ನಟ ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್‌ನಲಲ್ಲಿ ಮೂಡಿಬಂದ 'ಅಧ್ಯಕ್ಷ' ಸಿನಿಮಾದಲ್ಲಿ
ನಗುವಿಗೆ ಬರಲ್ಲ. ಈ ಚಿತ್ರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೂಲಕ ಹಾಸ್ಯದ ಕಚಗುಳಿ
ಇಡುತ್ತದೆ. ರವಿಶಂಕರ್ ಮತ್ತು ಶರಣ್ ನಡುವೆ ನಡಯುವ ಮುಸುಕು ಯುದ್ಧ ಚಿತ್ರದ ಜೀವಾಳ.
ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಕಾಮಿಡಿ ಜೊತೆಗೆ ರವಿಶಂಕರ್, ಚಿಕ್ಕಣ್ಣ ಅವರ ಕಾಮಿಡಿಗೆ
ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಾರೆ. ಒಟ್ಟಾರೆಯಾಗಿ ಇಂದೊಂದು ಅಪ್ಪಟ
ಮನೋರಂಜನಾತ್ಮಕ ಸಿನಿಮಾವಾಗಿದ್ದು, ಎಷ್ಟು ಬಾರಿ ನೋಡಿದ್ರು ನಿಮಗೆ ಬೇಸರವಾಗುವುದಿಲ್ಲ.
കൂടുതല് കാണാം
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ಅಧ್ಯಕ್ಷ
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ಅಧ್ಯಕ್ಷ
ರಮೇಶ್ ಅರವಿಂದ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ 'ರಾಮ ಶಾಮ ಭಾಮ' ಚಿತ್ರದಲ್ಲೂ ನಗುವಿಗೆ ಬರವಿಲ್ಲ. ಈ ಚಿತ್ರದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಟಿ ಶ್ರುತಿ ಕಮಲ್‌ಗೆ ಜೋಡಿಯಾಗಿ ನಟಿಸಿದ್ದರು. ಸಖತ್ ಹಾಸ್ಯಮಯವಾಗಿದ್ದ ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ತಮಿಳಿನ ಸತಿ ಲೀಲಾವತಿ ಚಿತ್ರದ ರೀಮೇಕ್. ಗುರುಕಿರಣ್ ಸಂಗೀತವಿರುವ ಚಿತ್ರದ ಪಾತ್ರವರ್ಗದಲ್ಲಿ ಶ್ರುತಿ, ರಮೇಶ್ ಅರವಿಂದ್, ಡೈಸಿ ಬೋಪಣ್ಣ, ಊರ್ವಶಿ, ಅನಿರುದ್ಧ್ ಅಭಿನಯಿಸಿದ್ದರು.
കൂടുതല് കാണാം
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ರಾಮ ಶಾಮ ಭಾಮ
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ರಾಮ-ಶಾಮ-ಭಾಮ
ಭಾರ್ಗವ ನಿರ್ದೇಶನದ ಗುರುಶಿಷ್ಯರು ಚಿತ್ರದಲ್ಲಿ ಕನ್ನಡದ ಅತ್ಯದ್ಭುತ ಹಾಸ್ಯ ಚಿತ್ರವಾಗಿ ಗುರುತಿಸಿಕೊಂಡಿದೆ. ಚಿತ್ರದಲ್ಲಿ ವಿಷ್ಣುವರ್ಧನ್, ಮಂಜುಳಾ, ಜಯಮಾಲಿನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರವನ್ನು ದ್ವಾರಕೀಶ್ ನಿರ್ಮಿಸಿ, ನಟಿಸಿದ್ದರು. ಉದಯ ಶಂಕರ್ ಚಿತ್ರದ ಸಂಭಾಷಣೆ ಜೊತೆ ಗೀತೆಗಳನ್ನು ಬರೆದಿದ್ದರು.ಗುರುಶಿಷ್ಯರು ಚಿತ್ರದ ಹಾಡುಗಳು, ಪ್ರಮುಖವಾಗಿ ದೊಡ್ಡವರೆಲ್ಲಾ ಜಾಣರಲ್ಲ ಎಂಬ ಹಾಡು ತುಂಬಾ ಪ್ರಸಿದ್ಧಿಯಾಗಿತ್ತು. ಚಿತ್ರದಲ್ಲಿ ವಿಷ್ಣುವರ್ಧನ್ ಒಂದು ಆಸ್ಥಾನದ ರಾಜನಾಗಿ ಮತ್ತು ಪರಮ ಶಿವಭಕ್ತನಾಗಿ ನಟಿಸಿದ್ದರು. ಒಬ್ಬ ಪ್ರಕಾಂಡ ಗುರು ಮತ್ತು ಬ್ರಹ್ಮಜ್ಞಾನಿಗಳಾದ ಅವನ 12 ಜನ ಶಿಷ್ಯರು ಶಪಿತರಾಗಿ ಭೂಲೋಕದಲ್ಲಿ ಮತಿಹೀನರಾಗಿ ಜನಿಸುತ್ತಾರೆ. ಈ ಶಾಪನಿಮಿತ್ತ ಭೂಲೋಕಕ್ಕೆ ಬಂದ ಇವರು ಮಾಡುವ ಅವಾಂತರಗಳು ಮತ್ತು ಕೊನೆಗೆ ಶಾಪ ನಿವಾರಣೆಯನ್ನು ಚಿತ್ರ ಚಿತ್ರಿಸುತ್ತದೆ.
കൂടുതല് കാണാം
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ಗುರು ಶಿಷ್ಯರು 1981
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ಗುರು-ಶಿಷ್ಯರು-1981
ಮಂಜು ಸ್ವರಾಜ್ ನಿರ್ದೇಶನದ 'ಶ್ರಾವಣಿ ಸುಬ್ರಮಣ್ಯ' ಸಿನಿಮಾದಲ್ಲಿ ಚೆಲುವಿನ ಚಿತ್ತಾರದಲ್ಲಿ ಪ್ರೇಕ್ಷಕರನ್ನು ಅಳಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಕಾಮಿಡಿ ಕಚಗುಳಿ ಇಟ್ಟಿದ್ದರು. ಇಂದೊಂದು ಹ್ಯುಮರಸ್ ಲವ್ ಸ್ಟೋರಿ. ಸಿನಿಮಾದಲ್ಲಿ ಗಣೇಶ್ ಸುಬ್ರಮಣ್ಯನಾಗಿ ಹಾಗೂ ನಟಿ ಅಮೂಲ್ಯ ಶ್ರಾವಣಿಯಾಗಿ ನಟಿಸಿದ್ದು, ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ಶ್ರಾವಣಿ ಸುಬ್ರಮಣ್
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ಶ್ರಾವಣಿ-ಸುಬ್ರಮಣ್
1991ರಲ್ಲಿ ರಿಲೀಸ್ ಆಗಿದ್ದ ಫಣಿ ರಾಮಚಂದ್ರ ನಿರ್ದೇಶನ ಮಾಡಿದ್ದ 'ಗೌರಿ ಗಣೇಶ' ಸಿನಿಮಾ ಇಂದಿಗೂ ಹಲವರ ಫೇವರಿಟ್. ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ಅನಂತ್ ನಾಗ್ ಲಂಭೋದರನಾಗಿ ಸಿಕ್ಕಾಪಟ್ಟೆ ಮಜಾ ನೀಡುತ್ತಾರೆ. ಚಿತ್ರದಲ್ಲಿ ವಿನಯ್ ಪ್ರಸಾದ್, ಶ್ರುತಿ, ಮುಖ್ಯಮಂತ್ರಿ ಚಂದ್ರು, ರಮೇಶ್ ಭಟ್ ಸೇರಿದಂತೆ ಹಲವರು ನಟಿಸಿದ್ದರು. ಕನ್ನಡದ ಅತ್ತ್ಯುತ್ತಮ ಹಾಸ್ಯ ಚಿತ್ರಗಳಲ್ಲೊಂದು ಎಂದು ಗುರುತಿಸಿಕೊಂಡಿರುವ ಈ ಚಿತ್ರದ ನಟನೆಗಾಗಿ ಅನಂತನಾಗ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.
കൂടുതല് കാണാം
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ಗೌರಿ ಗಣೇಶ್
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ಗೌರಿ-ಗಣೇಶ್
ಜೈಲಲಿತಾ ಸಿನಿಮಾದಲ್ಲಿ ನಟ ಶರಣ್ ಮಹಿಳೆಯ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಮಲಯಾಳಂನ 'ಮಾಯಾ ಮೋಹಿನಿ' ಎಂಬ ಹಿಟ್ ಸಿನಿಮಾ ಸ್ಪೂರ್ತಿಯಿಂದ ಈ ಸಿನಿಮಾ ಮಾಡಲಾಗಿತ್ತು. ಕಾಮಿಡಿ ಜೊತೆಗೆ ಮಾನವ ಸಂಬಂಧಗಳ ಮಹತ್ವ ಸಾರುವ ಈ ಸಿನಿಮಾವನ್ನು ಪಿ ಕುಮಾರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಹರೀಶ್ ರಾಜ್, ರವಿಶಂಕರ್, ಟಿ.ಎಸ್. ನಾಗಾಭರಣ, ದಿಶಾ ಪಾಂಡೆ, ಐಶ್ವರ್ಯ ದೇವನ್ ಸೇರಿದಂತೆ ಹಲವರ ತಾರಾಬಳಗವೇ ಸಿನಿಮಾದಲ್ಲಿತ್ತು.
കൂടുതല് കാണാം
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ಜೈ ಲಲಿತ
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ಜೈ-ಲಲಿತ
ನವರಸ ನಾಯಕ ಜಗ್ಗೇಶ್ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದ 'ಮಠ' ಸಿನಿಮಾದಲ್ಲಿ ಮಠ-ಮಾನ್ಯಗಳಲ್ಲಿ ನಡೆಯುವ ಬೆಳವಣಿಗೆಗಳನ್ನು ಹಾಸ್ಯದ ಕನ್ನಡಿ ಮೂಲಕ ತೋರಿಸಲಾಗಿತ್ತು. ಚಿತ್ರದಲ್ಲಿ ಮುಖ್ಯ ಕಥೆಯ ಜೊತೆಗೆ ಹಲವು ಉಪಕಥೆಗಳು ಬರುತ್ತವೆ. ಮನುಷ್ಯನಲ್ಲಿರುವ ಅವಗುಣಗಳನ್ನು ದಾಟುವ ಬಗೆಯನ್ನು ಒಂದು ಆಲಸಿ ಯುವಕ ತಂಡದ ಮೂಲಕ ತೋರಿಸಿಕೊಟ್ಟಿತು. ಇದೊಂದು ಸೂಕ್ಷ್ಮ ಕಥೆಯುಳ್ಳ ಚಿತ್ರವಾಗಿದ್ದು, ಗುರುಪ್ರಸಾದ್ ಆಕ್ಷನ್ ಕಟ್ ಹೇಳಿದ್ದರು.
കൂടുതല് കാണാം
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ಮಠ
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ಮಠ
ಎಂ.ಎಸ್.ರಾಜಶೇಖರ್ ನಿರ್ದೇಶನದಲ್ಲಿ ಮೂಡಿಬಂದ 'ಡಕೋಟ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ಓಂ ಪ್ರಕಾಶ್ ರಾವ್ ಹಾಗೂ ರಾಕ್‌ಲೈನ್ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಬಸ್ ಚಾಲಕ ಕೃಷ್ಣ ಮತ್ತು ಅವನ ಸ್ನೇಹಿತ ಸುಂದರ ಒಂದು ಹಳೆಯ ಬಸ್ ನಡೆಸುತ್ತಿರುತ್ತಾರೆ. ಈ ಗುಂಪಿಗೆ ಅನಾಥೆಯೆಂದು ಹೇಳಿಕೊಂಡ ಒಬ್ಬ ಮಿನಿಸ್ಟರ್ ಮಗಳು ಬರುತ್ತಾಳೆ. ಈ ಮೂವರ ಹಾಸ್ಯ ಸನ್ನಿವೇಶಗಳು ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿವೆ.
കൂടുതല് കാണാം
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ಡಕೋಟ ಎಕ್ಸ್‌ಪ್ರೆಸ್
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ಡಕೋಟ-ಎಕ್ಸ್‌ಪ್ರೆಸ್
ಕುರಿಗಳು ಸಾರ್ ಕುರಿಗಳು ಸಿನಿಮಾ ಜೈಲಿನಿಂದ ಆಚೆ ಬಂದು ಸಮಾಜದಲ್ಲಿ ಒಳ್ಳೆಯವರಾಗಿ ಬದುಕುವ ಮೂರು ವ್ಯಕ್ತಿಗಳ ಪಯಣವನ್ನು ಹಾಸ್ಯವಾಗಿ ಚಿತ್ರಿಸಿತ್ತು. ನಿಸಾರ್ ಅಹ್ಮದ್ ಅವರ ಕವಿತೆಯ ಹೆಸರನ್ನು ಹೊಂದಿದ್ದ ಈ ಸಿನಿಮಾ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ಪಡೆದಿತ್ತು.
കൂടുതല് കാണാം
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ಕುರಿಗಳು ಸಾರ್ ಕುರಿಗಳು
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ಕುರಿಗಳು-ಸಾರ್-ಕುರಿಗಳು
ಸಾದ್ ಖಾನ್ ನಿರ್ದೆಶನದಲ್ಲಿ ಮೂಡಿಬಂದ ಹಂಬಲ್ ಪೊಲಿಟಿಷಿಯನ್ ನೋಗ್ ರಾಜ್ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದರು. ಡ್ಯಾನಿಶ್ ಸೇಠ್, ರೋಜರ್ ನಾರಾಯಣ್, ವಿಜಯ ಚೆಂಡೂರು ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಚಿತ್ರ ತನ್ನ ಭಿನ್ನ ಹಾಸ್ಯ ಧಾರೆಯಿಂದ ಗಮನ ಸೆಳೆಯಿತು. ನೊಗ್ ರಾಜ್ ಎಂಬ ಕ್ರೇಜಿ ರಾಜಕಾರಣಿ ಮತ್ತು ಆತ ಶಾಸಕನಾಗಲು ಮಾಡುವ ಕ್ರೇಜಿ ಕೆಲಸಗಳನ್ನು ಚಿತ್ರ ಹಾಸ್ಯವಾಗಿ ತೋರಿಸಿತು. ಜೊತೆಗೆ ರೆಸಾರ್ಟ್ ರಾಜಕಾರಣ ಮತ್ತು ಭ್ರಷ್ಟಚಾರದ ಬಗ್ಗೆಯೂ ತೋರಿಸಲಾಗಿತ್ತು.
കൂടുതല് കാണാം
ಗುರು ಶಿಷ್ಯರು ಟು ಅಧ್ಯಕ್ಷ: ನಕ್ಕು ಹಗುರಾಗಬೇಕು ಅಂದ್ರೆ ಕನ್ನಡ ಈ 10 ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!-ಹಂಬಲ್ ಪೊಲಿಟಿಷಿನ್ ನೊಗ್ ರಾಜ್
/top-listing/from-guru-shishyaru-to-adyaksha-here-is-the-list-10-best-kannada-comedy-movies-3-4177.html#ಹಂಬಲ್-ಪೊಲಿಟಿಷಿನ್-ನೊಗ್-ರಾಜ್
LOADING......