X
ഹോം ടോപ് ലിസ്റ്റിങ്ങ്‌

ಖುಷಿ ಟು ಅಂತರಪಟ: ಬಿಗ್‌ಬಾಸ್‌ ಸ್ಫರ್ಧಿ ಕಾರ್ತಿಕ್ ಮಹೇಶ್ ನಟನೆಯ ಸೀರಿಯಲ್‌ಗಳ ಪಟ್ಟಿ ಇಲ್ಲಿದೆ.

Author: Sowmya Bairappa | Updated: Tuesday, January 23, 2024, 09:55 AM [IST]

ಕಾರ್ತಿಕ್‌ ಮಹೇಶ್ ಬಿಗ್‌ಬಾಸ್‌ ಸೀಸನ್ ೧೦ರಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಟಾಸ್ಕ್‌ಗಾಗಲಿ, ಮನೋರಂಜನೆಯಾಗಲಿ, ಅಡುಗೆಯಲ್ಲಾಗಲಿ ಎಲ್ಲರಲ್ಲೂ ಸೈ ಎನಿಸಿಕೊಂಡಿದ್ದಾರೆ. ಮೂಲತಃ ಮೈಸೂರಿನವರಾದ ಕಾರ್ತಿಕ್ ಬಿಗ್‌ಬಾಸ್ ಮನೆಗೆ ಬರುವ ಮುನ್ನ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಆ ಸೀರಿಯಲ್‌ಗಳು ಯಾವವು ಎಂಬ ಮಾಹಿತಿ ಇಲ್ಲಿದೆ.

Share:
cover image
ಖುಷಿ

ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ ಕಾರ್ತಿಕ್‌ ಮಹೇಶ್ ಅವರಿಗೆ, ಬಾಲ್ಯದಿಂದಲೂ ನಟನೆ ಮಾಡುವ ಕನಸಿತ್ತಂತೆ. ನಟನಾಗುವ ಕನಸು ಹೊತ್ತಿದ್ದ ಇವರು ಆಗಾಗ ಬೆಂಗಳೂರಿಗೆ ಬಂದು ಸೀರಿಯಲ್‌ಗಳಿಗೆ ಆಡಿಶನ್‌ಗಳನ್ನು ಕೊಡುತ್ತಿದ್ದರು. ಕೊನೆಗೆ 'ಖುಷಿ' ಸೀರಿಯಲ್ ಮೂಲಕ ನಾಯಕನಾಗಿ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಈ ಧಾರಾವಾಹಿಯಲ್ಲಿ ಕಾರ್ತಿಕ್‌ಗೆ ದಿವ್ಯಾ ಉರುಡುಗ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 

 


ಅಕ್ಕ

2013ರಲ್ಲಿ ಪ್ರಸಾರವಾಗಿದ್ದ ಕನ್ನಡ ಕಿರುತೆರೆ ಸೂಪರ್ ಹಿಟ್ ಧಾರಾವಾಹಿ 'ಅಕ್ಕ'ದಲ್ಲಿ ಕಾರ್ತಿಕ್ ಅವರು 'ಆಕಾಶ್' ಎಂಬ ಪಾತ್ರ ಮಾಡಿದ್ದರು. ಈ ಸೀರಿಯಲ್‌ನಲ್ಲಿ ಅನುಪಮಾ ಗೌಡ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೊಂದು ಅವಳಿ-ಜವಳಿ ಹೆಣ್ಣುಮಕ್ಕಳ ಕಥೆಯಾಗಿತ್ತು. 

 

ಇಂತಿ ನಿಮ್ಮ ಆಶಾ

ನಂತರ 2019ರಲ್ಲಿ 'ಇಂತಿ ನಿಮ್ಮ ಆಶಾ' ಧಾರಾವಾಹಿಯಲ್ಲಿ ನಟಿಸಿದರು. ಆಶಾ ಎಂಬ ಗಟ್ಟಿಗಿತ್ತಿ ಹೆಣ್ಣಿನ ಕಥೆ ಹೊಂದಿದ್ದ ಈ ಧಾರಾವಾಹಿಯಲ್ಲಿ ಸಂಗೀತಾ ಅನಿಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಅಪ್ಪ-ಅಮ್ಮನ ಜೊತೆಗೆ ಮಕ್ಕಳ ಕಥೆ ಹೊಂದಿದ್ದ ಈ ಸೀರಿಯಲ್‌ನಲ್ಲಿ ಕಾರ್ತಿಕ್, ಸಮರ್ಥ್ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದರು.


ಶನಿ &  ಮಹಾಕಾಳಿ

2018ರಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಶನಿ ಧಾರಾವಾಹಿಯಲ್ಲಿ ನಾರಾಯಣನ ಪಾತ್ರದಲ್ಲಿ ನಟಿಸಿದರು. ಜೊತೆಗೆ ಮಹಾಕಾಳಿ ಸೀರಿಯಲ್‌ನಲ್ಲೂ ಪೋಷಕ ಪಾತ್ರದಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದಿದ್ದರು.

ರಾಜಿ

ಆನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ 'ರಾಜಿ' ಧಾರಾವಾಹಿಯಲ್ಲಿ ನಾಯಕ 'ಕರ್ಣ'ನಾಗಿ ಅಭಿನಯಿಸಿದರು. ಕರ್ಣ ಮತ್ತು ರಾಜಿ ಬಾಲ್ಯದ ಸ್ನೇಹಿತರು. ಕರ್ಣನಿಗೆ ಇದು ಸ್ನೇಹವಾಗಿದ್ದರೂ ರಾಜಿಗೆ ಕರ್ಣನ ಮೇಲೆ ಅದಕ್ಕೂ ಮಿಗಿಲಾದ ಬಂಧವಿರುತ್ತೆ. ಇವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗುತ್ತಾ? ಎಂಬು ಈ ಧಾರಾವಾಹಿಯ ಕಥೆಯಾಗಿತ್ತು.

 


ಪುಟ್ಟಕ್ಕನ ಮಕ್ಕಳು

ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ವಕೀಲ ಚಂದ್ರು ಪಾತ್ರಕ್ಕೆ ಕಾರ್ತಿಕ್ ಬಣ್ಣ ಹಚ್ಚಿದ್ದರು. ಆದರೆ, ಸಮಯದ ಕಾರಣದಿಂದಾಗಿ ಈ ಸೀರಿಯಲ್‌ನಿಂದ ಅರ್ಥಕ್ಕೆ ಹೊರಬಂದಿದ್ದರು. 

ಅಂತರಪಟ

ಬಿಗ್‌ಬಾಸ್‌ಗೂ ತೆರಳುವುದಕ್ಕೂ ಕೆಲ ತಿಂಗಳ ಹಿಂದೆ ಕಾರ್ತಿಕ್, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಸೀರಿಯಲ್‌ನಲ್ಲಿ ನಾಯಕಿ ಆರಾಧನಾಳನ್ನು ಪ್ರೀತಿಸುತ್ತಿರುವ, ಆಕೆಯ ಕನಸನ್ನು ಈಡೇರಿಸಲು ತನ್ನ ಆಸ್ತಿಯನ್ನೇ ಒತ್ತೆ ಇಡುವ ಸ್ನೇಹಿತ ರವಿಯ ಪಾತ್ರವನ್ನು ಕಾರ್ತಿಕ್ ನಿಭಾಯಿಸಿದ್ದರು. 


ರಾಷ್ಟ್ರಪ್ರಶಸ್ತಿ

ಕಾರ್ತಿಕ್ ಖುಷಿ ಧಾರವಾಹಿಯಲ್ಲಿ ನಟಿಸುವಾಗ ಸುನೀಲ್ ಪುರಾಣಿಕ್ ಇವರ ತಂದೆಯ ಪಾತ್ರದಲ್ಲಿ ನಟಿಸಿದ್ದರಂತೆ. ನಂತರ ಅವರ ಪುತ್ರ ಸಾಗರ್ ಪುರಾಣಿಕ್ ತಮ್ಮ ನಿರ್ದೇಶನದ 'ಡೊಳ್ಳು' ಸಿನಿಮಾದ ನಾಯಕನಾಗಿ ಇವರನ್ನು ಆಯ್ಕೆ ಮಾಡಿದ್ದರು. ಡೊಳ್ಳು ಚಿತ್ರಕ್ಕಾಗಿ ಕಾರ್ತಿಕ್ ಸ್ವತಃ ಡೊಳ್ಳು ಬಡಿಯೋದನ್ನು ಕಲಿತು ಅದ್ಭುತವಾಗಿ ಅಭಿನಯಿಸಿದ್ದರು. ಕಾರ್ತಿಕ್ ನಾಯಕನಾಗಿ ನಟಿಸದ ಮೊದಲ ಚಿತ್ರವೇ 2022ರಲ್ಲಿ ಜರುಗಿದ 68ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆಯಿತು. 

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+