X
ഹോം ടോപ് ലിസ്റ്റിങ്ങ്‌

ಕನ್ನಡದ ಈ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಫ್ಲಾಪ್ ಆದರೂ ಹಾಡುಗಳೆಲ್ಲವೂ ಸೂಪರ್ ಹಿಟ್!

Author: Sowmya Bairappa | Updated: Wednesday, December 4, 2024, 09:43 AM [IST]

ಜನರ ಮನಸ್ಸಿನಲ್ಲಿ ಒಂದು ಸಿನಿಮಾ ಅಚ್ಚಳಿಯುವಂತೆ ಮಾಡುವುದರಲ್ಲಿ ಹಾಡುಗಳ ಪಾತ್ರ ಬಹಳ ದೊಡ್ಡದು. ಸಾಂಗ್ ಚೆನ್ನಾಗಿದ್ದರೆ ಸಿನಿಮಾ ಕೂಡ ಚೆನ್ನಾಗಿರುತ್ತದೆ ಎಂಬುದು ಹಲವು ಸಿನಿರಸಿಕರ ಕಲ್ಪನೆ. ಆದರೆ, ಅನೇಕ ಬಾರಿ ಜನರ ಊಹೆಗಳು ತಲೆಕೆಳಗಾಗಿವೆ. ಕನ್ನಡದ ಹಲವು ಸಿನಿಮಾಗಳ ಹಾಡುಗಳು ಸೂಪರ್ ಹಿಟ್ ಆಗಿದ್ದರೂ ಕೂಡ ಥಿಯೇಟರ್‌ಗಳಲ್ಲಿ ಅಷ್ಟು ಸದ್ದು ಮಾಡಿಲ್ಲ. ಇಲ್ಲಿ ಬಾಕ್ಸಾಫೀಸ್‌ನಲ್ಲಿ ಸೋತರೂ ಸೂಪರ್ ಹಾಡುಗಳನ್ನು ಹೊಂದಿದ್ದ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ಪರಮಾತ್ಮ

ಯೋಗರಾಜ್ ಭಟ್ ಅವರ ನಿರ್ದೇಶನದ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದ 'ಪರಮಾತ್ಮ' ಸಿನಿಮಾದ ಒಂದೊಂದು ಕೂಡ ಅದ್ಭುತವಾಗಿದ್ದು,  ಈಗಲೂ ಜನರ ಮನಸಲ್ಲಿ ಅಚ್ಚಳಿಯದೇ ಉಳಿದಿವೆ. ಜೊತೆಗೆ ಈ ಚಿತ್ರದ ಡೈಲಾಗ್‌ಗಳು, ಸಂಭಾಷಣೆ, ಅನಿರೀಕ್ಷಿತ ಕ್ಲೈಮ್ಯಾಕ್ಸ್ ಎಲ್ಲವೂ ಕೂಡ ಸಖತ್ ಆಗಿದ್ದವು. ಆದರೆ, ಪರಮಾತ್ಮ ಥಿಯೇಟರ್‌ಗಳಲ್ಲಿ ಓಡಲಿಲ್ಲ. ಪರಮಾತ್ಮ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದ ಪ್ರತಿಯೊಂದು ಹಾಡುಗಳು ಕೂಡ ಸಖತ್ ಹಿಟ್ ಆಗಿವೆ.

കൂടുതല്‍ കാണാം


ಜಸ್ಟ್ ಮಾತ್ ಮಾತಲ್ಲಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರ್ದೇಶಿಸಿ, ನಟಿಸಿರುವ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಕೂಡ ಪರಮಾತ್ಮ ಚಿತ್ರದಂತೆ ಸೊಗಸಾದ ಹಾಡುಗಳನ್ನು ಹೊಂದಿತ್ತು. ವಿಶೇಷವಾಗಿ ರಘು ದೀಕ್ಷಿತ್ ಅವರ ಧ್ವನಿಯಲ್ಲಿ ಮೂಡಿಬಂದ ಸಾಂಗ್‌ಗಳು ಸೂಪರ್ ಹಿಟ್ ಆಗಿದ್ದವು.  ಇದೊಂದು ಪ್ರೇಮಕಥೆಯುಳ್ಳ ಸಿನಿಮಾವಾಗಿದ್ದು, ಮೋಹಕತಾರೆ ರಮ್ಯಾ ನಾಯಕಿಯಾಗಿ ಅಭಿನಯಿಸಿದ್ದರು. ಆದರೆ, ಈ ಚಿತ್ರ ಥಿಯೇಟರ್‌ಗಳಲ್ಲಿ ಓಡಲಿಲ್ಲ.

കൂടുതല്‍ കാണാം

ಮುಂಗಾರು ಮಳೆ 2

2006ರಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾ ಗಾಂಧಿ ಅಭಿನಯದ 'ಮುಂಗಾರು ಮಳೆ' ಬ್ಲಾಕ್‌ಬಸ್ಟರ್ ಆಗಿತ್ತು. ಇದಾದ ಹತ್ತು ವರ್ಷಗಳ ಬಳಿಕ 2016ರಲ್ಲಿ ಮುಂಗಾರು ಮಳೆ 2 ಸಿನಿಮಾ ಬಿಡುಗಡೆಯಾಯಿತು. ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಹಾಗೂ ನೇಹಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಹಾಡುಗಳು ಹಿಟ್ ಆಗಿದ್ದವು.  ಆದರೆ, ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಲಿಲ್ಲ.

കൂടുതല്‍ കാണാം


ದಿ ವಿಲನ್

ಜೋಗಿ ಪ್ರೇಮ್ ನಿರ್ದೇಶನದ ಬಹುತಾರಾಗಣವಿದ್ದ ಸಾಹಸಪ್ರಧಾನ ಚಿತ್ರ 'ದಿ ವಿಲನ್'. ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಸಾಮನ್ಯವಾಗಿ ಪ್ರೇಮ್ ಅವರ ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ಅದರಂತೆ 'ದಿ ವಿಲನ್' ಸಿನಿಮಾದಲ್ಲಿಯೂ ಹಾಡುಗಳು ಬಹಳ ಆಕರ್ಷಣೆಯಾಗಿದ್ದವು. ಆದರೆ, ಈ ಸಿನಿಮಾ ಮಾತ್ರ ಬಾಕ್ಸಾಪೀಸ್‌ನಲ್ಲಿ ಸದ್ದು ಮಾಡಲಿಲ್ಲ.

കൂടുതല്‍ കാണാം

ಮಳೆಯಲಿ ಜೊತೆಯಲಿ

ಪ್ರೀತಂ ಗುಬ್ಬಿ ನಿರ್ದೇಶನದ 'ಮಳೆಯಲಿ ಜೊತೆಯಲಿ' ಸಿನಿಮಾದ ಹಾಡುಗಳು ಕೂಡ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದವು. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಹಾಗೂ ಯುವಿಕಾ ಚೌಧರಿ, ಅಂಜನಾ ಸುಖಾನಿ ನಾಯಕಿರಾಗಿ ನಟಿಸಿದ್ದರು.  ಇಂದೊಂದು ಗುಡ್ಡಗಾಡು ಪ್ರದೇಶಗಳ ನಡುವೆ ನಡೆಯುವ ಪ್ರೇಮಕಥೆಯಾಗಿದೆ. ಈ ಸಿನಿಮಾದ ಮಧುರವಾದ ಹಾಡುಗಳು ಇನ್ನೂ ಜನಪ್ರಿಯವಾಗಿವೆ. ಆದರೆ, ಈ ಸಿನಿಮಾ ಓಡಲಿಲ್ಲ.


കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+