X
ഹോം ടോപ് ലിസ്റ്റിങ്ങ്‌

ಕೆಜಿಎಫ್ ಟು ರಾಜಕುಮಾರ: ಬಾಕ್ಸಾಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಕಂಡ 8 ಕನ್ನಡ ಸಿನಿಮಾಗಳಿವು!

Author: Sowmya Bairappa | Published: Friday, September 13, 2024, 03:59 PM [IST]

ಕನ್ನಡಚಿತ್ರರಂಗ ಪ್ರಸ್ತುತ ಜಾಗತಿಕವಾಗಿಯೂ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡು ಬೆಳೆಯುತ್ತಿದೆ. ಕೆಲ ವರ್ಷಗಳ ಹಿಂದೆ ಪಕ್ಕದ ರಾಜ್ಯಗಳಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೆ ಹೆಣಗಾಡುತ್ತಿದ್ದ ನಿರ್ಮಾಪಕರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಮೊದಲೆಲ್ಲಾ ಸಿನಿಮಾ ಪ್ರದರ್ಶನ ಕಂಡ ದಿನಗಳ ಮೇಲೆ ಚಿತ್ರದ ಯಶಸ್ಸನ್ನು ಅಳೆಯುತ್ತಿದ್ದ ಚಿತ್ರರಂಗ ಈಗ ಬಾಕ್ಸಾಫೀಸ್ ಮೇಲೆ ಅವಲಂಬಿಸಿದೆ. ಇಲ್ಲಿ ಬಾಕ್ಸಾಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಕಂಡ 8 ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ಕೆಜಿಎಫ್: ಚಾಪ್ಟರ್ 2

ಕೆಜಿಎಫ್ ಚಾಪ್ಟರ್ 1 ಸೂಪರ್ ಹಿಟ್ ಆದಮೇಲೆ ಕೆಜಿಎಫ್ ಚಾಪ್ಟರ್ 2 ಮೇಲೆ ನಿರೀಕ್ಷೆಗಳು ಹೆಚ್ಚಿದ್ದವು. ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು 100 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ಕನ್ನಡ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾ.ರಾಕಿ ಭಾಯ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯನ್ ಬಾಕ್ಸಾಫೀಸ್ ನಡುಗುವಂತೆ ಮಾಡಿತ್ತು. ಬಾಲಿವುಡ್‌ನಲ್ಲೂ ಸಖತ್ ಸೌಂಡು ಮಾಡಿದ್ದ ಕೆಜಿಎಫ್-2 ಸಿನಿಮಾ, 1250 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿತ್ತು. ಇದು ಕನ್ನಡದಲ್ಲಿ ಅತಿಹೆಚ್ಚು ಗಳಿಕೆ ಕಂಡ ಮೊದಲ ಸಿನಿಮಾವಾಗಿದೆ.

കൂടുതല്‍ കാണാം


ಕಾಂತಾರ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ 2022ರ ಸೆಪ್ಟೆಂಬರ್ 30ರಂದು ರಿಲೀಸ್ ಆಗಿ ಕನ್ನಡಿಗರ ಮನಗೆದ್ದಿತ್ತು. ಕನ್ನಡ ವರ್ಷನ್‌ನಿಂದಲೇ ವಿಶ್ವಾದ್ಯಂತ ಸಿನಿಪ್ರಿಯರ ಪ್ರೀತಿಯನ್ನು ಸಂಪಾದಿಸಿತ್ತು.  ಈ ಮಧ್ಯೆ ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ 'ಕಾಂತಾರ' ಚಿತ್ರವನ್ನು ಡಬ್ ಮಾಡಲಾಗಿತ್ತು.  ಕಾಂತಾರ ಸಿನಿಮಾ ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದು, ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿತ್ತು. ಕೇವಲ ೧೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 450 ಕೋಟಿ ರೂ. ಗಳಿಸಿತ್ತು. ಆ ಮೂಲಕ ಎರಡನೇ ಸ್ಥಾನದಲ್ಲಿದೆ.

കൂടുതല്‍ കാണാം

ಕೆಜಿಎಫ್

2018ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಈ ಸಿನಿಮಾದ ಮೂಲಕ ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಚಿತ್ರ ಒಟ್ಟು 250 ಕೋಟಿ ರೂ. ಗಳಿಸಿತ್ತು. ಕನ್ನಡ ವರ್ಷನ್ ಸಿನಿಮಾ 100 ಕೋಟಿ ಬಾಚಿಕೊಂಡಿತ್ತು.  ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಸಿನಿಮಾ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಸ್ಯಾಂಡಲ್ ವುಡ್ ಘನತೆಯನ್ನು ಹೆಚ್ಚಿಸಿವೆ.

കൂടുതല്‍ കാണാം


ವಿಕ್ರಾಂತ್ ರೋಣ

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವನ್ನು ಕೂಡ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾದ ಟೀಸರ್ ಅನ್ನು ದುಬೈನ ಬುರ್ಜ್ ಖಲೀಫಾದಲ್ಲಿ ರಿಲೀಸ್ ಮಾಡಲಾಗಿತ್ತು.  3D, 2Dಯಲ್ಲಿ ಕೂಡ ಚಿತ್ರ ರಿಲೀಸ್ ಆಗಿತ್ತು. ಪ್ರಪಂಚದಾದ್ಯಂತ 1,600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ವಿಕ್ರಾಂತ್ ರೋಣ ತೆರೆಕಂಡಿತ್ತು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 210 ಕೋಟಿ ರೂ. ಗಳಿಕೆ ಕಂಡಿತ್ತು.  

കൂടുതല്‍ കാണാം

ಜೇಮ್ಸ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಬಾರಿ ನಾಯಕನಾಗಿ ನಟಿಸಿರುವ ಸಿನಿಮಾ ಜೇಮ್ಸ್. ಈ ಸಿನಿಮಾವನ್ನು  ಬಹದ್ದೂರ್ ಚೇತನ್ ನಿರ್ದೇಶಿಸಿದ್ದರು. ಜೇಮ್ಸ್ ಕನ್ನಡ ಭಾಷೆಯ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು.  ಜೇಮ್ಸ್ ಬಿಡುಗಡೆಯಾದ ಮೊದಲ ದಿನದಲ್ಲೇ 28 ರಿಂದ 32 ರೂ ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಅಪ್ಪು ಅವರ ಕೊನೆಯ ಸಿನಿಮಾ 151 ಕೋಟಿ ರೂ. ಗಳಿಕೆ ಕಂಡಿದೆ.  

കൂടുതല്‍ കാണാം


777 ಚಾರ್ಲಿ

2022ರಲ್ಲಿ ರಿಲೀಸ್ ಆದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಕೂಡ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿತ್ತು. ಐದು ಭಾಷೆಗಳಲ್ಲೂ ಜನರು ಈ ಸಿನಿಮಾ ಮೆಚ್ಚಿಕೊಂಡಿದ್ದರು. 777 ಚಾರ್ಲಿ 105 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 

കൂടുതല്‍ കാണാം

ಕುರುಕ್ಷೇತ್ರ

ಕನ್ನಡದ ಅತ್ಯಂತ ಅದ್ಧೂರಿ ಪೌರಾಣಿಕ ಚಿತ್ರವಾದ ಕುರುಕ್ಷೇತ್ರವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದರು. ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ನಟಿಸಿದ್ದರು. ಇದು ದರ್ಶನ್ ರ 50ನೇ ಚಿತ್ರ.ರೆಬೆಲ್ ಸ್ಟಾರ್ ಅಂಬರೀಶ್ ಭೀಷ್ಮನಾಗಿ, ರವಿಚಂದ್ರನ್ ಕೃಷ್ಣನಾಗಿ, ಅರ್ಜುನ ಸರ್ಜಾ ಕರ್ಣನಾಗಿ, ನಿಕಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ನಟಿಸಿದ್ದು, ಮೇಘನಾ ರಾಜ್ ಭಾನುಮತಿ ಪಾತ್ರದಲ್ಲಿ ಮತ್ತು ಖ್ಯಾತ ತಮಿಳು ನಟಿ ಸ್ನೇಹಾ ದ್ರೌಪದಿ ಪಾತ್ರದಲ್ಲಿ ಅಭಿನಯಿಸಿದ್ದರು. ಕುರುಕ್ಷೇತ್ರ ಚಿತ್ರವನ್ನು 50 ಕೊಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 90 ಕೋಟಿ ರೂ. ಗಳಿಕೆ ಕಂಡಿತ್ತು.

കൂടുതല്‍ കാണാം


ರಾಜಕುಮಾರ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಸಂತೋಷ್ ಆನಂದರಾಮ್ ಕಾಂಬಿನೇಷನ್‌ನಲ್ಲಿ ಮೂಡಿಬಂದ 'ರಾಜಕುಮಾರ' ಚಿತ್ರ ತನ್ನ ಸಾಮಾಜಿಕ ಸಂದೇಶದಿಂದ ಸೂಪರ್ ಹಿಟ್ ಆಗಿತ್ತು. ಕರ್ನಾಟಕದ ಸುಮಾರು 40 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿದ್ದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 75 ಕೋಟಿ ರೂ. ಗಳಿಕೆ ಕಂಡಿತ್ತು.

കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+