X
ഹോം ടോപ് ലിസ്റ്റിങ്ങ്‌

2021 ರಲ್ಲಿ ತೆರೆಕಂಡ ಅತ್ಯುತ್ತಮ ಕನ್ನಡ ಡಬ್ ಚಲನಚಿತ್ರಗಳು

Author: Administrator | Published: Saturday, December 4, 2021, 04:33 PM [IST]

ಲಾಕ್ ಡೌನ್ ದಿನಗಳಲ್ಲಿ ಮನರಂಜನೆಗೆ ಹೆಚ್ಚು ಸಹಾಯ ನೀಡಿದ್ದು ಡಬ್ ಧಾರಾವಾಹಿ ಮತ್ತು ಚಲನಚಿತ್ರಗಳು. ಈ ವರ್ಷ ಕೂಡ ಹಲವು ಚಲನಚಿತ್ರಗಳು ಕನ್ನಡ ಅವತರಣಿಕೆಗೆ ಡಬ್ ಆಗಿ ಜನಮನ ಸೆಳೆದಿವೆ. ಇಲ್ಲಿ 2021 ರಲ್ಲಿ ತೆರೆಕಂಡ ಕನ್ನಡದ ಅತ್ಯುತ್ತಮ ಡಬ್ ಚಲನಚಿತ್ರಗಳನ್ನು ನೀಡಿದೆ.

Share:
cover image
Jai Bhim
1

ನಿಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಟಿ.ಜೆ ಜ್ಞಾನವೇಲ್ ನಿರ್ದೇಶನ ಮಾಡಿದ್ದ `ಜೈ ಭೀಮ್' ತಮಿಳು ಚಿತ್ರ ಎರಡು-ಮೂರು ದಶಕಗಳ ಹಿಂದೆ ಶೋಷಿತರ ಮೇಲೆ ನೆಡೆಯುತ್ತಿದ್ದ ದಬ್ಬಾಳಿಕೆಯನ್ನು ತೀಕ್ಷ್ಣವಾಗಿ ತೋರಿಸಿತು. ಸೂರ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಕ್ಕುಗಳ ಹೋರಾಟಗಾರ ಚಂದ್ರು ಪಾತ್ರದಲ್ಲಿ ನಟಿಸಿದ್ದರು.


Maara
2

ದೀಲಿಪ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ತಮಿಳು ಚಿತ್ರ ಮಾರದಲ್ಲಿ ಆರ್ ಮಾಧವನ್ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಒಂದು ಕರಾವಳಿ ತೀರದ ಗೋಡೆಗಳಲ್ಲಿರುವ ಪೇಟಿಂಗ್, ತಾನು ಬಾಲ್ಯದಲ್ಲಿ ಕೇಳಿದ ಕಥೆಗಳಿಗೆ ಹೋಲಿಕೆಯಾಗುವದನ್ನು ಕಂಡು, ಯುವತಿಯೊಬ್ಬಳು ಆ ಪೇಂಟರ್ ನ್ನು ಹುಡುಕಿಕೊಂಡು ಹೋಗುತ್ತಾಳೆ.

Annaatthe
3

ಸಿರುತೈ ಶಿವ ನಿರ್ದೇಶನದಲ್ಲಿ ಮೂಡಿಬಂದ `ಅಣ್ಣಾಥೆ'ಯಲ್ಲಿ ರಜನೀಕಾಂತ್ ನಾಯಕನಾಗಿ ನಟಿಸಿದ್ದರು. ನಯನತಾರಾ, ಕೀರ್ತಿ ಸುರೇಶ್ ನಾಯಕಿಯರಾಗಿ ನಟಿಸಿದ್ದರು. ಕನ್ನಡದಲ್ಲಿ `ನಮ್ಮ ಅಣ್ಣಯ್ಯ' ಹೆಸರಿನಲ್ಲಿ ಡಬ್ ಆಗಿ ಸನ್ ನೆಕ್ಟ್ಸ್ ನಲ್ಲಿ ಬಿಡುಗಡೆಯಾಯಿತು.


Doctor
4

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಶಿವಕಾರ್ತಿಕೇಯನ್ ಅಭಿನಯದ `ಡಾಕ್ಟರ್' ಚಿತ್ರದಲ್ಲಿ ಶಿವ ಕಾರ್ತಿಕೇಯನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬ ಮಿಲಿಟಿರಿ ಡಾಕ್ಟರ್ ಹೇಗೆ ಅಂಗಾಂಗ ಮಾರಾಟದ ಜಾಲವನ್ನು ಪತ್ತೆ ಹಚ್ಚಿ ಅದರ ವಿರುದ್ಧ ಹೋರಾಡುತ್ತಾನೆ ಎಂಬುದು ಚಿತ್ರದ ಕಥೆ.

Tuck Jagadish
5

ಶಿವು ನಿರ್ವಾಣ ನಿರ್ದೇಶನದಲ್ಲಿ ಮೂಡಿಬಂದ `ಟಕ್ ಜಗದೀಶ್' ಚಿತ್ರದಲ್ಲಿ ನಾನಿ, ರಿತು ವರ್ಮಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಐಶ್ವರ್ಯ ರಾಜೇಶ್, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಸಹೋದರರ ಬಾಂಧವ್ಯ ಆಧಾರಿತವಾಗಿದೆ.


Shang Chi
6

ಮಾರ್ವೆಲ್ ಚಿತ್ರ ಸರಣಿಗಳ ಮುಂದುವರೆದ ಭಾಗವಾಗಿ ತೆರೆಕಂಡ ಶಾಂಗ್ ಚಿ ಪ್ರಪಂಚಾದ್ಯಂತ ಅತ್ಯುತ್ತಮ ಪ್ರದರ್ಶನ ಕಂಡಿತು. ಸಿಮು ಲೀ ಮತ್ತು ಟೋನಿ ಲಿಯಾಂಗ್ ನಟನೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಚಿತ್ರದ ಕನ್ನಡದ ಡಬ್ ಅವತರಣಿಕೆ ಹಾಟ್‌ಸ್ಟಾರ್ ನಲ್ಲಿ ಲಭ್ಯವಿದೆ.

Netrikann
7

ಮಿಲಿಂದ್ ರಾವ್ ನಿರ್ದೇಶನ ಮತ್ತು ವಿಘ್ನೇಶ್ ಶಿವನ್ ನಿರ್ಮಾಣದಲ್ಲಿ ಮೂಡಿಬಂದ `ನೇತ್ರಿಕಣ್' ಚಿತ್ರದಲ್ಲಿ ಲೇಡಿ ಸೂಪರಸ್ಟಾರ್ ನಯನತಾರಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಂಧೆಯೊಬ್ಬಳು ಒಂದು ಸರಣಿ ಕಿಡ್ನ್ಯಾಪ್ ಗಳ ಪ್ರಮುಖ ಸಾಕ್ಷಿಯಾಗಿ ಅದನ್ನು ಹೇಗೆ ಭೇಧಿಸುತ್ತಾಳೆ ಎಂಬುದು ಚಿತ್ರದ ಕತೆ.


Thalaivi
8

ಜಯಲಲಿತಾ ಜೀವನಾಧಾರಿತ ಈ ಚಿತ್ರದಲ್ಲಿ ಕಂಗನಾ ರಣಾವತ್ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದರು. ಎ.ಎಲ್.ವಿಜಯ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಚಿತ್ರನಟಿ ಜಯಲಲಿತಾ ರಾಜಕಾರಣಿಯಾಗಿ, ನಂತರ ಮುಖ್ಯಮಂತ್ರಿಯಾಗುವ ತನಕದ ಪಯಣದ ಬಗ್ಗೆ ಚಿತ್ರಿಸಿತು.

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+