X
ഹോം ടോപ് ലിസ്റ്റിങ്ങ്‌

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆಸ್ಟ್ ವಿಲನ್ ಅಂತ ಪ್ರೂವ್ ಮಾಡಿದ ಸಿನಿಮಾಗಳಿವು!

Author: Sowmya Bairappa | Updated: Tuesday, February 25, 2025, 09:57 AM [IST]

ಭಾರತೀಯ ಸಿನಿಮಾರಂಗದಲ್ಲಿ ಹಲವು ಸ್ಟಾರ್ ನಟರಿದ್ದಾರೆ. ಅದರಲ್ಲಿ ಕೆಲವರಷ್ಟೇ ಎಂಥಹ ಪಾತ್ರಗಳಲ್ಲಿಯೂ ಉತ್ತಮವಾಗಿ ನಟಿಸಬಲ್ಲರು. ಅಂತಹವರಲ್ಲಿ ಒಬ್ಬರು ಕನ್ನಡಿಗ ನಟ ಸುದೀಪ್. ಅದು ಹೀರೋ ಆಗಿ ಆದರೂ ಸೈ, ವಿಲನ್ ಆದರೂ ಸೈ. ಕಿಚ್ಚ ಸಕಲಕಲಾವಲ್ಲಭ. ಅವರು ಕಲಾತ್ಮಕ ಸಿನಿಮಾಗಳಿಂದ ಹಿಡಿದು ಮಾಸ್ ಚಿತ್ರಗಳ ತನಕ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ತಮಿಳು, ತೆಲಗು ಹಾಗೂ ಹಿಂದಿ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಖಳನಾಯಕನ ಪಾತ್ರ ಮಾಡಿಯೂ ಗೆದಿದ್ದಾರೆ. ಇಲ್ಲಿ ಸುದೀಪ್ ಅವರು ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡ ಐದು ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ಈಗ
1

ಸೂಪರ್ ಸ್ಟಾರ್ ಆಗಿದ್ದರೂ ಖಳನಾಯಕನ ಪಾತ್ರ ಮಾಡಿ ಗೆದ್ದವರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಮುಖರು. ಖ್ಯಾತ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ತೆಲುಗಿನ ಬ್ಲಾಕ್‌ಬಸ್ಟರ್ ಸಿನಿಮಾ 'ಈಗ'ದಲ್ಲಿ ಸುದೀಪ್ ತೆಲುಗು ನಟ ನಾಣಿ ಎದುರು ವಿಲನ್ ಆಗಿ ಅಬ್ಬರಿಸಿದ್ದರು. ಈ ಸಿನಿಮಾದ ಕಿಚ್ಚನ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.



ದಬಾಂಗ್ 3
2

2019ರಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ 'ದಬಾಂಗ್ 3' ಚಿತ್ರದಲ್ಲಿ ಕಿಚ್ಚ ಸುದೀಪ್ ಮುಖ್ಯ ಖಳನಾಯಕ ಬಾಲಿ ಸಿಂಗ್ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಕನ್ನಡ ಡಬ್ ವರ್ಷನ್‌ಗೆ ಸುದೀಪ್ ಮತ್ತು ಸಲ್ಮಾನ್ ಖಾನ್ ಧ್ವನಿ ನೀಡಿದ್ದರು. ಸಿನಿಮಾದಲ್ಲಿ ಸಲ್ಲು ಎದುರು ಕಿಚ್ಚನ ಖದರ್ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದರು. 


ಪುಲಿ
3

ಕಾಲಿವುಡ್ ನಟ ದಳಪತಿ ವಿಜಯ್ ಅಭಿನಯದ 'ಪುಲಿ' ಸಿನಿಮಾದಲ್ಲಿ ಸುದೀಪ್ ಜಲತರಂಗನ್ ಎಂಬ ಖಳನಾಯಕನ ಪಾತ್ರದಲ್ಲಿ ನಟಿಸಿದ್ದರು. ಇದೊಂದು ಆಕ್ಷನ್ ಫ್ಯಾಂಟಸಿ ಚಿತ್ರವಾಗಿತ್ತು. 2015ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಚಿಂಬು ದೇವೆನ್ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ಸುದೀಪ್ ವಿಭಿನ್ನ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದರು. 


ವಾಲಿ
4

'ವಾಲಿ' ಸಿನಿಮಾದಲ್ಲಿ ಸಿನಿಮಾದಲ್ಲಿ ಸುದೀಪ್ ಅಪ್ಪಟ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಒಡಹುಟ್ಟಿದವನ ಪತ್ನಿಯನ್ನೇ ಮೋಹಿಸುವ, ಕಾಮಿಸಲು ಹಾತೊರೆಯುವ ವ್ಯಕ್ತಿಯ ಪಾತ್ರದಲ್ಲಿ ಸುದೀಪ್ ನಟಿಸಿದ್ದರು. ಈಗಿನ ಯಾವೊಬ್ಬ ನಾಯಕ ನಟನೂ ಒಪ್ಪದ ಮಾದರಿಯ ಪಾತ್ರ ಅದಾಗಿತ್ತು. ಆದರೆ, ಕಿಚ್ಚ ಆ ಸಿನಿಮಾ ಒಪ್ಪಿಕೊಂಡರು. ವಿಲನ್ ಪಾತ್ರದಲ್ಲಿನ ಅವರ ನಟನೆ, ಅವರೆಷ್ಟು ಅದ್ಭುತವಾದ ನಟ ಎಂಬುದನ್ನು ಸಾರಿ ಹೇಳಿತು. ಸುದೀಪ್‌ರ ಈವರೆಗಿನ ಅತ್ಯುತ್ತಮ ಫರ್ಮಾಮೆನ್ಸ್‌ಗಳಲ್ಲಿ 'ವಾಲಿ' ನಂಬರ್ ಒನ್‌ ಎನ್ನಬಹುದೇನೋ. 


കൂടുതല്‍ കാണാം

ಕೋಟಿಗೊಬ್ಬ-2
5

2016ರಲ್ಲಿ ಬಿಡುಗಡೆಯಾದ 'ಕೋಟಿಗೊಬ್ಬ-2' ಚಿತ್ರದಲ್ಲೂ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದರು. ಅದರಲ್ಲಿ ಒಂದು ಪಾತ್ರದ ಹೆಸರು 'ಶಿವ', ಮತ್ತೊಂದು ಪಾತ್ರದ ಹೆಸರು 'ಸತ್ಯ'. ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡಿಕೊಂಡು ಪ್ರಾಮಾಣಿಕ ಬದುಕನ್ನು ಸಾಗಿಸುವ ಸಾಧು ಯುವಕ ಸತ್ಯ ಹಾಗೂ ಸತ್ಯನಿಗೆ ತದ್ವಿರುದ್ಧ ಕ್ಯಾರೆಕ್ಟರ್ ಈ ಶಿವ. ಈತ  ಕೋಟಿ ಲೂಟಿ ಮಾಡುವುದರಲ್ಲಿ ಎಕ್ಸ್‌ಪರ್ಟ್. ಈ ಎರಡು ಪಾತ್ರಗಳಲ್ಲೂ ಸುದೀಪ್ ಅದ್ಭುತವಾಗಿ ನಟಿಸಿದ್ದರು. 




കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+