X
ഹോം ടോപ് ലിസ്റ്റിങ്ങ്‌

ತಮ್ಮದೇ ಫ್ಯಾಷನ್ ಬ್ರ್ಯಾಂಡ್ & ಸಲೂನ್ ನಡೆಸುತ್ತಿರುವ ಕನ್ನಡದ 8 ನಟ-ನಟಿಯರಿವರು!

Author: Sowmya Bairappa | Updated: Friday, April 18, 2025, 10:27 AM [IST]

ತಮ್ಮ ಅದ್ಭುತ ನಟನೆ ಮೂಲಕ ಜನರ ಮನಸ್ಸು ಗೆದ್ದಿರುವ ಕನ್ನಡ ಕಿರುತೆರೆ ಅನೇಕ ನಟ-ನಟಿಯರು ನಟನೆ ಮಾತ್ರವಲ್ಲದೆ, ಉದ್ಯಮಿಗಳಾಗಿಯೂ ಸಕ್ಸಸ್ ಕಂಡಿದ್ದಾರೆ. ನಟನೆ ಜೊತೆಗೆ ಬ್ಯುಸಿನೆಸ್ ನಡೆಸುತ್ತಾ, ಅದರಲ್ಲೂ ಸಂಪಾದನೆ ಮಾಡುತ್ತಿದ್ದಾರೆ. ಇಲ್ಲಿ ತಮ್ಮದೇ ಫ್ಯಾಷನ್ ಬ್ರ್ಯಾಂಡ್ ಹಾಗೂ ಸಲೂನ್‌ಗಳನ್ನು ಹೊಂದಿರುವ ಕನ್ನಡ ಕಿರುತೆರೆ ಕಲಾವಿದರ ಪಟ್ಟಿಯನ್ನು ನೀಡಲಾಗಿದೆ.

Share:
cover image
ದಿವ್ಯಾ ಉರುಡುಗ
1

ಸದ್ಯ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಿನಗಾಗಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ದಿವ್ಯಾ ಉರುಡುಗ, ಕಳೆದ ವರ್ಷ ಹೊಸದಂದು ಉದ್ಯಮ ಆರಂಭಿಸಿದ್ದರು. ಕಲೆ ಬಗ್ಗೆ ವಿಶೇಷ ಆಸಕ್ತಿಯಿದ್ದ ಇವರು, ಬೆಂಗಳೂರಿನಲ್ಲಿ ತಮ್ಮದೇ ಒಂದು ನೇಲ್ ಆರ್ಟ್ ಹಾಗೂ ಲಾಶ್ ಸ್ಟುಡಿಯೋವನ್ನು ಹೊಂದಿದ್ದಾರೆ.

കൂടുതല്‍ കാണാം


ಮಯೂರಿ ಕ್ಯಾತರಿ
2

ಅಶ್ವಿನಿ ನಕ್ಷತ್ರ ಸೀರಿಯಲ್ ಖ್ಯಾತಿ ನಟಿ ಮಯೂರಿ ಕ್ಯಾತರಿ, ಕಾಸ್ಮೆಟಿಕ್, ಸ್ಕಿನ್ ಹಾಗೂ ಹೇರ್‌ಗೆ ಸಂಬಂಧಪಟ್ಟ ಕ್ಲಿನಿಕ್ ನಡೆಸುತ್ತಿದ್ದಾರೆ. ಇವರು ಸೀರಿಯಲ್ ಮಾತ್ರವಲ್ಲದೇ, ಇಷ್ಟಕಾಮ್ಯ, ಕೃಷ್ಣಲೀಲಾ, ನಟರಾಜ ಸರ್ವೀಸ್, ನನ್ನ ಪ್ರಕಾರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಸದ್ಯ ನಟನೆ ಹಾಗೂ ಉದ್ಯಮ ಎರಡನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

കൂടുതല്‍ കാണാം

ಸಾನ್ಯ ಅಯ್ಯರ್
3

ಪುಟ್ಟಗೌರಿ ಮದುವೆ ಸೀರಿಯಲ್‌ನಲ್ಲಿ ಬಾಲಕಲಾವಿದೆ ಪ್ರೇಕ್ಷಕರ ಮನಗೆದ್ದಿದ್ದ ಸಾನ್ಯಾ ಅಯ್ಯರ್, ಇದೀಗ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಇವರು  'ರೂಪಾ ಅಯ್ಯರ್ಸ್ - ರಾಯಲ್ ಕೋರ್ಟ್ (ಸೆಲಬ್ರಿಟಿ ಸಲೋನ್ & ಸ್ಪಾ)'ದ ಕೋ ಓನರ್ (ಸಹ ಮಾಲೀಕ) ಆಗಿದ್ದಾರೆ. ಇದೊಂದು ಐಷಾರಾಮಿ ಸಲೂನ್ ಆಗಿದ್ದು, ಉತ್ತಮ ಯಶಸ್ಸು ಗಳಿಸುತ್ತಿದೆ.

കൂടുതല്‍ കാണാം


ತನಿಷಾ ಕುಪ್ಪಂಡ
4

ಬಿಗ್‌ಬಾಸ್ ಕನ್ನಡ ಸೀಸನ್ 10ರ ಖ್ಯಾತಿಯ ತನಿಷಾ ಕುಪ್ಪಂಡ ಅವರಿಗೆ ಮೊದಲಿನಿಂದಲೂ ಬ್ಯುಸಿನೆಸ್ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿಯಿತ್ತು. ಅದರಂತೆ ರೆಸ್ಟೊರೆಂಟ್ ಒಂದನ್ನು ನಡೆಸುತ್ತಿದ್ದಾರೆ. ತನಿಶಾ ತಮ್ಮ ರೆಸ್ಟೊರೆಂಟ್‌ಗೆ 'ಅಪ್ಪುಸ್ ಕಿಚನ್' ಅಂತ ಹೆಸರಿಟ್ಟಿದ್ದಾರೆ. ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಬೆಂಗಳೂರಿನ ವಿಜಯನಗರದಲ್ಲಿ 'ಕುಪ್ಪಂಡಾಸ್' ಸಿಲ್ವರ್ ಜ್ಯುವೆಲ್ಲರಿ ಮಳಿಗೆ ತೆರೆದಿದ್ದಾರೆ. ಇದರ ಜೊತೆಗೆ ನಟನೆಯಲ್ಲೂ ಬ್ಯುಸಿಯಾಗಿದ್ದಾರೆ.

കൂടുതല്‍ കാണാം

ದೀಪಿಕಾ ದಾಸ್
5

ನಾಗಿಣಿ 2 ಸೀರಿಯಲ್ ಖ್ಯಾತಿಯ ದೀಪಿಕಾ ದಾಸ್ ಇತ್ತೀಚೆಗಷ್ಟೇ  #ಪಾರು ಪಾರ್ವತಿ ಸಿನಿಮಾದಲ್ಲಿ ಮಿಂಚಿದ್ದರು. ಇವರು ಕೂಡ ನಟನೆ ಜೊತೆಗೆ 'ddas Fashion' ಎಂಬ ಬಟ್ಟೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ಈ ಬ್ರ್ಯಾಂಡ್‌ನ ಬಟ್ಟೆಗಳನ್ನು ಖರೀದಿಸಬಹುದಾಗಿದೆ.

കൂടുതല്‍ കാണാം


ನೀತು ವನಜಾಕ್ಷಿ
6

ಬಿಗ್‌ಬಾಸ್‌ ಸೀಸನ್‌ 10ರಲ್ಲಿ ಭಾಗವಹಿಸಿದ್ದ ಮಿಸ್ ಟ್ರಾನ್ಸ್ ಕ್ವೀನ್ ನೀತು ವನಜಾಕ್ಷಿ, ಟ್ಯಾಟೂ ಸ್ಟುಡಿಯೋ ಹಾಗೂ ಬ್ಯೂಟಿಪಾರ್ಲರ್ ಹೊಂದಿದ್ದಾರೆ. ಭಾರತದ ಮೊದಲ  ಟ್ರಾನ್ಸ್‌ಜೆಂಡರ್ ಟ್ಯಾಟೂ ಆರ್ಟಿಸ್ಟ್ ಇವರು. ಜೊತೆಗೆ ನೀತು ಉತ್ತರ ಕರ್ನಾಟಕ ಮೂಲದವರಾಗಿದ್ದರಿಂದ ಅಲ್ಲಿನ ಸೊಗಡನ್ನು ಇಟ್ಟುಕೊಂಡು 'ಗಮ ಗಮ' ಎಂಬ ಹೋಟೆಲ್ ಕೂಡ ನಡೆಸುತ್ತಿದ್ದಾರೆ.

കൂടുതല്‍ കാണാം

ಕಿರಣ್ ರಾಜ್
7

ಕನ್ನಡತಿ ಮೂಲಕ ಕನ್ನಡ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ಹ್ಯಾಂಡ್‌ಸಮ್ ಹೀರೋ ಕಿರಣ್ ರಾಜ್, ಸದ್ಯ ಜೀ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಕರ್ಣ' ಸೀರಿಯಲ್‌ನಲ್ಲಿ ಹೀರೋ ಆಗಿ ಮಿಂಚಲು ರೆಡಿಯಾಗಿದ್ದಾರೆ. ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಮಿಂಚುತ್ತಿರುವ ಇವರು, KINGS RAMPAGE ಎಂಬ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಇದರ ಜೊತೆಗೆ ಪರ್ಫ್ಯೂಮ್ ಉದ್ಯಮದಲ್ಲೂ ಸಕ್ರಿಯವಾಗಿರುವ ಕಿರಣ್ ರಾಜ್, ಬಿರಿಯಾನಿ ರೆಸ್ಟೋರೆಂಟ್ ಕೂಡ ಹೊಂದಿದ್ದಾರೆ.

കൂടുതല്‍ കാണാം


ಶ್ವೇತಾ ಚೆಂಗಪ್ಪ
8

ಸದ್ಯ ನಿರೂಪಣೆಯಲ್ಲಿ ಸಕ್ರಿಯವಾಗಿರುವ ನಟಿ ಶ್ವೇತಾ ಚೆಂಗಪ್ಪ ಯಶಸ್ವಿ ಉದ್ಯಮಿ ಕೂಡ ಹೌದು. ಇವರು ತಾರಾ ಡಿಸೈನರ್ ಕ್ಲೋತಿಂಗ್ ಬ್ರ್ಯಾಂಡ್ ಎನ್ನುವ ಸಂಸ್ಥೆಯ ಒಡತಿಯಾಗಿದ್ದಾರೆ. ಡಿಸೈನರ್ ಬಟ್ಟೆಗಳನ್ನು ತಯಾರಿಸುವ ಇವರ ಬ್ರಾಂಡ್ ಸಿಕ್ಕಾಪಟ್ಟೆ ಫೇಮಸ್. ಜೊತೆಗೆ ಇವರು ಸೃಜನ್ ಲೋಕೇಶ್ ಪತ್ನಿ ಗ್ರೀಷ್ಮಾ ಜೊತೆಗೂಡಿ ಸಲೂನ್ ಕೂಡ ನಡೆಸುತ್ತಿದ್ದಾರೆ.



കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+