X
ഹോം ടോപ് ലിസ്റ്റിങ്ങ്‌

'ಕನ್ನಡತಿ' ಸೀರಿಯಲ್ ಮುಕ್ತಾಯ: ಈ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನಗೆದ್ದ ಪ್ರಮುಖ ಅಂಶಗಳಿವು!

Author: Sowmya Bairappa | Published: Wednesday, February 1, 2023, 02:52 PM [IST]

ಕನ್ನಡ ಕಿರುತೆರೆ ಲೋಕದ ಜನಪ್ರಿಯ ಧಾರಾವಾಹಿಗಳಲ್ಲಿ 'ಕನ್ನಡತಿ' ಕೂಡ ಒಂದು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗೆ ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಬರೀ ಮಹಿಳೆಯರು ಮಾತ್ರವಲ್ಲ, ಗಂಡಸರು ಕೂಡ ಈ ಸೀರಿಯಲ್ ಅನ್ನು ಇಷ್ಟ ಪಡುತ್ತಾರೆ. ಜೊತೆಗೆ ಕನ್ನಡಾಭಿಮಾನಿಗಳು ಕೂಡ ಈ ಧಾರಾವಾಹಿ ವೀಕ್ಷಿಸುತ್ತಾರೆ. ೨೦೨೧ರ ಜನವರಿ ೨೭ರಂದು ಆರಂಭವಾಗಿದ್ದ ಕನ್ನಡತಿ ಸೀರಿಯಲ್ ಕನ್ನಡದ ನಂಬರ್ ಒನ್ ಧಾರಾವಾಹಿಗಳಲ್ಲಿ ಒಂದಾಗಿತ್ತು. 800 ಎಪಿಸೋಡ್ ಗಳತ್ತ ಬಂದಿರುವ ಈ ಧಾರಾವಾಹಿ ಈ ವಾರ ಮುಕ್ತಾಯವಾಗಲಿದ್ದು, ಕಲಾವಿದರ ಜೊತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡತಿ ಧಾರಾವಾಹಿ ಪ್ರೇಕ್ಷಕರಿಗೆ ಇಷ್ಟವಾಗಲು ಕಾರಣವಾದ ಪ್ರಮುಖ ಅಂಶಗಳು ಇಲ್ಲಿವೆ.

Share:
cover image
1

ಶೀರ್ಷಿಕೆಗೆ ತಕ್ಕಂತೆ ಕನ್ನಡತಿ ಧಾರಾವಾಹಿಯಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿದೆ. ಈ ಧಾರಾವಾಹಿ ಬೇರೆ ಧಾರಾವಾಹಿಗಿಂತ ಭಿನ್ನವಾಗಿರಲು ಮೂಲಕ ಕಾರಣ ಕನ್ನಡ. 'ಸರಿಗನ್ನಡಂ ಗೆಲ್ಗೆ' ಮೂಲಕ ಸರಿಯಾದ ಕನ್ನಡ ಭಾಷಾ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ. ಈ ಮೂಲಕ ಕನ್ನಡ  ಪದಗಳ ಅರ್ಥ ಹೇಳಿಕೊಡಲಾಗುತ್ತಿದೆ. ಹೀಗಾಗಿ ಮಹಿಳೆಯರು, ಪುರುಷರ ಜೊತೆ ಕನ್ನಡಾಭಿಮಾನಿಗಳು ಕೂಡ ಈ ಧಾರಾವಾಹಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. 


2

'ಕನ್ನಡತಿ' ಧಾರಾವಾಹಿಯ ಕಥೆಯ ನಾಯಕಿ ಮಲೆನಾಡಿನ ಹಸಿರುಪೇಟೆಯ ಭುವನೇಶ್ವರಿ. ಅಪ್ಪನಿಲ್ಲದ ಈಕೆ ಕನ್ನಡ ಶಿಕ್ಷಕಿ. ಈಕೆಗೆ ಕನ್ನಡ ಅಂದರೆ ಪಂಚಪ್ರಾಣ. ಆದರೆ, ಕಥಾನಾಯಕ ಪಕ್ಕಾ ಮಾಡರ್ನ್ ಹುಡುಗ. ಆತನಿಗೆ ಕನ್ನಡದ ಬಗ್ಗೆ ಅಷ್ಟಾಗಿ ಜ್ಞಾನ ಇರುವುದಿಲ್ಲ. ಮನೆಯ ಜವಾಬ್ದಾರಿ ಹೊತ್ತು ಕೆಲಸಕ್ಕಾಗಿ ಬೆಂಗಳೂರಿಗೆ ಬರುವ ಭುವಿಗೆ ಕಥಾನಾಯಕ ಹರ್ಷನ ಪರಿಚಯವಾಗುತ್ತದೆ. ಈ ಪರಿಚಯ ಸ್ನೇಹವಾಗಿ, ನಂತರ ಪ್ರೀತಿಗೆ ತಿರುಗುತ್ತದೆ. ಇವರಿಬ್ಬರ ಪ್ರೀತಿ ಕಥೆಯಲ್ಲಿ ಕನ್ನಡ ಭಾಷೆಯ ಬಗ್ಗೆಯೂ ಜನರಿಗೆ ಪ್ರೀತಿ ಮೂಡುವಂತೆ ಮಾಡಲಾಗಿದೆ. ಬಳಿಕ ನಂತರ ಪ್ರೀತಿಸಿ ಹರ್ಷನನ್ನು ಮದುವೆಯಾಗತ್ತಾಳೆ. ಬಳಿಕ ಹರ್ಷನನ್ನೇ ಪಡೆಯಬೇಕು ಎಂಬ ಹಠಕ್ಕೆ ಬೀಳುವ ಕಥೆಯ ವಿಲ್ಲನ್ ವರೂಧಿನಿ, ಆಸ್ತಿ ಬೇಕು ಎನ್ನುವ ಸಾನಿಯಾ ನಡುವೆ ಭುವಿಯ ಬದುಕು. ಮನೆಯಲ್ಲಿ ಅಮ್ಮಮ್ಮನ ಸ್ಥಾನ ತುಂಬಿಕೊಂಡು ಈಕೆ ಹೇಗೆ ಕಾರ್ಯನಿರ್ವಹಿಸುತ್ತಾಳೆ ಎಂಬುದೇ ಈ ಧಾರಾವಾಹಿಯ ಕಥೆ. 

3

ಕನ್ನಡತಿ ಧಾರಾವಾಹಿಯಲ್ಲಿ ರಂಜನಿ ರಾಘವನ್, ಕಿರಣ್ ರಾಜ್, ಚಿತ್ಕಳಾ  ಬಿರಾದಾರ್, ಸಾರಾ ಅಣ್ಣಯ್ಯ ಸೇರಿದಂತೆ ಅನೇಕ ಕಲಾವಿದರ ಪಾತ್ರಗಳು ಜನರಿಗೆ ಹತ್ತಿರವಾಗಿವೆ.  ಈ ಧಾರವಾಹಿ ಮುನ್ನ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸುತ್ತಿದ್ದ ರಂಜನಿ ರಾಘವನ್, ಪುಟ್ಟಗೌರಿ ಎಂದೇ ಖ್ಯಾತಿ ಗಳಿಸಿದ್ದರು. ಆದರೆ, ಆ ಇಮೇಜ್ ಬದಲಿಸುವಂತೆ 'ಕನ್ನಡತಿ' ಸೀರಿಯಲ್ ಮೂಡಿಬಂತು. ಸದ್ಯ ಅವರು ಕನ್ನಡತಿ ಭುವಿ ಎಂದೇ ಜನಪ್ರಿಯರಾಗಿದ್ದಾರೆ. ಈ ಧಾರಾವಾಹಿಯಲ್ಲಿ  ರಂಜನಿ ಭುವಿ ಪಾತ್ರ ಮಾಡಿದ್ದರೆ, ಕಿರಣ್ ರಾಜ್ ಹರ್ಷನ ಪಾತ್ರ ಮಾಡಿದ್ದಾರೆ. ಇವರಿಬ್ಬರ ಜೋಡಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ.  ಈ ಧಾರಾವಾಹಿಯಲ್ಲಿ ಅಮ್ಮಮ್ಮನ ಪಾತ್ರ ಮಾಡಿದ್ದ ಚಿತ್ಕಳಾ ಬಿರಾದಾರ್ ಕೂಡ ಅದ್ಭುತ ನಟನೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. 


4

ನಟಿ ಸಾರಾ ಅಣ್ಣಯ್ಯ ಕನ್ನಡತಿ ಧಾರಾವಾಹಿಯಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದರು. ಈ ಪಾತ್ರ  ವೀಕ್ಷಕರ ಗಮನ ಸೆಳೆದಿತ್ತು. ಈ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಹರ್ಷನನ್ನೇ ಪಡೆಯಬೇಕು ಎಂಬ ಹಠಕ್ಕೆ ಬೀಳುವ ಕಥೆಯ ವಿಲ್ಲನ್ ಆಗಿ ಕಾಣಿಸಿಕೊಂಡಿದ್ದರು. ಇದರ ಜೊತೆ ಕನ್ನಡತಿಯಲ್ಲಿ ಸಾನಿಯಾ ಪಾತ್ರ ಕೂಡ ಸಖತ್ ಕ್ಲಿಕ್ ಆಗಿತ್ತು. ಸಾನಿಯಾಗೆ ಆಸ್ತಿ ಮೇಲೆ ಆಸೆ. ಹೀಗಾಗಿ ಭುಮಿ ಮತ್ತು ಹರ್ಷನ ಮೇಲೆ ದ್ವೇಷ ಸಾಧಿಸುತ್ತಿರುತ್ತಾಳೆ. ಈ ಪಾತ್ರದಲ್ಲಿ ನಟಿ ಆರೋಹಿ ಕಾಣಿಸಿಕೊಂಡಿದ್ದರು.

5

ಕನ್ನಡ ಭಾಷೆ ಹೇರಳವಾಗಿರುವ ಕನ್ನಡತಿ ಧಾರಾವಾಹಿ ಮರಾಠಿ ಭಾಷೆಗೆ ರಿಮೇಕ್ ಕೂಡ ಆಗಿದೆ. 'ಭಾಗ್ಯ ದಿಲೆ ತು ಮಲಾ' ಎಂಬ ಹೆಸರಿನಲ್ಲಿ ಮರಾಠಿಗೆ ರಿಮೇಕ್ ಆಗಿದ್ದು, ಅಲ್ಲಿನ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಜೊತೆಗೆ ಈ ಧಾರಾವಾಹಿ ಹಿಂದಿಗೆ ಡಬ್ ಆಗಿದೆ.  ಹಿಂದಿಯಲ್ಲಿ 'ಅಜ್ನಬಿ ಬನೇ ಹಮ್ಸಫರ್' ಹೆಸರಿನಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಗೆ  ಹಿಂದಿಯಲ್ಲೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದು, ಕನ್ನಡತಿಗೆ ಇದು ಹೆಮ್ಮೆಯ ವಿಷಯವಾಗಿದೆ. 

 


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+