X
ഹോം ടോപ് ലിസ്റ്റിങ്ങ്‌

ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಬೆಸ್ಟ್ ಡುಯೆಟ್ ಗೀತೆಗಳು

Author: Administrator | Updated: Friday, May 6, 2022, 10:00 AM [IST]

ಕನ್ನಡ ಚಿತ್ರರಂಗದಲ್ಲಿ ಮೊದಲು ಡುಯೆಟ್ ಹಾಡುಗಳಿಗೆ ಪ್ರಸಿದ್ಧವಾಗಿದ್ದು ಪಿ.ಬಿ.ಶ್ರೀನಿವಾಸ್ ಮತ್ತು ಎಸ್ ಜಾನಕಿ ಜೋಡಿ. ನಂತರ ಡಾ.ರಾಜ್ - ಜಾನಕಮ್ಮ ಜೋಡಿ, ರಾಜ್ - ಪಿ ಸುಶೀಲಾ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಾಂಬಿನೇಶನ್ ನಲ್ಲಿ ಮೂಡಿಬಂದ ರೋಮ್ಯಾಂಟಿಕ್ ಗೀತೆಗಳು ಕನ್ನಡ ಸಿನಿಪ್ರಿಯರ ಮನಗೆದ್ದವು. 2005 ರ ನಂತರ ಕನ್ನಡ ಚಿತ್ರರಂಗದಲ್ಲಿ ಸೋನು ನಿಗಮ್ - ಶ್ರೇಯಾ ಘೋಷಾಲ್ ಜೋಡಿ ಸಾಕಷ್ಟು ಜನಪ್ರಿಯತೆ ಪಡೆಯಿತು. ಇಲ್ಲಿ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ರ ಅತ್ಯುತ್ತಮ ಗೀತೆಗಳನ್ನು ನೀಡಲಾಗಿದೆ.

Share:
cover image
Video Thumbnail

ಓ ಗುಣವಂತ - ಓ ಗುಣವಂತ

2006 ರಲ್ಲಿ ತೆರೆಕಂಡ `ಜೊತೆ ಜೊತೆಯಲಿ' ಚಿತ್ರದ `ಓ ಗುಣವಂತ' ಗೀತೆಗೆ ಸೋನು ನಿಗಮ್ ಮತ್ತು ಶ್ರೇಯಾ ಧ್ವನಿಯಾಗಿದ್ದರು. ಈ ಗೀತೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿತ್ತು. ವಿ ಹರಿಕೃಷ್ಣ ಸಂಗೀತ ನೀಡಿದ್ದರು.

Video Thumbnail

ಅದೇ ಭೂಮಿ ಅದೇ ಭಾನು - ಅದೇ ಭೂಮಿ ಅದೇ ಭಾನು

2007 ರಲ್ಲಿ ತೆರೆಕಂಡ ಈ ಬಂಧನ ಚಿತ್ರದ ಅದೇ ಭೂಮಿ ಅದೇ ಭಾನು ಗೀತೆ ಸೋನು ಮತ್ತು ಶ್ರೇಯಾ ಧ್ವನಿಯಲ್ಲಿ ಮೂಡಿಬಂದಿತ್ತು. ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಗೆ ಮನೋ ಮೂರ್ತಿ ಸಂಗೀತ ನೀಡಿದ್ದರು.

Video Thumbnail

ಮಳೆ ನಿಂತು ಹೋದ ಮೇಲೆ - ಮಳೆ ನಿಂತು ಹೋದ ಮೇಲೆ

2007 ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ನಟಿಸಿದ್ದ ಮಿಲನ ಚಿತ್ರದ ಮಳೆ ನಿಂತು ಹೋದ ಮೇಲೆ ಗೀತೆಗೆ ಕೂಡ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು. ಜಯಂತ್ ಕಾಯ್ಕಿಣಿ ಸಾಹಿತ್ಯ ಮತ್ತು ಮನೋಮೂರ್ತಿ ಸಂಗೀತದಲ್ಲಿ ಮೂಡಿಬಂದ ಗೀತೆಗೆ ಶ್ರೇಯಾ ಮತ್ತು ಸೋನು ನಿಗಮ್ ಜೀವ ತುಂಬಿದ್ದರು.

Video Thumbnail

ಮಾತು ನನ್ನವಳು - ಮಾತು ನನ್ನವಳು

2008 ರಲ್ಲಿ ದರ್ಶನ್ ರ ಗಜ ಚಿತ್ರದಲ್ಲಿನ `ಮಾತು ನನ್ನವಳು' ಗೀತೆ ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿ ಬಂದಿತ್ತು. ವಿ ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದ ಈ ಗೀತೆ ಸೋನು ಮತ್ತು ಶ್ರೇಯಾ ಜೋಡಿಗೆ ಮತ್ತಷ್ಟು ಹೆಸರು ತಂದು ಕೊಟ್ಟಿತು.


Video Thumbnail

ನಿನ್ನ ನೋಡಲೆಂತೋ - ನಿನ್ನ ನೋಡಲೆಂತೋ

ಕಿಚ್ಚ ಸುದೀಪ್ ಮತ್ತು ರಮ್ಯಾ ನಟನೆಯ ಮುಸ್ಸಂಜೆ ಮಾತು ಚಿತ್ರದಲ್ಲಿನ `ನಿನ್ನ ನೋಡಲೆಂತೋ' ಚಿತ್ರದ ಗೀತೆಗೆ ಕೂಡ ಒಳ್ಳೆ ಪ್ರತಿಕ್ರಿಯೆ ಪಡೆಯಿತು. ಕೆ ರಾಮ ನಾರಾಯಣ್ ಪೆನ್ನಿನಲ್ಲಿ ಮೂಡಿದ್ದ ಈ ಗೀತೆಗೆ ಸಂಭ್ರಮ ಶ್ರೀಧರ್ ಸಂಗೀತ ನೀಡಿದ್ದರು.ಈ ಚಿತ್ರದ ಗೀತೆಗಾಗಿ ಶ್ರೇಯಾ ಘೋಷಾಲ್ ಫಿಲ್ಮ್ ಫೇರ್ ಸೌಥ್ ಪ್ರಶಸ್ತಿ ಪಡೆದರು.

Video Thumbnail

ಗಾಳಿಯೇ - ಗಾಳಿಯೇ

2010 ರಲ್ಲಿ ತೆರೆಕಂಡ ಸಂಚಾರಿ ಚಿತ್ರದ `ಗಾಳಿಯೇ' ಚಿತ್ರದ ಗೀತೆಯೂ ಈ ಜೋಡಿಯ ಕಂಠದಲ್ಲಿ ಮೂಡಿಬಂತು. ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಗೆ ಅರ್ಜುನ ಜನ್ಯ ಸಂಗೀತ ನೀಡಿದ್ದರು.

Video Thumbnail

ಎರಡು ಜಡೆಯನ್ನು - ಎರಡು ಜಡೆಯನ್ನು

ಪುನೀತ್ ರಾಜಕುಮಾರ್ ಮತ್ತು ಭಾವನಾ ನಟನೆಯ ಜಾಕಿ ಚಿತ್ರದ `ಎರಡು ಜಡೆಯನ್ನು' ಗೀತೆಯು ಈ ಜೋಡಿಯ ಧ್ವನಿಯಲ್ಲಿ ಮೂಡಿ ಬಂದಿತ್ತು. ಯೋಗರಾಜ್ ಭಟ್ ಸಾಹಿತ್ಯದಲ್ಲಿ ಮೂಡಿ ಬಂದಿದ್ದ ಈ ಗೀತೆಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು.

Video Thumbnail

ಇಲ್ಲೆ ಇಲ್ಲೆ ಎಲ್ಲೋ - ಇಲ್ಲೆ ಇಲ್ಲೆ ಎಲ್ಲೋ

ಚಿರಂಜೀವಿ ಸರ್ಜಾ ಮತ್ತು ಕೃತಿ ಕರಬಂಧ ನಟನೆಯ `ಇಲ್ಲೆ ಇಲ್ಲೆ ಎಲ್ಲೋ' ಗೀತೆಯು ಶ್ರೇಯಾ ಮತ್ತು ಸೋನು ನಿಗಮ್ ಕಂಠದಲ್ಲಿ ಮೂಡಿ ಬಂದಿತ್ತು. ಈ ಗೀತೆಯನ್ನು ಗೌಸ್ ಪೀರ್ ಬರೆದಿದ್ದರೆ, ಗಿರಿಧರ್ ದಿವಾನ್ ಸಂಗೀತ ನೀಡಿದ್ದರು.


Video Thumbnail

ಮಿಡಿವ ನಿನ್ನ - ಮಿಡಿವ ನಿನ್ನ

2011 ರಲ್ಲಿ ತೆರೆಕಂಡ ಯಶ್ ಅಭಿನಯದ `ರಾಜಧಾನಿ' ಚಿತ್ರದ `ಮಿಡಿವ ನಿನ್ನ' ರೋಮ್ಯಾಂಟಿಕ್ ಗೀತೆಗೆ ಕೇಳುಗರು ಮೆಚ್ಚುಗೆ ವ್ಯಕ್ತಪಡಿಸಿದರು. ಅರ್ಜುನ ಜನ್ಯ ಸಂಗೀತದಲ್ಲಿ ಮೂಡಿಬಂದ ಈ ಗೀತೆಯನ್ನು ಜಯಂತ್ ಕಾಯ್ಕಿಣಿ ಬರೆದಿದ್ದರು.

Video Thumbnail

ಸಂಜು ಮತ್ತು ಗೀತಾ - ಸಂಜು ಮತ್ತು ಗೀತಾ

ಸೋನು ನಿಗಮ್ ಮತ್ತು ಶ್ರೇಯಾ ಕಂಠದಲ್ಲಿ ಮೂಡಿಬಂದಿದ್ದ 2011 ರಲ್ಲಿ ತೆರೆಕಂಡ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿನ `ಸಂಜು ಮತ್ತು ಗೀತಾ' ಡುಯೆಟ್ ಗೀತೆ ತುಂಬಾ ಜನಪ್ರಿಯವಾಯಿತು. ಕವಿರಾಜ್ ಸಾಹಿತ್ಯದಲ್ಲಿ ಮೂಡಿಬಂದ ಈ ಗೀತೆಗೆ ಜೆಸ್ಸಿ ಗಿಫ್ಟ್ ಅದ್ಭುತ ಸಂಗೀತ ನೀಡಿದ್ದರು.

Video Thumbnail

ಏನೆಂದು ಹೆಸರಿಡಲಿ - ಏನೆಂದು ಹೆಸರಿಡಲಿ

2012 ರಲ್ಲಿ ತೆರೆಕಂಡ ಅಣ್ಣಾ ಬಾಂಡ್ ಚಿತ್ರದಲ್ಲಿನ `ಏನೆಂದು ಹೆಸರಿಡಲಿ' ಗೀತೆಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು. ಪುನೀತ್ ಮತ್ತು ಪ್ರಿಯಾಮಣಿ ನಡುವಿನ ಈ ರೋಮ್ಯಾಂಟಿಕ್ ಗೀತೆ ಸೋನು ನಿಗಮ್ ಮತ್ತು ಶ್ರೇಯಾ ಕಂಠದಲ್ಲಿ ಮೂಡಿ ಬಂದಿತ್ತು. ಈ ಹಾಡು ಜಯಂತ್ ಕಾಯ್ಕಿಣಿ ಸಾಹಿತ್ಯದಲ್ಲಿ ಮೂಡಿ ಬಂದಿತ್ತು.

Video Thumbnail

ಕಳ್ಳಿ ಇವಳು - ಕಳ್ಳಿ ಇವಳು

ಪ್ರೇಮ ನಾಯಕನಾಗಿ ನಟಿಸಿದ್ದ ಪ್ರೇಮ ಅಡ್ಡ ಚಿತ್ರದಲ್ಲಿನ `ಕಳ್ಳಿ ಇವಳು' ಗೀತೆಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು. ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿ ಬಂದಿದ್ದ ಈ ಗೀತೆ ಕೇಳುಗರ ಮೆಚ್ಚುಗೆ ಪಡೆಯಿತು.


Video Thumbnail

ಮೊದಲ ಮಳೆಯಂತೆ - ಮೊದಲ ಮಳೆಯಂತೆ

ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮೈನಾ ಚಿತ್ರದ `ಮೊದಲ ಮಳೆಯಂತೆ' ಗೀತೆಗೆ ಸೋನು ನಿಗಮ್ ಮತ್ತು ಶ್ರೇಯಾ ಧ್ವನಿಯಾದರು. ಕವಿರಾಜ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಗೀತೆಗೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದರು.ಈ ಗೀತೆಗೆ ಶ್ರೇಯಾ ಘೋಷಾಲ್ ಮಿರ್ಚಿ ಮ್ಯೂಸಿಕ್ ಸೌಥ್ ಪ್ರಶಸ್ತಿ ಪಡೆದಿದ್ದರು.

Video Thumbnail

ಸದಾ ನಿನ್ನ ಕಣ್ಣಲಿ - ಸದಾ ನಿನ್ನ ಕಣ್ಣಲಿ

ಸುದೀಪ್ ಮತ್ತು ಭಾವನಾ ಅಭಿನಯದ ಬಚ್ಚನ್ ಚಿತ್ರದ `ಸದಾ ನಿನ್ನ ಕಣ್ಣಲಿ' ರೋಮ್ಯಾಂಟಿಕ್ ಗೀತೆ ಕೂಡ ಕೇಳುಗರ ಮನ ಗೆದ್ದಿತು. ವಿ ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿದ್ದ ಈ ಗೀತೆಗೆ ಜಯಂತ್ ಕಾಯ್ಕಿಣಿ ಸಾಹಿತ್ಯವಿತ್ತು.

Video Thumbnail

ಕಣ್ಣಲೆ - ಕಣ್ಣಲೆ

2014 ರಲ್ಲಿ ತೆರೆಕಂಡಿದ್ದ ದರ್ಶನ್ ಅಭಿನಯದ ಅಂಬರೀಶ್ ಚಿತ್ರದ `ಕಣ್ಣಲೆ' ಗೀತೆಯು ಶ್ರೇಯಾ ಮತ್ತು ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿತ್ತು. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಗೀತೆಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು.

Video Thumbnail

ಉಪವಾಸ - ಉಪವಾಸ

2014 ರಲ್ಲಿ ತೆರೆಕಂಡಿದ್ದ ಯಶ್ ಮತ್ತು ರಾಧಿಕಾ ಅಭಿನಯದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರದ `ಉಪವಾಸ' ಗೀತೆಯು ಶ್ರೇಯಾ ಮತ್ತು ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿತ್ತು. ಗೌಸ್ ಪೀರ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಗೀತೆಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು.


Video Thumbnail

ನಿನ್ನಲೆ - ನಿನ್ನಲೆ

2015 ರಲ್ಲಿ ತೆರೆಕಂಡಿದ್ದ ಅಜೇಯ ರಾವ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಎಂದೆಂದಿಗೂ ಚಿತ್ರದ `ನಿನ್ನಲೆ' ಗೀತೆಯು ಶ್ರೇಯಾ ಮತ್ತು ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿತ್ತು. ಕೆ ಕಲ್ಯಾಣ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಗೀತೆಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು.

Video Thumbnail

ಮತ್ತೆ ಮಳೆಯಾಗಿದೆ - ಮತ್ತೆ ಮಳೆಯಾಗಿದೆ

ಚಕ್ರವರ್ತಿ ಚಿತ್ರದಲ್ಲಿ ದರ್ಶನ್ ಮತ್ತು ದೀಪಾ ಸನ್ನಿಧಿ ರೋಮ್ಯಾಂಟಿಕ್ `ಮತ್ತೆ ಮಳೆಯಾಗಿದೆ' ಗೀತೆ ಅದ್ಭುತ ಪ್ರತಿಕ್ರಿಯೆ ಪಡೆಯಿತು. ಸೋನು ನಿಗಮ್ ಮತ್ತು ಶ್ರೇಯಾ ಕಂಠದಲ್ಲಿ ಮೂಡಿಬಂದಿದ್ದ ಈ ಗೀತೆಗೆ ಅರ್ಜುನ ಜನ್ಯ ಸಂಗೀತ ನೀಡಿದ್ದರು. ಈ ಗೀತೆ ಡಾ. ಉಮೇಶ್ ಸಾಹಿತ್ಯದಲ್ಲಿ ಮೂಡಿ ಬಂದಿತ್ತು.

Video Thumbnail

ಚಿಪ್ಪಿನೊಳಗೆ - ಚಿಪ್ಪಿನೊಳಗೆ

ದುನಿಯಾ ವಿಜಯ್ ಮತ್ತು ಅಮೂಲ್ಯ ಕಾಂಬಿನೇಶನ್ ನ ಈ ರೋಮ್ಯಾಂಟಿಕ್ ಗೀತೆಯೂ ಕವಿರಾಜ್ ಸಾಹಿತ್ಯದಲ್ಲಿ ಮೂಡಿ ಬಂದಿತ್ತು. ಸಾಧು ಕೋಕಿಲಾ ಸಂಗೀತ ನಿರ್ದೇಶನವಿದ್ದ ಈ ಗೀತೆ ಶ್ರೇಯಾ ಮತ್ತು ಸೋನು ನಿಗಮ್ ಕಂಠದಲ್ಲಿ ಮಧುರವಾಗಿ ಮೂಡಿಬಂದಿತ್ತು.

Video Thumbnail

ಒಂದು ಮುಂಜಾನೆ - ಒಂದು ಮುಂಜಾನೆ

2019 ರಲ್ಲಿ ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಶನ್ ನಲ್ಲಿ ಮೂಡಿ ಬಂದಿದ್ದ ಯಜಮಾನ ಚಿತ್ರದ `ಒಂದು ಮುಂಜಾನೆ' ಗೀತೆ ಈ ಜೋಡಿ ಧ್ವನಿಯಲ್ಲಿ ಮೂಡಿಬಂದಿತು. ಕವಿರಾಜ್ ಸಾಹಿತ್ಯದಲ್ಲಿ ಅರಳಿದ್ದ ಗೀತೆಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು.


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+