳು ಕೇಸ್ ದಾಖಲಿಸಿ ರೌಡಿ ಶೀಟರ್ ಮಾಡಿಬಿಟ್ಟಿದ್ದರು. ಮುಂದೆ ತಾವೇ ಎಲ್‌ಎಲ್‌ಬಿ ಓದಿ ತಮ್ಮ ಕೇಸ್ ವಾದಿಸಿಕೊಂಡಿದ್ದಾರೆ ಹೇಳಿಕೊಂಡಿದ್ದರು. ವಕೀಲರಾದ ಜಗದೀಶ್ ಕಾನೂನು ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಮಾತನಾಡುತ್ತಿದ್ದರು. ಈ ಮೂಲಕ ರಾಜ್ಯದ ಜನರಿಗೆ ಪರಿಚಿತರಾಗಿದ್ದರು. 



 ರಂಜಿತ್ ಹಿನ್ನೆಲೆ

ಶನಿ ಧಾರಾವಾಹಿಯಲ್ಲಿ ಸೂರ್ಯದೇವ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ರಂಜಿತ್, ಪದ್ಮಾವತಿ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೊಂದಿಗೆ ಆಪ್ತತೆ ಹೊಂದಿರುವ ಇವರು, ಕೆಸಿಸಿಯಲ್ಲಿ ಸುದೀಪ್ ತಂಡದ ಜೊತೆಯೇ ಇದ್ದರು. ಜೊತೆಗೆ ಭರಾಟೆ, ಸಿಂಗಂ, ರಾಮಧೂತ, ಜೇಮ್ಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+