X
ഹോം ടോപ് ലിസ്റ്റിങ്ങ്‌

ಬಿಗ್‌ಬಾಸ್‌ ಸೀಸನ್ 10ರ ಮೊದಲ ಫೈನಲಿಸ್ಟ್ ಸಂಗೀತಾ: ಪ್ರತಾಪ್‌ಗೆ ಕೊನೆಯಲ್ಲಿ ಮಿಸ್ ಆದ ಚಾನ್ಸ್

Author: Sowmya Bairappa | Published: Saturday, January 13, 2024, 12:13 PM [IST]

ಬಿಗ್‌ಬಾಸ್‌ ಸೀಸನ್ 10ರ ಫಿನಾಲೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿರುವ ಸಂಗೀತಾ ಶೃಂಗೇರಿ ಹೊಸ ದಾಖಲೆ ಬರೆದಿದ್ದಾರೆ. ಈ ವಾರ ನಡೆದ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಅಂತಿಮವಾಗಿ ಸಂಗೀತಾ ಹೆಸರನ್ನು ಆಯ್ಕೆ ಮಾಡಲಾಗಿದ್ದು, ಖುಷಿಯಲ್ಲಿ ತೇಲಾಡಿದ್ದಾರೆ. ಇತ್ತ ಡ್ರೋನ್ ಪ್ರತಾಪ್‌ಗೆ ಕೊನೆಯಲ್ಲಿ ಟಿಕೆಟ್ ಕೈತಪ್ಪಿದೆ.

Share:
cover image
ಜಾಸ್ತಿ ಪಾಯಿಂಟ್ಸ್ ಪಡೆದಿದ್ದ ಪ್ರತಾಪ್

ಟಿಕೆಟ್ ಫಿನಾಲೆ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಅತೀಹೆಚ್ಚು ಪಾಯಿಂಟ್ಸ್ ಸಿಕ್ಕಿತ್ತು. ಪ್ರತಾಪ್ ಅವರಿಗೆ 420 ಅಂಕ ಪಡೆದಿದ್ದರೆ, ಸಂಗೀತಾ  300 ಪಾಯಿಂಟ್ಸ್ ಗಳಿಸಿದ್ದರು. 210 ಅಂಕಗಳನ್ನು ಪಡೆಯುವ ಮೂಲಕ ನಮ್ರತಾ ಮೂರನೇ ಸ್ಥಾನದಲ್ಲಿದ್ದರು. ಟಾಪ್‌ ೩ಯಲ್ಲಿದ್ದ ಈ ಮೂವರನ್ನು ಟಿಕೆಟ್ ಟು ಫಿನಾಲೆ ಕೊನೆಯ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ನಂತರ ಈ ಮೂವರು ಉಳಿದ ಸದಸ್ಯರ ಎದುರು ತಮ್ಮ ಸಾಮರ್ಥ್ಯದ ಬಗ್ಗೆ ಹೇಳಿಕೊಳ್ಳಬೇಕಿತ್ತು. ಆಗ ಮೂವರಲ್ಲೂ ಸಾಕಷ್ಟ ವಾದ-ವಿವಾದ ನಡೆಯಿತು. ಬಿಗ್‌ಬಾಸ್‌ಗೆ ಬಂದ ದಿನದಿಂದಲೂ ತಾವೆಷ್ಟು ಎಫರ್ಟ್ ಹಾಕಿದ್ದೇವೆ. ಟಿಕೆಟ್ ಟು ಫಿನಾಲೆಗೆ ತಾವೆಷ್ಟು ಅರ್ಹರು ಎಂಬುದನ್ನು ಸಾಬೀತು ಮಾಡಬೇಕಿತ್ತು. ಅದಕ್ಕಾಗಿ ಸಾಕಷ್ಟು ಮಾತಿನ ಚಕಮಕಿಯೂ ನಡೆಯಿತು. 

 


ಸ್ಪರ್ಧಿಗಳು ವೋಟು ಯಾರಿಗೆ?

ಅಂತಿಮವಾಗಿ ಬಿಗ್‌ಬಾಸ್ ಆದೇಶದ ಪ್ರಕಾರ, ಮನೆಯ ಉಳಿದ ಸದಸ್ಯರಾದ ಕಾರ್ತಿಕ್, ತನಿಷಾ, ವರ್ತೂರು ಸಂತೋಷ್, ವಿನಯ್ ಹಾಗೂ ತುಕಾಲಿ ಸಂತು ಟಿಕೆಟ್ ಟು ಫಿನಾಲೆಗೆ ಅಯ್ಕೆಯಾದ ಈ ಮೂವರಿಗೆ ವೋಟು ಹಾಕಬೇಕಿತ್ತು. ಅದರಲ್ಲಿ ಪ್ರತಾಪ್ ಮತ್ತು ನಮ್ರತಾಗೆ ತಲಾ ಒಂದೊಂದು ವೋಟುಗಳು ಸಿಕ್ಕರೆ, ಸಂಗೀತಾ ಶೃಂಗೇರಿಗೆ ಮೂರು ವೋಟ್ ಸಿಕ್ಕವು. ಹೀಗಾಗಿ ಸಂಗೀತಾ ನೇರವಾಗಿ ಫೈನಲಿಸ್ಟ್ ಆಗಿ ಆಯ್ಕೆಯಾದರು. ಪ್ರತಾಪ್‌ಗಿಂತ ಕಡಿಮೆ ಪಾಯಿಂಟ್ಸ್ ಪಡೆದುಕೊಂಡಿದ್ದರೂ ಮೂವರ ವೋಟ್‌ನಿಂದಾಗಿ ಸಂಗೀತಾಗೆ ಚಾನ್ಸ್ ಸಿಕ್ಕಿತು. 

 

ತುಕಾಲಿ ಸಂತುಗೆ ಕಳಪೆ

ಈ ವಾರ ಡ್ರೋನ್ ಪ್ರತಾಪ್, ಕಾರ್ತಿಕ್ ಸೇರಿದಂತೆ ಹಲವರು ತುಕಾಲಿ ಸಂತುಗೆ ಕಳಪೆ ಪಟ್ಟ ನೀಡಿದ್ದಾರೆ. ಅದರಲ್ಲೂ ಪ್ರತಾಪ್ ನೀಡಿದ ಕಾರಣವೇನೆಂದರೆ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲು ಅತ್ಯುತ್ತಮವಾಗಿ ಆಡಲಿಲ್ಲ ಎಂಬುದಾಗಿತತು. ಅವರಿಗೆ ಸಿಕ್ಕಿರುವ ಪಾಯಿಂಟ್ಸ್ ಕೂಡ ಶ್ರಮದಿಂದ ಸಿಕ್ಕಿರುವುದರಲ್ಲಿ ಎಂದು ಕಾರಣ ನೀಡಿದ್ರು. ಎಲ್ಲರೂ ಫಿನಾಲೆಯಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುವ ಹೊತ್ತಿನಲ್ಲಿ ತುಕಾಲಿ ಸಂತು ಜೈಲಿಗೆ ಹೋಗಿದ್ದಾರೆ. 

 


ನಿನ್ನನ್ನು ಯಾರೂ ನಂಬುವುದಿಲ್ಲ

ದೊಡ್ಮನೆಯಲ್ಲಿ ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್ ನಡುವೆ ಎಂತಹ ಸ್ನೇಹವಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ತುಕಾಲಿ ಸಂತುಗೆ ಕಳಪೆ ಪಟ್ಟ ನೀಡಿ ಜೈಲಿಗೆ ಕಳುಹಿಸಿದ್ದಕ್ಕೆ ಸಂತೋ್ ಬೇಸರಗೊಂಡಿದ್ದಾರೆ. ಜೊತೆಗೆ ಕಳಪೆ ನೀಡಿದ ಡ್ರೋನ್ ಪ್ರತಾಪ್ ಮೇಲೆ ಗರಂ ಆಗಿದ್ದಾರೆ. ನಿನ್ನನ್ನು ಯಾರೂ ನಂಬುವುದಿಲ್ಲ ಅಂತ ತಿವಿದಿದ್ದಾರೆ. ಇತ್ತ ಜೈಲಿಗೆ ಹೋದ ತುಕಾಳಿ ಸಂತುಗೆ ಇಲ್ಲಿಂದ ಹೊರಬಂದ ಮೇಲೆ ಇತಿಹಾಸವೇ ಸೃಷ್ಟಿಯಾಗೋದು ಅಂತ ಸಮಾಧಾನ ಮಾಡಿದ್ದಾರೆ.

 

ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಹೂರ್ತ ಇಡ್ತಾರೆ.

ಬಿಗ್‌ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರು ಸಂತು-ಪಂತು ಅಂತಲೇ ಫೇಮಸ್ ಆಗಿದ್ದಾರೆ. ಇದೀಗ ಇಬರಿಬ್ಬರ ಬಗ್ಗೆ ವಿನಯ್ ಮಾತನಾಡಿದ್ದಾರೆ. ವೈಯಕ್ತಿಕ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ೨೦೦ ಆಂಕ ದಾಟದಂತೆ ಮಾಡಿದ್ದು ತುಕಾಲಿ ಸಂತು ಅಂತ ಹೇಳಿದ್ದಾರೆ. ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮುಹೂರ್ತ ಇಡ್ತಾರೆ ಅಂತ ವಿನಯ್ ಹೇಳಿದ್ದಾರೆ. ಜೊತೆಗೆ ತುಕಾಲಿ ಸಂತು ಅವರನ್ನ ಶಕುನಿ ಅಂತ ಕರೆದಿದ್ದಾರೆ 

 


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+