X
ഹോം ടോപ് ലിസ്റ്റിങ്ങ്‌

ಯಾವುದೇ ಸಿನಿಮಾ ಹಿನ್ನಲೆಯಿಲ್ಲದೆ ಸೂಪರ್‌ ಸ್ಟಾರ್‌ಗಳಾದ ದಕ್ಷಿಣ ಭಾರತದ ನಟರಿವರು!

Author: Sowmya Bairappa | Updated: Friday, May 2, 2025, 10:12 AM [IST]

ಬಣ್ಣದ ಲೋಕದಲ್ಲಿ ನೆಲೆಯೂರುವುದು ಅಷ್ಟು ಸುಲಭವಲ್ಲ. ಸಾಕಷ್ಟು ಅಡೆಯಡೆಗಳನ್ನು ಎದುರಿಸಿ ತಮಗೊಂದು ಸ್ಥಾನ ಕಲ್ಲಿಸಿಕೊಳ್ಳಬೇಕು. ಸ್ಟಾರ್ ಮಕ್ಕಳಾದರೂ ಕೂಡ ಕೆಲವರು ತಮ್ಮ ಪ್ರತಿಭೆಯಿಂದಲೇ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಲು ಪರದಾಡುತ್ತಾರೆ. ಯಾವುದೇ ಸಿನಿಮಾ ಕುಟುಂಬದ ಹಿನ್ನಲೆಯಿಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಅನೇಕ ಪ್ರತಿಭಾನ್ವಿತ ನಟರು ಇಂದು ಸೂಪರ್ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಇಲ್ಲಿ ಅಂತಹ ನಟರ ಪಟ್ಟಿಯನ್ನು ನೀಡಲಾಗಿದೆ.

Share:
cover image
ವಿಜಯ್ ದೇವರಕೊಂಡ
1

ವಿಜಯ್ ದೇವರಕೊಂಡ ಸದ್ಯ ಟಾಲಿವುಡ್‌ನ ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಹಿನ್ನೆಲೆ ಇಲ್ಲದೇ, ಮಧ್ಯಮ ಕುಟುಂಬದಿಂದ ಬಂದವರು. ಆರಂಭದಲ್ಲಿ ಚಿಕ್ಕ ಪಾತ್ರಗಳನ್ನು ಮಾಡ್ತಿದ್ದ ವಿಜಯ್, ಪೆಳ್ಳಿ ಚೆಸು ಸಿನಿಮಾ ಮೂಲಕ ಹೀರೋ ಆದರು. ಇದಾದ ಬಳಿಕ ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಅರ್ಜುನ್ ರೆಡ್ಡಿ' ಚಿತ್ರದಿಂದ ಸ್ಟಾರ್ ಪಟ್ಟಕ್ಕೇರಿದರು. ಅತಿ ಕಡಿಮೆ ಸಮಯದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ವೃತ್ತಿ ಜೀವನದಲ್ಲಿ ಯಶಸ್ಸು ಕೈಬಿಟ್ಟಿಲ್ಲ.

കൂടുതല്‍ കാണാം


ಯಶ್
2

ಬಸ್ ಚಾಲಕನ ಮಗನಾಗಿರುವ ರಾಕಿಂಗ್ ಸ್ಟಾರ್ ಯಶ್, ಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಯಶ್ 17 ವಯಸ್ಸಿನಲ್ಲಿಯೇ ಕುಟುಂಬಕ್ಕೆ ನೆರವಾಗಲು ಪಿಯುಸಿಗೆ ಗುಡ್‌ಬೈ ಹೇಳಿ `ನವೀನ್ ಪ್ರಾವಿಜನ್ ಸ್ಟೋರ್' ಎಂಬ ತಮ್ಮದೇ ಸ್ಟೋರ್ ತೆಗೆದು ಕೆಲಸ ಮಾಡಲು ಆರಂಭಿಸಿದರು. ನಂತರ ಅಭಿನಯದಲ್ಲಿ ಆಸಕ್ತಿ ತೋರಿ ಬಿ.ವಿ.ಕಾರಂತರ 'ಬೆನಕ' ನಾಟಕ ಕಂಪನಿಗೆ ಸೇರಿದರು. ಹಲವು ನಾಟಕಗಳಲ್ಲಿ ಭಾಗವಹಿಸಿದ ಯಶ್ ಮುಂದೆ 'ನಂದಗೋಕುಲ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವನ್ನು ಪಡೆದರು. 2007ರಲ್ಲಿ ತೆರೆಗೆ ಬಂದ 'ಜಂಬದ ಹುಡುಗಿ' ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಯಶ್, 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಇಂದು ತಮ್ಮ ಕಠಿಣ ಪರಿಶ್ರಮ, ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಭಾರತಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. 

കൂടുതല്‍ കാണാം

ರಿ‍ಷಭ್ ಶೆಟ್ಟಿ
3

ವಾಟರ್ ಬಿಸಿನೆಸ್, ನಿರ್ಮಾಪಕರ ಬಳಿ ಡ್ರೈವರ್ ಆಗಿ, ಹೊಟೇಲ್ ಕೆಲಸ, ಹೋಟೆಲ್ ಮಾಲೀಕ, ಸೇಲ್ಸ್‌ಮನ್ ಕೆಲಸವನ್ನೂ ಮಾಡಿದ್ದ ರಿಷಬ್ ಶೆಟ್ಟಿ, ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಮತ್ತು ನಟ. ತಮ್ಮ ವಿಭಿನ್ನ ಚಿತ್ರಗಳು ಮತ್ತು ಭಿನ್ನ ಚಿತ್ರ ನಿರ್ಮಾಣ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ. ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಮಿಂಚುತ್ತಿರುವ ರಿಷಭ್ ಶೆಟ್ಟಿ, ತಮ್ಮ ಪ್ರತಿಭೆಯಿಂದಲೇ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದಾರೆ.

കൂടുതല്‍ കാണാം


ವಿಜಯ ಸೇತುಪತಿ
4

ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿರುವ ವಿಜಯ್ ಸೇತುಪತಿ, ಸಿನಿಪ್ರೇಕ್ಷಕರು ಅತಿಯಾಗಿ ಇಷ್ಟಪಡುವ ನಟರಲ್ಲೊಬ್ಬರು. ಯಾವುದೇ ಕಥಾಹಂದರವಿರಲಿ, ಯಾವುದೇ ಪಾತ್ರವಿರಲಿ ಅದಕ್ಕೆ ಜೀವ ತುಂಬುವ ಇವರು ತಮ್ಮ ಪ್ರತಿಭೆಯಿಂದಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇವರ ನಡೆ-ನುಡಿಯಲ್ಲೂ ಸರಳತೆಯಿದೆ. ಯಾವುದೇ ಸಿನಿಮಾ ಹಿನ್ನಲೆಯಿಲ್ಲದೇ ಬಣ್ಣದ ಲೋಕಕ್ಕೆ ಬಂದ ಇವರು, ಆರಂಭದಲ್ಲಿ ಅವಮಾನಗಳನ್ನು ನುಂಗಿ ಹಂತ ಹಂತವಾಗಿ ಬೆಳೆದರು.

കൂടുതല്‍ കാണാം

 ಶಿವ ಕಾರ್ತಿಕೇಯನ್
5

ಕಾಲೇಜು ದಿನಗಳಲ್ಲಿ ಸ್ಟಾಂಡ್‌ಅಪ್ ಕಾಮಿಡಿ ಹಾಗೂ ಮಿಮಿಕ್ರಿಗಳಲ್ಲಿ ಆಸಕ್ತಿ ಹೊಂದಿದ್ದ ನಟ ಶಿವ ಕಾರ್ತಿಕೇಯನ್ ನಂತರ ವಿಡಿಯೋ ಜಾಕಿಯಾಗಿ, ನಿರೂಪಕರಾಗಿ ಕೆಲಸ ಮಾಡಿದರು. ಕೆಲವೊಂದು ಕಿರುಚಿತ್ರದಲ್ಲಿ ನಟಿಸಿದ್ದ ಇವರಿಗೆ, ಅಜಿತ್ ಕುಮಾರ್ ನಟನೆಯ ಏಗನ್ ಚಿತ್ರದಲ್ಲಿ ಫೋಷಕ ಪಾತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ, ಎಡಿಟಿಂಗ್ ಸಂದರ್ಭ ಅವರ ಪಾತ್ರಕ್ಕೆ ಕತ್ತರಿ ಬಿದ್ದಿತ್ತು. ನಂತರ ಪಾಂಡಿರಾಜ್ ಮೆರಿನಾ ಚಿತ್ರದಲ್ಲಿ ನಾಯಕನಾಗಿ ನಟಿಸುವ ಅವಕಾಶ ಪಡೆದ ಇವರು, ತಮ್ಮ ನಟನೆಯಿಂದ ಗಮನ ಸೆಳೆದರು. ಮುಂದೆ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ ಇವರು, ಇಂದು ಸ್ಟಾರ್ ನಟನಾಗಿ ಬೆಳೆದಿದ್ದಾರೆ.


ಟೋವಿನೋ ಥಾಮಸ್
6

ವೃತ್ತಿಯಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿದ್ದ ಟೋವಿನೋ ಥಾಮಸ್,  23ನೇ ವಯಸ್ಸಿನಲ್ಲಿ ಕೆಲಸಕ್ಕೆ ಗುಡ್‌ಬೈ ಹೇಳಿ ಸಿನಿಮಾ ಕರಿಯರ್ ಆರಂಭಿಸಿದರು. ಯಾವುದೇ ಸಿನಿ ಕುಟುಂಬ ಹಿನ್ನಲೆಯಿಲ್ಲದ ಇವರು, 2012ರಲ್ಲಿ ಪ್ರಭುವಿಂತೆ ಮಕ್ಕಳ್ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿಕೊಟ್ಟರು. ನಂತರದಲ್ಲಿ ವಿಭಿನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದ ಇವರು, ಇಂದು ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ.

ನಾನಿ
7

ರೆಡಿಯೋ ಜಾಕಿಯಾಗಿ ವೃತ್ತಿ ಜೀವನ ಆರಂಭಿಸಿದ ನಾನಿ, ನಂತರ ಸಹಾಯಕ ನಿರ್ದೇಶಕನಾಗೊ, ಕೊನೆಗೆ ಹೀರೋ ಆದರು. 2008ರಲ್ಲಿ ಅಷ್ಟ ಚಮ್ಮಾ ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿಕೊಟ್ಟರು. 2011ರಲ್ಲಿ ಅಲಾ ಮೊದಲೈಂದಿ ಸಿನಿಮಾ ಮೂಲಕ ಬ್ರೇಕ ಪಡೆದ ಇವರು, ಇಂದು ನ್ಯಾಚುಲರ್ ಸ್ಟಾರ್ ಎಂಬ ಬಿರುದು ಪಡೆದುಕೊಂಡಿದ್ದಾರೆ.

കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+