X
ഹോം ടോപ് ലിസ്റ്റിങ്ങ്‌

ಬಾಲನಟರಾಗಿ ಅಭಿನಯಿಸಿರುವ ಸ್ಯಾಂಡಲ್‌ವುಡ್ ಸ್ಟಾರ್ ನಟರ ಮಕ್ಕಳಿವರು!

Author: Sowmya Bairappa | Updated: Tuesday, March 4, 2025, 09:31 AM [IST]

ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ನಟರ ಮಕ್ಕಳು ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಟ್ರೆಂಡ್ ಆಗಿದೆ. ಸೂಕ್ತ ತಯಾರಿ ಮಾಡಿಕೊಂಡರೆ ಸ್ಟಾರ್ ಕಿಡ್ಸ್ ಚಂದನವನದಲ್ಲಿ ನೆಲೆ ಕಂಡುಕೊಳ್ಳಲು ಹಲವು ಅವಕಾಶಗಳಿವೆ. ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರ ಮಕ್ಕಳು ಬಾಲನಟರಾಗಿ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆ ಮೂಲಕ ಚಿಕ್ಕ ವಯಸ್ಸಿನಲ್ಲಿ ನಟನೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈ ಪೈಕಿ ಕೆಲವರು ಈಗಲೂ ನಟನೆಯನ್ನೂ ಮುಂದುವರೆಸಿದ್ದರೆ, ಇನ್ನು ಕೆಲವರು ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇಲ್ಲಿ ಬಾಲನಟರಾಗಿ ಅಭಿನಯಿಸಿರುವ ಚೆಂದನವನದ ತಾರೆಯರ ಮಕ್ಕಳು ಹಾಗೂ ಅವರು ಯಾವ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.

Share:
cover image
ನಿವೇದಿತಾ ಶಿವರಾಜ್‌ಕುಮಾರ್
1

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ಸದ್ಯ ಫೈರ್‌ಪ್ಲೈ ಎಂಬ ಸಿನಿಮಾವನ್ನು  'ಶ್ರೀ ಮತ್ತು ಸಿನಿ ಸರ್ವಿಸಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇವರು 1998ರಲ್ಲಿ ತೆರೆಕಂಡಿದ್ದ 'ಅಂಡಮಾನ್' ಚಿತ್ರದಲ್ಲಿ ಶಿವಣ್ಣನ ಮಗಳ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಅಪ್ಪ-ಮಗಳ ಜೋಡಿ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು.

കൂടുതല്‍ കാണാം


ಗುರುರಾಜ್ ಜಗ್ಗೇಶ್
2

ನವರಸ ನಾಯಕ ನಟ ಜಗ್ಗೇಶ್ ಹಿರಿಯ ಮಗನಾದ ಗುರುರಾಜ್, ತಮ್ಮ ತಂದೆಯವರ `ಬೇಡ ಕೃಷ್ಣ ರಂಗಿನಾಟ' ಚಿತ್ರದಲ್ಲಿ ಬಾಲನಟನಾಗಿ ನಟಿಸಿದ್ದರು. ನಂತರ 2002ರಲ್ಲಿ ತೆರೆಕಂಡ ಜಗ್ಗೇಶ್‌ ಅವರ `ಮೇಕಪ್' ಚಿತ್ರದ ಕಥೆ ಕೂಡ ಬರೆದಿದ್ದರು. 2009ರಲ್ಲಿ ತೆರೆಕಂಡ `ಗಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಪ್ರವೇಶಿಸಿದರು. ಸದ್ಯ ಅವರು ಯಾವ ಸಿನಿಮಾದಲ್ಲೂ ಅಭಿನಯಿಸುತ್ತಿಲ್ಲ.

കൂടുതല്‍ കാണാം

ಚಾರಿತ್ರ್ಯ ಗಣೇಶ್
3

ಗೋಲ್ಡನ್ ಸ್ಟಾರ್ ಗಣೇಶ ಮಗಳು ಚಾರಿತ್ರ್ಯ 'ಚಮಕ್' ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದರು. ಇನ್ನು ಗಣೇಶ್ ಮಗ ವಿಹಾನ್ ಕೂಡ ಸಖತ್ ಹಾಗೂ ಗಾಳಿಪಟ ೨ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದರು.  ಆ ಮೂಲಕ ಗೋಲ್ಡನ್ ಸ್ಟಾರ್ ಮಕ್ಕಳಿಬ್ಬರು ಬಾಲನಟರಾಗಿ ಮೋಡಿ ಮಾಡಿದ್ದರು.

കൂടുതല്‍ കാണാം


ಪರಿಣಿತಾ
4

ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಮತ್ತು ಭಾವನಾ ದಂಪತಿಯ ಮುದ್ದು ಮಗಳು ಪರಿಣಿತಾ ಕೂಡ ಚಂದನವನದಲ್ಲಿ ಮಿಂಚಿದ್ದಾರೆ. 2017ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಮಾಸ್ ಲೀಡರ್' ಚಿತ್ರದಲ್ಲಿ ಶಿವಣ್ಣನ ಮಗಳ ಪಾತ್ರದಲ್ಲಿ ಪರಿಣಿತಾ ಮೋಡಿ ಮಾಡಿದ್ದರು.

ವಿನಯ್ ರಾಜ್ ಕುಮಾರ್
5

ರಾಘವೇಂದ್ರ ರಾಜ್‌ಮಾರ್ ಅವರ ಪುತ್ರನಾದ ವಿನಯ್ ರಾಜ್‌ಕುಮಾರ್, ಸದ್ಯ ಕನ್ನಡ ಸಿನಿಮಾರಂಗದಲ್ಲಿ ನಾಯಕ ನಟರಾಗಿ ಮಿಂಚುತ್ತಿದ್ದಾರೆ. ತಾತ ಡಾ.ರಾಜ್‌ಕುಮಾರ್ ಅಭಿನಯದ ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಚಿತ್ರಗಳಲ್ಲಿ ಬಾಲನಟರಾಗಿ ಕಾಣಿಸಿಕೊಂಡಿದ್ದರು. 

കൂടുതല്‍ കാണാം


ವಿನೀಶ್ ದರ್ಶನ್
6

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪುತ್ರ ವಿನೀಶ್ ಕೂಡ  ಬಾಲನಟರಾಗಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಐರಾವತ ಸಿನಿಮಾದಲ್ಲಿ ಅಪ್ಪನ ಜೊತೆಗೆ ಪೊಲೀಸ್ ಡ್ರೆಸ್ಹಾಕಿ ಮಿಂಚಿದ್ದ ವಿನೀಶ್, ಸೂಪರ್ ಹಿಟ್ ಚಿತ್ರ ಯಜಮಾನದ 'ಶಿವನಂದ' ಹಾಡಿನಲ್ಲಿಯೂ ಬಂದು ಹೋಗುತ್ತಾರೆ. ಮುಂದಿನ ದಿನಗಳಲ್ಲಿ ವಿನೀಶ್ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುವ ನಿರೀಕ್ಷೆಯಿದೆ.




കൂടുതല്‍ കാണാം

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+