ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?
Author: Sowmya Bairappa | Updated: Wednesday, December 11, 2024, 09:59 AM [IST]
ಸಾಮಾನ್ಯವಾಗಿ ಪರಭಾಷಾ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗುವಾಗ ಕರ್ನಾಟಕದಲ್ಲಿ ಅತಿಹೆಚ್ಚು ಶೋಗಳನ್ನು ನೀಡಲಾಗುತ್ತದೆ. ಸದ್ಯ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ೨ ದಿ ರೂಲ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಕೆಲ ಬೇರೆ ಭಾಷೆಯ ಸಿನಿಮಾಗಳು ಅವರ ನೆಲಕ್ಕಿಂತ ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿರುವಂತಹ ಉದಾಹರಣೆಗಳಿವೆ. ತೆಲುಗು ನಟ ಚಿರಂಜೀವಿ ಸಾಕಷ್ಟು ಬಾರಿ ತಮ್ಮ ಸಿನಿಮಾ ತೆಲುಗು ನೆಲದಲ್ಲಿ ಸೋತಾಗಲೂ ಕೂಡ ಕರ್ನಾಟಕದಲ್ಲಿ ಪ್ರೇಕ್ಷಕರು ಕೈಹಿಡಿದಿದ್ದಾರೆ ಅಂತ ಹೇಳಿಕೊಂಡಿದ್ದಾರೆ. ಇಲ್ಲಿ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಬೇರೆ ಭಾಷೆಯ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.
2015ರಲ್ಲಿ ತೆರೆಕಂಡ ರಾಜಮೌಳಿ ನಿರ್ದೇಶನದ ಬಾಹುಬಲಿ ದ ಬಿಗಿನಿಂಗ್ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿತ್ತು. ಪಾರ್ಟ್ ಒಂದರಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ? ಎಂಬುದು ದೊಡ್ಡ ಕುತೂಹಲ ಕೆರಳಿಸಿತ್ತು. ಹೀಗಾಗಿ, ಪಾರ್ಟ್ ೨ ಮೇಲಿನ ನಿರೀಕ್ಷೆಗಳು ಹೆಚ್ಚಾಗಿದ್ದವು. ನಂತರ 2017ರ ಏಪ್ರಿಲ್ 28ರಂದು ಬಾಹುಬಲಿ ದ ಕನ್‌ಕ್ಲೂಷನ್ ಬಿಡುಗಡೆಯಾಗಿ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿತ್ತು. ಈ ಸಿನಿಮಾ ವಿಶ್ವದಾದ್ಯಂತ ಬರೋಬ್ಬರಿ 1,747 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಈ ಪೈಕಿ ಕರ್ನಾಟಕದಲ್ಲಿಯೇ 77 ಕೋಟಿ ರೂ. ಬಾಚಿಕೊಂಡಿಯತ್ತು.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?-ಬಾಹುಬಲಿ ದ ಬಿಗಿನಿಂಗ್/top-listing/top-10-non-kannada-highest-grossers-in-karnataka-will-pushpa-2-break-records-3-5162.html#ಬಾಹುಬಲಿ-ದ-ಬಿಗಿನಿಂಗ್
2
2018ರಲ್ಲಿ ಬಿಡುಗಡೆಯಾದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಶಂಕರ್ ಕಾಂಬಿನೇಷನ್ '2.0' ಚಿತ್ರವನ್ನು ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದೊಂದು ಸೈಂಟಿಫಿಕ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿಟ್ಟಿ ಹಾಗೂ ಪಕ್ಷಿರಾಜನ್ ನಡುವಿನ ಕಾದಾಟದ ದೃಶ್ಯಗಳನ್ನು ಹೊಂದಿತ್ತು. ಸಾಮಾನ್ಯವಾಗಿ ರಜಿನಿಕಾಂತ್ ಸಿನಿಮಾಗಳಿಗೆ ಕರ್ನಾಟಕದಲ್ಲೇ ಸಿಕ್ಕಾಪಟ್ಟೆ ಕ್ರೇಜ್ ಇರುತ್ತೆ. ಕರ್ನಾಟದಲ್ಲಿ ಮೊದಲ ದಿನವೇ 8 ಕೋಟಿ ರೂ. ಗಳಿಸಿದ್ದ 2.0 ಸಿನಿಮಾ ಒಟ್ಟಾರೆಯಾಗಿ 44 ಕೋಟಿ ರೂ. ಗಳಿಕೆ ಮಾಡಿತ್ತು.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?-2.0/top-listing/top-10-non-kannada-highest-grossers-in-karnataka-will-pushpa-2-break-records-3-5162.html#2-0
3
ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಕಂಡ ಬೇರೆ ಭಾಷೆಯ ಸಿನಿಮಾಗಳ ಪೈಕಿ ಮೂರನೇ ಸ್ಥಾನದಲ್ಲಿ ರಾಜಮೌಳಿ ಅವರ ಬಾಹುಬಲಿ ದ ಬಿಗಿನಿಂಗ್ ಇದೆ. 2015ರಲ್ಲಿ ತೆರೆಕಂಡ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಸರಿಸುಮಾರು ವರ್ಷಗಳ ಸಮಯವನ್ನು ಚಿತ್ರತಂಡ ತೆಗೆದುಕೊಂಡಿತ್ತು. 180 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ 650 ಕೋಟಿ ರೂ. ಅಧಿಕ ಗಳಿಕೆ ಕಂಡಿತ್ತು. ಕರ್ನಾಟಕದಲ್ಲಿ 26 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?- ಬಾಹುಬಲಿ ದ ಬಿಗಿನಿಂಗ್/top-listing/top-10-non-kannada-highest-grossers-in-karnataka-will-pushpa-2-break-records-3-5162.html#-ಬಾಹುಬಲಿ-ದ-ಬಿಗಿನಿಂಗ್
4
2021ರಲ್ಲಿ ತೆರೆಕಂಡ ಅಲ್ಲು ಅರ್ಜುನ್ ನಟನೆಯ 'ಪುಷ್ಪ ದಿ ರೈಸ್' ಸಿನಿಮಾ ಬ್ಲಾಕ್‌ಬಸ್ಟರ್ ಆಗಿತ್ತು. ತಿರುಪತಿ ಹತ್ತಿರದ ಶೇಷಾಚಲಂ ಕಾಡಿನಲ್ಲಿ ನಡೆಯುವ ಸ್ಮಗ್ಲಿಂಗ್ ಹಿನ್ನಲೆಯ ಕಥೆಯುಳ್ಳ ಈ ಸಿನಿಮಾವನ್ನು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಪುಷ್ಪ ದಿ ರೂಲ್ ಸಿನಿಮಾದ ಜೊತೆಗೆ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು. ಗಲ್ಲಾಪೆಟ್ಟಿಗೆಯಲ್ಲೂ ಕಮಾಲ್ ಮಾಡಿದ್ದ ಈ ಚಿತ್ರ, ಬರೋಬ್ಬರಿ 365 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಕರ್ನಾಟದಲ್ಲಿ ಪುಷ್ಪ ದಿ ರೈಸ್ ಚಿತ್ರ 26 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?-ಪುಷ್ಪಾ: ಪಾರ್ಟ್1/top-listing/top-10-non-kannada-highest-grossers-in-karnataka-will-pushpa-2-break-records-3-5162.html#ಪುಷ್ಪಾ-ಪಾರ್ಟ್1
5
ಕಾಲಿವುಡ್ ನಟ ದಳಪತಿ ವಿಜಯ್ ಅಭಿನಯದ 'ಲಿಯೋ' ಸಿನಿಮಾ ಏಳನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಚಿತ್ರದಲ್ಲಿ ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾ, ಸಂಜಯ್ ದತ್, ಪ್ರಿಯಾ ಆನಂದ್, ಮಾಡೋನಾ, ಕಮನ್ ಹಾಸನ್, ಸತ್ಯರಾಜ್, ಸೂರ್ಯ ಮುಂತಾದವರು ನಟಿಸಿದ್ದರು. ಲೋಕೇಶ್ ಕನಗರಾಜ್ ನಿರ್ದೇಶನ ಲಿಯೋ ಸಿನಿಮಾ ಬಾಕ್ಸಾಪೀಸ್‌ನಲ್ಲಿ 620 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಕರ್ನಾಟಕದಲ್ಲಿ 17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?-ಲಿಯೋ/top-listing/top-10-non-kannada-highest-grossers-in-karnataka-will-pushpa-2-break-records-3-5162.html#ಲಿಯೋ
6
2019ರಲ್ಲಿ ತೆರೆಕಂಡ ಅಟ್ಲಿಕುಮಾರ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್‌ನ 'ಬಿಗಿಲ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರ ನಾಯಕಿಯಾಗಿ ನಟಿಸಿದ್ದರು. ಒಟ್ಟಾರೆ 300 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಈ ಚಿತ್ರ, ಕರ್ನಾಟಕದಲ್ಲಿ 14 ಕೋಟಿ ರೂ. ಗಳಿಸಿತ್ತು.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?-ಬಿಗಿಲ್/top-listing/top-10-non-kannada-highest-grossers-in-karnataka-will-pushpa-2-break-records-3-5162.html#ಬಿಗಿಲ್
7
2022ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ನಟನೆಯ 'ವಿಕ್ರಮ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೊಂದು ಆಕ್ಷನ್ ಚಿತ್ರಕಥೆಯಾಗಿದ್ದು, ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದರು. ವಿಶ್ವದಾದ್ಯಂತ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಈ ಚಿತ್ರ, ಕರ್ನಾಟಕದಲ್ಲಿ 13 ಕೋಟಿ ಗಳಿಕೆ ಮಾಡಿತ್ತು.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?-ವಿಕ್ರಮ್/top-listing/top-10-non-kannada-highest-grossers-in-karnataka-will-pushpa-2-break-records-3-5162.html#ವಿಕ್ರಮ್
8
ಕಾಲಿವುಡ್ ಖ್ಯಾತ ನಟರಾದ ದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ' ಮಾಸ್ಟರ್' ಸಿನಿಮಾವನ್ನು 135 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಬಾಕ್ಸಾಪೀಸ್‌ನಲ್ಲಿ 220 ರಿಂದ 300 ಕೋಟಿ ಗಳಿಸಿದ್ದ ಈ ಚಿತ್ರ ಕರ್ನಾಟಕದಲ್ಲಿ 11 ಕೋಟಿ ಅಧಿಕ ಗಳಿಕೆ ಕಂಡಿತ್ತು.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?-ಮಾಸ್ಟರ್/top-listing/top-10-non-kannada-highest-grossers-in-karnataka-will-pushpa-2-break-records-3-5162.html#ಮಾಸ್ಟರ್
9
2018ರಲ್ಲಿ ಬಿಡುಗಡೆಯಾದ ದಳಪತಿ ವಿಜಯ್ ನಟನೆಯ 'ಸರ್ಕಾರ್' ಸಿನಿಮಾ 9ನೇ ಸ್ಥಾನದಲ್ಲಿದೆ. ಈ ಚಿತ್ರವನ್ನು ಘಜನಿ, ಸ್ಟಾಲಿನ್, ತುಪಾಕಿ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ್ದ ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿದ್ದರು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಚಿತ್ರ ಕರ್ನಾಟಕದಲ್ಲಿ 11 ಕೋಟಿ ಕಲೆಕ್ಷನ್ ಮಾಡಿತ್ತು.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?-ಸರ್ಕಾರ್/top-listing/top-10-non-kannada-highest-grossers-in-karnataka-will-pushpa-2-break-records-3-5162.html#ಸರ್ಕಾರ್
10
ಕಾಲಿವುಡ್ ನಟ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟನೆಯ 'ಅಮರನ್' ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಈ ವರ್ಷದ ಬ್ಲ್ಯಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ದೀಪಾವಳಿ ಪ್ರಯುಕ್ತ ಅಕ್ಟೋಬರ್ 31ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಈ ಚಿತ್ರ, ಬಾಕ್ಸಾಫೀಸ್‌ನಲ್ಲೂ ಕಲೆಕ್ಷನ್ ಮಾಡಿತ್ತು. ಸೇನಾ ಮೇಜರ್ ಮುಕುಂದ್ ವರದರಾಜನ್ ಜೀವನವನ್ನು ಆಧರಿಸಿದ ಈ ಸಿನಿಮಾವನ್ನು ರಾಜಕುಮಾರ್ ಪೆರಿಯಾಸ್ವಾಮಿ ಮಾಡಿದ್ದರು. ಅಮರನ್ ಕರ್ನಾಟಕದಲ್ಲಿ ಸುಮಾರು 8 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಬೇರೆ ಭಾಷೆಯ ಸಿನಿಮಾಗಳಿವು: ಪುಷ್ಪ 2 ಈ ಚಿತ್ರಗಳನ್ನು ಮೀರಿಸುತ್ತಾ?-ಅಮರನ್/top-listing/top-10-non-kannada-highest-grossers-in-karnataka-will-pushpa-2-break-records-3-5162.html#ಅಮರನ್
Disclaimer
The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.