X
ഹോം ടോപ് ലിസ്റ്റിങ്ങ്‌

ವರ್ಷಕ್ಕೆ ಒಂದೊಂದು ಸಿನಿಮಾ ಕೂಡ ಮಾಡ್ತಿಲ್ಲ ಸ್ಯಾಂಡಲ್‌ವುಡ್‌ ಈ ಟಾಪ್ ಸ್ಟಾರ್ಸ್!

Author: Sowmya Bairappa | Updated: Tuesday, May 21, 2024, 05:59 PM [IST]

2024ರ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಯಾವ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಿಲ್ಲ. ಸದ್ಯ ಥಿಯೇಟರ್‌ನಲ್ಲಿ ಯಾವ ಸಿನಿಮಾನೂ ಓಡುತ್ತಿಲ್ಲ. ಜನರು ಕೂಡ ಚಿತ್ರಮಂದಿರಗಳತ್ತ ಮುಖ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಈ ವರ್ಷ ಕನ್ನಡ ಸಿನಿಮಾ ಬಿಟ್ಟು, ಬೇರೆ ಭಾಷೆಯ ಸಿನಿಮಾಗಳೇ ಭರ್ಜರಿ ಪ್ರದರ್ಶನ ಕಂಡಿವೆ. ಇದಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ನಟರು ವರ್ಷಕ್ಕೆ ಒಂದು ಸಿನಿಮಾ ಸಹ ನೀಡದಿರುವುದೇ ಕಾರಣ ಎನ್ನಲಾಗ್ತಿದೆ.

Share:
cover image
ಯಶ್ ಸಿನಿಮಾ ಬಂದು ಎರಡು ವರ್ಷವಾಯ್ತು

ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಆದರೆ, 2022ರ ಏಪ್ರಿಲ್‌ನಲ್ಲಿ ಬಂದು ಹೋಗಿದ್ದೇ ಕೊನೆ ಇವರೆಗೂ ಯಶ್ ಅವರ ಯಾವ ಸಿನಿಮಾವೂ ತೆರೆಗೆ ಬಂದಿಲ್ಲ. ಕೆಜಿಎಫ್ 2 ಸಿನಿಮಾ ಬಂದು ಎರಡು ವರ್ಷ ಕಳೆದಿದ್ದು, ಅಭಿಮಾನಿಗಳು ಅವರ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ವರ್ಷವೂ ಯಶ್ ಸಿನಿಮಾ ತೆರೆಗೆ ಬರೋದು ಡೌಟ್.



 ಕಿಚ್ಚನ ಸಿನಿಮಾ ಬಂದು 22 ತಿಂಗಳಾಯ್ತು

2022ರ ಜುಲೈ 28ರಂದು ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಿತ್ತು. ಇದಾದ ಬಳಿಕ 2023ರಲ್ಲಿ ತೆರೆಕಂಡ ಉಪೇಂದ್ರ ಅಭಿನಯದ 'ಕಬ್ಜ'ದಲ್ಲಿ ಸುದೀಪ್ ಅತಿಥಿ ಪಾತ್ರ ಮಾಡಿದ್ದರು. ಆದರೆ, ಕಳೆದ ವರ್ಷ ಸುದೀಪ್ ನಾಯಕನಾಗಿ ನಟಿಸಿದ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಸದ್ಯ ಅವರು ಮ್ಯಾಕ್ಸ್, ಕೆಕೆ. ಕಿಚ್ಚ 47 ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. 

ಸೆಪ್ಟೆಂಬರ್ 30ಕ್ಕೆ ಕಾಂತಾರ ಬಂದು 2 ವರ್ಷ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ 2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿ ಎಲ್ಲರ ಮನಗೆದ್ದಿತ್ತು. ಕನ್ನಡ ವರ್ಷನ್‌ನಿಂದಲೇ ವಿಶ್ವಾದ್ಯಂತ ಸಿನಿಪ್ರಿಯರ ಪ್ರೀತಿಯನ್ನು ಸಂಪಾದಿಸಿತ್ತು. ಈ ಮಧ್ಯೆ ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ ಡಬ್ ಮಾಡಲಾಗಿತ್ತು. ಕಾಂತಾರ ಸಿನಿಮಾ ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದು, ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿತ್ತು. ಆ ಬಳಿಕ ರಿಷಭ್ ಅಭಿನಯದ ಯಾವ ಸಿನಿಮಾನೂ ತೆರೆಗೆ ಬಂದಿಲ್ಲ. ಇದೀಗ ಇನೈದು ತಿಂಗಳು ಕಳೆದರೆ ರಿಷಭ್ ಸಿನಿಮಾ ಥಿಯೇಟರ್‌ಗೆ ಬಂದು 2 ವರ್ಷವಾಗುತ್ತೆ.  


ಸಲಗ ಬಂದೂ ಎರಡು ವರ್ಷವಾಯ್ತು

ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಸಲಗನಾಗಿ ಥಿಯೇಟರ್‌ಗೆ ಎಂಟ್ರಿಕೊಟ್ಟಿದ್ದು, 2021ರ ಅಕ್ಟೋಬರ್‌ನಲ್ಲಿ. ಸಲಗ ಬಿಡುಗಡೆಯಾಗಿ ಎರಡೂವರೆ ವರ್ಷವಾಯ್ತು ದುನಿಯಾ ವಿಜಯ್ ದರ್ಶನವೇ ಇಲ್ಲ. ಬಿಸಿ ಸೆಂಟರ್‌ನಲ್ಲಿ ಒಳ್ಳೆ ಕಲೆಕ್ಞನ್ ಮಾಡುವ, ಥಿಯೇಟರ್ ತುಂಬಿಸೋ ಕೆಪಾಸಿಟಿ ಇರುವಂತಹ ವಿಜಯ್ ಅಂತಹ ನಟರ ಸಿನಿಮಾಗಳೇ ತೆರೆಗೆ ಬರದಿರುವುದು ಚಿತ್ರಮಂದಿರಗಳ ಮಾಲೀಕರನ್ನ ಕಂಗೆಡಿಸಿದೆ.  


ಮದಗಜ ಬಂದು ಎರಡೂವರೆ ವರ್ಷ

ರೋರಿಂಗ್ ಸ್ಟಾರ್ ಶ್ರೀಮುರಳಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಅಭಿಮಾನಿ ಬಳಗ ಹೊಂದಿದ್ದಾರೆ. ಶ್ರೀಮುರಳಿ ಅವರನ್ನು ಮದಗಜನಾಗಿ ತೆರೆಮೇಲೆ ನೋಡಿ ಎರಡೂವರೆ ವರ್ಷ ಆಯಿತು. 2021ರ ಡಿಸೆಂಬರ್ 3ರಂದು ತೆರೆಮೇಲೆ ಕಾಣಿಕೊಂಡಿದ್ದ ರೋರಿಂಗ್ ಸ್ಟಾರ್, ಇದುವರೆಗೂ ದರ್ಶನ ನೀಡಿಲ್ಲ. ಸದ್ಯ ಅವರು ಕೈಯಲ್ಲಿ ಬಘೀರ ಹಾಗೂ ಪರಾಕ್ ಎಂಬ ಎರಡು ಸಿನಿಮಾಗಳಿದ್ದು, ಈ ವರ್ಷವಾದ್ರೂ ತೆರೆಗೆ ಬರಲಿದ್ಯಾ ಅನ್ನೋದನ್ನು ಕಾದು ನೋಡಬೇಕು. 


ವರ್ಷಕ್ಕೊಂದು ಸಿನಿಮಾ ಮಾಡ್ತಿರೋ ಕರುನಾಡ ಚಕ್ರವರ್ತಿ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮಾತ್ರ ಪ್ಯಾನ್ ಇಂಡಿಯಾ ಜಮಾನದಲ್ಲೂ ವರ್ಷಕ್ಕೊಂದು ಸಿನಿಮಾ ಮಾಡ್ತಿದ್ದಾರೆ. ವರ್ಷಪೂರ್ತಿ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಸ್ಯಾಂಡಲ್‌ವುಡ್‌ ಕಿಂಗ್ ಮೊದಲೆಲ್ಲಾ ವರ್ಷಕ್ಕೆ ಮೂರ್ನಾಲ್ಕು ಚಿತ್ರ ಮಾಡ್ತಿದ್ರು. ಕಳೆದ ವರ್ಷ ಘೋಸ್ಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ಕರಟಕ ದಮನಕ ಚಿತ್ರದ ಮೂಲಕ ರಂಜಿಸೋ ಕೆಲಸ ಮಾಡಿದ್ರು. ಬೇರೆ ನಟರಿಗೆ ಹೋಲಿಕೆ ಮಾಡಿದ್ರೆ, ಶಿವಣ್ಣನ ಅಭಿಮಾನಿಗಳಿಗೆ ವರ್ಷಕ್ಕೊಂದು ಸಿನಿಮಾ ಸಿಗ್ತಿದೆ.


ವರ್ಷಕ್ಕೆ ಎರಡು ಸಿನಿಮಾ ನೀಡ್ತಿರೋ ಡಿ ಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ವರ್ಷಕ್ಕೆ ಎರಡು ಸಿನಿಮಾ ಕೊಡ್ತಿದ್ದಾರೆ. ಕಳೆದ ವರ್ಷ ಕ್ರಾಂತಿ ಹಾಗೂ ಕಾಟೇರ ಸಿನಿಮಾ ಮೂಲಕ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದರು. ಈ ವರ್ಷ ಡೆವಿಲ್ ಆಗಿ ದರ್ಶನ ಕೊಡಲಿದ್ದು, ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ಬರೋದು ಪಕ್ಕಾ ಆಗಿದೆ. ಇದಾದ ಬ್ಯಾಕ್‌ ಟು ಬ್ಯಾಕ್ ಮೂರು ಸಿನಿಮಾಗಳು ಲೈನಪ್‌ನಲ್ಲಿವೆ.


ವರ್ಷಕ್ಕೆ ಐದಾರು ಸಿನಿಮಾ ಕೊಡ್ತಿರೋ ಡಾಲಿ

ಸದ್ಯ ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ನಟ ಅಂದ್ರೆ ಅದು ಡಾಲಿ ಧನಂಜಯ್. 2022ರಲ್ಲಿ ಧನಂಜಯ್ ನಟನೆಯ ಏಳು ಸಿನಿಮಾಗಳು ತೆರೆಗೆ ಬಂದಿದ್ದವು. 2023ರಲ್ಲಿ ಹೊಯ್ಸಳ ಬಿಟ್ಟರೆ ಯಾವ ಸಿನಿಮಾನೂ ತೆರೆಗೆ ಬಂದಿರಲಿಲ್ಲ. ಆದರೆ, ಡಾಲಿ ನಿರ್ಮಾಪಕನಾಗಿ ಹಾಗೂ ಹೊಸಬರಿಗೆ ಬೆಂಬಲವಾಗಿ ನಿಂತ ಮೂರ್ನಾಲ್ಕು ಸಿನಿಮಾಗಳು ಬಂದಿದ್ದವು. ಈ ವರ್ಷ ಕೂಡ ಎರಡ್ಮೂರು ಸಿನಿಮಾಗಳು ತೆರೆಗೆ ಬರುವ ನಿರೀಕ್ಷೆಯಿದೆ.

Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+