X
ഹോം ടോപ് ലിസ്റ്റിങ്ങ്‌

ಕನ್ನಡದ ಕಣ್ಮಣಿ ಪುನೀತ್ ರಾಜ್‌ಕುಮಾರ್ ಬಳಿಯಿದ್ದ ದುಬಾರಿ ಕಾರುಗಳ ಪಟ್ಟಿ ಇಲ್ಲಿದೆ.

Author: Sowmya Bairappa | Updated: Monday, March 17, 2025, 10:05 AM [IST]

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೋಟ್ಯಂತರ ಜನರ ಆರಾಧ್ಯ ದೈವ. ಅವರು ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು. ಪುನೀತ್ ದೈಹಿಕವಾಗಿ ನಮ್ಮೊಂದಿಗಿಲ್ಲವಾದರೂ ಅವರ ನೆನಪು ಮರೆಯಾಗಿಲ್ಲ. ಅಪ್ಪು ಕಾರು ಮತ್ತು ಬೈಕ್‌ಗಳ ಬಗ್ಗೆಯೂ ಆಸಕ್ತಿ ಹೊಂದಿದ್ದರು. ಇಲ್ಲಿ ಪುನೀತ್ ರಾಜ್‌ಕುಮಾರ್ ಬಳಿಯಿದ್ದ ದುಬಾರಿ ಕಾರುಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ಆಡಿ ಕ್ಯೂ7
1

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಆಡಿ ಕ್ಯೂ7 ಲಕ್ಸುರೀಯಸ್ ಎಸ್‌ಯುವಿ ಕಾರನ್ನು ಹೊಂದಿದ್ದರು. ಆಡಿ ವಾಹನ ತಯಾರಕ ಸಂಸ್ಥೆಯು ಭಾರತಕ್ಕೆ ನೀಡಿದ ಕಾರುಗಳಲ್ಲೇ ಈ ಕಾರು ದೊಡ್ಡ ಗಾತ್ರದ ಎಸ್‌ಯುವಿಯಾಗಿದೆ. 69 ಲಕ್ಷ ರಪಾಯಿಂದ ೮೧ ಲಕ್ಷ ರೂಪಾಯಿಗಳ ಎಕ್ಸ್ ಶೋರೂಂ ಬೆಲೆ ಪಡೆದುಕೊಂಡಿರುವ ಆಡಿ ಕ್ಯೂ7 ಕಾರು, 248 ಬಿಹೆಚ್‌ಪಿ ಶಕ್ತಿಯನ್ನು ಹಾಗೂ 370 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ 2.0 ಲೀಟರ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಈ ಕಾರನ್ನು ಬಾಲಿವುಡ್ ಖ್ಯಾತ ನಟರಾದ ಆಸಿಫ್ ಆಲಿ, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಹನಿ ಸಿಂಗ್ ಸೇರಿದಂತೆ ಹಲವರು ಹೊಂದಿದ್ದಾರೆ. 


ಬಿಎಂಡಬ್ಲ್ಯೂ  ಎಕ್ಸ್ 6
2

ಅಪ್ಪು ಆಡಿ ಬ್ರ್ಯಾಂಡ್‌ನ ಎಸ್‌ಯುವಿ ಮಾತ್ರವಲ್ಲದೇ, ದುಬಾರಿ ಬಿಎಂಡಬ್ಲ್ಯೂ ಬ್ರ್ಯಾಂಡ್‌ನ ಎಕ್ಸ್ 6 ಕಾರನ್ನು ಕೂಡ ಹೊಂದಿದ್ದರು. ಇದರ ಬೆಲೆ ೯೪ ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಪುನೀತ್ ಬಳಿಯಿರುವ  ಬಿಎಂಡಬ್ಲ್ಯೂ ಬ್ರ್ಯಾಂಡ್‌ನ ಎಕ್ಸ್ 6 ಕಾರು 3.0 ಲೀಟರ್ ವಿಎ ಪೆಟ್ರೋಲ್ ಇಂಜಿನ್ ಹಾಗೂ ಡಿಸೇಲ್ ಇಂಜಿನ್ ಒಳಗೊಂಡಿದೆ.  

ಜಾಗ್ವಾರ್ ಎಕ್ಸ್ಎಫ್‌
3

ಸ್ಯಾಂಡಲ್‌ವುಡ್‌ ರಾಜಕುಮಾರನ ಬಳಿಯಿದ್ದ ದುಬಾರಿ ಕಾರುಗಳಲ್ಲಿ ಜಾಗ್ವಾರ್ ಕೂಡ ಒಂದು. ಜಾಗ್ವಾರ್ ಎಕ್ಸ್ಎಫ್‌ನ ಎಕ್ಸ್ ಶೋರೂಂನ ಬೆಲೆ ಆರಂಭವಾಗೋದು 49 ಲಕ್ಷ ರೂಪಾಯಿಗಳಿಂದ. ಭಾರತದಲ್ಲಿ ಜಾಗ್ವಾರ್ ಎಕ್ಸ್ಎಫ್‌ ಕಾರನ್ನು ಕೇವಲ ಮೂರೇ ಆವೃತ್ತಿಗಳಲ್ಲಿ ಖರೀದಿಸಬಹುದಾಗಿದ್ದು, ಇದು 2.0 ಲೀಟರ್ ಡಿಸೇಲ್ ಇಂಜಿನ್ ಹಾಗೂ 8 ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸನ್ನು ಒಳಗೊಂಡಿದೆ. 


ರೇಂಜ್‌ ರೋವರ್ ವೋಗ್‌
4

ಪುನೀತ್ ರಾಜ್‌ಕುಮಾರ್ ಬಳಿ 80 ಲಕ್ಷ ರೂಪಾಯಿ ಬೆಲೆಬಾಳುವ ಬಿಳಿ ಕಲರ್ ರೇಂಜ್‌ ರೋವರ್ ವೋಗ್‌ ಎಸ್‌ಯುವಿ ಕೂಡ ಇತ್ತು. ಈ ಎಸ್‌ಯುವಿಯೂ 2,993 ಸಿಸಿಯ 6 ಸಿಲಿಂಡರ್‌ಗಳ ಡಿಸೇಲ್ ಇಂಜಿನ್‌ಬ ಹೊಂದಿದ್ದು, ಈ ಇಂಜಿನ್‌ಗಳು 3750 ಆರ್‌ಪಿಎಂನಲ್ಲಿ 255 ಬಿಹೆಚ್‌ಪಿ ಶಕ್ತಿಯನ್ನು ಮತ್ತು 1750 ಆರ್‌ಪಿರಂನಲ್ಲಿ 600 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 

ಲ್ಯಾಂಬರ್ಗಿನಿ ಉರುಸ್
5

ಅಪ್ಪು ತಮ್ಮ ಮಡದಿ ಅಶ್ವಿನಿಯವರಿಗೆ 2019ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಲ್ಯಾಂಬರ್ಗಿನಿ ಉರುಸ್ ಅನ್ನು ಉಡುಗರೆಯಾಗಿ ನೀಡಿದ್ದರು. ಅಪ್ಪು ತಮ್ಮ ಪ್ರೀತಿಯ ಪತ್ನಿಗಾಗಿ ಖರೀದಿಸಿದ ನೀಲಿ ಬಣ್ಣದ ಎಸ್‌ಯುವಿಯೂ ವಿಶ್ವದಲ್ಲೇ ಅತಿ ಶಕ್ತಿಶಾಲಿ ಹಾಗೂ ಬಹುಬೇಗ ಚಲಿಸುವ ಎಸ್‌ಯುವಿಯಾಗಿದೆ. 


ಇಂಡಿಯನ್ ಸ್ಕೌಟ್
6

ಪುನೀತ್ ಬಳಿ ಇಂಡಿಯನ್ ಸ್ಕೌಟ್ ಎಂಬ ದುಬಾರಿ ಬೆಲೆಯ ಬೈಕ್ ಇತ್ತು. ಇದರ ಎಕ್ಸ ಶೋರೂಂ ಬೆಲೆ ಭಾರತದ ಮಾರುಕಟ್ಟೆಯಲ್ಲಿ 13.45 ಲಕ್ಷ ರೂಪಾಯಿಗಳಾಗಿವೆ. 1131 ಸಿಸಿ ಲಿಕ್ವಿಡ್ ಕೂಲಡ್ ಇಂಜಿನ್ ಹೊಂದಿರುವ ಈ ಬೈಕ್ 8,100 ಆರ್‌ಪಿಎಂನಲ್ಲಿ 100 ಬಿಹೆಚ್‌ಪಿ ಶಕ್ತಿಯನ್ನು ಹಾಗೂ 5,900 ಆರ್‌ಪಿಎಂನಲ್ಲಿ 97.7 ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸುತ್ತದೆ. 

 

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+