Author: Administrator | Updated: Wednesday, May 18, 2022, 11:09 AM [IST]
ಕೋವಿಡ್ ಕಾರಣ ಈ ವರ್ಷ ಕನ್ನಡದ ಕೆಲ ಸಿನಿ ಜೋಡಿಗಳು ಸರಳವಾಗಿ ವಿವಾಹವಾದವು. ಕಿರುತೆರೆ ಖ್ಯಾತಿ ಕವಿತಾ ಗೌಡ - ಚಂದನ ಕುಮಾರ್, ಚಂದನವನದ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ - ಮಿಲನಾ ನಾಗಾರಾಜ್, ನಟಿ ಪ್ರಣೀತಾ ಸುಭಾಷ್ ಮುಂತಾದವರು ಈ ವರ್ಷ ಸಪ್ತಪದಿ ತುಳಿದರು. 2021 ರಲ್ಲಿ ಹಸೆಮಣೆಯೇರಿದ ಕನ್ನಡ ಸಿನಿತಾರೆಯರು ಇಲ್ಲಿದ್ದಾರೆ ನೋಡಿ.
ಚಂದನವನದ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪ್ರೇಮಿಗಳ ದಿನಾಚರಣೆಯಂದು ವಿವಾಹ ಬಂಧನಕ್ಕೊಳಗಾದರು. `ನಮ್ ದುನಿಯಾ ನಮ್ ಸ್ಟೈಲ್', `ಚಾರ್ಲಿ' ಮತ್ತು ` ಲವ್ ಮಾಕಟೇಲ್' ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದರು. ಬೆಂಗಳೂರಿನಲ್ಲಿ ಕುಟುಂಬ ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು.
2021 ರಲ್ಲಿ ಹಸೆಮಣೆಯೇರಿದ ಕನ್ನಡ ಸಿನಿತಾರೆಯರು-ಡಾರ್ಲಿಂಗ್ ಕೃಷ್ಣ & ಮಿಲನಾ ನಾಗರಾಜ್, Date Of Wedding - 14 Febraury, 2021/top-listing/kannada-celebrities-who-got-married-in2021-3-1105.html#darling-krishna-and-milana-nagaraj
2
`ಬಹದ್ದೂರ್', 'ಭರ್ಜರಿ', 'ಭರಾಟೆ', `ಜೇಮ್ಸ್' ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್ ಜೂನ್ 14, 2021 ರಂದು. ಐಟಿ ಉದ್ಯೋಗಿ ಮಾನಸಾ ಎಂಬುವವರನ್ನು ಮೈಸೂರಿನಲ್ಲಿ ಕೈ ಹಿಡಿದರು. ಲಾಕ್ ಡೌನ್ ನಲ್ಲಿ ಸರಳವಾಗಿ ವಿವಾಹವಾದ ಈ ಜೋಡಿಯ ಮದುವೆಗೆ ಧ್ರುವ ಸರ್ಜಾ ದಂಪತಿ, ಪುನೀತ್ ರಾಜಕುಮಾರ್, ನಿರ್ದೇಶಕರಾದ ಎ.ಪಿ. ಅರ್ಜುನ್, ಮಹೇಶ್ ಕುಮಾರ್ ಮುಂತಾದವರು ಹಾಜರಿದ್ದರು.
2021 ರಲ್ಲಿ ಹಸೆಮಣೆಯೇರಿದ ಕನ್ನಡ ಸಿನಿತಾರೆಯರು-ಬಹದ್ದೂರ್ ಚೇತನ್ & ಮಾನಸಾ, Date Of Wedding - 14-06-2021/top-listing/kannada-celebrities-who-got-married-in2021-3-1105.html#chethan-kumar-director-and-manasa
3
ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಣೀತಾ ಸುಭಾಷ್ ರವರು ಮೇ 30, 2021 ರಂದು ಬೆಂಗಳೂರಿನಲ್ಲಿ ಉದ್ಯಮಿ ನಿತಿನ್ ರಾಜುರವರನ್ನು ಮದುವೆಯಾದರು. ಪೊರ್ಕಿ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಪ್ರಣೀತಾ `ಜರಾಸಂಧ', `ಭೀಮಾ ತೀರದಲ್ಲಿ',`ಮಿ. 420',' ವಿಜಲ್' ಮುಂತಾದ ಕನ್ನಡ ಚಿತ್ರಗಳು ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದಾರೆ.
2021 ರಲ್ಲಿ ಹಸೆಮಣೆಯೇರಿದ ಕನ್ನಡ ಸಿನಿತಾರೆಯರು-ಪ್ರಣೀತಾ ಸುಭಾಷ್ & ನಿತಿನ್ ರಾಜು , Date Of Wedding - 30th May, 2021/top-listing/kannada-celebrities-who-got-married-in2021-3-1105.html#pranitha-subhash-and-nithin-raju
4
ಕನ್ನಡ ಕಿರುತೆರೆಯಲ್ಲಿ `ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮೂಲಕ ಖ್ಯಾತಿ ಪಡೆದ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಮೇ 15, 2021 ರಂದು ವಿವಾಹ ಬಂಧನಕ್ಕೊಳಗಾದರು. ಕೋವಿಡ್ ಲಾಕ್ ಡೌನ್ ಕಾರಣ, ಕುಟುಂಬ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದರು.
2021 ರಲ್ಲಿ ಹಸೆಮಣೆಯೇರಿದ ಕನ್ನಡ ಸಿನಿತಾರೆಯರು-ಕವಿತಾ ಗೌಡ & ಚಂದನ್, Date Of Wedding - 15th May, 2021/top-listing/kannada-celebrities-who-got-married-in2021-3-1105.html#kavitha-gowda-and-chandan-kumar
5
ನಟ, ಹಾಸ್ಯನಟ ಹಾಗೂ RCB ಮಿ.ನಾಗ್ ಖ್ಯಾತಿ ಡ್ಯಾನಿಶ್ ಸೇಠ್ ತಮ್ಮ ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿಯನ್ನು ಜೂನ್ 14, 2021 ರಂದು ವಿವಾಹವಾದರು. ಡ್ಯಾನಿಶ್ '`ಹಂಬಲ್ ಪೊಲಿಟಿಶನ್ ನೋಗರಾಜ್', `ಫ್ರೆಂಚ್ ಬಿರಿಯಾನಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆ RCB ತಂಡದಲ್ಲಿ ಮಿ. ನಾಗ್ ಹೆಸರಿನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
2021 ರಲ್ಲಿ ಹಸೆಮಣೆಯೇರಿದ ಕನ್ನಡ ಸಿನಿತಾರೆಯರು-ಡ್ಯಾನಿಶ್ ಸೇಠ್ & ಅನ್ಯಾ ರಂಗಸ್ವಾಮಿ , Date Of Wedding - 14th June, 2021/top-listing/kannada-celebrities-who-got-married-in2021-3-1105.html#danish-sait-and-anya-rangaswami
6
ಕನ್ನಡ ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಆಶಿತಾ ಚಂದ್ರಪ್ಪ ಮಾರ್ಚ್ 31, 2021 ರಂದು ರೋಹನ್ ರಾಘವೇಂದ್ರರವರನ್ನು ವಿವಾಹವಾದರು. ಆಶಿತಾ ಬಿಗ್ ಬಾಸ್ ಸಹ ಸ್ಪರ್ಧಿಗಳಾಗಿದ್ದ ಕಾರ್ತೀಕ್ ಜಯರಾಮ್, ತೇಜಸ್ವಿನಿ ಪ್ರಕಾಶ್, ಜಗನ್ನಾಥ್ ಸೇರಿದಂತೆ ಪನ್ನಾಗಭರಣ ಮಂತಾದವರು ಹಾಜರಿದ್ದರು.
2021 ರಲ್ಲಿ ಹಸೆಮಣೆಯೇರಿದ ಕನ್ನಡ ಸಿನಿತಾರೆಯರು-ಆಶಿತಾ ಚಂದ್ರಪ್ಪ & ರೋಹನ್ ರಾಘವೇಂದ್ರ, Date Of Wedding - ಮಾರ್ಚ್ 31, 2021/top-listing/kannada-celebrities-who-got-married-in2021-3-1105.html#ashitha-chandrappa-and-rohan-raghavendra
7
ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಆಶಿಕಾ ಪಡುಕೋಣೆ ಆಕ್ಟೋಬರ್ 18, 2021 ರಂದು ಉಡುಪಿಯಲ್ಲಿ ಐಟಿ ಉದ್ಯೋಗಿ ಚೇತನ್ ಶೆಟ್ಟಿಯವರನ್ನು ವಿವಾಹವಾದರು. ಕನ್ನಡದಲ್ಲಿ `ನಿಹಾರಿಕಾ', `ತ್ರಿವೇಣಿ ಸಂಗಮ' ಮುಂತಾದ ಧಾರಾವಾಹಿಗಳು, ತೆಲುಗುವಿನಲ್ಲಿ `ಕಥಲೋ ರಾಜಕುಮಾರಿ', `ತ್ರಿವೇಣಿ ಸಂಗಮ', ತಮಿಳಿನಲ್ಲಿ `ತ್ರಿವೇಣಿ ಸಂಗಮ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
2021 ರಲ್ಲಿ ಹಸೆಮಣೆಯೇರಿದ ಕನ್ನಡ ಸಿನಿತಾರೆಯರು-ಆಶಿಕಾ ಪಡುಕೋಣೆ & ಚೇತನ್ ಶೆಟ್ಟಿ, Date Of Wedding - 18th October, 2021/top-listing/kannada-celebrities-who-got-married-in2021-3-1105.html#ashika-padukone-and-chetan-shetty
8
ರಾಧಾ ರಮಣ, ಗಾಂಧಾರಿ, ಮೀರಾ ಮಾಧವ ಮುಂತಾದ ಸೀರಿಯಲ್ ಗಳ ಮೂಲಕ ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಉದ್ಯಮಿ ಸೋಮಶೇಖರ್ ರವರನ್ನು ಡಿಸೆಂಬರ್ 2, 2021 ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ವಿವಾಹವಾದರು.
2021 ರಲ್ಲಿ ಹಸೆಮಣೆಯೇರಿದ ಕನ್ನಡ ಸಿನಿತಾರೆಯರು-ಕಾವ್ಯಾ ಗೌಡ & ಸೋಮಶೇಖರ್, Date of Wedding: December 2, 2021/top-listing/kannada-celebrities-who-got-married-in2021-3-1105.html#kavya-gowda-and-somashekhar
Disclaimer
The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.