X
ഹോം ടോപ് ലിസ്റ്റിങ്ങ്‌

2025ರಲ್ಲಿ ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚಲು ರೆಡಿಯಾದ ಸ್ಯಾಂಡಲ್‌ವುಡ್ ಸ್ಟಾರ್ಸ್!

Author: Sowmya Bairappa | Updated: Saturday, April 5, 2025, 10:48 AM [IST]

ಚೆಂದನವನದ ತಾರೆಯವರು ಬರೀ ಕನ್ನಡಕ್ಕೆ ಸೀಮಿತವಾಗಿದ್ದ ಕಾಲ ಈಗ ಮರೆಯಾಗಿವೆ. ಸದ್ಯ ಕನ್ನಡದ ಸ್ಟಾರ್ ನಟ-ನಟಿಯರು ಸೇರಿದಂತೆ ಹಲವರು ಪರಭಾಷಾ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಬಂದ ಮೇಲಂತೂ ಪರಭಾಷಾ ಸಿನಿಮಾ ನಟರು ಕನ್ನಡದಲ್ಲಿ, ಕನ್ನಡದ ನಟರು ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸುವುದು ಸಾಮಾನ್ಯವಾಗಿದೆ. ಇಲ್ಲಿ 2025ರಲ್ಲಿ ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚಲು ರೆಡಿಯಾದ ಸ್ಯಾಂಡಲ್‌ವುಡ್ ಸ್ಟಾರ್ಸ್ ಯಾರು ಎಂಬ ಮಾಹಿತಿಯನ್ನು ನೀಡಲಾಗಿದೆ.

Share:
cover image
ಶಿವ ರಾಜ್‌ಕುಮಾರ್
1

2023ರಲ್ಲಿ ರಿಲೀಸ್ ಆದ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 'ಜೈಲರ್' ಸಿನಿಮಾದಲ್ಲಿ ನಟಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಗೆ ಕಾಲಿವುಡ್ ಮಂದಿ ಫಿದಾ ಆಗಿದ್ದರು. ಚಿತ್ರದಲ್ಲಿನ ಶಿವಣ್ಣನ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಸದ್ಯ ಅವರು ತಲಪತಿ ವಿಜಯ್ ನಟನೆಯ ಜನ ನಾಯಗನ್ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ, ರಾಮ್ ಚರಣ್ ಅಭಿನಯದ ಪೆದ್ದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

കൂടുതല്‍ കാണാം


ಚೈತ್ರ ಆಚಾರ್
2

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಮತ್ತು ಟೋಬಿ ಸಿನಿಮಾದಲ್ಲಿ ಅದ್ಭುತ ಅಭಿನಯದ ಮೂಲಕ ಗುರುತಿಸಿಕೊಂಡ ಚೈತ್ರಾ ಆಚಾರ್, ಸದ್ಯ ತಮಿಳಿನ ಎರಡು ಸಿನಿಮಾಗಳಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಕಾಲಿವುಡ್ ನಟ ಸಿದ್ಧಾರ್ಥ್ ಅವರ 40ನೇ ಸಿನಿಮಾಗೆ ಚೈತ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರಾಜು ಮುರುಗನ್ ನಿರ್ದೇಶನದ ಶಶಿಕುಮಾರ್ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೂ ಚೈತ್ರಾ ಅವರೇ ಹೀರೋಯಿನ್. ಆ ಮೂಲಕ ಕಾಲಿವುಡ್‌ನಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ.

കൂടുതല്‍ കാണാം

ವಸಿಷ್ಠ ಸಿಂಹ
3

ತಮ್ಮ ತೀಕ್ಷ್ಣ ನೋಟ, ಗಮನ ಸೆಳೆಯುವ ಅಭಿನಯ, ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುವ ಕಂಚಿನ ಕಂಠದ ಗಾಯಕ ಕಂ ನಾಯಕ ವಸಿಷ್ಠ ಸಿಂಹ, ಕನ್ನಡದ ಜೊತೆಗೆ ತೆಲುಗು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಸದ್ಯ ಅವರ ತೆಲುಗು ಸಿನಿಮಾ 'ಒಡೆಲಾ 2' ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಜೊತೆಗೆ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ  'ತ್ರಿಬಾಣರಿ ಬಾರ್ಬರಿಕ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಮಿಂಚಲು ರೆಡಿಯಾಗಿದ್ದಾರೆ. ಈ ಸಿನಿಮಾ ಭೀಮಾನ ಮೊಮ್ಮಗ ಘಟೋತ್ಘಜನ ಕಥೆ ಹೊಂದಿದೆ.  


കൂടുതല്‍ കാണാം


ರುಕ್ಮಿಣಿ ವಸಂತ್
4

ಸಪ್ತಸಾಗರದಾಚೆ ಎಲ್ಲೋ ಬಳಿಕ ರುಕ್ಮಿಣಿ ವಸಂತ್‌ಗೆ ಪರಭಾಷೆಯಲ್ಲಿ ಡಿಮ್ಯಾಂಡ್ ಹೆಚ್ಚಾಗಿದ್ದು, ಸದ್ಯ ಒಂದು ತೆಲುಗು & ಎರಡು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಮೊದಲನೇಯದು ವಿಜಯ್ ಸೇತುಪತಿ ಅಭಿನಯದ ಏಸ್ (Ace). ಇನ್ನೊಂದು ನಟ ಶಿವ ಕಾರ್ತಿಕೇಯನ್ ನಟಿಸುತ್ತಿರುವ  'ಮದರಸಿ'. ಇದಲ್ಲದೇ, ಜೂನಿಯರ್ ಎನ್‌ಟಿಆರ್ ಜೊತೆ ತೆಲುಗು ಸಿನಿಮಾಗೂ ಎಂಟ್ರಿಕೊಡಲಿದ್ದಾರೆ.

കൂടുതല്‍ കാണാം

ಉಪೇಂದ್ರ
5

ಲೋಕೇಶ್ ಕನಗರಾಜ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಕಾಂಬಿನೇಷನ್‌ನ 'ಕೂಲಿ' ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪ್ಪಿಯವರು ಕೂಲಿಯಲ್ಲಿ ಕಾಲೇಶ ಎಂಬ ಪಾತ್ರ ಮಾಡಿದ್ದು,  2025ರ ದ್ವಿತೀಯಾರ್ಧದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

കൂടുതല്‍ കാണാം


ರಿ‍ಷಭ್ ಶೆಟ್ಟಿ
6

ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚುತ್ತಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಪ್ರಶಾಂತ್ ವರ್ಮರ ಜೈ ಹನುಮಾನ್ ಸಿನಿಮಾದಲ್ಲಿ ಹನುಮಾನ್ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್‌ ಲುಕ್ ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.



കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+