X
ഹോം ടോപ് ലിസ്റ്റിങ്ങ്‌

ಕಾರ್ತಿಕ್ ಜೊತೆ ನಾನು ನಿಮ್ಮಷ್ಟೂ ಅಟ್ಯಾಚ್ಡ್ ಆಗಿಲ್ಲ, ನನ್ನ ಕೈ ಹಿಡಿದುಕೊಳ್ತಾರೆ ಅಷ್ಟೇ: ಸ್ನೇಹಿತ್ ಮುಂದೆ ನಮ್ರತಾ ಕಣ್ಣೀರು

Author: Sowmya Bairappa | Published: Thursday, January 18, 2024, 11:39 AM [IST]

ಬಿಗ್‌ಬಾಸ್‌ ಮನೆಯಲ್ಲಿ ಕಳೆದ ಕೆಲ ವಾರಗಳಿಂದ ಕಾರ್ತಿಕ್ ಹಾಗೂ ನಮ್ರತಾ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಕಳೆದ ಸಂಚಿಕೆಯಲ್ಲಿ ದೊಡ್ಮನೆಗೆ ಬಂದ ಸದಸ್ಯರೆಲ್ಲರು ಹೊರಗಿನ ವಿಚಾರವನ್ನು ಸ್ಪರ್ಧಿಗಳೊಂದಿಗೆ ಚರ್ಚಿಸಿದ್ದಾರೆ. ಅದರಲ್ಲೂ ಕಾರ್ತಿಕ್ ಜೊತೆ ನಮ್ರತಾ ಫ್ಲರ್ಟ್ ಮಾಡಿದ್ದು ಹೊರಗೆ ಕೆಟ್ಟದಾಗಿ ಕಾಣುತ್ತಿದೆ, ಟ್ರೋಲ್ ಆಗುತ್ತಿದೆ ಅಂತ ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಕೇಳಿದ ನಮ್ರತಾ ಕಣ್ಣೀರು ಸುರಿಸಿದ್ದಾರೆ.

Share:
cover image
ನಮ್ರತಾ ಬಳಿ ಸ್ನೇಹಿತ್ ಹೇಳಿದ್ದೇನು?

ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ದ ಸ್ನೇಹಿತ್, ಎಲ್ಲಾ ಸದಸ್ಯರೊಂದಿಗೆ ನಗುನಗುತ್ತಾ ಮಾತನಾಡಿದರು. ಆದರೆ, ನಮ್ರತಾ ಬಳಿ ಅಷ್ಟಾಗಿ ಮಾತನಾಡಿರಲಿಲ್ಲ. ಕೊನೆಯಲ್ಲಿ ಹಾಯ್ ನಮ್ರತಾ ಅಂದರು. ಅದಕ್ಕೆ ನಮ್ರತಾ, ಏನು.ಎಲ್ಲರ ಬಳಿ ಮಾತನಾಡಿ ಈಗ ಬರ್ತಿದ್ದೀರಾ? ಯಾಕೆ? ಏನಾಗ್ತಿದೆ? ಅಂತ ಪ್ರಶ್ನಿಸಿದರು. ಅದಕ್ಕೆ ಸ್ನೇಹಿತ್, ಹೊರಗಡೆ ಹೋದಮೇಲೆ ಒಂದಷ್ಟು ಸಮಸ್ಯೆಗಳಾದವು. ತುಂಬಾ ಪ್ಲಾಬ್ಲಂ ಇತ್ತು. ಈ ಸೀಸನ್‌ನಲ್ಲಿ ಹೆಚ್ಚು ಟ್ರೋಲ್ ಆಗಿದ್ದು ನಾನೇ ಎಂದರು. ಅದಕ್ಕೆ ನಮ್ರತಾ ನನ್ನಿಂದನಾ ಎಂದರು. 
ಸ್ನೇಹಿತ್: ಇಲ್ಲ..ಏನೂ ಮಾಡೋಕೆ ಆಗಲ್ಲ. ಆದರೆ, ಐ ಹ್ಯಾವ್ ಟೇಕನ್ ಕೇರ್ ಆಫ್ ಇಟ್. ಈಗ ಎಲ್ಲಾ ಪಾಸಿಟಿವ್ ಆಗಿದೆ. ಜನರು ತುಂಬಾ ಪ್ರೀತಿ ಕೊಡುತ್ತಿದ್ದಾರೆ. ನಿಮ್ಮ ಬಳಿಯೂ ಒಂದಷ್ಟು ವಿಷಯ ಮಾತನಾಡಬೇಕು. ಆದರೆ, ಮಾತನಾಡೋಕೆ ಇದು ಜಾಗವಲ್ಲ. ಹೊರಗಡೆ ಮಾತಾಡ್ತೀನಿ. ೬೪ ದಿನಗಳಲ್ಲಿ ಏನೇ ಆಗಿರಬಹುದು. ಈ ಮನೆಯಲ್ಲಿ ನೀವು ನನಗೆ ಫಸ್ಟ್ ಫ್ರೆಂಡ್. ನಾನು ಅದನ್ನ ಯಾವಾಗಲೂ ಟ್ರೆಶರ್ ಮಾಡ್ತೀನಿ. ನಿಮಗೆನಾಯ್ತು ಹೇಳಿ? ನಿರಾಸೆ ಆಯ್ತಾ? ಅಂದರು.
ನಮ್ರತಾ: ನಿರಾಸೆಯಾಗಿಲ್ಲ, ನನಗೆ ಹರ್ಟ್ ಆಗಿದೆ. ನಿಮಗೂ ಹರ್ಟ್ ಆಗಿದ್ಯಾ? ಎಂದರು. 
ಸ್ನೇಹಿತ್: ನಗುತ್ತಾ...ಏನ್‌ ಗೊತ್ತಾ? ಅಂದರು.
ನಮ್ರತಾ: ಗುರು ನೀವೆಲ್ಲಾ ಹೇಗೆ ಕ್ಯಾರೆಕ್ಟರ್‌ನಾ ಜಡ್ಜ್ ಮಾಡ್ತೀರಾ? ನನಗೆ ಅರ್ಥನೇ ಆಗ್ತಿಲ್ಲ ಎಂದರು. 

 


'ಬಂದೊರೆಲ್ಲಾ ಕೆಟ್ಟದಾಗಿ ಕಾಣ್ತಿದೆ ಅಂತಿದ್ದಾರೆ'


ನಮ್ರತಾ: ಬಂದೊರೆಲ್ಲಾ ಕೆಟ್ಟದಾಗಿ ಕಾಣ್ತಿದೆ ಅಂತಿದ್ದಾರೆ. ನನ್ನಲ್ಲಿ ಆ ತರಹದ ಉದ್ದೇಶ ಇಲ್ಲವೇ ಇಲ್ಲ ಎಂದು ಹೇಳಿದರು. 
ಸ್ನೇಹಿತ್: ನಾನಿನ್ನು ನಿಮಗೋಸ್ಕರ ಫೈಟ್ ಮಾಡುತ್ತಿದ್ದೇನೆ. ನಿಮಗದು ಹೊರಗಡೆ ಬಂದ್ಮೇಲೆ ಗೊತ್ತಾಗುತ್ತದೆ ಎಂದರು. 
ನಮ್ರತಾ: ಅಷ್ಟೊಂದು ಕೆಟ್ಟದಾಗಿದ್ಯಾ?
ಸ್ನೇಹಿತ್: ನಾನು ಇನ್ನೂ ನಿಮಗಾಗಿ ಫೈಟ್ ಮಾಡುತ್ತಿದ್ದೇನೆ. ಹೊರಗಡೆ ಏನೇ ಆಗಿರಬಹುದು. ನೀವಿನ್ನೂ ನನ್ನ ಸ್ನೇಹಿತೆ. ನನ್ನ ಫ್ರೆಂಡ್ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದ್ರೂ ಬೇಜಾರಾಗುತ್ತೆ. ನಿಮಗೆ ಅರ್ಥ ಆಗಿದೆ ಅನ್ಸುತ್ತೆ ಬೇರೆಯವರು ಹೇಳಿರುವುದು ಎಂದರು.
ನಮ್ರತಾ: ಇಲ್ಲ..ಅರ್ಥವಾಗಿಲ್ಲ. ಕಾರ್ತಿಕ್ ಮತ್ತು ನನ್ನ ಮಧ್ಯೆ ಏನೋ ನಡೆಯುತ್ತಿದೆ ಅಂದುಕೊಂಡಿದ್ದಾರೆ. ಅಷ್ಟೇ ನನಗೆ ಗೊತ್ತಿರುವುದು.
ಸ್ನೇಹಿತ್: ಒಂಟಿಯಾಗಿ ಆಟವಾಡು ಅಂತ ನಿಮ್ಮ ಅಮ್ಮ ಬರೆದಿದ್ದರು. ನೀವು ಹಾಗೆಯೇ ಆಡಿ. ಕೇರ್‌ಫುಲ್ ಆಗಿರಿ ಎಂದರು. 

 

ನನ್ನನ್ನು ಮನೆಗೆ ಕರ್ಕೊಂಡ್ ಹೋಗಿ

ಸ್ನೇಹಿತ್ ಜೊತೆ ಮಾತುಕತೆ ನಡೆದ ಮೇಲೆ ಸಿಕ್ಕಾಪಟ್ಟೆ ಬೇಜಾರಾದ ನಮ್ರತಾ, ನನ್ನನ್ನು ಮನೆಗೆ ಕರ್ಕೊಂಡ್ ಹೋಗಿ. ಇಲ್ಲಿರೋದು ನನಗೆ ಇಷ್ಟವಾಗ್ತಿಲ್ಲ. ಏನು ಆಗ್ತಿದೆ ಅಂತ ನನಗೆ ಗೊತ್ತಿಲ್ಲ. ನಾನಿಲ್ಲಿ ಯಾರಿಗೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್ ಜೊತೆ ನಾನು ನಿಮ್ಮಷ್ಟೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್ ನನ್ನ ಕೈ ಹಿಡಿದುಕೊಳ್ಳುತ್ತಾರೆ ಅಷ್ಟೇ. ನನಗೇನೂ ಅನ್‌ಕಂಪರ್ಟ್‌ಬಲ್ ಅನಿಸೋದಿಲ್ಲ. ಒಮ್ಮೊಮ್ಮೆ ತುಂಬಾ ಲೋನ್ಲಿ ಫೀಲ್ ಆಗುತ್ತೆ. ಬಹುಶಹ ಫ್ಲರ್ಟ್ ಮಾಡಿರೋದನ್ನ ಯಾರೋ ನೋಇ ಏನೋ ಅಂದುಕೊಂಡಿರಬೇಕು. ಅದು ಪ್ರಾಂಕ್ ಅಷ್ಟೇ. ನಾನೆಂಥಾ ಫೂಲ್ ಅಲ್ವಾ? ಯಾರಿಗೋ ಬೀಳೋಕೆ ದಿನಗಳಾದ್ಮೇಲೆ ಎಂದು ಹೇಳುತ್ತಾ ಕಣ್ಣೀರಿಟ್ಟರು.    


ವಿನಯ್ ಜೊತೆ ಚರ್ಚೆ

ನಂತರ ಈ ಬಗ್ಗೆ ವಿನಯ್ ಜೊತೆ ಮಾತನಾಡಿದ ನಮ್ರತಾ, ನೆಗೆಟಿವ್ ಆಗಿ ಹೋಗುತ್ತಿದೆಯಂತೆ ಅಂತ ಹೇಳಿದರು.
ವಿನಯ್: ನೀನೇ ಊಹಿಸಿದ್ಯಾ?
ನಮ್ರತಾ: ಇಲ್ಲ... ಎಲ್ಲರೂಬ ಹೇಳುತ್ತಿದ್ದಾರೆ. ಅಷ್ಟು ಕೆಟ್ಟದಾಗಿ ಕಾಣುತ್ತಿದ್ದರೆ ನೀವ್ಯಾಕೆ ಹೇಳಲಿಲ್ಲ ಅಂತ ಪ್ರಶ್ನಿಸಿದರು.
ವಿನಯ್: ಕೆಟ್ಟದಾಗಿ ಏನೂ ಕಾಣಿಸಲಿಲ್ಲ.
ನಮ್ರತಾ: ಇದನ್ನೇ ಹೇಳೋಕೆ ನಾನು ಪ್ರಯತ್ನಿಸಿದೆ. 
ವಿನಯ್: ಹೊರಗಡೆ ಏನೂ ಕಾಣಿಸುತ್ತದೆಯೋ, ಅದು ನಮಗೆ ಇಲ್ಲಿ ಕಾಣಿಸುವುದಿಲ್ಲ. 
ನಮ್ರತಾ: ನನಗೆ ಕ್ಯಾರೆಕ್ಟರ್‌ನ ರಿಸ್ಕ್‌ ಮಾಡಿಕೊಳ್ಳೋಕೆ ಇಷ್ಟವಿಲ್ಲ. 
ವಿನಯ್: ಕ್ಯಾರೆಕ್ಟರ್ ಬಗ್ಗೆ ಏನೂ ಇಲ್ಲ. ತಲೆ ಕೆಡಿಸಿಕೊಳ್ಳಬೇಡ. ೨೪ ಗಂಟೆ ನಿನ್ನನ್ನ ಇಲ್ಲಿ ನೋಡಿದ್ದೀವಿ. ನೀನೇನು ಅಂತ ನಮಗೆ ಗೊತ್ತಿಲ್ವಾ ಎಂದರು.
ನಮ್ರತಾ: ನಾನು ನಟಿ. ಸಾವಿರ ಜನ ಸಾವಿರ ಮಾತನಾಡುತ್ತಾರೆ. ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ಕಾರ್ತಿಕ್ ನನಗೆ ಜಸ್ಟ್ ಫ್ರೆಂಡ್ ಅಷ್ಟೇ. ನಾವು ಪ್ರಾಂಕ್ ಮಾಡಿದ್ವಿ ಅಷ್ಟೇ. ಕಾರ್ತಿಕ್‌ಗೆ ಹೊರಗಡೆ ಹುಡುಗಿಯಿದ್ದಾಳೆ. ನಾನು ಅಂತಹ ಫೂಲಾ? ಅಂದರು.'
ಸ್ನೇಹಿತ್: ಇಂತಹ ವಿಷಯಗಳಲ್ಲಿ ಪ್ರಾಂಕ್ ಮಾಡೋದು ಅಷ್ಟು ಚೆನ್ನಾಗಿ ಕಾಣಲ್ಲ ಅಂತ ಹೇಳಿದರು.

ನಮ್ರತಾಗೆ ಸಂಗೀತಾ ಸಮಾಧಾನ

ಈ ವೇಳೆ ಸಂಗೀತಾ ಈ ನಾಲ್ಕೈದು ಜನರು ಬರಲಿಲ್ಲ ಅಂದರೆ ನೀವು ಅಳುತ್ತಿದ್ರಾ? ನಿಮ್ಮ ಕಾನ್ಫಿಡೆನ್ಸ್ ಎಲ್ಲಿ ಹೋಯ್ತು ಎಂದರು. ಆಗ ನಮ್ರತಾ, ಹೇಗೆ ಜಡ್ಜ್ ಮಾಡಿದ್ದಾರೆ ನನ್ನನ್ನು ಅಂದರು. ಅದಕ್ಕೆ ಸಂಗೀತಾ, ಈಗ ಏನಾದರೂ ಮಾಡೋಕೆ ಆಗುತ್ತಾ? ಫ್ರೆಂಡ್ ಆಗಿರಿ ಅಷ್ಟೇ ಅಂತ ಸಮಾಧಾನ ಮಾಡಿದರು.

 


ಕಚಗುಳಿ ಕೊಟ್ಟಿದ್ದು ಕೆಟ್ಟದಾಗಿ ಕಂಡಿದೆ

ನಂತರ ಕಾರ್ತಿಕ್ ಬಳಿಯೂ ಈ ಬಗ್ಗೆ ಚರ್ಚೆ ನಡೆಸಿದ ನಮ್ರತಾ, ನನಗೇನು ನಿಮ್ಮಿಂದ ಅನ್‌ಕಂಪರ್ಟ್‌ಬಲ್ ಫೀಲ್ ಅನಿಸಿಲ್ಲ. ಕೈ ಹಿಡಿದುಕೊಂಡಿದ್ದು ಎದ್ದು ಕಾಣಿಸುತ್ತಿದೆ. 
ಕಾರ್ತಿಕ್: ಹುಡುಗ ಮತ್ತು ಹುಡುಗಿ ಫ್ರೆಂಡ್ಸ್ ಆಗಿರೋಕೆ ಸಾಧ್ಯವೇ ಇಲ್ಲ.
ನಮ್ರತಾ: ಫ್ರೆಂಡ್ಸ್ ಆಗಿರಬಹುದು. ನನ್ನ ಗೇಮ್‌ಗೆ ನಿಮ್ಮಿಂದ ಏನು ತೊಂದರೆ ಆಗುತ್ತಿಲ್ಲ. ನಿಮಗೆ ನನ್ನಿಂದ ತೊಂದರೆ ಆಗ್ತಿದ್ಯಾ? ಅಂತ ಪ್ರಶ್ನಿಸಿದರು.
ಕಾರ್ತಿಕ್: ಎಲ್ಲರೂ ಅದನ್ನೇ ಹೇಳಿದ್ದು. 
ನಮ್ರತಾ: ನನಗೂ ಅದೇ ಹೇಳಿದರು. ಗ್ರಾಫ್ ಎಲ್ಲೋ ಹೋಗುತ್ತಿದೆ ಅಂತ. ಬಹುಶಃ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಿರುತ್ತಾರಾ? ಹೇಗೆ ಕಾಣಿಸಿದೆ ಅಂತ ನನಗೆ ಗೊತ್ತಿಲ್ಲ. ಎಲ್ಲರೂ ಬಂದು ಹೇಳಿದರು. ಮೈಕಲ್ ಕೂಡ ಹೇಳಿದ. ಕಚುಗುಲಿ ಕೊಟ್ಟಿದ್ದು ಕೆಟ್ಟದಾಗಿ ಕಂಡಿದೆ ಅಂತ ಹೇಳಿದ. 
ನಂತರ ಕಾರ್ತಿಕ್ ಬಳಿಯೂ ಈ ಬಗ್ಗೆ ಚರ್ಚೆ ನಡೆಸಿದ ನಮ್ರತಾ, ನನಗೇನು ನಿಮ್ಮಿಂದ ಅನ್‌ಕಂಪರ್ಟ್‌ಬಲ್ ಫೀಲ್ ಅನಿಸಿಲ್ಲ. ಕೈ ಹಿಡಿದುಕೊಂಡಿದ್ದು ಎದ್ದು ಕಾಣಿಸುತ್ತಿದೆ. 
ಕಾರ್ತಿಕ್: ಹುಡುಗ ಮತ್ತು ಹುಡುಗಿ ಫ್ರೆಂಡ್ಸ್ ಆಗಿರೋಕೆ ಸಾಧ್ಯವೇ ಇಲ್ಲ.
ನಮ್ರತಾ: ಫ್ರೆಂಡ್ಸ್ ಆಗಿರಬಹುದು. ನನ್ನ ಗೇಮ್‌ಗೆ ನಿಮ್ಮಿಂದ ಏನು ತೊಂದರೆ ಆಗುತ್ತಿಲ್ಲ. ನಿಮಗೆ ನನ್ನಿಂದ ತೊಂದರೆ ಆಗ್ತಿದ್ಯಾ? ಅಂತ ಪ್ರಶ್ನಿಸಿದರು.
ಕಾರ್ತಿಕ್: ಎಲ್ಲರೂ ಅದನ್ನೇ ಹೇಳಿದ್ದು. 
ನಮ್ರತಾ: ನನಗೂ ಅದೇ ಹೇಳಿದರು. ಗ್ರಾಫ್ ಎಲ್ಲೋ ಹೋಗುತ್ತಿದೆ ಅಂತ. ಬಹುಶಃ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಿರುತ್ತಾರಾ? ಹೇಗೆ ಕಾಣಿಸಿದೆ ಅಂತ ನನಗೆ ಗೊತ್ತಿಲ್ಲ. ಎಲ್ಲರೂ ಬಂದು ಹೇಳಿದರು. ಮೈಕಲ್ ಕೂಡ ಹೇಳಿದ. ಕಚುಗುಲಿ ಕೊಟ್ಟಿದ್ದು ಕೆಟ್ಟದಾಗಿ ಕಂಡಿದೆ ಅಂತ ಹೇಳಿದ. 
ಕಾರ್ತಿಕ್: ವಿನಯ್ ಕೂಡ ನನಗೆ ಕೊಡ್ತಾನೆ. 
ನಮ್ರತಾ: ನೀವು ಕೊಟ್ಟಿದ್ದು ಅನ್ಸುತ್ತೆ. ಅದೊಂದೇ ಕೆಟ್ಟದಾಗಿ ಕಾಣೋಕೆ ಸಾಧ್ಯ. 
ಕಾರ್ತಿಕ್: ನೀವು ನನಗೆ ಕೊಟ್ಟಿದ್ದು? ಕಚಗುಳಿ ಕೊಟ್ಟ ಬೆರಳನ್ನು ಕಟ್ ಮಾಡಿಕೊಳ್ಳುತ್ತೇನೆ. 
ನಮ್ರತಾ: ಸಾರಿ ಕಾರ್ತಿಕ್. ನಾವು ಫ್ರೆಂಡ್ಸ್ ಆಗಬಾರದಿತ್ತು ಎಂದರು.  ವಿನಯ್ ಕೂಡ ನನಗೆ ಕೊಡ್ತಾನೆ. 
ನಮ್ರತಾ: ನೀವು ಕೊಟ್ಟಿದ್ದು ಅನ್ಸುತ್ತೆ. ಅದೊಂದೇ ಕೆಟ್ಟದಾಗಿ ಕಾಣೋಕೆ ಸಾಧ್ಯ. 
ಕಾರ್ತಿಕ್: ನೀವು ನನಗೆ ಕೊಟ್ಟಿದ್ದು? ಕಚಗುಳಿ ಕೊಟ್ಟ ಬೆರಳನ್ನು ಕಟ್ ಮಾಡಿಕೊಳ್ಳುತ್ತೇನೆ. 
ನಮ್ರತಾ: ಸಾರಿ ಕಾರ್ತಿಕ್. ನಾವು ಫ್ರೆಂಡ್ಸ್ ಆಗಬಾರದಿತ್ತು ಎಂದರು. 

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+