ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಗಂಭೀರ ಆರೋಪ ಮಾಡಿದ್ದರು. ಸುದೀಪ್ ಎಂಟು ವರ್ಷಗಳ ಹಿಂದೆಯೇ ತಮ್ಮಿಂದ ಮುಂಚಿತವಾಗಿ ಹಣ ಪಡೆದಿದ್ದರು. ಆದರೆ, ಈವರೆಗೂ ಕಾಲ್‌ಶೀಟ್ ಕೊಟ್ಟಲ್ಲ. ಜೊತೆಗೆ ಹಣವನ್ನೂ ಹಿಂದಿರುಗಿಸಿಲ್ಲ ಅಂತ ಆರೋಪಿಸಿದ್ದರು. ಜೊತೆಗೆ ಫಿಲ್ಮ ಚೇಂಬರ್ ಮುಂದೆ ಧರಣಿ ಕೂತು, ರವಿಚಂದ್ರನ್ ಹಾಗೂ ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದರು. ಕೊನೆಗೆ ಸುದೀಪ್ ಅವರು ಕುಮಾರ್, ಸುರೇಶ್ ಹಾಗೂ ರೆಹಮಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ಸುದೀಪ್ ವಿರುದ್ಧ ನಿರ್ಮಾಪಕರ ಆರೋಪ
/top-listing/sandalwood-controversies-list-of-controversies-in-kannada-film-industry-in-2023-3-3579.html#ಸುದೀಪ್-ವಿರುದ್ಧ-ನಿರ್ಮಾಪಕರ-ಆರೋಪ
ನಟ ರಿಯಲ್ ಸ್ಟಾರ್ ಉಪೇಂದ್ರ ಆಗಸ್ಟ್ ತಿಂಗಳಲ್ಲಿ ತಮ್ಮ ಪ್ರಜಾಕೀಯ ಪಕ್ಷದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್‌ನಲ್ಲಿ ಮಾತನಾಡುತ್ತಾ ಬಳಸಿದ ಪದ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಉಪೇಂದ್ರ ವಿರುದ್ಧ ದಲಿತಪರ ಸಂಘಟನೆಗಳು ಹಲವು ದೂರಗಳನ್ನು ಕೂಡ ದಾಖಲಿಸಿದ್ದರು. ಎಫ್‌ಐಆರ್ ಕೂಡ ರಿಜಿಸ್ಟರ್ ಆಗಿತ್ತು. ಫಿಲ್ಮ್ ಚೇಂಬರ್‌ಗೂ ದೂರು ನೀಡಲಾಗಿತ್ತು. ನಂತರ ಉಪೇಂದ್ರ ಅವರು, ತಾವು ಆಚಾತುರ್ಯದಿಂದ ಆ ಪದ ಬಳಸಿರುವುದಾಗಿ ಸ್ಪಷ್ಟನೆ ನೀಡಿದ್ದರು. ಬಳಿಕ ವಿವಾದ ತಣ್ಣಗಾಯಿತು.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ಉಪೇಂದ್ರ ಜಾತಿ ನಿಂದನೆ ಪ್ರಕರಣ
/top-listing/sandalwood-controversies-list-of-controversies-in-kannada-film-industry-in-2023-3-3579.html#ಉಪೇಂದ್ರ-ಜಾತಿ-ನಿಂದನೆ-ಪ್ರಕರಣ
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ನಾಯಿ, ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿದ ಪ್ರಕರಣ ನವೆಂಬರ್ ತಿಂಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣದಲ್ಲಿ A2 ಆಗಿದ್ದ ದರ್ಶನ್ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆ ಎದುರಿಸುವಂತಾಯಿತು. ತಮ್ಮದಲ್ಲದ ತಪ್ಪಿಗೆ ದರ್ಶನ್ ಈ ವಿವಾದದಲ್ಲಿ ಸಿಲುಕಿಕೊಳ್ಳುವಂತಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಲು ಮುಂದಾಗಿದ್ದಾರೆ. ಆದರೆ, ಪ್ರಕರಣದಲ್ಲಿ ದರ್ಶನ್ ಪಾತ್ರವಿರುವ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಹಾಗಾಗಿ ದರ್ಶನ್ ಹೆಸರನ್ನು ಚಾರ್ಚ್‌ಶೀಟ್‌ನಿಂದ ಕೈ ಬಿಡಲು ನಿರ್ಧರಿಸಿದ್ದು ಇದರಿಂದ ರಿಲೀಫ್ ಸಿಕ್ಕಿದೆ.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ಮಹಿಳೆಗೆ ಕಚ್ಚಿದ ಪ್ರಕರಣ
/top-listing/sandalwood-controversies-list-of-controversies-in-kannada-film-industry-in-2023-3-3579.html#ಮಹಿಳೆಗೆ-ಕಚ್ಚಿದ-ಪ್ರಕರಣ
ಪೆಂಟಗನ್ ಸಿನಿಮಾದಲ್ಲಿ ಬಿಗ್‌ಬಾಸ್ ಸೀಸನ್ ೧೦ರ ಸ್ಪರ್ಧಿ ತನಿಷಾ ಕುಪ್ಪಂಡ ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದ ಪ್ರಚಾರದ ವೇಳೆ ಯ್ಯೂಟೂಬರ್ ಒಬ್ಬರು ಅಶ್ಲೀಲ ಸಿನಿಮಾದಲ್ಲಿ ನಟಿಸುತ್ತೀರಾ ಅಂತ ಪ್ರಶ್ನೆ ಮಾಡಿದ್ದರು. ಈ ಸಂಬಂಧ ತನಿಷಾ ಧ್ವನಿ ಎತ್ತಿದ್ದರು. ಈ ಸಂಬಂಧ ಯ್ಯೂಟೂಬರ್ ಮೇಲೆ ದೂರು ದಾಖಲಾಗಿತ್ತು. ಪೊಲೀಸರು ಆತನನ್ನು ಕರೆಸಿ ವಿಚಾರಣೆ ಕೂಡ ನಡೆಸಿದ್ದರು. ಇದರ ಜೊತೆಗೆ ರಾಜಾಹುಲಿ ಸಿನಿಮಾದ ಹರ್ಷ ಕೂಡ ತಮಗೆ ಅಶ್ಲೀಲ ಮೆಸೇಜ್ ಮಾಡಿದ್ದರ ಬಗ್ಗೆ ಮಾತನಾಡಿದ್ದರು.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ತನಿಷಾ ಕುಪ್ಪಂಡ 'ಪೆಂಟಗನ್' ಸಿನಿಮಾ ವಿವಾದ
/top-listing/sandalwood-controversies-list-of-controversies-in-kannada-film-industry-in-2023-3-3579.html#ತನಿಷಾ-ಕುಪ್ಪಂಡ-ಪೆಂಟಗನ್-ಸಿನಿಮಾ-ವಿವಾದ
ಮೈಸೂರಿನ ಟಿ. ನರಸಿಪುರದ ಸಮೀಪ ನಟ ದರ್ಶನ್ ಫಾರ್ಮ್ ಹೌಸ್ ಹೊಂದಿದ್ದಾರೆ. ಆ ಫಾರ್ಮ್ ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ಕು ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ವಶಕ್ಕೆ ಪಡೆದಿದ್ದರು. ಬಾರ್‌ಹೆಡಡ್ ಗೂಸ್ ಎಂದು ಕರೆಯುವ ಈ ಪಕ್ಷಿಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಅಪರಾಧ. ಈ ಕಾರಣಕ್ಕೆ ವನ್ಯ ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ದರ್ಶನ್ ಫಾರ್ಮ್ ಹೌಸ್ ಮೇಲೆ ದಾಳಿ
/top-listing/sandalwood-controversies-list-of-controversies-in-kannada-film-industry-in-2023-3-3579.html#ದರ್ಶನ್-ಫಾರ್ಮ್-ಹೌಸ್-ಮೇಲೆ-ದಾಳಿ
2023ರ ಆರಂಭದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ಪ್ರಚಾರದ ವೇಳೆ ರಚಿತಾ ರಾಮ್, ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಚಿತ್ರ ಪ್ರಚಾರದ ಭರದಲ್ಲಿ ಇಷ್ಟು ವರ್ಷ ಜನವರಿ 26ಕ್ಕೆ ಗಣರಾಜ್ಯೋತ್ಸವ ಮಾಡುತ್ತಿದ್ದೆವು. ಆದ್ರೆ, ಈ ವರ್ಷ ಕ್ರಾಂತಿ ಉತ್ಸವ ಅಷ್ಟೆ ಅಂತ ಹೇಳಿದ್ದರು. ಈ ಹೇಳಿಕೆ ಸಿಕ್ಕಾಪಟ್ಟೆ ವಿವಾದ ಸೃಷ್ಟಿಸಿತ್ತು.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ರಚಿತಾ ರಾಮ್ ಹೆಳಿಕೆ
/top-listing/sandalwood-controversies-list-of-controversies-in-kannada-film-industry-in-2023-3-3579.html#ರಚಿತಾ-ರಾಮ್-ಹೆಳಿಕೆ
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ 'ಹಾಸ್ಟೆಲ್ ಹುಡುಗರು' ಚಿತ್ರದಲ್ಲಿ ಮೋಹಕತಾರೆ ರಮ್ಯಾ ಅತಿಥಿ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಆ ದೃಶ್ಯವನ್ನು ಚಿತ್ರದ ಪ್ರಮುಖ ಪ್ರಚಾರದ ಸರಕಾಗಿ ಬಳಸಿಕೊಳ್ಳಲಾಗಿತ್ತು. ಆದರೆ, ಚಿತ್ರ ಬಿಡುಗಡೆಗೆ ಕೆಲವೇ ದಿನಗಳಿರುವಾಗ ರಮ್ಯಾ ಸಿನಿಮಾತಂಡಕ್ಕೆ ನೋಟಿಸ್ ಕಳುಹಿಸಿ ತಮ್ಮ ನಟನೆಯ ದೃಶ್ಯಗಳನ್ನು ಕೈ ಬಿಡುವಂತೆ ಹೇಳಿದ್ದರು. ಇದಕ್ಕೆ ಚಿತ್ರತಂಡ ಒಪ್ಪಲಿಲ್ಲ. ಈ ಸಂಬಂಧ ನ್ಯಾಯಾಲಯ ಪ್ರಕರಣ ಎದುರಿಸಿ, ರಮ್ಯಾರ ದೃಶ್ಯಗಳ ಸಮೇತ ಸಿನಿಮಾ ಎಇಲೀಸ್ ಮಾಡಿತ್ತು. ಈ ಸಿನಿಮಾ ಸೂಪರ್ ಹಿಟ್ ಕೂಡ ಆಗಿತ್ತು.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ರಮ್ಯಾ ಸಿನಿಮಾ ವಿವಾದ
/top-listing/sandalwood-controversies-list-of-controversies-in-kannada-film-industry-in-2023-3-3579.html#ರಮ್ಯಾ-ಸಿನಿಮಾ-ವಿವಾದ
ವರ್ತೂರ್ ಸಂತೋಷ್ ಬಿಗ್‌ಬಾಸ್ ಮನೆಗೆ ತೆರಳುವಾಗ ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ವನ್ಯಜೀವಿ ಕಾಯಿದೆ ಪ್ರಕಾರ ಇದು ತಪ್ಪು. ಈ ಕುರಿತು ಸಂತೋಷ್ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಈ ವಿವಾದ ಚಿತ್ರರಂಗಕ್ಕೂ ವ್ಯಾಪಿಸಿತು. ವರ್ತೂರು ಸಂತೋಷ್ ನಂತರ ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹುಲಿ ಉಗುರು ಹೊಂದಿದ್ದ ಹಲವರಿಗೆ ನೊಟೀಸ್ ನೀಡಲಾಗಿತ್ತು. ವರ್ತೂರ್ ಸಂತೋಷ್ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರ ಕರೆತಂದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ನಂತರ ಜಾಮೀನು ಪಡೆದು ಅವರು ಹೊರಬಂದಿದ್ದರು. ಇವರನ್ನು ಹೊರತುಪಡಿಸಿ ಯಾವುದೇ ಸೆಲೆಬ್ರಿಟಿಗಳನ್ನು ಈ ಪ್ರಕರಣಗಳನ್ನು ಬಂಧಿಸಿರಲಿಲ್ಲ.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ಹುಲಿ ಉಗರು ಪ್ರಕರಣ
/top-listing/sandalwood-controversies-list-of-controversies-in-kannada-film-industry-in-2023-3-3579.html#ಹುಲಿ-ಉಗರು-ಪ್ರಕರಣ
ರಾಜ್ ಬಿ ಶೆಟ್ಟಿ ಅಭಿನಯದ ಟೋಬಿ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆ ಸಮಯದಲ್ಲಿ ವೈರಲ್ ಆದ ವಿಡಿಯೋವೊಂದು ವಿವಾದ ಸೃಷ್ಟಿಸಿತ್ತು. ಟೋಬಿ ಚಿತ್ರ ನೋಡಿಬಂದ ಮಹಿಳೆಯೊಬ್ಬರು, ಸಿನಿಮಾ ಚೆನ್ನಾಗಿಲ್ಲ ಅಂತ ಕ್ಯಾಮರಾ ಮುಂದೆ ಹೇಳಿದ್ದರು. ಇದನ್ನು ಖಂಡಿಸಿದ ಯುವಕನೊಬ್ಬ ಆ ಮಹಿಳೆಗೆ ಅವಾಚ್ಯ ಶಬ್ದಗಳಲ್ಲಿ ಬೈದಿದ್ದ. ಸೋಶಿಯಲ್ ಮೀಡಿಯಾದಲ್ಲಿ ಆ ಯುವಕ ಟೋಬಿ ಸಿನಿಮಾ ತಂಡದವನೇ ಅಂತ ಸುದ್ದಿ ಹರಡಿ ವಿವಾದವಾಗಿತ್ತು. ಬಳಿಕ ರಾಜ್ ಬಿ ಶೆಟ್ಟಿ, ಆ ಯುವಕ ನಮ್ಮ ತಂಡದವನಲ್ಲ ಎಂದು ಸ್ಪಷ್ಟನೆ ನೀಡಿ, ಆ ಮಹಿಳೆಗೆ ಕ್ಷೆಮೆ ಕೇಳಿದ್ದರು.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ಟೋಬಿ ಸಿನಿಮಾ
/top-listing/sandalwood-controversies-list-of-controversies-in-kannada-film-industry-in-2023-3-3579.html#ಟೋಬಿ-ಸಿನಿಮಾ
ನಟಿ ಮತ್ತು ಬಿಗ್‌ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್, ಜನವರಿ ತಿಂಗಳ ಅಂತ್ಯದಲ್ಲಿ ಪುತ್ತೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭ ಸಾನ್ಯಾ ವೇದಿಕೆಯಲ್ಲಿ ಮಾತನಾಡುವಾಗಲೇ ಯುವಕನೊಬ್ಬ ಕುಡಿದು ಅತಿಯಾಗಿ ವರ್ತಿಸಿದ್ದ. ವೇದಿಕೆ ಕಾರ್ಯಕ್ರಮದ ಬಳಿಕ ರೂಮ್‌ಗೆ ಹೋಗಿ ಗೆಳತಿ ಜೊತೆ ಕಂಬಳ ನೋಡಲು ಸಾನ್ಯಾ ಮರಳಿ ಬಂದಾಗ ಅದೇ ಯುವಕ ಸಾನ್ಯಾ ಜೊತೆ ಕೆಟ್ಟದಾಗಿ ವರ್ತಿಸಿ, ಅವರ ಕೈ, ಕೂದಲು ಹಿಡಿದು ಎಳೆದಾಡಿದ್ದ. ಇದರ ವಿರುದ್ಧ ಸಾನ್ಯಾ ಧ್ವನಿ ಎತ್ತಿದ್ದರು. ಈ ಸಂಬಂಧ ಆಯೋಜಕರ ಮೇಲೂ ದೂರುಗಳು ಕೇಳಿಬಂದಿದ್ದವು. ಕೊನೆಗೆ ಕಾರ್ಯಕ್ರಮ ಆಯೋಜಕರು ದೈವದ ಮೊರೆ ಹೋಗಿ ತಪಿತಸ್ಥರಿಗೆ ಶಿಕ್ಷೆಯಾಗಲಿ ಅಂತ ನಮಿಸಿದ್ದರು.
2023ರಲ್ಲಿ ಕನ್ನಡ ಚಿತ್ರರಂಗ ಕಂಡ ಪ್ರಮುಖ ಕಾಂಟ್ರವರ್ಸಿಗಳ ಪಟ್ಟಿ ಇಲ್ಲಿದೆ.-ಸಾನ್ಯಾ ಅಯ್ಯರ್ ಮೇಲೆ ದೌರ್ಜನ್ಯ
/top-listing/sandalwood-controversies-list-of-controversies-in-kannada-film-industry-in-2023-3-3579.html#ಸಾನ್ಯಾ-ಅಯ್ಯರ್-ಮೇಲೆ-ದೌರ್ಜನ್ಯ
LOADING......