X
ഹോം ടോപ് ലിസ്റ്റിങ്ങ്‌

ಬಿಗ್‌ಬಾಸ್‌ ಕನ್ನಡ ಸೀಸನ್ 10 ಫಿನಾಲೆ: 50 ಲಕ್ಷ ನಗದು ಜೊತೆಗೆ ವಿನ್ನರ್ & ರನ್ನರ್ ಅಪ್‌ಗೆ ಏನೆಲ್ಲಾ ಸಿಗಲಿದೆ ಗೊತ್ತಾ?

Author: Sowmya Bairappa | Published: Wednesday, January 24, 2024, 12:44 PM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆಗೆ ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರವೇ ಬಾಕಿಯಿವೆ. ಸದ್ಯ ಆರು ಸ್ಪರ್ಧಿಗಳು ಟ್ರೋಫಿ ಗೆಲ್ಲುವ ರೇಸ್‌ನಲ್ಲಿದ್ದಾರೆ. ಈ ಪೈಕಿ ಒಬ್ಬರು ವಿನ್ನರ್ ಆದರೆ, ಇನ್ನೊಬ್ಬರು ಕಪ್ ಎತ್ತಿ ಹಿಡಿಯಲಿದ್ದಾರೆ. ಇಲ್ಲಿ ಬಿಗ್‌ಬಾಸ್‌ ಸೀಸನ್ 10ರ ವಿನ್ನರ್ ಹಾಗೂ ರನ್ನರ್‌ ಅಪ್‌ಗೆ ಏನೆಲ್ಲಾ ಬಹುಮಾನಗಳು ಸಿಗಲಿವೆ ಎಂಬ ಮಾಹಿತಿ ನೀಡಲಾಗಿದೆ.

Share:
cover image
ಫಿನಾಲೆ ಡೇಟ್

ಜನವರಿ 27 ಹಾಗೂ 28ರಂದು ಬಿಗ್‌ಬಾಸ್‌ ಕನ್ನಡ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಫಿನಾಲೆ ಎಪಿಸೋಡ್ ಪ್ರಸಾರವಾಗಲಿದೆ. ಫಿನಾಲೆಗಾಗಿ ಈಗಾಗಲೇ ಎಲಿಮಿನೇಟೆಡ್ ಭರ್ಜರಿ ತಯಾರಿ ನಡೆಸುತ್ತಿದ್ದು, ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ ಗ್ರ್ಯಾಂಡ್ ಫಿನಾಲೆ ಹಲವು ವಿಶೇಷತೆಗಳಿಂದ ಕೂಡಿರಲಿದ್ದು, ವೀಕ್ಷಕರು ವಿನ್ನರ್ ಯಾರಾಗಲಿದ್ದಾರೆಂಬ ಕುತೂಹಲದಲ್ಲಿದ್ದಾರೆ.  


ಟ್ರೋಪಿ ಗೆದ್ದವರಿಗೆ ಸಿಗುವ ನಗದು ಬಹುಮಾನ

ಬಿಗ್‌ಬಾಸ್‌ ಸೀಸನ್ 1ರಿಂದಲೂ ವಿಜೇತರಾದವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಗುವುದು ವಾಡಿಕೆ. ಅದರಂತೆ ಈ ಸೀಸನ್‌ನ ಆರಂಭದಲ್ಲೂ 50 ಎಂದೇ ನಿಗದಿಪಡಿಸಲಾಗಿತ್ತು. ನಂತರ ಬಿಗ್‌ಬಾಸ್‌ ಟ್ವಿಸ್ಟ್ ಕೊಟ್ಟಿ ಅದನ್ನು 25 ಲಕ್ಷಕ್ಕೆ ತಂದರು. ಬಳಿಕ ಹಲವು ಟಾಸ್ಕ್‌ಗಳನ್ನು ನೀಡಿ ಈ ಹಣವನ್ನು ವಾಪಾಸ್ ಪಡೆದುಕೊಳ್ಳೋಕೆ ಅವಕಾಶ ನೀಡಲಾಯಿತು. ಎಲ್ಲರೂ ಟಾಸ್ಕ್ ಚೆನ್ನಾಗಿ ಆಡಿ ಆ ಹಣ ವಾಪಾಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ, ಈ ಬಾರಿಯೂ ಟ್ರೋಫಿ ಗೆದ್ದವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. 

 

ಬೋನಸ್ ಕೂಡ ಇರಲಿದೆ

ಬಿಗ್‌ಬಾಸ್‌ ವಿಜೇತರಿಗೆ ನಗದು ಜೊತೆಗೆ ಮತ್ತೊಂದಷ್ಟು ಹಣ ಸಿಗಲಿದೆ. 50 ಲಕ್ಷ ರೂಪಾಯಿ ಹಣದ ಜೊತೆ ಮಾರುತಿ ಸುಜುಕಿ ಬ್ರೆಜಾ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಸಿಗಲಿದೆ. ರನ್ನರ್ ಅಪ್‌ಗೂ ಹಣದ ಜೊತೆಗೆ ಎಲೆಕ್ಟ್ರಿಕ್ ಸ್ಕೂಟಿ ಸಿಗಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ಮೊದಲೇ ಘೋಷಣೆ ಮಾಡಿದ್ದರು.


ರೇಸ್‌ನಲ್ಲಿರುವ ಆರು ಮಂದಿ

ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ಅರು ಮಂದಿ ಉಳಿದುಕೊಂಡಿದ್ದಾರೆ. ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ನಡುವೆ ಸ್ಫರ್ಧೆ ಮುಂದುವರೆದಿದೆ. ಈ ಪೈಕಿ ಸಂಗೀತಾ, ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್ ಟಾಪ್ 5ರ ಸ್ಥಾನದಲ್ಲಿರುವುದು ಖಚಿತ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಒಬ್ಬೊಬ್ಬರೇ ಟ್ರೆಂಡ್ ಆಗ್ತಿದ್ದಾರೆ.   

ಮಿಡ್ ಎಲಿಮಿನೇಷನ್

ಕಳೆದ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಫಿನಾಲೆ ವಾರದಲ್ಲಿ 6 ಜನರಲ್ಲಿ ಮತ್ತೆ ಒಬ್ಬರು ಹೊರಹೋಗಬಹುದು. ಅದು ಹೇಗೆ ಹೋಗ್ತೀರಿ, ಯಾವ ರೀತಿ ಹೋಗ್ತೀರಿ ಗೊತ್ತಿಲ್ಲ. ಈ ವಾರ ನಡೆಯುವ ಪ್ರಕ್ರಿಯೆಯಲ್ಲಿ 6 ಜನರಿಂದ ಮತ್ತೊಬ್ಬರು ಆಚೆ ಹೋಗ್ತಾರೆ ಅಂತ ಹೇಳಿದ್ದರು. ಸದ್ಯ ವೋಟಿಂಗ್ ಪೋಲ್‌ನಲ್ಲಿ ಆರು ಜನರಿದ್ದು, ವಾರದ ಮಧ್ಯ ಭಾಗದವರೆಗೂ ಯಾವ ಸ್ಪರ್ಧಿಗೆ ಕಡಿಮೆ ವೋಟು ಬೀಳುತ್ತದೋ.. ಆ ಸ್ಪರ್ಧಿ ಮಿಡ್ ವೀಕ್‌ನಲ್ಲಿ ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ.   


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+