X
ഹോം ടോപ് ലിസ്റ്റിങ്ങ്‌

ಪ್ರೇಮಾ ಟು ಯುವ ರಾಜ್‌ಕುಮಾರ್: ಡಿವೋರ್ಸ್ ಆಗಿರುವ ಕನ್ನಡ ಚಿತ್ರರಂಗದ ಜೋಡಿಗಳಿವರು!

Author: Sowmya Bairappa | Published: Tuesday, June 11, 2024, 11:06 AM [IST]

ಮೊದಲೆಲ್ಲಾ ದಂಪತಿಗಳು ತಮ್ಮ ಮಧ್ಯೆ ಏನೇ ಸಮಸ್ಯೆ ಬಂದರೂ ಅನುಸರಿಸಿಕೊಂಡು ಹೋಗುತ್ತಿದ್ದರು. ಆದ್ರೀಗ ಪ್ರತಿಯೊಬ್ಬರು ಸ್ವತಂತ್ರರಾಗಿದ್ದಾರೆ. ಸಹಿಸಿಕೊಳ್ಳುವ ಮನಸ್ಥಿತಿ ಬದಲಾಗಿದ್ದು, ಸಂಬಂಧಗಳ ಮೌಲ್ಯ ಕಡಿಮೆಯಾಗಿದೆ. ಹೀಗಾಗಿ, ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಸಿನಿಮಾರಂಗಕ್ಕೂ ಇದು ಹೊಸತಲ್ಲ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲೂ ಡಿವೋರ್ಸ್‌ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿ ಡಿವೋರ್ಸ್ ಆಗಿರುವ ಸ್ಯಾಂಡಲ್‌ವುಡ್ ಜೋಡಿಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ಪ್ರೇಮಾ & ಜೀವನ್ ಅಪ್ಪಚ್ಚು

ಒಂದು ಕಾಲದಲ್ಲಿ ಕನ್ನಡದ ಸ್ಟಾರ್ ನಟಿಯಾಗಿದ್ದ ಕೊಡಗಿನ ಬೆಡಗಿ ಪ್ರೇಮಾ 2006ರಲ್ಲಿ ಐಟಿ ಉದ್ಯಮಿ ಜೀವನ್ ಅಪ್ಪಚ್ಚು ಎಂಬುವವರನ್ನು ವಿವಾಹವಾದರು. ಮದುವೆ ಬಳಿಕ ತಮ್ಮ ಸಿನಿಜೀವನಕ್ಕೆ ತಾತ್ಕಾಲಿಕ ವಿದಾಯ ಹೇಳಿದರು. ನಂತರ 2009ರಲ್ಲಿ `ಶಿಶಿರ' ಎಂಬ ಚಿತ್ರದಲ್ಲಿ ನಟಿಸಿದರು. 2016ರಲ್ಲಿ ತಮ್ಮ ಹತ್ತು ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿ, ಪರಸ್ಪರ ಒಪ್ಪಿಗೆ ಮೇರೆಗೆ ಪ್ರೇಮಾ ದಂಪತಿ ಬೆಂಗಳೂರಿನ ಕೌಟಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದರು. ಆ ಬಳಿಕ ಬೇರೆ ಮದುವೆಯಾಗಿಲ್ಲ.


ಸೋನು ಗೌಡ & ಮನೋಜ್ ಕುಮಾರ್

 'ಇಂತಿ ನಿನ್ನ ಪ್ರೀತಿಯ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸೋನು ಗೌಡ, 2010ರಲ್ಲಿ ಮನೋಜ್ ಕುಮಾರ್ ಎಂಬುವವರೊಂದಿಗೆ ತರಾತುರಿಯಲ್ಲಿ ಮದುವೆ ಆಗಿದ್ದರು. ಸೋನು ಮದುವೆ ಕೇವಲ ಬಂಧಮಿತ್ರರು ಹಾಗೂ ಅತ್ಯಪ್ತರಷ್ಟೇ ಸಾಕ್ಷಿಯಾಗಿದ್ದರು.  ಆದರೆ, ಇವರ ವೈವಾಹಿಕ ಜೀವನ ಹೆಚ್ಚು ಕಾಲು ಉಳಿಯಲಿಲ್ಲ. ನಂತರ ಪತಿಯಿಂದ ವಿಚ್ಛೇದನ ಪಡೆದ ಈ ನಟಿ, ಮರುಮದುವೆಯಾಗದೇ ಈಗಲೂ ಸಿಂಗಲ್ ಆಗಿಯೇ ಉಳಿದಿದ್ದಾರೆ.  

ನಿಧಿ ಸುಬ್ಬಯ್ಯ & ಲವೇಶ್

ನಿಧಿ ಸುಬ್ಬಯ್ಯ 2017ರ ಫೆಬ್ರವರಿಯಲ್ಲಿ ವಿರಾಜಪೇಟೆಯ ಖಾಸಗಿ ರೆಸಾರ್ಟ್‌ವೊಂದರಲ್ಲಿ ಲವೇಶ್ ಎಂಬುವವರೊಂದಿಗೆ ಅದ್ಧೂರಿಯಾಗಿ ವಿವಾಹವಾಗಿದ್ದರು. ಮುಂಬೈ ಮೂಲದ ಲವೇಶ್ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದರು. ಆದರೆ, ಮದುವೆಯಾದ ಕೆಲ ತಿಂಗಳ ಬಳಿಕ ನಿಧಿ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಡಿಲೀಟ್ ಮಾಡಿದ್ದರು. ಈ ವೇಳೆ ಅವರ ವಿಚ್ಛೇದನದ ಕುರಿತು ಹಲವು ಸುದ್ದಿಗಳು ಹರಿದಾಡಿದ್ದವು. ಆದರೆ, ನಿಧಿ ಈ ಬಗ್ಗೆ ಏನೂ ಹೇಳಿಕೊಂಡಿರಲಿಲ್ಲ. ಇದಾದ ಬಳಿಕ ನಿಧಿ ಬಿಗ್ ಬಾಸ್ ಕನ್ನಡ ಸೀಸನ್ ೮ರಲ್ಲಿ ಭಾಗವಹಿಸಿದ್ದರು. ಬಿಬಿಕೆ ಮನೆಯಿಂದ ಹೊರಬಂದ ಇವರು, ನಾನು ಮದುವೆಯಾಗಿದ್ದೆ. ಅದು ತಿಂಗಳ ಬಳಿಕ ಅದು ಮುಂದುವರೆಯಲಿಲ್ಲ ಎಂದಿದ್ದರು.


 ಶ್ರುತಿ ಹಾಗೂ ನಿರ್ದೇಶಕ ಮಹೇಂದರ್

ಮನಮಿಡಿಯುವ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟಿ ಶ್ರುತಿ ಹಾಗೂ ನಿರ್ದೇಶಕ ಮಹೇಂದರ್ 1998ರಲ್ಲಿ ಪುರಿ ಜಗನ್ನಾಥ ದೇವಾಲಯದಲ್ಲಿ ಮದುವೆಯಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಅಂತರ್ಜಾತಿಯ ವಿವಾಹ ಮಾಡಿಕೊಂಡಿದ್ದರು. ಆದರೆ, 12 ವರ್ಷ ದಾಂಪತ್ಯ ಜೀವನ ನಡೆಸಿ, ಕಾರಣಾಂತರಗಳಿಂದ ಪರಸ್ಪರ ದೂರವಾದರು. ಈ ದಂಪತಿಗೆ ಒಬ್ಬಳು ಮಗಳಿದ್ದಾಳೆ.  ನಂತರ 2013ರಲ್ಲಿ ಹೊಳೆನರಸೀಪುರದ ಚಂದ್ರಚೂಡ ಚಕ್ರವರ್ತಿ ಅವರನ್ನು ಮದುವೆಯಾಗಿದ್ದರು. ಇವರು ಮೊದಲ ಪತಿಗೆ ವಿಚ್ಛೇದನ ನೀಡದೇ ಮದುವೆಯಾಗಿದ್ದರಿಂದ ನ್ಯಾಯಾಲಯ ಇವರ ಮದುವೆಯನ್ನು ಅಸಿಂಧುಗೊಳಿಸಿತ್ತು. 

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

ಬಿಗ್​ಬಾಸ್​ ಸೀಸನ್​ 5ರ ಸ್ಪರ್ಧಿಗಳಾದ ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ 2020 ಫೆಬ್ರವರಿ 26ರಂದು ಪ್ರೀತಿಸಿ ಮದುವೆಯಾಗಿತ್ತು. ಬಿಗ್ ಬಾಸ್ ಮನೆಯಲ್ಲಿದ್ದಾಗ ಆತ್ಮೀಯ ಸ್ನೇಹಿತರಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮಧ್ಯೆ ಪ್ರೀತಿ ಅದ್ಯಾವಾಗ ಚಿಗುರೊಡೆಯಿತೋ ಗೊತ್ತಿಲ್ಲ. ಆದರೆ, ಯುವ ದಸರಾ ಕಾರ್ಯಕ್ರಮದಲ್ಲಿ ಮೈಸೂರು ಜನತೆಯ ಮುಂದೆಯೇ ನಿವೇದಿತಾ ಕೈಬೆರಳಿಗೆ ಉಂಗುರ ತೊಡಿಸಿ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಈ ಜೋಡಿ ಮದುವೆಯಾಗಿತ್ತು. ನಾಲ್ಕು ವರ್ಷಗಳ ಕಾಲ ಸಹಜೀವನ ನಡೆಸಿದ್ದ ಜೂನ್ ೭ರಂದು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ.


ಯುವ ರಾಜ್‌ಕುಮಾರ್ &  ಶ್ರೀದೇವಿ ಭೈರಪ್

ರಾಘವೇಂದ್ರ ರಾಜ್‌ಕುಮಾರ್ ಎರಡನೇ ಪುತ್ರ ಯುವ ರಾಜ್‌ಕುಮಾರ್ 2019 ಮೇ 26ರಂದು ಶ್ರೀದೇವಿ ಭೈರಪ್ಪ ಪ್ರೀತಿಸಿ ಮದುವೆಯಾಗಿದ್ದರು. ನಾಲ್ಕು ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಯುವ,  ಜೂನ್ 6ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 4ರಂದು ಈ ಕುರಿತು ವಿಚಾರಣೆ ನಡೆಯಲಿದೆ. MC ಆಕ್ಟ್ ಸೆಕ್ಷನ್ 13(1)(IA) ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕಳೆದ 6 ತಿಂಗಳಿಂದ ದಂಪತಿ ದೂರಾಗಿ ಜೀವನ ನಡೆಸುತ್ತಿದ್ದಾರೆ. ಶ್ರೀದೇವಿ ಸದ್ಯ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+