X
ഹോം ടോപ് ലിസ്റ്റിങ്ങ്‌

ಸ್ಯಾಂಡಲ್‌ವುಡ್‌ನಲ್ಲಿ ಛಾಪು ಮೂಡಿಸುತ್ತಿರುವ ಸಹೋದರ & ಸಹೋದರಿಯರಿವರು!

Author: Sowmya Bairappa | Updated: Thursday, March 6, 2025, 09:49 AM [IST]

ತಮ್ಮ ಕಲಾ ಕೌಶಲದಿಂದ ಪ್ರೇಕ್ಷಕರಿಗೆ ಸಂತೋಷ ನೀಡುವ ಕಲಾ ಕುಟುಂಬಗಳು ಕನ್ನಡದಲ್ಲಿ ಬಹಳಷ್ಟಿವೆ. ರಾಜಕೀಯದಲ್ಲಿ 'ಕುಟುಂಬ ರಾಜಕಾರಣ' ಎನ್ನುವಂತೆ ವಂಶ ಪಾರಂಪರ್ಯವಾಗಿ ಬಣ್ಣದ ಜಗತ್ತಿನಲ್ಲೇ ತೊಡಗಿರುವ ಅನೇಕ ಫ್ಯಾಮಿಲಿಗಳಿವೆ. ನಟ, ನಟಿ, ಖಳನಟ, ಪೋಷಕ ಪಾತ್ರ, ತಂತ್ರಜ್ಞ ಕುಟುಂಬಗಳಿಗೆ ಸಿನಿಮಾ ಜಗತ್ತೇ ಸರ್ವಸ್ವ, ಅಭಿಮಾನಿಗಳೇ ಎಲ್ಲಾ. ಇಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಛಾಪು ಮೂಡಿಸುತ್ತಿರುವ ಸಹೋದರ & ಸಹೋದರಿಯರ ಪಟ್ಟಿಯನ್ನು ನೀಡಲಾಗಿದೆ.

Share:
cover image
ದುನಿಯಾ ವಿಜಯ್ & ಅಂಬುಜ
1

2004ರಲ್ಲಿ ತೆರೆಕಂಡ 'ರಂಗ ಎಸ್ಎಸ್ಎಲ್‌ಸಿ' ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರ ಮಾಡುವ ಮೂಲಕ ಚಂದನವನ ಪ್ರವೇಶಿಸಿದ ದುನಿಯಾ ವಿಜಯ್, ಆನಂತರ ಕೆಲ ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯಿಸಿದ್ದರು. ದುನಿಯಾ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರು, ಇಂದು ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ವಿಜಯ್ ಅವರ ಅಕ್ಕ ಅಂಬುಜ ಕೂಡ ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಫೋಷಕ ಪಾತ್ರದಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದಾರೆ.


 ಸುಧಾ ಹಾಗೂ ಪ್ರಕಾಶ್ ಬೆಳವಾಡಿ
2

ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿ ಭಾರ್ಗವಿ ನಾರಾಯಣ್ ಅವರ ಮಕ್ಕಳಾದ ಸುಧಾ ಬೆಳವಾಡಿ ಹಾಗೂ ಪ್ರಕಾಶ್ ಬೆಳವಾಡಿ ಸ್ಯಾಂಡಲ್‌ವುಡ್‌ನಲ್ಲಿ ಪ್ರಮುಖ ಫೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ. ಮುಂಗಾರು ಮಳೆ ಸಿನಿಮಾ ಮೂಲಕ ಗುರುತಿಸಿಕೊಂಡ ಸುಧಾ ಅವರು, ವಾಸ್ತು ಪ್ರಕಾರ, ಪಂಚರಂಗಿ, ಗಾಳಿಪಟ, ಕಳ್ಳರ ಸಂತೆ, ಟಗರು ಹೀಗೆ ಸುಮಾರು ೮೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಾಯಕ ಅಥವಾ ನಾಯಕಿಯ ತಾಯಿಯಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಪ್ರಕಾಶ್ ಬೆಳವಾಡಿ ಬಹುಭಾಷಾ ನಟರಾಗಿ ಗುತಿಸಿಕೊಂಡಿದ್ದಾರೆ. 2002ರಲ್ಲಿ ಇವರು ನಿರ್ದೇಶಿಸಿದ 'ಸ್ಟೆಂಬಲ್' ಎಂಬ ಇಂಗ್ಲಿಷ್‌ ಸಿನಿಮಾಗೆ ನ್ಯಾಷನಲ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.
 

ರಕ್ಷಿತಾ & ರಾಣಾ
3

2002ರಲ್ಲಿ ತೆರೆಕಂಡ `ಅಪ್ಪು' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಕ್ರೇಜಿ ಕ್ವೀನ್ ರಕ್ಷಿತಾ, ನಂತರ ಈ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್‌ನಲ್ಲಿ ಕೂಡ ನಾಯಕಿಯಾಗಿ ನಟಿಸಿದರು. ಕನ್ನಡದಲ್ಲಿ ಪುನೀತ್, ದರ್ಶನ್, ಸುದೀಪ್, ಶಿವರಾಜ್‌ಕುಮಾರ್, ಉಪೇಂದ್ರ, ಶ್ರೀಮುರಳಿ ಮುಂತಾದ ನಟರೊಂದಿಗೆ ನಟಿಸಿರುವ ರಕ್ಷಿತಾ, ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಎನ್.ಟಿ.ಆರ್ ಮುಂತಾದ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ. ಇವರ ಸಹೋದರ ರಾಣಾ, ಪ್ರೇಮ್ ನಿರ್ದೇಶನದ 'ಏಕ್‌ ಲವ್ ಯಾ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ.


ವಿನಯ ಪ್ರಸಾದ್ & ರವಿ ಭಟ್
4

200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ವಿನಯ ಪ್ರಸಾದ್ ಹಾಗೂ ಅವರ ಕಿರಿಯ ಸಹೋದರ ರವಿ ಭಟ್ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಫು ಮೂಡಿಸಿದ್ದಾರೆ. 1988ರಲ್ಲಿ `ಮಧ್ವಾಚಾರ್ಯ' ಚಿತ್ರದಿಂದ ಅಭಿನಯ ಆರಂಭಿಸಿದ ವಿನಯ ಪ್ರಸಾದ್, ಗಣೇಶನ ಮದುವೆ ಸಿನಿಮಾ ಮೂಲಕ ನಾಯಕಿಯಾದರು. ಇವರು ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ರವಿ ಭಟ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಖ್ಯಾತ ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ.

ಪ್ರೇಮಾ & ಅಯ್ಯಪ್ಪ
5

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಆಗಿ ಮಿಂಚಿದವರು ನಟಿ ಪ್ರೇಮಾ.  'ಸವ್ಯಸಾಚಿ' ಸಿನಿಮಾ ಮೂಲಕ ನಟನಾ ಪಯಣ ಆರಂಭಿಸಿದ ಇವರು, ತಮ್ಮ ಎರಡನೇ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿದ್ದರು.  ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಓಂ' ಸಿನಿಮಾ ಪ್ರೇಮಾ ವಾರ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತ್ತು. ಅಂದು ಪ್ರೇಮಾ ನಟಿಸಿದ ಸಿನಿಮಾಗಳು ಇಂದಿಗೂ ಜನರ ಮಾನಸದಲ್ಲಿ ಉಳಿದಿವೆ. ಇವರ ತಮ್ಮ ಅಯ್ಯಪ್ಪ ಕ್ರಿಕೆಟರ್ ಆಗಿದ್ದು, ಕನ್ನಡ ಬಿಗ್‌ಬಾಸ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.


ಪವಿತ್ರ & ಆದಿ ಲೋಕೇಶ್
6

ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಪವಿತ್ರ ಲೋಕೇಶ್, ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇವರ ಸಹೋದರ ಆದಿ ಲೋಕೇಶ್, ಜೋಗಿ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಪೂಜಾರಿ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದ ಇವರು, ನಂತರ ಸಾಕಷ್ಟು ಚಿತ್ರಗಳಲ್ಲಿ ಖಳನಾಯಕನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

 ಶ್ರುತಿ & ಶರಣ್
7

90ರ ದಶಕದಲ್ಲಿ ಹೀರೋಯಿನ್ ಆಗಿ ಮಿಂಚಿದ್ದ ನಟಿ ಶ್ರುತಿ ಸದ್ಯ ಕನ್ನಡ ಚಿತ್ರರಂದಲ್ಲಿ ಫೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ತಾವು ನಟಿಸಿರುವ ಹಲವು ಸಿನಿಮಾಗಳಿಗೆ  ಸಾಕಷ್ಟು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇವರ ಸಹೋದರ ಶರಣ್, 1996ರಲ್ಲಿ ಪ್ರೇಮ ಪ್ರೇಮ ಪ್ರೇಮ ಎಂಬ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ನೂರು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಪ್ರೇಕ್ಷಕರನ್ನು ನಕ್ಕು ನಲಿಸಿದರು. ತಮ್ಮ ನೂರನೇ ಸಿನಿಮಾ 'ರ್ಯಾಂಬೋ' ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿಕೊಟ್ಟ ಶರಣ್, ಇದಾದ ಬಳಿಕ ವಿಕ್ಟರಿ, ಅಧ್ಯಕ್ಷ, ರಾಜ ರಾಜೆಂದ್ರ, ಜಯಲಲಿತಾ, ವಿಕ್ಟರಿ 2,ಗುರುಶಿಷ್ಯರು ಹೀಗೆ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಚಂದನವನದ ಪೈಸಾ ವಸೂಲ್ ಹೀರೋ ಎನಿಸಿಕೊಂಡಿದ್ದಾರೆ.


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+