X
ഹോം ടോപ് ലിസ്റ്റിങ്ങ്‌

'ಲಕ್ಷ್ಮೀ ನಿವಾಸ' ಸೀರಿಯಲ್‌ನ ಜಯಂತ್ ಪಾತ್ರಧಾರಿಯ ವಯಸ್ಸು, ಎಜುಕೇಷನ್, ಸಿನಿಮಾ ಸೇರಿದಂತೆ ಇಂಟರೆಸ್ಟಿಂಗ್ ವಿಷಯಗಳಿವು!

Author: Sowmya Bairappa | Published: Monday, April 1, 2024, 04:10 PM [IST]

ಜೀ ಕನ್ನಡ ವಾಹಿನಿಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಇದೀಗ ಪ್ರೇಕ್ಷಕರ ನೆಚ್ಚಿನ ಧಾರಾವಾಹಿ ಎನಿಸಿಕೊಂಡಿದೆ. ಜೊತೆಗೆ ಟಿಆರ್‌ಪಿ ರೇಸಿಂಗ್‌ನಲ್ಲೂ ಈ ಧಾರಾವಾಹಿ ಮುಂದಿದೆ. ಮಧ್ಯಮ ವರ್ಗದ ಕುಟುಂಬ ನಡೆಸಿಕೊಂಡು ಹೋಗುತ್ತಿರುವ ದಂಪತಿಯ ಕಥೆ ಹೊಂದಿರುವ ಈ ಸೀರಿಯಲ್‌ನಲ್ಲಿ ಕಲಾವಿದರ ದಂಡೇ ಇದೆ. ಇಲ್ಲಿ ಈ ಸೀರಿಯಲ್‌ನ ಜಯಂತ್ ಪಾತ್ರಧಾರಿಯ ನಿಜವಾದ ಹೆಸರು, ಎಜುಕೇಷನ್, ವಯಸ್ಸು ಸೇರಿದಂತೆ ಕೆಲ ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.

Share:
cover image
ನಿಜವಾದ ಹೆಸರು & ಎಜುಕೇಷನ್

'ಲಕ್ಷ್ಮೀ ನಿವಾಸ' ಧಾರಾವಾಹಿಯ ಜಯಂತ್ ಪಾತ್ರಧಾರಿಯ ನಿಜವಾದ ಹೆಸರು. ದೀಪಕ್ ಸುಬ್ರಮಣ್ಯ. ಇಂಜಿನಿಯರಿಂಗ್ ಓದಿಕೊಂಡಿರುವ ಇವರು, ನಟನಾ ಕ್ಷೇತ್ರಕ್ಕೆ ಬರುವುದಕ್ಕೂ ಮುನ್ನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.


ರಂಗಭೂಮಿ

ದೀಪಕ್ ಸುಬ್ರಮಣ್ಯ 2004ರಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಜೊತೆಗೆ ರಂಗಭೂಮಿ ಇಲ್ಲದೆ ತಮ್ಮ ನಟನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಂತಾರೆ. ಒಟ್ಟಾರೆ, ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿರುವ ಇವರು, ಇಲ್ಲಿವರೆಗೂ ೫೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಹಲವು ನಾಟಕಗಳನ್ನು ನಿರ್ದೇಶನ, ನಿರ್ಮಾಣ ಮಾಡಿದ್ದಾರೆ.

ಟೀಚಿಂಗ್ನಟನೆ ಮಾತ್ರವಲ್ಲದೇ ದೀಪಕ್ ಸುಬ್ರಮಣ್ಯ ಕಳೆದ ಐದಾರು ವರ್ಷಗಳಿಂದ ಪರ್ಫಾಮೆನ್ಸ್ ಇನ್ ರಿಯಲಿಸಂ ಎಂಬ ಕೋರ್ಸ್ ಅನ್ನು ಟೀಚ್ ಮಾಡುತ್ತಿದ್ದಾರೆ. ಇದು ಮೂರುವರೇ ತಿಂಗಳ ಕೋರ್ಸ್ ಆಗಿದೆ. ಕಲಾವಿದರಾಗಲು ಸಾಕಷ್ಟು ಕಷ್ಟಪಟ್

ನಟನೆ ಮಾತ್ರವಲ್ಲದೇ ದೀಪಕ್ ಸುಬ್ರಮಣ್ಯ ಕಳೆದ ಐದಾರು ವರ್ಷಗಳಿಂದ ಪರ್ಫಾಮೆನ್ಸ್ ಇನ್ ರಿಯಲಿಸಂ ಎಂಬ ಕೋರ್ಸ್ ಅನ್ನು ಟೀಚ್ ಮಾಡುತ್ತಿದ್ದಾರೆ. ಇದು ಮೂರುವರೇ ತಿಂಗಳ ಕೋರ್ಸ್ ಆಗಿದೆ. ಕಲಾವಿದರಾಗಲು ಸಾಕಷ್ಟು ಕಷ್ಟಪಟ್ಟಿರುವ ಇವರಿಗೆ 35 ವರ್ಷದ ಮೇಲಾಗಿದೆ ಎನ್ನಲಾಗಿದೆ.


 ದಾಸ ಪುರಂದರ

ಹಲವರಿಗೆ ದೀಪಕ್ ಸುಬ್ರಮಣ್ಯ ಅಂದ ಕೂಡಲೇ ಯಾರು ಎಂಬುದು ಗೊತ್ತಾಗದೇ ಇರಬಹುದು. ಆದರೆ, ಶ್ರೀನಿವಾಸ ನಾಯಕ ಅಂದರೆ ಥಟ್ ಅಂತ ಗೊತ್ತಾಗುತ್ತದೆ. ಯಾಕೆಂದರೆ, ದೀಪಕ್ ಸುಬ್ರಮಣ್ಯ ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ದಾಸ ಪುರಂದರ' ಸೀರಿಯಲ್‌ನಲ್ಲಿ  ಶ್ರೀನಿವಾಸ ನಾಯಕನ ಪಾತ್ರ ಮಾಡಿದ್ದರು. ಇದು ಅವರ ಮೊದಲ ಧಾರಾವಾಹಿಯಾಗಿದ್ದು, ಹಿಟ್ ಆಗಿತ್ತು.

 11 ಕೆಜಿ ಸಣ್ಣಗಾಗಿದ್ದರು

ದೀಪಕ್ ಸುಬ್ರಮಣ್ಯ 'ದಾಸ ಪುರಂದರ' ಧಾರಾವಾಹಿಯಲ್ಲಿ ಪುರಂದರ ದಾಸರ ಪಾತ್ರ ಮಾಡಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಆ ಪಾತ್ರಕ್ಕಾಗಿ ಅವರು ಬರೋಬ್ಬರಿ 11 ಕೆಜಿ ತೂಕ ಇಳಿಸಿಕೊಂಡಿದ್ದರಂತೆ. ಜೊತೆಗೆ ಕೇವಲ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದರಂತೆ.


ಸಿನಿಮಾ

ದೀಪಕ್ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಶುದ್ಧಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಇವರು, ನಂತರ ಸಾಲಗಾರ, ಜಾರು ಬಂಡೆ, ಸಾರಾಂಶ, ಆಯಾನಾ, ಪಿಂಕಿ ಎಲ್ಲಿ? ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಮಿಸ್ಟರ್ ರಾಣಿ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇದರ ಜೊತೆಗೆ ಮತ್ತೆರಡು ಸಿನಿಮಾಗಳಲ್ಲಿ ದೀಪಕ್ ಬ್ಯುಸಿಯಾಗಿದ್ದಾರೆ.

ಲಕ್ಷ್ಮೀ ನಿವಾಸ

ಸದ್ಯ ದೀಪಕ್ 'ಲಕ್ಷ್ಮೀ ನಿವಾಸ'ದಲ್ಲಿ ಜಯಂತ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ. ಇದರಲ್ಲಿ ಅನಾಥನಾಗಿ ಬೆಳೆದ ಜಯಂತ್, ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ ದೊಡ್ಡ ಬ್ಯುಸಿನೆಸ್ ಮ್ಯಾನ್. ಪಟಾಕಿ ಜಾಹ್ನವಿಯನ್ನು ಮದುವೆಯಾಗುವುದಕ್ಕೂ ಮುನ್ನ ಅತಿ ವಿನಯದಿಂದಿದ್ದ ಜಯಂತ್, ಮದುವೆ ಬಳಿಕ ತನ್ನ ಸೈಕೋ ಅವತಾರ ತೋರಿದ್ದಾನೆ. ಜಯಂತ್ ಇಷ್ಟೊಂದು ಪೊಸೆಸ್ಸಿವ್ ಆಗಿ ಸೈಕೋ ಆಗಿದ್ದು ಯಾಕೆ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಒಟ್ಟಾರೆ ದೀಪಕ್ ಅವರು 'ಜಯಂತ್' ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸುತ್ತಿದ್ದಾರೆ.


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+