X
ഹോം ടോപ് ലിസ്റ്റിങ്ങ്‌

ಬಿಗ್‌ಬಾಸ್‌ನಿಂದ ಸಿಕ್ಕ ಜನಪ್ರಿಯತೆಯನ್ನು ಉತ್ತಮವಾಗಿ ಬಳಸಿಕೊಂಡ ಸ್ಪರ್ಧಿಗಳಿವರು!

Author: Sowmya Bairappa | Updated: Sunday, January 26, 2025, 11:12 AM [IST]

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ಬಿಗ್‌ಬಾಸ್ ಅಂದರೆ ವ್ಯಕ್ತಿತ್ವಗಳ ನಡುವಿನ ಆಟ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು 100 ದಿನ ಉಳಿದು ಟ್ರೋಫಿ ಗೆಲ್ಲುವುದಕ್ಕಿಂತ, ತಮ್ಮ ವ್ಯಕ್ತಿತ್ವದಿಂದಲೇ ವೀಕ್ಷಕರ ಮನಗೆಲ್ಲುವುದು ಅಷ್ಟೇ ಮುಖ್ಯವಾಗಿರುತ್ತದೆ. ಬಿಗ್‌ಬಾಸ್‌ನಿಂದ ಜನಪ್ರಿಯತೆ ಗಳಿಸಿದ ಅನೇಕ ಮಂದಿ ಇಂದು ನಟನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಈ ಪೈಕಿ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಲ್ಲಿ ಬಿಗ್‌ಬಾಸ್‌ನಿಂದ ಸಿಕ್ಕ ಜನಪ್ರಿಯತೆಯನ್ನು ಚೆನ್ನಾಗಿ ಬಳಸಿಕೊಂಡ ಸ್ಪರ್ಧಿಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ಶಮಂತ್ ಗೌಡ

ತಮ್ಮ ಅದ್ಭುತ ಕಂಠದಿಂದಲೇ ಸೋಶಿಯಲ್ ಮೀಡಿಯಾ ಮೂಲಕ ಜನರಿಗೆ ಹತ್ತಿರವಾಗಿದ್ದ ಶಮಂತ್ ಬ್ರೋ ಗೌಡ, ಬಿಗ್‌ಬಾಸ್‌ ಸೀಸನ್ ೮ರಲ್ಲಿ ಸ್ಪರ್ಧಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ತಮ್ಮ ಹಾಡುಗಳ ಮೂಲಕ ವೀಕ್ಷಕರನ್ನು ರಂಜಿಸಿದ್ದರು. ದೊಡ್ಮನೆಯಿಂದ ಹೊರಬಂದ ಬಳಿಕ 'ಲಕ್ಷ್ಮೀ ಬಾರಮ್ಮ' ಸೀರಿಯಲ್‌ನಲ್ಲಿ ಅಭಿನಯಿಸುವ ಅವಕಾಶ ಪಡೆದರು. ಈ ಸೀರಿಯಲ್‌ನಲ್ಲಿ ವೈಷ್ಣವ್ ಎಂಬ ಪಾತ್ರಕ್ಕೆ ಬಣ್ಣಹಚ್ಚಿರುವ ಶಮಂತ್, ಸದ್ಯ ವೈಷ್ಣವ್ ಅಂತಲೇ ಜನಪ್ರಿಯತೆ ಗಳಿಸಿದ್ದಾರೆ. ಅಷ್ಟರಮಟ್ಟಿಗೆ ಅವರ ಪಾತ್ರ ಜನಪ್ರಿಯವಾಗಿದೆ. 


കൂടുതല്‍ കാണാം


ದಿವ್ಯಾ ಸುರೇಶ್

ನಟಿ ದಿವ್ಯಾ ಸುರೇಶ್ ಅವರು ಬಿಗ್‌ಬಾಸ್‌ ಸೀಸನ್ 8ರಲ್ಲಿ ಭಾಗವಹಿಸುವುದಕ್ಕೂ ಮುನ್ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಅಷ್ಟೊಂದು ಜನಪ್ರಿಯತೆ ಗಳಿಸಿರಲಿಲ್ಲ. ಬಿಗ್‌ಬಾಸ್ ಬಳಿಕ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಬಳಿಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ 'ತ್ರಿಪುರ ಸುಂದರಿ' ಎಂಬ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದರು. ಸದ್ಯ ಪರಭಾಷಾ ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. 


കൂടുതല്‍ കാണാം

ನಿವೇದಿತಾ ಗೌಡ

ಬಿಗ್‌ಬಾಸ್ ಮನೆಗೆ ಕಾಲಿಡುವುದಕ್ಕೂ ಮುನ್ನ  ನಿವೇದಿತಾ ಗೌಡ ಯಾರೆಂಬುದಿ ಗೊತ್ತಿರಲಿಲ್ಲ. ಬಿಗ್‌ಬಾಸ್ ಸೀಸನ್ 5ರ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ನಿವೇದಿತಾ, ಅಲ್ಲಿಂದ ಹೊರಬಂದ ಮೇಲೆ ರಾಜರಾಣಿ, ಕಾಮಿಡಿ ಕಂಪನಿ, ಗಿಚ್ಚಿ ಗಿಲಿಗಿಲಿ ಸೇರಿದಂತೆ ಹಲವು ರಿಯಾಲಿಟಿ ಶೋ ಮೂಲಕ ಮನೆಮಾತಾದರು. ಜೊತೆಗೆ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನ ರನ್ನರ್ ಅಪ್ ಆದರು. ಸದ್ಯ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಇವರಿಗೆ ಸಾಕಷ್ಟು ಫಾಲೋವರ್ಸ್ ಇದ್ದಾರೆ.  


കൂടുതല്‍ കാണാം


ರಘು ಗೌಡ

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದ ರಘು ವೈನ್ ಸ್ಟೋರ್ ಬಿಗ್‌ಬಾಸ್‌ ಸೀಸನ್ ೮ರ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು. ದೊಡ್ಮನೆಯಿಂದ ಹೊರಬಂದ ಬಳಿಕ ರಘು ಮತ್ತು ಅವರ ಪತ್ನಿ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಅಭಿಮಾನಿಗಳಿನ್ನು ಹೊಂದಿದ್ದಾರೆ. 

കൂടുതല്‍ കാണാം

ಚಂದನ್ ಶೆಟ್ಟಿ

ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರ ಪ್ರತಿಭೆಗೆ ಬಿಗ್‌ಬಾಸ್ ಸೀಸನ್ 5 ಒಳ್ಳೆಯ ವೇದಿಕೆಯಾಯಿತು. ದೊಡ್ಮನೆಯಲ್ಲಿ ಚಂದನ್ ಸ್ಪಾಟ್‌ನಲ್ಲೇ ಸೃಷ್ಟಿಸಿದ ಹಲವು ಹಾಡುಗಳು ಇಂದಿಗೂ ಜನಪ್ರಿಯ. ಬಿಗ್‌ಬಾಸ್ ಟ್ರೋಫಿ ಗೆದ್ದ ಮೇಲೆ ಚಂದನ್ ಹಲವು ಸಿನಿಮಾಗಳು ಹಾಗೂ ಶೋಗಳಲ್ಲಿ ಬ್ಯುಸಿಯಾದರು.  


കൂടുതല്‍ കാണാം


ಪ್ರಥಮ್

ಬಿಗ್‌ಬಾಸ್‌ ಕನ್ನಡಕ್ಕೆ ಬರುವ ಮುನ್ನ ಒಳ್ಳೆ ಹುಡುಗ ಪ್ರಥಮ್ ಯಾರೆಂದು ಕನ್ನಡಿಗರಿಗೆ ತಿಳಿದಿರಲಿಲ್ಲ. ಬಿಗ್‌ಬಾಸ್‌ ಸೀಸನ್ ೪ಕ್ಕೆ ಎಂಟ್ರಿಕೊಟ್ಟಿದ್ದ ಪ್ರಥಮ್‌, ಟ್ರೋಫಿ ಕೂಡ ಗೆದ್ದಿದ್ದರು. ದೊಡ್ಮನೆಯಿಂದ ಹೊರಬಂದ ಬಳಿಕ ಪ್ರಥಮ್ ಸ್ಯಾಂಡಲ್‌ವುಡ್‌ ನಟನಾಗಿ ಮಿಂಚುತ್ತಿದ್ದಾರೆ. ಇವರಿಗೆ ಆರನೇ ತರಗತಿಯಿಂದಲೇ ಸಿನಿಮಾ ನಿರ್ದೇಶಕನಾಗುವ ಬಯಕೆ ಇತ್ತಂತೆ. ಬಿಗ್‌ಬಾಸ್‌ ಬಳಿಕ ತಮ್ಮ ಆಸೆ ನೆರವೇರಿಸಿಕೊಂಡರು. ಪ್ರಥಮ್  'ದೇವ್ರನ್ನೆ ಬುಡು ಗುರು' ಕನ್ನಡ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ಅವರು ನಾಯಕನಾಗಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 


കൂടുതല്‍ കാണാം

ಪ್ರಥಮ್

ಬಿಗ್‌ಬಾಸ್‌ ಕನ್ನಡಕ್ಕೆ ಬರುವ ಮುನ್ನ ಒಳ್ಳೆ ಹುಡುಗ ಪ್ರಥಮ್ ಯಾರೆಂದು ಕನ್ನಡಿಗರಿಗೆ ತಿಳಿದಿರಲಿಲ್ಲ. ಬಿಗ್‌ಬಾಸ್‌ ಸೀಸನ್ ೪ಕ್ಕೆ ಎಂಟ್ರಿಕೊಟ್ಟಿದ್ದ ಪ್ರಥಮ್‌, ಟ್ರೋಫಿ ಕೂಡ ಗೆದ್ದಿದ್ದರು. ದೊಡ್ಮನೆಯಿಂದ ಹೊರಬಂದ ಬಳಿಕ ಪ್ರಥಮ್ ಸ್ಯಾಂಡಲ್‌ವುಡ್‌ ನಟನಾಗಿ ಮಿಂಚುತ್ತಿದ್ದಾರೆ. ಇವರಿಗೆ ಆರನೇ ತರಗತಿಯಿಂದಲೇ ಸಿನಿಮಾ ನಿರ್ದೇಶಕನಾಗುವ ಬಯಕೆ ಇತ್ತಂತೆ. ಬಿಗ್‌ಬಾಸ್‌ ಬಳಿಕ ತಮ್ಮ ಆಸೆ ನೆರವೇರಿಸಿಕೊಂಡರು. ಪ್ರಥಮ್  'ದೇವ್ರನ್ನೆ ಬುಡು ಗುರು' ಕನ್ನಡ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ಅವರು ನಾಯಕನಾಗಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 


കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+