X
ഹോം ടോപ് ലിസ്റ്റിങ്ങ്‌

ನೀವು ಮಿಸ್ ಮಾಡದೇ ನೋಡಲೇಬೇಕಾದ ಕನ್ನಡದ 5 ಮಹಿಳಾ ಪ್ರಧಾನ ಸಿನಿಮಾಗಳಿವು!

Author: Sowmya Bairappa | Published: Saturday, March 8, 2025, 08:41 AM [IST]

ಮಹಿಳಾ ಶಕ್ತಿ ಮತ್ತು ಸಮಾನತೆಗಾಗಿ ಹಲವಾರು ಹೋರಾಟಗಳು ನಡೆದಿವೆ. ಸಿನಿಮಾರಂಗ ಕೂಡ ನಾರಿ ಶಕ್ತಿಯನ್ನು ಹೊರಹಾಕಲು ಒಂದು ಪ್ರಬಲ ಮಾಧ್ಯಮ. ಇಲ್ಲಿ ನೀವು ಮಿಸ್ ಮಾಡದೇ ನೋಡಲೇಬೇಕಾದ ಕನ್ನಡದ ಪ್ರಮುಖ ಮಹಿಳಾ ಕೇಂದ್ರಿತ ಚಲನಚಿತ್ರಗಳ ಪಟ್ಟಿಯನ್ನು ನೀಡಿದೆ.

Share:
cover image
ಹಸೀನಾ

ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ಹಸೀನಾ ಚಿತ್ರದಲ್ಲಿ ತಾರಾ ಅನುರಾಧ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅಭಿನಯಕ್ಕೆ ತಾರಾ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಈ ಚಿತ್ರ ಮುಸ್ಲಿಮ್ ಯುವತಿಯೊಬ್ಬಳ ಗಂಡನಿಂದ ತೊರೆಯಲ್ಪಟ್ಟು ಮೂರು ಮಕ್ಕಳ ಜೊತೆ ಹೇಗೆ ಹಲವು ಕಷ್ಟಕ್ಕೆ ಒಳಗಾಗುತ್ತಾಳೆ ಎಂಬ ಕಥೆಯನ್ನು ಹೊಂದಿತ್ತು.


ಗುಲಾಬಿ ಟಾಕೀಸ್

ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ `ಗುಲಾಬಿ ಟಾಕೀಸ್' ಚಿತ್ರದ ನಟನೆಗಾಗಿ ಉಮಾಶ್ರೀ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಓಸಿಯಾನ್ ಫಿಲ್ಮ್ಸ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಈ ಚಿತ್ರದಲ್ಲಿ `ಗುಲಾಬಿ' ಎಂಬ ಮುಸ್ಲಿಮ್ ಮಹಿಳೆಯ ಪಾತ್ರದಲ್ಲಿ ಉಮಾಶ್ರೀ ಮನೋಘ್ನವಾದ ಅಭಿನಯ ನೀಡಿದ್ದರು. ಚಿತ್ರದ ಕಥೆ ಕುಂದಾಪುರದ ಸುತ್ತವಿರುವ ಬೆಸ್ತರ ಸುತ್ತಮುತ್ತ ಹೆಣೆದಿತ್ತು.

ನಾತಿಚರಾಮಿ

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ `ಹರಿವು' ನಿರ್ದೇಶಕ ಮನಸೋರೆರವರ ಎರಡನೇ ಚಿತ್ರ `ನಾತಿಚರಾಮಿ'. ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಮತ್ತು ನಾಯಕಿ ಶೃತಿ ಹರಿಹರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಶೀರ್ಷಿಕೆ ನಾತಿಚರಾಮಿಯ ಅರ್ಥ `ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ' ಎಂಬುದು. ದಾಂಪತ್ಯಕ್ಕೆ ಕಾಲಿಡುವ ಸಮಯದಲ್ಲಿ ಜೋಡಿಗಳು ಧರ್ಮ,ಅರ್ಥ,ಕಾಮದಲ್ಲೂ ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ ಎಂಬ ಕಂಕಣ ತೊಡುತ್ತಾರೆ. ಆದರೆ, ಆ ಪ್ರತಿಜ್ಞೆಗೆ ಎಷ್ಟು ಜನ ಬದ್ಧರಾಗಿರುತ್ತಾರೆ ಮತ್ತು ವಾಸ್ತವ ಜೀವನದಲ್ಲಿ ಅದರ ವ್ಯಾಪ್ತಿ ಎಷ್ಟು ಎಂಬುದನ್ನು ಮನಸೋರೆ ಸೂಕ್ಷವಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಬಚ್ಚಿಟ್ಟ ಭಾವನೆಗಳು ಸಂಕೋಚದ ಬೇಲಿ ದಾಟಿ ಬಂದಾಗ ಸಮಾಜ ಅದನ್ನು ಸ್ವೀಕರಿಸುವ ರೀತಿಯನ್ನು ಚಿತ್ರ ಸೂಕ್ಷವಾಗಿ ಪ್ರಶ್ನಿಸುತ್ತದೆ. 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಸಿನಿಮಾ ಐದು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಶ್ರುತಿ ಹರಿಹರನ್ ಕೂಡ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

കൂടുതല്‍ കാണാം


ತಾಯಿ ಸಾಹೇಬ

ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ತಾಯಿ ಸಾಹೇಬ ಚಿತ್ರ ರಂಗನಾಥ ಶ್ಯಾಮರಾವ್ ಲೋಕಾಪುರ ಅವರ ಕಾದಂಬರಿ ಆಧಾರಿತವಾಗಿತ್ತು. ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ಜೈಮಾಲಾ ಮತ್ತು ಸುರೇಶ್ ಹೆಬ್ಳೀಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರ ಸ್ವಾಂತಂತ್ರ ಪೂರ್ವ ಮತ್ತು ನಂತರದ ಕಾಲಘಟ್ಟದ ಚಿತ್ರಣವನ್ನು ನೀಡುತ್ತದೆ. 45ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು.

ಹೆಬ್ಬೆಟ್ ರಾಮಕ್ಕ

ಹೆಬ್ಬೆಟ್ ರಾಮಕ್ಕ ಚಿತ್ರದಲ್ಲಿ ತಾರಾ ಮತ್ತು ದೇವರಾಜ ಪ್ರಮುಖ ಪಾತ್ರದಲ್ಲಿ ನಟಸಿದ್ದರು. ಎನ್.ಆರ್.ನಂಜುಂಡೇಗೌಡ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಅಕ್ಷರ ಜ್ಞಾನವಿರದ ರಾಮಕ್ಕ ಹೇಗೆ ರಾಜಕೀಯವಾಗಿ ಬೆಳೆಯುತ್ತಾಳೆ ಎಂಬ ಕಥೆಯನ್ನು ಹೊಂದಿತ್ತು. 65ನೇ ರಾಷ್ಟೀಯ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆಯಿತು.

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+