2022ರಲ್ಲಿ ಬಾಲಿವುಡ್ ಚಿತ್ರರಂಗಕ್ಕಿಂತ ದಕ್ಷಿಣ ಭಾರತದ ಸಿನಿಮಾಗಳೇ ಅಬ್ಬರಿಸಿದ್ದು, ದೊಡ್ಡಮಟ್ಟದಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಕನ್ನಡ ಚಿತ್ರರಂಗಕ್ಕೆ 2022 ಗೋಲ್ಡನ್ ಇಯರ್. ಕಳೆದೆರಡು ವರ್ಷಗಳಿಂದ ಕೊರೊನಾ ಲಾಕ್ ಡೌನ್ ನಿಯಮದಿಂದಾಗಿ ಕುಗ್ಗಿದ್ದ ಸಿನಿಮಾ ಕ್ಷೇತ್ರ ಸಂಪೂರ್ಣವಾಗಿ ಚೇತರಿಕೆ ಕಂಡದ್ದು 2022ರಲ್ಲಿಯೇ. ಕನ್ನಡದ ಕೆಜಿಎಫ್ ಚಾಪ್ಟರ್ 2, ಜೇಮ್ಸ್, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಚಿತ್ರಗಳು ಈ ವರ್ಷ ನೂರು ಕೋಟಿಗೂ ಅಧಿಕ ಗಳಿಸಿದ ಚಿತ್ರಗಳು ಎನಿಸಿಕೊಂಡವು. ಇವುಗಳ ಜತೆಗೆ ಈ ವರ್ಷ ತೆರೆಕಂಡ ಹಲವಾರು ಕನ್ನಡ ಚಿತ್ರಗಳು ಬಾಕ್ಸಾಫೀಸ್ ವಿಚಾರವಾಗಿ ಹಾಗೂ ಕಂಟೆಂಟ್ ವಿಚಾರವಾಗಿ ಸದ್ದು ಮಾಡಿದವು. ಹಾಗಾದರೆ 2022ರ ಬೆಸ್ಟ್ ಚಿತ್ರಗಳು ಯಾವವು ಎಂಬ ಮಾಹಿತಿ ಇಲ್ಲಿದೆ.
ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಲವ್ ಮಾಕ್ಟೇಲ್ ಚಿತ್ರದ ಎರಡನೇ ಭಾಗವಾಗಿ ಈ ಚಿತ್ರ ಮೂಡಿಬಂದಿದೆ. ಈ ಸಿನಿಮಾದಲ್ಲಿ ನಾಯಕಿರಾಗಿ ರೇಚೆಲ್ ಡೇವಿಡ್, ಸುಶ್ಮಿತಾ ಗೌಡ, ಅಮೃತಾ ಅಯ್ಯಂಗಾರ್ ಮತ್ತು ರಚನಾ ನಟಿಸಿದ್ದಾರೆ. ಹಾಗೇ ಕೆಲ ಫ್ಲ್ಯಾಶಬ್ಯಾಕ್ ಸನ್ನಿವೇಶಗಳಲ್ಲಿ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಒಂದನೇ ಭಾಗ ನಿಧಿಯ ವಿಷಾದಕರ ನಿಧನದಲ್ಲಿ ಮುಕ್ತಾಯವಾಗುತ್ತದೆ. ಲವ್ ಮಾಕ್ಟೇಲ್ 2 ಚಿತ್ರದಲ್ಲಿ ನಿಧಿಯ ನೆನಪುಗಳ ದೋಣಿಯಲ್ಲಿ ಸಾಗುತ್ತಿರುವ ಆದಿಯ ಮುಂದಿನ ಜೀವನದ ಚಿತ್ರವಿದ್ದು, ಈ ಚಿತ್ರ ಪ್ರೇಕ್ಷಕರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಲವ್ ಮಾಕಟೇಲ್ 2/top-listing/love-mocktail-2-to-veda-best-kannada-movies-released-in2022-3-2036.html#love-mocktail-2
2
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊನೆಯ ಬಾರಿ ನಾಯಕನಾಗಿ ನಟಿಸಿರುವ ಸಿನಿಮಾ ಜೇಮ್ಸ್. ಈ ಸಿನಿಮಾವನ್ನು ಬಹದ್ದೂರ್ ಚೇತನ್ ನಿರ್ದೇಶಿಸಿದ್ದಾರೆ. ಅಪ್ಪುಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ಜೇಮ್ಸ್ ಕನ್ನಡ ಭಾಷೆಯ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಜೇಮ್ಸ್ ಬಿಡುಗಡೆಯಾದ ಮೊದಲ ದಿನದಲ್ಲೇ 28 ರಿಂದ 32 ರೂ ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿತ್ತು.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಜೇಮ್ಸ್/top-listing/love-mocktail-2-to-veda-best-kannada-movies-released-in2022-3-2036.html#james
3
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ 2022 ಏಪ್ರಿಲ್ 14ರಂದು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಇದು ಕೆಜಿಎಫ್ ಚಾಪ್ಟರ್ 1ನ ಮುಂದುವರೆದ ಭಾಗ. ರಾಕಿ ಭಾಯ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕೆಜಿಎಫ್-2 ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯನ್ ಬಾಕ್ಸ್ ಆಫೀಸ್ ನಡುಗುವಂತೆ ಮಾಡಿತ್ತು. ಬಾಲಿವುಡ್ ಅಲ್ಲೂ ಸಖತ್ ಸೌಂಡ್ ಮಾಡಿತ್ತು.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಕೆಜಿಎಫ್: ಚಾಪ್ಟರ್ 2/top-listing/love-mocktail-2-to-veda-best-kannada-movies-released-in2022-3-2036.html#kgf-chapter-2
4
ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿರುವ ಹರಿಕಥೆ ಅಲ್ಲ, ಗಿರಿಕಥೆ ಚಿತ್ರವನ್ನು ಅನಿರುದ್ಧ ಮಹೇಶ್ ಮತ್ತು ಕರಣ್ ಅನಂತ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಸಂದೇಶ್ ನಾಗರಾಜ್ ರ ಸಂದೇಶ್ ಪ್ರೊಡಕ್ಷನ್ಸ್ ಮತ್ತು ರಿಷಭ್ ಶೆಟ್ಟಿಯವರ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ನಾಯಕಿಯರಾಗಿ ರಚನಾ ಇಂದೆರ್ ಮತ್ತು ತಪಸ್ವಿನಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡದಿದ್ದರೂ ಸಿನಿರಸಿಕರಿಗೆ ಇಷ್ಟವಾಗಿತ್ತು.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಹರಿಕಥೆ ಅಲ್ಲ ಗಿರಿಕಥೆ/top-listing/love-mocktail-2-to-veda-best-kannada-movies-released-in2022-3-2036.html#harikathe-alla-girikathe
5
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಕೂಡ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿಬಂದಿದ್ದ ಈ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಿತ್ತು. ಐದು ಭಾಷೆಗಳಲ್ಲೂ ಜನರು ಈ ಸಿನಿಮಾ ಮೆಚ್ಚಿಕೊಂಡಿದ್ದರು. 777 ಚಾರ್ಲಿ 105 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-777 ಚಾರ್ಲಿ/top-listing/love-mocktail-2-to-veda-best-kannada-movies-released-in2022-3-2036.html#777-charlie
6
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಜಾಕ್ವೆಲಿನ್ ಫೆರ್ನಾಂಡಿಸ್ ಈ ಸಿನಿಮಾದ 'ರಾ ರಾ ರಕ್ಕಮ್ಮ' ಹಾಡಿಗೆ ಹೆಜ್ಜೆ ಹಾಕಿದ್ದರು. ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿತ್ತು. 3D, 2Dಯಲ್ಲಿ ಕೂಡ ಚಿತ್ರ ರಿಲೀಸ್ ಆಗಿತ್ತು. ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ವಿಕ್ರಾಂತ್ ರೋಣ/top-listing/love-mocktail-2-to-veda-best-kannada-movies-released-in2022-3-2036.html#vikrant-rona
7
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ 2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ನಾಯಕರಾಗಿ ನಟಿಸಿದ್ದರು . ಈ ಚಿತ್ರಕ್ಕೆ ನಾಯಕಿಯರಾಗಿ ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ ಮತ್ತು ಸಂಯುಕ್ತಾ ಮೆನನ್ ನಟಿಸಿದ್ದರೆ, ಅರ್ಜುನ ಜನ್ಯ ಸಂಗೀತ ನೀಡಿದ್ದರು. ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ನಟನೆಯ ಗಾಳಿಪಟ ಸಿನಿಮಾ ಹಿಟ್ ಆಗಿದ್ದು, ಸಿನಿರಸಿಕರಿಗೆ ಬಹಳ ಇಷ್ಟವಾಗಿತ್ತು. ಹೀಗಾಗಿ ಗಾಳಿಪಟ 2 ಸಿನಿಮಾದ ಮೇಲೆ ನೀರಿಕ್ಷೆಗಳು ಹೆಚ್ಚಾಗಿದ್ದು, ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಆದರೆ, ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೆಚ್ಚು ಗಳಿಕೆ ಕಂಡಿಲ್ಲ.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಗಾಳಿಪಟ 2/top-listing/love-mocktail-2-to-veda-best-kannada-movies-released-in2022-3-2036.html#gaalipata-2
8
ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ರೋಮ್ಯಾಂಟಿಕ್ ಡ್ರಾಮಾ 'ಲವ್ 360' ಚಿತ್ರದಲ್ಲಿ ಪ್ರವೀಣ್ ಕುಮಾರ್ ಮತ್ತು ರಚನಾ ಇಂದೆರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಾಮ್ (ಪ್ರವೀಣ್) ಮತ್ತು ಜಾನಕಿ (ರಚನಾ ಇಂದೆರ್) ಇಬ್ಬರು ಅನಾಥಾಶ್ರಮದಲ್ಲಿ ಜೊತೆಯಾಗುತ್ತಾರೆ. ಇವರಿಬ್ಬರು ಬಾಲ್ಯದಲ್ಲಿಯೇ ಜೊತೆಯಾಗುವ ಕನಸು ಕಾಣುತ್ತಾರೆ. ಜಾನಕಿಗೆ ನೆನಪಿನ ಕಾಯಿಲೆ ಇರುತ್ತದೆ. ಆದರೆ, ರಾಮ್ ಗೆ ಕಾಯಿಲೆಯನ್ನು ದೂರ ಮಾಡುವ ನಂಬಿಕೆ ಇರುತ್ತದೆ. ನನಗೆ ನೀನು, ನಿನಗೆ ಎಂದುಕೊಂಡಿದ್ದ ಈ ಜೋಡಿಯ ಬಾಳಿನಲ್ಲಿ ಅನೇಕ ತಿರುವುಗಳು ಎದುರಾಗುತ್ತವೆ. ನಿಷ್ಕಲ್ಮಷ ಪ್ರೀತಿಯ ಈ ಕಥೆಯಲ್ಲಿ ನಂತರ ಕ್ರೈಮ್ ಹುಟ್ಟಿಕೊಳ್ಳುತ್ತದೆ. ಇದು ಹೇಗೆ ಎಂಬುದು ಸಿನಿಮಾದ ಕಥೆ. ಈ ಚಿತ್ರ ತೆಲುಗಿಗೆ ರಿಮೇಕ್ ಆಗಿದೆ.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಲವ್ 360/top-listing/love-mocktail-2-to-veda-best-kannada-movies-released-in2022-3-2036.html#love-360
9
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ರಿಲೀಸ್ ಆಗಿ ಕನ್ನಡಿಗರ ಮನಗೆದ್ದಿತ್ತು. ಯಾವುದೇ ನಿರೀಕ್ಷೆ ಇಲ್ಲದೇ ತೆರೆಗಪ್ಪಳಿಸಿದ ಈ ಸಿನಿಮಾ ಬರೋಬ್ಬರಿ 400 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮೊದಲಿಗೆ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಸಿನಿಮಾವನ್ನು ಮುಂದೆ ಬೇರೆ ಭಾಷೆಗಳಿಗೆ ರಿಲೀಸ್ ಮಾಡುವಂತೆ ಬೇಡಿಕೆ ಶುರುವಾಗಿತ್ತು. ನೋಡ ನೋಡುತ್ತಲೇ 4 ಭಾಷೆಗೆ ಡಬ್ ಆಗಿ ಸಿನಿಮಾ ಹಿಟ್ ಆಯಿತು. ಹಿಂದಿ ಬೆಲ್ಟ್‌ನಲ್ಲಿ 70 ಕೋಟಿ ಕಲೆಕ್ಷನ್ ಮಾಡ್ತು. ಕಾಂತಾರ ಚಿತ್ರದಿಂದ ರಿಷಬ್ ಶೆಟ್ಟಿ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಕಾಂತಾರ/top-listing/love-mocktail-2-to-veda-best-kannada-movies-released-in2022-3-2036.html#kantara
10
ಶರಣ್ ನಾಯಕನಾಗಿ ನಟಿಸಿರುವ ಗುರು ಶಿಷ್ಯರು ಚಿತ್ರವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ತರುಣ್ ಸುಧೀರ್ ಕ್ರಿಯೇಟಿವ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದರು. 1995ರಲ್ಲಿ ನಡೆದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಶರಣ್ ಪಿಟಿ ಶಿಕ್ಷಕನ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾ 6.47 ಕೋಟಿ ರೂ. ಗಳಿಕೆ ಮಾಡಿದೆ.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಗುರು ಶಿಷ್ಯರು/top-listing/love-mocktail-2-to-veda-best-kannada-movies-released-in2022-3-2036.html#guru-shishyaru
11
ಹೆಡ್ ಬುಷ್ ಸಿನಿಮಾವನ್ನು ಶೂನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ರಾಮ್ಕೋ ಸೋಮಣ್ಣ ಜೊತೆಗೆ ಧನಂಜಯ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಬೆಂಗಳೂರಿನ ಭೂಗತ ದೊರೆ ಡಾನ್ `ಎಂ.ಪಿ.ಜಯರಾಜ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಚರಣರಾಜ್ ಸಂಗೀತ ನೀಡಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ಡೈನಾಮಿಕ್ ಸ್ಟಾರ್ ದೇವರಾಜ್, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 70-80ರ ದಶಕದ ಬೆಂಗಳೂರು ಭೂಗತಲೋಕದ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವ ಪ್ರಯತ್ನ ಮಾಡಲಾಗಿದೆ. ಅಗ್ನಿ ಶ್ರೀಧರ್ ಬರೆದ 'ಮೈ ಡೇಸ್ ಇನ್ ಅಂಡರ್ವರ್ಲ್ಡ್' ಪುಸ್ತಕ ಆಧರಿಸಿ 'ಹೆಡ್‌ಬುಷ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಹೆಡ್ ಬುಷ್/top-listing/love-mocktail-2-to-veda-best-kannada-movies-released-in2022-3-2036.html#head-bush
12
'ಗಂಧದಗುಡಿ' ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ. ಇದು ಅಪ್ಪು ಅವರ ಕನಸಿನ ಡಾಕ್ಯುಮೆಂಟರಿ. ಈ ಹಿಂದೆ 'ವೈಲ್ಡ್ ಕರ್ನಾಟಕ' ಡಾಕ್ಯುಮೆಂಟರಿ ಮಾಡಿ ಸೈ ಎನಿಸಿಕೊಂಡಿದ್ದ ಅಮೋಘ ವರ್ಷ ವಾರ ಜೊತೆ ಸೇರಿ ಪುನೀತ್ ಕರುನಾಡಿನ 'ಗಂಧದಗುಡಿ' ಜಗತ್ತಿಗೆ ತೋರಿಸಲು ಮುಂದಾಗಿದ್ದರು. ಆದರೆ, ಟೀಸರ್ ರಿಲೀಸ್‌ಗೆ ಹೊಸ್ತಿಲಲ್ಲಿ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಇದು ಕರುನಾಡಿಗೆ ಬಹಳ ದೊಡ್ಡ ಆಘಾತವಾಗಿತ್ತು. ೨೦೨೨ರ ಅಕ್ಟೋಬರ್ 28ರಂದು ಅಪ್ಪು ಅವರ ಕನಸಿನ ಕೂಸಾದ 'ಗಂಧದಗುಡಿ' ಬಿಡುಗಡೆಯಾಗಿತ್ತು. ಗಂಧದ ಗುಡಿಯಲ್ಲಿ ಪುನೀತ್ ರಾಜ್‍ಕುಮಾರ್ ಕನ್ನಡ ನಾಡಿನ ನೈಸರ್ಗಿಕ ಸಂಪತ್ತಿನ ಪರಿಚಯ ಮಾಡಿಸಿದ್ದರು.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ಗಂಧದ ಗುಡಿ/top-listing/love-mocktail-2-to-veda-best-kannada-movies-released-in2022-3-2036.html#gandhada-gudi
13
ಶಿವರಾಜಕುಮಾರ್ 125ನೇ ಚಿತ್ರ `ವೇದ'ವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಶಿವಣ್ಣನಿಗೆ ನಾಲ್ಕನೇ ಬಾರಿ ಆ್ಯಕ್ಸನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ, ಅರುಣ್ ಸಾಗರ್ ಪುತ್ರಿ ಆದಿತಿ ಶಿವಣ್ಣ ಪುತ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಕುರಿ ಪ್ರತಾಪ್, ಜಗ್ಗಪ್ಪ ಮತ್ತು ಉಮಾಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿಸೆಂಬರ್ 23ರಂದು ಬಿಡುಗಡೆಯಾದ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
ಲವ್ ಮಾಕ್ಟೇಲ್ 2 to ವೇದ: 2022ರಲ್ಲಿ ತೆರೆಕಂಡ ಕನ್ನಡದ ಬೆಸ್ಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.-ವೇದ/top-listing/love-mocktail-2-to-veda-best-kannada-movies-released-in2022-3-2036.html#vedha
Disclaimer
The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.