X
ഹോം ടോപ് ലിസ്റ്റിങ്ങ്‌

ಅತಿಹೆಚ್ಚು ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಸ್ಯಾಂಡಲ್‌ವುಡ್ ನಟರಿವರು!

Author: Sowmya Bairappa | Updated: Tuesday, September 17, 2024, 08:24 PM [IST]

ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್‌ ಮೊದಲ ಬಾರಿಗೆ 2012ರ ಜೂನ್ 22ರಂದು ಯುಎಇಯ ದುಬೈನಲ್ಲಿ ನಡೆದಿತ್ತು. ಅಂದು ಆರಂಭವಾದ ಈ ಸೈಮಾ ಅವಾರ್ಡ್ಸ್ ಪ್ರತಿವರ್ಷವೂ ನಡೆಯುತ್ತಾ ಬಂದಿದ್ದು ದಶಕ ಪೂರೈಸಿದೆ. ಈ ವರ್ಷ ಸೈಮಾ ಕಾರ್ಯಕ್ರಮ ದುಬೈನಲ್ಲ ನಡೆದಿದ್ದು, 2012ರಿಂದ ಇಲ್ಲಿಯವರೆಗೆ ಪ್ರತಿ ಸೈಮಾ ಕಾರ್ಯಕ್ರಮದಲ್ಲಿಯೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡ ಕನ್ನಡದ ನಟರ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ.

Share:
cover image
ಪುನೀತ್ ರಾಜ್ ಕುಮಾರ್
1

2011ರಲ್ಲಿ ತೆರೆಕಂಡ ಚಿತ್ರಗಳಿಗಾಗಿ 2012ರಲ್ಲಿ ಸೈಮಾ ಅವಾರ್ಡ್ ನೀಡಲಾಯಿತು. ಈ ಮೊದಲನೇ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪುನೀತ್ ಹುಡುಗರು ಚಿತ್ರಕ್ಕಾಗಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಪಡೆದುಕೊಂಡರು. ನಂತರದ ದಿನಗಳಲ್ಲಿ ರಣವಿಕ್ರಮ, ರಾಜಕುಮಾರ ಹಾಗೂ ಇದೀಗ ಯುವರತ್ನ ಚಿತ್ರಕ್ಕಾಗಿಯೂ ಅತ್ಯುತ್ತಮ ನಾಯಕನಟ ಪ್ರಶಸ್ತಿ ಪಡೆಯುವುದರ ಮೂಲಕ ಪುನೀತ್ ಒಟ್ಟಾರೆ 4 ಬಾರಿ ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅತ್ಯುತ್ತಮ ನಾಯಕನಟ ಪ್ರಶಸ್ತಿಗಳು ಮಾತ್ರವಲ್ಲದೇ ಪುನೀತ್ ರಾಜ್ ಕುಮಾರ್ 2014ರ ಸೈಮಾದಲ್ಲಿ ಯೂತ್ ಐಕಾನ್ ಆಫ್ ಸೌತ್ ಇಂಡಿಯನ್ ಸಿನಿಮಾ ಪ್ರಶಸ್ತಿಯನ್ನು ಪಡೆದಿದ್ದರು. ಈ ಪ್ರಶಸ್ತಿಯನ್ನು ಗಣನೆಗೆ ತೆಗೆದುಕೊಂಡರೆ ಪುನೀತ್ ಒಟ್ಟಾರೆ 5 ಬಾರಿ ಸೈಮಾ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಈ ಮೂಲಕ ಕನ್ನಡದ ಪರ ಅತಿ ಹೆಚ್ಚು ಸೈಮಾ ಪ್ರಶಸ್ತಿಯನ್ನು ಬಾಚಿದ ನಟ ಎಂಬ ದಾಖಲೆಯನ್ನು ಪುನೀತ್ ಹೊಂದಿದ್ದಾರೆ. 

കൂടുതല്‍ കാണാം


ಶಿವರಾಜಕುಮಾರ್
2

ಶಿವರಾಜ್ ಕುಮಾರ್  2013ರಲ್ಲಿ ಸೈಮಾ ವಿಶೇಷ ಪ್ರಶಸ್ತಿ ಹಾಗೂ 3 ಅತ್ಯುತ್ತಮ ನಾಯಕನಟ ಪ್ರಶಸ್ತಿಗಳು ಸೇರಿದಂತೆ 4 ಬಾರಿ ಸೈಮಾ ಪ್ರಶಸ್ತಿಯನ್ನು ಗೆದ್ದು ದ್ವಿತೀಯ ಸ್ಥಾನದಲ್ಲಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಶಿವ, ಭಜರಂಗಿ, ಶಿವಲಿಂಗ ಸಿನಿಮಾಗಳಲ್ಲಿನ ನಟನೆಗಾಗಿ ಅತ್ಯುತ್ತಮ ನಾಯಕನಟ ಪ್ರಶಸ್ತಿ ನೀಡಲಾಗಿದೆ.  

 

കൂടുതല്‍ കാണാം

ಯಶ್
3

3 ಬಾರಿ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಮತ್ತು 1 ಬಾರಿ ಸ್ಟೈಲ್ ಐಕಾನ್ ಆಫ್ ಸೌತ್ ಇಂಡಿಯನ್ ಸಿನಿಮಾ ಪ್ರಶಸ್ತಿ ಪಡೆದಿರುವ ಯಶ್ ಕೂಡ ಒಟ್ಟು 4 ಸೈಮಾ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಯಶ್ ಅವರಿಗೆ ಈ ಹಿಂದೆ ಮಿ & ಮಿ ರಾಮಾಚಾರಿ, ಕೆಜಿಎಫ್ ಚಾಪ್ಟರ್  1 ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿತ್ತು. ಈ ವರ್ಷ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.   കൂടുതല്‍ കാണാം


ದರ್ಶನ್
4

2020ರಲ್ಲಿ ಯಜಮಾನ ಚಿತ್ರದಲ್ಲಿನ ನಟನೆಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ. 

കൂടുതല്‍ കാണാം

ರಕ್ಷಿತ್ ಶೆಟ್ಟಿ
5

2020ರಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾದ ನಟನೆಗಾಗಿ ರಕ್ಷಿತ್ ಶೆಟ್ಟಿಗೆ ಕ್ರಿಟಿಕ್ಸ್ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿತ್ತು. ೨೦೨೩ರಲ್ಲಿ 777 ಚಾರ್ಲಿ ಸಿನಿಮಾದ ನಟನೆಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆದುಕೊಂಡಿದ್ದಾರೆ. കൂടുതല്‍ കാണാം


ಧನಂಜಯ
6

2021ರಲ್ಲಿ  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ನಟನೆಗಾಗಿ ಡಾಲಿ ಧನಂಜಯ್ ಅವರಿಗೆ  ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿತ್ತು. 

കൂടുതല്‍ കാണാം

ಪ್ರಜ್ವಲ್ ದೇವರಾಜ್
7

2021ರಲ್ಲಿ ಜೆಂಟಲ್ ಮ್ಯಾನ್ಚಿತ್ರದ ನಟನೆಗಾಗಿ ಪ್ರಜ್ವಲ್ ದೇವರಾಜ್ ಕ್ರಿಟಿಕ್ಸ್ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿತ್ತು.

 

കൂടുതല്‍ കാണാം


ರಿ‍ಷಭ್ ಶೆಟ್ಟಿ
8

ಕಾಂತಾರ ಸಿನಿಮಾದ ನಟನೆಗಾಗಿ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿಯವರಿಗೆ ಈ ಬಾರಿ ಕ್ರಿಟಿಕ್ಸ್ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.      കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+