X
ഹോം ടോപ് ലിസ്റ്റിങ്ങ്‌

From Love Marriage to Divorce: ಚಂದನ್-ನಿವೇದಿತಾ ಮಾತ್ರವಲ್ಲ, ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಗಳು ಡಿವೋರ್ಸ್‌ ಪಡೆದ್ರು!

Author: Sowmya Bairappa | Published: Saturday, June 8, 2024, 10:39 AM [IST]

ಮದುವೆ ಎಂದರೆ ಸಂಭ್ರಮ. ಎರಡು ಮನೆಗಳ ಮನಗಳ ಬೆಸುಗೆ. ಮೂರು ಗಂಟಿನ ಬಂಧ, ಅನುಬಂಧ. ಹಿರಿಯರ ಆಶೀರ್ವಾದ, ಅಕ್ಷತೆಯ ಆಶೀರ್ವಾದ. ಮದುವೆ ಎಂಬುದು ವೈಯಕ್ತಿಕ ವಿಷಯವಾಗಿದ್ದು, ಎಲ್ಲರಿಗೂ ತಮ್ಮ ಸಂಗಾತಿಯ ಆಯ್ಕೆ ವಿಚಾರದಲ್ಲಿ ಸಂಪೂರ್ಣ ಸ್ವತಂತ್ರವಿರುತ್ತದೆ. ಕೆಲವೊಮ್ಮೆ ಕುಟುಂಬಸ್ಥರೇ ನೋಡಿ ಮದುವೆ ಮಾಡಿದ್ದರೂ ಕಾರಾಣಾಂತರಗಳಿಂದ ಆ ಮದುವೆ ಮುರಿದು ಬೀಳುತ್ತದೆ. ಇನ್ನು ಕೆಲವೊಮ್ಮೆ ಪ್ರೀತಿಸಿ ಮದುವೆಯಾದ ಜೋಡಿಗಳು ಕೂಡ ಮುರಿದು ಬೀಳುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಚಿತ್ರರಂಗದಲ್ಲಿ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿ, ನಂತರ ಡಿವೋರ್ಸ್ ಪಡೆದ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ.

Share:
cover image
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

ಬಿಗ್​ಬಾಸ್​ ಸೀಸನ್​ 5ರ ಸ್ಪರ್ಧಿಗಳಾದ ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ 2020 ಫೆಬ್ರವರಿ 26ರಂದು ಪ್ರೀತಿಸಿ ಮದುವೆಯಾಗಿತ್ತು. ಬಿಗ್ ಬಾಸ್ ಮನೆಯಲ್ಲಿದ್ದಾಗ ಆತ್ಮೀಯ ಸ್ನೇಹಿತರಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮಧ್ಯೆ ಪ್ರೀತಿ ಅದ್ಯಾವಾಗ ಚಿಗುರೊಡೆಯಿತೋ ಗೊತ್ತಿಲ್ಲ. ಆದರೆ, ಯುವ ದಸರಾ ಕಾರ್ಯಕ್ರಮದಲ್ಲಿ ಮೈಸೂರು ಜನತೆಯ ಮುಂದೆಯೇ ನಿವೇದಿತಾ ಕೈಬೆರಳಿಗೆ ಉಂಗುರ ತೊಡಿಸಿ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಈ ಜೋಡಿ ಮದುವೆಯಾಗಿತ್ತು. ನಾಲ್ಕು ವರ್ಷಗಳ ಕಾಲ ಸಹಜೀವನ ನಡೆಸಿದ್ದ ಈ ಜೋಡಿ ಇದೀಗ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ.


ಕೋಳಿ ರಮ್ಯಾ -ಶಶಿರ್

ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಹಾಗೂ ಮಿಥುನ ರಾಶಿ ಸೀರಿಯಲ್ ಖ್ಯಾತಿಯ ನಟಿ ಕೋಳಿ ರಮ್ಯಾ ಹಾಗೂ ನಟ ಶಶಿರ್ ಶಾಸ್ತ್ರಿ ಒಬ್ಬರಿಗೊಬ್ಬರು ಇಷ್ಟುಪಟ್ಟು ಮದುವೆಯಾಗಿದ್ದರು. ಇದಾದ ಬಳಿಕ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಎಂಬ ಕಾರಣಕ್ಕೆ ಬೇರೆಯಾಗಿದ್ದರು. ಸದ್ಯ ನೃತ್ಯ ಸಂಯೋಜಕ ವರದಾ ಅವರನ್ನು ಮದುವೆಯಾಗಿದ್ದಾರೆ.


ಅರ್ಪಿತಾ ಹಾಗೂ ಕಿರಿಕ್ ಕೀರ್ತಿ

ಬಿಗ್‌ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಕೂಡ ವಿಚ್ಛೇದನ ಪಡೆದಿದ್ದಾರೆ. ಅರ್ಪಿತಾ ಹಾಗೂ ಕಿರಿಕ್ ಕೀರ್ತಿ ಜೋಡಿ ನಂಬರ್ ಒನ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿತ್ತು. ನಂತರ ಅರ್ಪಿತಾ ನಾಗಿಣಿ 2 ಧಾರವಾಹಿಯಲ್ಲಿ ಫೋಷಕ ಪಾತ್ರದಲ್ಲಿ ನಟಿಸಿದ್ದರು. ಕಳೆದ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದು, ಇವರಿಗೆ ಓರ್ವ ಮಗನಿದ್ದಾನೆ. 


ಸುಷ್ಮಾ ರಾವ್-ಪ್ರೀತಂ ಗುಬ್ಬಿ

ಭಾಗ್ಯಲಕ್ಷ್ಮಿ ಧಾರವಾಹಿ ಖ್ಯಾತಿಯ ಸುಷ್ಮಾ ರಾವ್ ಅವರು 10 ವರ್ಷಗಳ ಕಾಲ ಪ್ರೀತಿ ಮಾಡಿ, ಮನೆಯವರ ವಿರೋಧದ ನಡುವೆಯೂ ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನು ಮದುವೆಯಾಗಿದ್ದರು. ವಿವಾಹದ ಬಳಿಕ ಈ ದಂಪತಿಯ ನಡುವೆ ವಿರಸ ಮೂಡಿತು. ಬಳಿಕ ಈ ಜೋಡಿ ಬೇರೆಯಾದರು. ಸುಷ್ಮಾ ರಾವ್ ಕಳೆದ ಹತ್ತು ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ನಟನೆಯಿಂದ ದೂರವಿದ್ದರು. ಇದೀಗ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. 

ಶ್ರುತಿ-ನಿರ್ದೇಶಕ ಮಹೇಂದರ್

ಮನಮಿಡಿಯುವ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟಿ ಶ್ರುತಿ ಹಾಗೂ ನಿರ್ದೇಶಕ ಮಹೇಂದರ್ 1998ರಲ್ಲಿ ಪುರಿ ಜಗನ್ನಾಥ ದೇವಾಲಯದಲ್ಲಿ ಮದುವೆಯಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಅಂತರ್ಜಾತಿಯ ವಿವಾಹ ಮಾಡಿಕೊಂಡಿದ್ದರು. ಆದರೆ, 12 ವರ್ಷ ದಾಂಪತ್ಯ ಜೀವನ ನಡೆಸಿ, ಕಾರಣಾಂತರಗಳಿಂದ ಪರಸ್ಪರ ದೂರವಾದರು. ಈ ದಂಪತಿಗೆ ಒಬ್ಬಳು ಮಗಳಿದ್ದಾಳೆ.  ನಂತರ 2013ರಲ್ಲಿ ಹೊಳೆನರಸೀಪುರದ ಚಂದ್ರಚೂಡ ಚಕ್ರವರ್ತಿ ಅವರನ್ನು ಮದುವೆಯಾಗಿದ್ದರು. ಇವರು ಮೊದಲ ಪತಿಗೆ ವಿಚ್ಛೇದನ ನೀಡದೇ ಮದುವೆಯಾಗಿದ್ದರಿಂದ ನ್ಯಾಯಾಲಯ ಇವರ ಮದುವೆಯನ್ನು ಅಸಿಂಧುಗೊಳಿಸಿತ್ತು.  


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+