2020 ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಅದ್ಧೂರಿಯಿಂದ ಆರಂಭವಾಗಿದೆ..ಮುಖ್ಯಮಂತ್ರಿ ಯಡಿಯೂರಪ್ಪ, ನಟ ಯಶ್, ನಟಿ ಆದಿತಿ ಪ್ರಭುದೇವ ಮತ್ತು ಜಯಪ್ರದಾ ಮತ್ತು ಗಾಯಕ ಸೋನು ನಿಗಮ್ ಈ ಸಾಲಿನ ಸಿನಿ ಮಹೋತ್ಸವಕ್ಕೆ ಚಾಲನೆ ನೀಡಿದರು. 15 ವಿಭಾಗಗಳಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇಲ್ಲಿ ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳನ್ನು ನೀಡಿದೆ. ಬೆಲ್ ಬಾಟಮ್ ಮತ್ತು ಕವಲುದಾರಿ ಚಿತ್ರಗಳು ಜನಪ್ರಿಯ ವಿಭಾಗ ಮತ್ತು ಸ್ಪರ್ಧಾ ವಿಭಾಗ ಎರಡರಲ್ಲೂ ಪ್ರದರ್ಶನಗೊಳ್ಳುತ್ತಿವೆ.
ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಈ ಚಿತ್ರವನ್ನು ಸಚಿನ್ ನಿರ್ದೇಶಿಸಿದರು. ಬಚ್ಚಿಟ್ಟ ನಿಧಿಯನ್ನು ಹುಡುಕುವ ಎರಡು ಬಣಗಳು ಮತ್ತು ಅವರಿಗೆ ಚಳ್ಳೆಹಣ್ಣು ತಿನಿಸುವ ಕಿಲಾಡಿ ಪೋಲಿಸ್ ಆಫೀಸರ್ ಕತೆಯನ್ನು ಹೊಂದಿತ್ತು.
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ಅವನೇ ಶ್ರೀಮನ್ನಾರಾಯಣ/top-listing/kannada-popular-entertainment-movies-in-bangaluru-international-film-festival-biffes2020-3-458.html#avane-srimannarayana
2
ಜಯತೀರ್ಥ ನಿರ್ದೇಶನದ, ರಿಷಭ್ ಶೆಟ್ಟಿ ಡಿಟೆಕ್ಟಿವ್ ಕಮ್ ಡಿಫೆಕ್ಟಿವ್ ದಿವಾಕರನ ಅವತಾರ ತಾಳಿದ ಚಿತ್ರ ಬೆಲ್ ಬಾಟಂ. ತನ್ನ ಚಾಣಾಕ್ಷತೆಯಿಂದ ಒಂದು ಪ್ರಸಿದ್ಧ ಸರಣಿ ಕಳ್ಳತನವನ್ನು ಭೇಧಿಸುವ ಡಿಟೆಕ್ಟಿವ್ ಕಥೆಯನ್ನು ಚಿತ್ರ ಹೊಂದಿದೆ..
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ಬೆಲ್ ಬಾಟಮ್/top-listing/kannada-popular-entertainment-movies-in-bangaluru-international-film-festival-biffes2020-3-458.html#bell-bottom
3
ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದರು. ಪ್ರೀತಿ ಪ್ರೇಮಗಳಲ್ಲಿ ನಂಬಿಕೆಯಿಲ್ಲದ ವ್ಯಕ್ತಿ ಮುಂದೆ ಅದೇ ಪ್ರೀತಿಗಾಗಿ ಹೇಗೆ ಹಂಬಲಿಸುತ್ತಾನೆ ಎಂಬುದನ್ನು ಚಿತ್ರ ತೋರಿಸಿತು.
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ಐ ಲವ್ ಯು/top-listing/kannada-popular-entertainment-movies-in-bangaluru-international-film-festival-biffes2020-3-458.html#i-love-you
4
ಕವಿರಾಜ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಜಗ್ಗೇಶ್ ಕಾಳಿದಾಸ್ ಮೇಷ್ಟ್ರಾಗಿ ಕನ್ನಡ ಪಾಠ ಹೇಳಿದರೆ, ಮೇಘನಾ ಗಾಂವಕರ್ ಕಾಳಿ ಅವತಾರದಲ್ಲಿ ಜಗ್ಗೇಶ್ ರನ್ನು ನಿಯಂತ್ರಿಸಿದರು.
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ಕಾಳಿದಾಸ ಕನ್ನಡ ಮೇಷ್ಟ್ರು/top-listing/kannada-popular-entertainment-movies-in-bangaluru-international-film-festival-biffes2020-3-458.html#kalidaasa-kannada-meshtru
5
ಒಂದು ಹಳೆಯ ಕೊಲೆಯ ಬೆನ್ನತ್ತಿ ಹೋಗುವ ಟ್ರಾಫಿಕ್ ಅಧಿಕಾರಿ ಹಲವು ಕವಲುಗಳ (ಸುಳಿವುಗಳ) ಹಾದಿಯಲ್ಲಿ ಬಂದು ನಿಲ್ಲುತ್ತಾನೆ..ಈ ಹಂತದಲ್ಲಿ ಹಳೆಯ ನಿವೃತ್ತ ಅಧಿಕಾರಿಯ ಮಾರ್ಗದರ್ಶನ ಪಡೆಯುತ್ತಾನೆ.ಹಲವು ಪದರುಗಳ ಈ ಥ್ರಿಲ್ಲರ್ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶನ ಮತ್ತು ಪುನೀತ್ ರಾಜಕುಮಾರ್ ಪಿ.ಆರ್.ಕೆ ಬ್ಯಾನರ್ ನಲ್ಲಿ ಮೂಡಿ ಬಂದಿತ್ತು.
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ಕವಲುದಾರಿ/top-listing/kannada-popular-entertainment-movies-in-bangaluru-international-film-festival-biffes2020-3-458.html#kavaludaari
6
ಅಂಬಾರಿ ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಿಂದ ಯುವ ಪ್ರತಿಭೆಗಳಾದ ವಿರಾಟ್ ಮತ್ತು ಶ್ರೀಲೀಲಾ ಚಂದನವನ ಪ್ರವೇಶಿಸಿದರು. ಈ ಚಿತ್ರ ಯುವ ಆವಸ್ಥೆಯಲ್ಲಿ ಮೂಡುವ ಆಧುನಿಕ ಪ್ರೇಮ ಕಥೆಯನ್ನು ಹೇಳಿತು.
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ಕಿಸ್/top-listing/kannada-popular-entertainment-movies-in-bangaluru-international-film-festival-biffes2020-3-458.html#kiss
7
ಮುನಿರತ್ನ ನಿರ್ಮಾಣದ ,ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಘರ್ಜಿಸಿದರು. ಮಹಾಭಾರತದ ಕೌರವ-ಪಾಂಡವರ ಅಂತಿಮ ಕಲಹ ಕುರುಕ್ಷೇತ್ರ ಯುದ್ಧವನ್ನು ತೆರೆಮೇಲೆ 3ಡಿಯಲ್ಲಿ ಚಿತ್ರಿಸಿತು.
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ಕುರುಕ್ಷೇತ್ರ/top-listing/kannada-popular-entertainment-movies-in-bangaluru-international-film-festival-biffes2020-3-458.html#kurukshetra
8
ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಪೋಟೊ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರು. ಭೂತಗಳ ಭಯ ಸೃಷ್ಟಿಸಿ ತನ್ನ ಪ್ರೇಮಿಯ ಸಾವಿನ ಸೇಡನ್ನು ತೀರಿಸಿಕೊಳ್ಳುವ ನಾಯಕನ ಪಾತ್ರದಲ್ಲಿ ಪುನೀತ್ ನಟಿಸಿದ್ದರು.
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ನಟಸಾರ್ವಭೌಮ/top-listing/kannada-popular-entertainment-movies-in-bangaluru-international-film-festival-biffes2020-3-458.html#natasaarva-bouma
9
ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಹಳ್ಳಿ ಜಟ್ಟಿ ಪೈಲ್ವಾನ್ ಪಾತ್ರದ ಜೊತೆಗೆ ಆಧುನಿಕ ಬಾಕ್ಸರ್ ಪಾತ್ರದಲ್ಲಿ ಕೂಡ ಮಿಂಚಿದರು. ಒಂದು ಉನ್ನತ ಉದ್ದೇಶಕ್ಕಾಗಿ ಹೋರಾಡುವ ನಾಯಕನ ಕತೆಯನ್ನು ಹೊಂದಿತ್ತು.
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ಪೈಲ್ವಾನ್/top-listing/kannada-popular-entertainment-movies-in-bangaluru-international-film-festival-biffes2020-3-458.html#pailwaan
10
ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಆಧುನಿಕ ರೈತನಾಗಿ ಕಾಣಿಸಿಕೊಂಡರು. ಹೇಗೆ ಬ್ರಾಂಡ್ ಗಳು ಕೃಷಿಕರ ಶೋಷಣೆ ಮಾಡುತ್ತವೆ ಎಂಬದನ್ನು ಚಿತ್ರ ಸಮರ್ಥವಾಗಿ ಕಟ್ಟಿ ಕೊಟ್ಟಿತು.
BIFFES 2020: ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿನ ಚಲನಚಿತ್ರಗಳು-ಯಜಮಾನ/top-listing/kannada-popular-entertainment-movies-in-bangaluru-international-film-festival-biffes2020-3-458.html#yajamana
Disclaimer
The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.