X
ഹോം ടോപ് ലിസ്റ്റിങ്ങ്‌

Happy Birthday Shivanna: ಕರುನಾಡ ಚಕ್ರವರ್ತಿ ಕುರಿತು ನಿಮಗೆ ಗೊತ್ತಿರದ ಇಂಟರೆಸ್ಟಿಂಗ್ ವಿಷಯಗಳಿವು!

Author: Sowmya Bairappa | Updated: Friday, July 12, 2024, 08:57 AM [IST]

ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೊ ಹೀಗೆ ಹಲವು ಬಿರುದುಗಳಿಂದ ಕರೆಸಿಕೊಳ್ಳುವ ಶಿವರಾಜ್‌ಕುಮಾರ್, ಮೂರು ದಶಕಗಳಿಂದ ಸುಮಾರು ೧೨೫ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮದೇಯಾದ ವಿಭಿನ್ನ ನಟನೆ, ಡ್ಯಾನ್ಸ್ ಮೂಲಕ ಇಂದಿಗೂ ಯುವಕರಂತೆ ಹೆಜ್ಜೆ ಹಾಕುವ ಶಿವಣ್ಣನ ಎನರ್ಜಿಗೆ ಸರಿಸಾಟಿ ಯಾರು ಇಲ್ಲ. ಡಾ.ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರನ್ನ ಬಿಟ್ಟರೆ, ಈಗಿನ ಕಾಲಘಟ್ಟದಲ್ಲಿ ೧೨೫ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿದ ಏಕೈಕ ನಟ ಶಿವಣ್ಣ. ಇಲ್ಲಿ ಕರುನಾಡ ಚಕ್ರವರ್ತಿ ಕುರಿತ ನಿಮಗೆ ಗೊತ್ತಿರದ ಕೆಲ ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.

Share:
cover image
ಕಳೆದುಹೋಗಿದ್ದ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಿಕ್ಕವರಿದ್ದಾಗ ಚೈನೈನಲ್ಲಿ ಶಾಪಿಂಗ್ ಹೋದಾಗ ಕಳೆದು ಹೋಗಿದ್ದರಂತೆ. ಬಳಿಕ ಮನೆಯವರೆಲ್ಲಾ ಅವರನ್ನು ಹುಡುಕಿ ನೋಡಿದಾಗ ಅವರ ಮೈಮೇಲೆ ಶರ್ಟ್ ಇರಲಿಲ್ಲವಂತೆ. ಶರ್ಟ್ ಏನಾಯ್ತು ಅಂತ ಕೇಳಿದಾಗ ಶಿವಣ್ಣ, ಬಡ ಹುಡುಗನಿಗೆ ಕೊಟ್ಟಿದ್ದರಂತೆ. ಜೊತೆಗೆ ಚಿಕ್ಕವರಿದ್ದಾಗ ಹೇರ್ ಕಟ್ ಮಾರುದ್ದ ಓಡುತ್ತಿದ್ದರಂತೆ. ಹೀಗಾಗಿ ಪಾರ್ವತಮ್ಮ ಶಿವಣ್ಣನನ್ನು ಹಗ್ಗದಲ್ಲಿ ಕಟ್ಟಿಹಾಕಿ ಹೇರ್ ಕಟ್ ಮಾಡಿಸುತ್ತಿದ್ದರಂತೆ.  


ಮೊದಲ ಹೆಸರು

ಮದುವೆಯಾಗಿ 9 ವರ್ಷಗಳ ನಂತರ ಶಿವಣ್ಣ ಜನಿಸಿದ್ದರಿಂದ ಅಣ್ಣಾವ್ರು ಸಂಭ್ರಮದಿಂದ ಆ ದಿನ ಸಂಜೆಯಿಂದ ಮರುದಿನ ಬೆಳಿಗ್ಗೆ ಆರು ಗಂಟೆಯವರೆಗೆ ಸಿಹಿ ಹಂಚಿದ್ದರು. ಜೊತೆಗೆ ತಮ್ಮ ತಂದೆಯವರ ನೆನಪಿನಲ್ಲಿ ರಾಜ್ ಮಗುವಿಗೆ `ನಾಗರಾಜು ಶಿವಪುಟ್ಟಸ್ವಾಮಿ' ಎಂದು ಹೆಸರಿಟ್ಟಿದ್ದರು. ತದನಂತರದಲ್ಲಿ ಶಿವರಾಜ್‌ಕುಮಾರ್ ಎಂದು ಹೆಸರು ಬದಲಿಸಿಕೊಂಡರು. 

 

ಇಷ್ಟದ ತಿನಿಸು

ಶಿವಣ್ಣನಿಗೆ ಊಟದ ಮೇಲೆ ಆಸಕ್ತಿ ಸ್ವಲ್ಪ ಕಡಿಮೆಯೇ. ಆದರೆ, ಬೇರೆಯವರಿಗೆ ಊಟ ಬಡಿಸೋಕೆ ಸಖತ್ ಇಷ್ಟವಂತೆ. ಜೊತೆಗೆ ಅವರಿಗೆ ಫೈವ್ ಸ್ಟಾರ್ ಹೊಟೇಲ್‌ಗಳಲ್ಲಿ ತಿನ್ನೋ ಕ್ರೇಜ್ ಇಲ್ಲವಂತೆ. ರೋಡ್‌ಸೈಡ್ ಆದರೂ ಇಷ್ಟಪಟ್ಟು ತಿನ್ನುತ್ತಾರೆ. ಉಪ್ಪಿಟ್ಟು ಅಂದರೆ ಕರುನಾಡ ಚಕ್ರವರ್ತಿಗೆ ಪಂಚಪ್ರಾಣ. ಜೊತೆಗೆ ಕೇಕ್ ಅಂದರೂ ತುಂಬಾ ಇಷ್ಟವಂತೆ. ಹೀಗಾಗಿ ಗೀತಾ ಶಿವರಾಜ್‌ಕುಮಾರ್ 15 ಬಗೆಯ ಕೇಕ್ ಮಾಡೋದನ್ನು ಕಲಿತಿದ್ದಾರಂತೆ. ಟಿ-ಕಾಫಿಯನ್ನು ಇಷ್ಟಪಡದ ಸೆಂಚುರಿ ಸ್ಟಾರ್, ದಿನಕ್ಕೆ ಐದಾರು ಬಾರಿ ಗ್ರೀನ್ ಟೀಯನ್ನು ಕುಡಿಯುತ್ತಾರೆ. 

 


ಫೇವರಿಟ್ ಹಾಲಿಡೇ ಸ್ಟಾಟ್ ಹಾಗೂ ಬಣ್ಣ

ಹ್ಯಾಟ್ರಿಕ್ ಹೀರೋ ಶಿವಣ್ಣನ ಫೇವರಿಟ್ ಹಾಲಿಡೇ ಸ್ಟಾಟ್ ಅಂದರೆ ಗೋವಾ. ಅವರು ಹೆಚ್ಚು ಇಷ್ಟಪಡುವ ಬಣ್ಣ ನೀಲಿ. ಶಿವರಾಜ್‌ಕುಮಾರ್ ಅವರ ಫೇವರಿಟ್ ವಿಷಯ ಸೈನ್ಸ್ ಹಾಗೂ ಮ್ಯಾಥಮೆಟಿಕ್ಸ್. ಇದರ ಜೊತೆಗೆ ಕ್ರಿಕೆಟ್ ಹಾಗೂ ವಾಲಿಬಾಲ್ ಅಂದರೆ ತುಂಬ ಇಷ್ಟಪಡುತ್ತಾರೆ. 

ಶಿವಣ್ಣನ ಡಿಸೈನರ್ ಪತ್ನಿ ಗೀತಾ

ಶಿವರಾಜ್‌ಕುಮಾರ್ 60 ವಯಸ್ಸಿನಲ್ಲೂ ಯಂಗ್ ಆಂಡ್ ಎನರ್ಜಿಟಿಕ್. ಅವರು ಹಾಕುವ ಎಲ್ಲಾ ಉಡುಪುಗಳನ್ನು ಡಿಸೈಡ್ ಮಾಡುವುದು ಪತ್ನಿ ಗೀತಾ ಶಿವರಾಜ್‌ಕುಮಾರ್. ಶಿವಣ್ಣ ಮಡದಿಯನ್ನು ವಾರಕ್ಕೊಮ್ಮೆ ಡಿನ್ನರ್‌ಗೆ ಕರೆದುಕೊಂಡು ಹೋಗೋದನ್ನು ಮಿಸ್ ಮಾಡಲ್ವಂತೆ. 

 


ಶಿವಣ್ಣನ ಬಳಿ ಇರುವ ಕಾರುಗಳು

ಶಿವರಾಜ್‌ಕುಮಾರ್ ಅವರದ್ದು ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಅವರಿಗೆ ದುಬಾರಿ ಕಾರು, ಬೈಕ್‌ಗಳ ಬಗ್ಗೆ ಕ್ರೇಜ್‌ ಇಲ್ಲ. ಇಂದಿಗೂ ಕೂಡ ಅವರ ಬಳಿ ದುಬಾರಿ ಬೆಲೆಯ ಕಾರುಗಳಿಲ್ಲ. ಶಿವಣ್ಣನ ಬಳಿ ಐದು ಕಾರುಗಳಿವೆ. ಇಂದು ವೋಲ್ವೋ, ಇನೋವಾ, ಫಾರ್ಚುನರ್ ಹಾಗೂ ಇನ್ನೆರಡು ಚಿಕ್ಕ ಕಾರುಗಳಿವೆ.

 

ಫೇವರಿಟ್ ವಿಲನ್ ಹಾಗೂ ಹೀರೋ

ದೊಡ್ಡ ನಟರು ಎಂದರೆ ವಿಲನ್‌ಗಳಿಂದ ಒದೆ ತಿನ್ನುವ ಸೀನ್ ಮಾಡೋಕೆ ಇಷ್ಟಪಡಲ್ಲ. ಆದರೆ, ಶಿವಣ್ಣನಿಗೆ ವಿಲನ್‌ಗಳು ಅವರ ಜೊತೆ ಫೈಟ್ ಮಾಡೋದು ತುಂಬಾ ಇಷ್ಟವಂತೆ. ಶಿವಣ್ಣನ ಫೇವರಿಟ್ ವಿಲನ್ ವಜ್ರಮುನಿ. ಜೊತೆಗೆ ಫೇವರಿಟ್ ಹೀರೋ ಕಮಲ್ ಹಾಸನ್. ಶಿವಣ್ಣನಿಗೆ ಬಹುಬೇಗ ಕೋಪ ಬರುತ್ತೆ. ಆದರೆ, ಕೋಪಿಸಿಕೊಂಡಷ್ಟೇ ಬಹುಬೇಗ ಸಮಾಧಾನವಾಗುತ್ತಾರೆ. ಚಿತ್ರರಂಗದ ಎಲ್ಲಾ ನಟ-ನಟಿಯರು ಹಾಗೂ ಕಲಾವಿದರ ಜೊತೆ ಬಹುಬೇಗ ಬೆರೆತು ಬಿಡ್ತಾರೆ. ಯಾರನ್ನು ದ್ವೇಷಿಸಿದ ಹಾಗೂ ವಿವಾದ ಮಾಡಿಕೊಳ್ಳದ ನಟ ಶಿವಣ್ಣ. 


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+