X
ഹോം ടോപ് ലിസ്റ്റിങ്ങ്‌

2024ರಲ್ಲಿ ನಿಧನರಾದ ಕನ್ನಡ ಚಿತ್ರರಂಗದ ನಟ-ನಟಿಯರ ಪಟ್ಟಿ ಇಲ್ಲಿದೆ.

Author: Sowmya Bairappa | Updated: Thursday, December 5, 2024, 02:59 PM [IST]

ಹುಟ್ಟು ನಿಶ್ಚಿತ, ಸಾವು ಖಚಿತ ಎನ್ನಲಾಗುತ್ತೆ. ಈ ಭೂಮಿ ಮೇಲೆ ಹುಟ್ಟಿದವರೆಲ್ಲಾ ಒಂದಲ್ಲ, ಒಂದು ದಿನ ಸಾಯಲೇಬೇಕು. ಆದರೆ, ಸಮಾಜಕ್ಕೆ ಕೊಡುಗೆ ನೀಡಿದ ಗಣ್ಯರು ಚಿಕ್ಕವಯಸ್ಸಿನಲ್ಲೇ ನಿಧನರಾದರೆ, ಅವರ ಅಭಿಮಾನಿಗಳಿಗೆ ಆ ದುಃಖದಿಂಧ ಹೊರಬರಲಾಗುವುದಿಲ್ಲ. 2024ರಲ್ಲಿ ನಾವು ಸ್ಯಾಂಡಲ್‌ವುಡ್‌ನ ಹಲವು ಕಲಾವಿದರನ್ನು ಕಳಡದುಕೊಂಡಿದ್ದೇವೆ. ಈ ಪೈಕಿ ಕೆಲವರು ದುಡುಕಿ ನಿರ್ಧಾರ ತೆಗೆದುಕೊಂಡರೆ, ಇನ್ನೂ ಕೆಲವರಿಗೆ ವಿಧಿಯೇ ಬದುಕಿ ಬಾಳಲು ಅವಕಾಶ ಕೊಟ್ಟಿಲ್ಲ. ಇವರೆಲ್ಲರ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಇಲ್ಲಿ 2024ರಲ್ಲಿ ನಿಧನರಾದ ಚಂದನವನದ ತಾರೆಯರ ಪಟ್ಟಿಯನ್ನು ನೀಡಲಾಗಿದೆ.

Share:
cover image
ಗುರುಪ್ರಸಾದ್
1

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಬರಹಗಾರ ಹಾಗೂ ನಿರ್ದೇಶಕರಾದ ಗುರುಪ್ರಸಾದ್ 2024ರ ನವೆಂಬರ್ 3ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಹೆವೆನ್ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ವಿಷಯ ಚಂದನವನಕ್ಕೆ ಶಾಕ್ ಉಂಟುಮಾಡಿತ್ತು. ಕಿರುತೆರೆಯಿಂದ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದ ಗುರುಪ್ರಸಾದ್, ನಂತರ ಸಿನಿಮಾ ಕಡೆಗೆ ವಾಲಿಕೊಂಡರು. ಅವರಿಗೆ ಸಿನಿಮಾರಂಗಕ್ಕೆ ಯಶಸ್ಸು ನೀಡಬೇಕು ಅನ್ನೋ ಆಸೆಯಿತ್ತು. ಅದರಂತೆ ಎರಡು ಅದ್ಭುತ ಸಿನಿಮಾಗಳನ್ನು ಕೊಟ್ಟು ಗುರುಪ್ರಸಾದ್ ಗೆದ್ದಿದ್ದರು. ಆದರೆ, ತಮ್ಮ 52ನೇ ವಯಸ್ಸಿನಲ್ಲಿಯೇ ಬದುಕು ಕೊನೆಗೊಳಿಸಿದರು.

കൂടുതല്‍ കാണാം


ದ್ವಾರಕೀಶ್
2

ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್ ಹಿರಿಯ ನಟ ದ್ವಾರಕೀಶ್ 2024ರ ಏಪ್ರಿಲ್ 16ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಚಂದನವನಕ್ಕೆ ಅವರ ಕೊಡುಗೆ ಅಪಾರ.

കൂടുതല്‍ കാണാം

ಅಪರ್ಣಾ
3

ಅಪ್ಪಟ ಕನ್ನಡದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಧ್ವನಿಯನ್ನು ಕೇಳದವರೇ ಇಲ್ಲ. ಅವರು ನಿರೂಪಣೆಗೆ ನಿಂತರೆ, ನಿರರ್ಗಳವಾಗಿ ಗಂಟೆಗಟ್ಟಲೇ ಕನ್ನಡದಲ್ಲಿಯೇ ಮಾತುಡುತ್ತಿದ್ದರು. ಇವರ ನಿರೂಪಣೆಯ ಶೈಲಿಗೆ ಅಪ್ಪಟ ಕನ್ನಡಕ್ಕೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲೂ ನೆಲೆಸಿರುವ ಕನ್ನಡಿಗರ ಫೇವರಿಟ್ ನಿರೂಪಕಿ ಅಪರ್ಣಾ. ನನ್ನ ಗುರುತು ಕನ್ನಡ...ನನ್ನ ಅಸ್ತಿತ್ವ ಕನ್ನಡ.. ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅಪರ್ಣಾ, 2024ರ ಜುಲೈ 11ರಂದು ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧರಾದರು.

കൂടുതല്‍ കാണാം


ದೀಪಕ್ ಅರಸ್
4

ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ 2024ರ ಅಕ್ಟೋಬರ್ 17ರಂದು ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು. ದೀಪಕ್ 2011ರಲ್ಲಿ 'ಮನಸಾಲಜಿ' ಸಿನಿಮಾ ನಿರ್ದೇಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. 2023ರಲ್ಲಿ 'ಶುಗರ್ ಫ್ಯಾಕ್ಟರಿ' ಸಿನಿಮಾ ನಿರ್ದೇಶನ ಮಾಡಿದ್ದರು.

കൂടുതല്‍ കാണാം

ಶೋಭಿತಾ
5

ಜೀ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಬ್ರಹ್ಮಗಂಟು' ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ಶೋಭಿತಾ ಶಿವಣ್ಣ,  2024ರ ನವೆಂಬರ್ 30ರ ಮಧ್ಯರಾತ್ರಿ ಹೈದರಾಬಾದ್‌ನಲ್ಲೇ ಆತ್ಮಹತ್ಯೆ ಶರಣಾದರು. ಸೀರಿಯಲ್ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದ ಶೋಭಿತಾ, ವಂದನ, ಎರಡೊಂದ್ಲ ಮೂರು. ಅಟೆಂಪ್ಟ್ ಟು ಮರ್ಡರ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

കൂടുതല്‍ കാണാം


ಪವಿತ್ರಾ ಜಯರಾಮ್
6

ಕನ್ನಡದಲ್ಲಿ ಜೋಕಾಲಿ, ನೀಲಿ, ರಾಧಾರಮಣ ಹಾಗೂ ತೆಲುಗಿನ ತ್ರಿನಯನಿ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿದ್ದ ನಟಿ ಪವಿತ್ರ ಜಯರಾಮ್, 2024ರ ಮೇ 11ರ ರಾತ್ರಿ ಕರ್ನೂಲು ಬಳಿ ನಡೆದ ರಸ್ತೆ ಅಪಘಾತದಲ್ಲಿ ನಿಧರಾದರು.  ಮೂಲತಃ ಮಂಡ್ಯದರಾದ ಇವರು, ತೆಲುಗು ಕಿರುತೆರಲ್ಲೂ ಸಾಷ್ಟು ಹೆಸರು ಮಾಡಿದ್ದರು.

കൂടുതല്‍ കാണാം

ಕೆ ಶಿವರಾಮ್
7

ಕನ್ನಡ ಚಿತ್ರರಂಗದ ಜನಪ್ರಿಯ ನಟ, ರಾಜಕಾರಣಿ ಹಾಗೂ ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್  2024ರ ಫೆಬ್ರವರಿ 29ರಂದು ಹೃದಯಾಘಾತದಿಂದ ನಿಧನರಾದರು. 1953ರ ಏಪ್ರಿಲ್ 6ರಂದು ರಾಮನಹಗರ ಜಿಲ್ಲೆಯ ಉರಗಳ್ಳಿಯಲ್ಲಿ ಜನಿಸಿದ್ದ ಅವರು, ಕನ್ನಡ ಭಾಷೆಯಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.  1993ರಲ್ಲಿ ತೆರೆಕಂಡ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಮೂಲಕ ಕೆ ಶಿವರಾಮ್, ಹಲವು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು.





കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+