X
ഹോം ടോപ് ലിസ്റ്റിങ്ങ്‌

Upcoming Kannada OTT Releases In January 2025: ಯುಐ, ಮ್ಯಾಕ್ಸ್ ಸೇರಿದಂತೆ ಜನವರಿಯಲ್ಲಿ ಒಟಿಟಿಗೆ ಬರುತ್ತಿರುವ ಕನ್ನಡ ಸಿನಿಮಾಗಳಿವು!

Author: Sowmya Bairappa | Updated: Friday, January 3, 2025, 09:55 AM [IST]

2025 ಆರಂಭವಾಗಿದ್ದು, ಹೊಸ ಹೊಸ ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆ. ಅದೇ ರೀತಿ ಈ ತಿಂಗಳು ಯಾವ ಸಿನಿಮಾ ಒಟಿಟಿಗೆ ಬರುತ್ತೋ ಅಂತ ಸರ್ಚ್ ಮಾಡುತ್ತಲೇ ಇರುತ್ತಾರೆ. ಈ ವರ್ಷದ ಮೊದಲ ತಿಳಗಳಾದ ಜನವರಿಯಲ್ಲಿ ವೀಕ್ಷಕರಿಗೆ ಭರಪೂರ ಮನೋರಂಜನೆ ನೀಡಲು ಹಲವು ಸಿನಿಮಾಗಳು ಒಟಿಟಿಗೆ ಎಂಟ್ರಿಕೊಡ್ತಿವೆ. ಜೀಯೋ ಸಿನಿಮಾ, ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಸೇರಿದಂತೆ ಹಲವು ಒಟಿಟಿ ವೇದಿಕೆಯಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಲ್ಲಿ ಜವರಿಯಲ್ಲಿ ಒಟಿಟಿಗೆ ಬರುತ್ತಿರುವ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ಮಾರ್ಯಾದೇ ಪ್ರಶ್ನೆ
1

2024ರ ನವೆಂಬರ್ 22ರಂದು ರಿಲೀಸ್ ಆಗಿದ್ದ 'ಮಾರ್ಯಾದೇ ಪ್ರಶ್ನೆ' ಸಿನಿಮಾ ಜೀ5 ಒಟಿಟಿ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದ್ದು, ಇನ್ನು ದಿನಾಂಕ ನಿಗದಿಯಾಗಿಲ್ಲ. ಚಿತ್ರದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ, ಪ್ರಭು ಮಂಡಕೂರ್, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ನಾಗೇಂದ್ರ ಶಾ ಮುಂತಾದವರು ನಟಿಸಿದ್ದಾರೆ. ಅರ್ಜುನ್ ರಾಮು ಸಂಗೀತ ಹಾಗೂ ಸಂದೀಪ್ ವೆಲ್ಲುರಿ ಛಾಯಾಗ್ರಹಣ ಸಿನಿಮಾಗಿದೆ. ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್‌ಗಳನ್ನು ನಿರ್ಮಾಣ ಮಾಡಿರುವ ಆರ್‌ಜೆ ಪ್ರದೀಪ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  

കൂടുതല്‍ കാണാം


ಆರಾಮಾ ಅರವಿಂದ ಸ್ವಾಮಿ
2

ಅಭಿಷೇಕ್ ಶೆಟ್ಟಿ ನಿರ್ದೇಶನದ 'ಆರಾಮಾ ಅರವಿಂದ ಸ್ವಾಮಿ' ಸಿನಿಮಾ 2024ರ ನವೆಂಬರ್ 22ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸಿದ್ದು, ಮಿಲನಾ ನಾಗರಾಜ್ ಮತ್ತು ಹೃತಿಕ ಶ್ರೀನಿವಾಸ್ ನಾಯಕಿಯರಾಗಿ ಅಭಿನಯಿಸಿದ್ದರು.  ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದರು. ಅಕಿರ ಚಿತ್ರ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ ಗುಳ್ಟು ಚಿತ್ರದ ನಿರ್ಮಾಪಕ ಪ್ರಶಾಂತ್ ರೆಡ್ಡಿ 'ಆರಾಮಾ ಅರವಿಂದ ಸ್ವಾಮಿ' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದ್ದು, ದಿನಾಂಕ ನಿಗದಿಯಾಗಿಲ್ಲ.

കൂടുതല്‍ കാണാം

ಯುಐ
3

2024ರ ಡಿಸೆಂಬರ್ 20ರಂದು ಬಿಡುಗಡೆಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಯುಐ' ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ಗುರುಪ್ರಸಾದ್, ಅಚ್ಯುತ್ ಕುಮಾರ್, ಸಾಧುಕೋಕಿಲ, ರವಿಶಂಕರ್ ಪಿ, ಮುರಳಿ ಶರ್ಮಾ, ಕಾಕ್ರೋಚ್ ಸುಧಿ ಮುಂತಾದವರು ತಾರಾಗಣದಲ್ಲಿದ್ದರು. ಅಜನೀಶ್ ಲೋಕನಾಥ್ ಸಂಗೀತ 'UI' ಚಿತ್ರಕ್ಕಿದ್ದು, ಜಿ. ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದರು. ಥಿಯೇಟರ್‌ನಲ್ಲಿ ಹಿಟ್ ಆದ ಬಳಿಕ ಯುಐ ಒಟಿಟಿಗೆ ಬರಲು ಸಜ್ಜಾಗಿದೆ. ಜನವರಿ 30ರಂದು ಸನ್‌ ನೆಕ್ಟ್‌ನಲ್ಲಿ ಯುಐ ಬಿಡುಗಡೆ ಆಗಲಿದೆ.

കൂടുതല്‍ കാണാം


ಮ್ಯಾಕ್ಸ್
4

ಕ್ರಿಸ್‌ಮಸ್ ಪ್ರಯುಕ್ತ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ವಿಕ್ರಾಂತ್ ರೋಣ ಬಿಡುಗಡೆಯಾಗಿ ಎರಡು ವರ್ಷಗಳ ಬಳಿಕ ಕಿಚ್ಚ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಗ್ರ್ಯಾಂಡ್ ವೆಲ್‌ಕಮ್ ಮಾಡಿದ್ದರು. ಮ್ಯಾಕ್ಸ್‌ನಲ್ಲಿ ಸುದೀಪ್ ಮಾಸ್ ಅವತಾರ ಕಂಡು ಫ್ಯಾನ್ಸ್ ಫಿದಾ ಆಗಿದ್ದರು. ನಿರ್ದೇಶಕ ವಿಜಯ್ ಕಾರ್ತಿಕೇಯ 'ಮ್ಯಾಕ್ಸ' ಚಿತ್ರದಲ್ಲಿ ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದನ್ನು ಥ್ರಿಲ್ಲಿಂಗ್ ಆಗಿ ತೋರಿಸಿದ್ದು, ಬಾಕ್ಸಾಪೀಸ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡ್ತಿದೆ. ಮ್ಯಾಕ್ಸ್ ಸಿನಿಮಾ ಜೀ5 ಒಟಿಟಿ ಚಾನೆಲ್‌ನಲ್ಲಿ ರಿಲೀಸ್ ಆಗಲಿದ್ದು, ದಿನಾಂಕ ನಿಗದಿಯಾಗಿಲ್ಲ.

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+