X
ഹോം ടോപ് ലിസ്റ്റിങ്ങ്‌

ನಟನೆಗೆ ಬರುವ ಮುನ್ನ ಈ ಸೀರಿಯಲ್‌ ನಟಿಯರ ಕೆಲಸ ಏನಾಗಿತ್ತು ಗೊತ್ತಾ? ಇಲ್ಲಿದೆ ಲಿಸ್ಟ್.

Author: Sowmya Bairappa | Published: Saturday, July 1, 2023, 12:58 PM [IST]

ಈ ನಟನಾ ಲೋಕದಲ್ಲಿ ಒಂದು ರೀತಿಯ ಸೆಳೆತವಿದೆ. ಹೀಗಾಗಿಯೇ ಅದೆಷ್ಟೋ ಜನರು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಪಟ್ಟಣ ಸೇರುತ್ತಾರೆ. ಇನ್ನೂ ಕೆಲವರು ಒಳ್ಳೆಯ ಕೆಲಸವಿದ್ದರೂ ಅದನ್ನೆಲ್ಲಾ ಬದಿಗೊತ್ತಿ ಕಲಾವಿದರಾಗಲು ಮುಂದಾಗುತ್ತಾರೆ. ಅದೊಂದು ಕಾಲದಲ್ಲಿ ಕಲಾವಿದರ ಸಂಖ್ಯೆ ತೀರಾ ಕಡಿಮೆಯಿತ್ತು. ಹಾಗಾಗಿ ಒಂದು ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟಿಸಿದವರೇ ಮತ್ತೊಂದರಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ನಟನೆಯನ್ನು ವೃತ್ತಿಯನ್ನಾಗಿ ಆರಿಸಿಕೊಳ್ಳುವವರು ಹೆಚ್ಚಾಗ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಹೊಸಬರಿಗೆ ಯಾವಾಗಲೂ ಅವಕಾಶಗಳು ತೆರೆದಿರುತ್ತವೆ. ಪ್ರತಿಯೊಂದು ಹೊಸ ಧಾರಾವಾಹಿ ಶುರುವಾದಾಗಳು ನಾಯಕಿ ಹಾಗೂ ನಾಯಕ ಪಾತ್ರಕ್ಕಾಗಿ ನಿರ್ದೇಶಕರು ಹೊಸ ಮುಖಗಳನ್ನೇ ಹುಡುಕುತ್ತಿರುತ್ತಾರೆ. ಹೊಸ ನಟ-ನಟಿಯರು ಕೂಡ ತಮ್ಮ ಮೊದಲ ನಟನೆಯ ಮೂಲಕವೇ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ತಮಗಿದ್ದ ಕೆಲಸ ಬಿಟ್ಟು ಬಂದ ನಟ-ನಟಿಯರು ಹಾಗೂ ಅಕಸ್ಮಾತ್ ಆಗಿ ಬಂದವರು ನಟನೆಗೆ ಬರುವ ಮುನ್ನ ಏನು ಮಾಡುತ್ತಿದ್ದರು ಎಂಬ ಮಾಹಿತಿ ಇಲ್ಲಿದೆ.

Share:
cover image
ನಿಶಾ ಮಿಲನ

'ಗಟ್ಟಿಮೇಳ' ಧಾರಾವಾಹಿಯ ನಾಯಕಿ ಅಮೂಲ್ಯ ಅಲಿಯಾಸ್ ನಿಶಾ ಮಿಲನ ಬಿ.ಕಾಂ ಓದುತ್ತಿದ್ದಾರೆ. ತಂದೆ ರವಿಕೃಷ್ಣನ್ ಮಂಡ್ಯ ರಮೇಶ್ ತಂಡದಲ್ಲಿ ನಾಟಕಗಳಲ್ಲಿ ಭಾಗವಹಿಸುವುದು ನಿಶಾ ಸಿನಿ ಜರ್ನಿಗೆ ಸ್ಪೂರ್ತಿಯಾಯಿತು. ಇವರು ಕರ್ನಾಟಕ ಮತ್ತು ಭರತನಾಟ್ಯದಲ್ಲಿ ಕೂಡ ಪರಿಣಿತಿ ಪಡೆದಿದ್ದಾರೆ.  ಚಿಂಟು ಟಿವಿಯ ಕಾರ್ಯಕ್ರಮದ ಮೂಲಕ ಸಿನಿಪಯಣ ಆರಂಭಿಸಿದ ನಟಿ ನಿಶಾ ರವಿಕೃಷ್ಣನ್, ನಂತರ ಸರ್ವ ಮಂಗಳ ಮಾಂಗಲ್ಯೇ ಎಂಬ ಧಾರಾವಾಹಿಯಲ್ಲಿ ತಂಗಿಯ ಪಾತ್ರ ನಿರ್ವಹಿಸಿದರು. ಬಳಿಕ ಗಟ್ಟಿಮೇಳ ಸೀರಿಯಲ್ ನಾಯಕಿಯಾದ ಇವರು, ಬಜಾರಿ ಅಮೂಲ್ಯ ಪಾತ್ರದ ಮೂಲಕ ಮನೆಮಾತಾದರು. ತಮ್ಮ ಅಭಿನಯಕ್ಕಾಗಿ ಜೀ ಕನ್ನಡದ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿರುವ ಇವರು, ತೆಲಗು ಸೀರಿಯಲ್‌ನಲ್ಲೂ ನಟಿಸುತ್ತಿದ್ದಾರೆ. ಬಿ.ಕಾಂ ಓದಿಕೊಂಡೆ ನಿಶಾ ನಟನೆಯನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. 

 


ಸಂಜನಾ ಬುರ್ಲಿ

ಸಂಜನಾ ಬುರ್ಲಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಈ ಧಾರಾವಾಹಿಯಲ್ಲಿ ಘಾಟಿ ಸ್ನೇಹ ಪಾತ್ರದ ಮೂಲಕ ಖ್ಯಾತಿ ಪಡೆದಿರುವ ಇವರು,  ಎಂಜಿನಿಯರಿಂಗ್ ಓದುತ್ತಿದ್ದಾರೆ. ಸಂಜನಾ ಅವರು ಪತ್ತೆದಾರಿ ಪ್ರತಿಭಾ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಬಳಿಕ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆದರೆ, ಇದು ಅರ್ಧಕ್ಕೆ ನಿಂತು ಹೋಗಿದ್ದಕ್ಕೆ ಬೇಸರಗೊಂಡಿದ್ದರು. ಬಳಿಕ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ಹೆಚ್ಚ್ಉ ಜನಪ್ರಿಯತೆ ಪಡೆದರು. ಇವರು ಸ್ನೇಹರ್ಷಿ ಸಿನಿಮಾ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದು, ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್, ವೀಕೆಂಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

 

കൂടുതല്‍ കാണാം

ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಖ್ಯಾತಿ ಪಡೆದ ನಟಿ 'ಮೇಘಾ ಶೆಟ್ಟಿ' ಅವರು ಸೀರಿಯಲ್‌ನಲ್ಲಿ ನಟಿಸುವ ಮೊದಲು ಓದುತ್ತಿದ್ದರು. ಓದುವಾಗಲೇ ನಟಿಸುವ ಅವಕಾಶ ಸಿಕ್ಕಿತ್ತು. ಈಗ ತಮ್ಮ ಓದನ್ನು ಮುಗಿಸಿ ಸಂಪೂರ್ಣವಾಗಿ ನಟನೆಯನ್ನೇ ವೃತ್ತಿಯಾಗಿ ಆರಿಸಿಕೊಂಡಿದ್ದಾರೆ. ಸದ್ಯ ಜೊತೆ ಜೊತೆಯಲಿ ಧಾರಾವಾಹಿ ಅಂತ್ಯವಾಗಿದ್ದು,  ಮೇಘಾ ಶೆಟ್ಟಿ ಸಿನಿಮಗಳ ಮೇಲೆ ಹೆಚ್ಚು ಗಮನ ನೀಡುತ್ತಿದ್ದಾರೆ. 

കൂടുതല്‍ കാണാം


ಕೌಸ್ತುಭ ಮಣಿ

ನಟಿ ಕೌಸ್ತುಭ ಮಣಿ 'ನನ್ನರಸಿ' ಧಾರಾವಾಹಿಯಲ್ಲಿ ನಟಿಸುವ ಮೊದಲು ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದರು. ನಟಿ ಕೌಸ್ತುಭ ಸದ್ಯ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ನಿರ್ದೇಶನದ ೪೫ ಸಿನಿಮಾದಲ್ಲಿ  ಕೌಸ್ತುಭ ಮಣಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಿಯಲ್  ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. 

 

കൂടുതല്‍ കാണാം

ಮೋಕ್ಷಿತಾ ಪೈ

ಮಂಗಳೂರು ಬೆಡಗಿ ಮೋಕ್ಷಿತಾ ಪೈ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಸೀರಿಯಲ್ ಮೂಲಕ ಪ್ರಸಿದ್ಧರಾಗಿದ್ದಾರೆ. ಮೋಕ್ಷಿತಾ ಪೈ ಶೇಶಾದ್ರಿಪುರಂನಲ್ಲಿ ನೆಲೆಸಿದ್ದು, ಬಿ.ಕಾಂ ಓದಿಕೊಂಡಿದ್ದಾರೆ. ನಟನೆಗೆ ಬರುವ ಮುನ್ನ ಮೋಕ್ಷಿತಾ ಅವರು ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಮಕ್ಕಳಿಗೆ ಟ್ಯೂಷನ್ ಹೇಳಿ ಕೊಡುತ್ತಿದ್ದ ಮೋಕ್ಷಿತಾ ಈ ಸೀರಿಯಲ್‌ ಆಯ್ಕೆಯಾಗಿದ್ದು ಫೇಸ್‌ಬುಕ್ ಮೂಲಕ. 

കൂടുതല്‍ കാണാം


ಮೌನ ಗುಡ್ಡೇಮನೆ

ಮೂಲತಃ ಕರಾವಳಿಯವರಾದ ನಟಿ ಮೌನ ಗುಡ್ಡೇಮನೆ ಕಲರ್ಸ್ ಕನ್ಬಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಮೊದಲನೆ ವರ್ಷದ ಡಿಗ್ರಿಯಲ್ಲಿ ಇವರಿಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹೀಗಾಗಿ ಓದು ಮತ್ತು ನಟನೆ ಎರಡನ್ನೂ ಇವರು ಬ್ಯಾಲೆನ್ಸ್ ಮಾಡುತ್ತಿದ್ದಾರೆ. 

 

ಮಲೈಕಾ ಟಿ ವಸುಪಾಲ್

ಮಲೈಕಾ ವಸುಪಾಲ್ ಜೀ ಕನ್ನಡದ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ಇವರು ಎಡವಟ್ಟು ರಾಣಿ ಲೀಲಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ದಾವಣಗೆರೆ ಮೂಲದ ಚೆಲುವೆಗೆ ಬಾಲ್ಯದಿಂದಲೂ ನಟನೆ ಅಂದರೆ ಪ್ರಾಣ. ತಂದೆ-ತಾಯಿ ಒತ್ತಾಯಕ್ಕೆ ಇಂಜಿನಿಯರಿಂಗ್ ಪದವಿ ಪಡೆದ ಇವರು, ಪ್ರಸ್ತುತ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. 

കൂടുതല്‍ കാണാം


ಭೂಮಿಕಾ ರಮೇಶ್

ನಟಿ ಭೂಮಿಕಾ ರಮೇಶ್ ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮೀ' ಸೀರಿಯಲ್‌ನಲ್ಲಿ ಲಕ್ಷ್ಮೀ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದಾರೆ. ಈ ನಟಿಗೆ ಕೇವಲ 20 ವರ್ಷ. ಬಿಸಿಎ ಓದುತ್ತಿರುವ ಈ ನಟಿ, ಧಾರಾವಾಹಿಯಲ್ಲಿ ವಯಸ್ಸಿಗೂ ಮೀರಿದ ಪಾತ್ರ ಮಾಡುವ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಭೂಮಿಕ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಇವರು 'ಸೈ ಅಂಟೆ ಸೈ'  ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ 'ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್' ವೇದಿಕೆಯಲ್ಲೂ ಹೆಜ್ಜೆ ಹಾಕಿದ್ದರು. ಭೂಮಿಕಾ 'ದೊರೆಸಾನಿ' ಸೀರಿಯಲ್‌ಗೆ ಆಡಿಷನ್ ಕೊಟ್ಟಿದ್ದರು. ಆದ್ರೆ ಚಿಕ್ಕ ವಯಸ್ಸು ಎಂಬ ಕಾರಣಕ್ಕೆ ರಿಜೆಕ್ಟ್ ಆಗಿದ್ದರು.  

 

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+