X
ഹോം ടോപ് ലിസ്റ്റിങ്ങ്‌

ಮೂರನೇ ಕೃಷ್ಣಪ್ಪ ಟು ದ ಜಡ್ಜ್‌ಮೆಂಟ್: ಈ ವಾರ ಬಿಡುಗಡೆಯಾದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

Author: Sowmya Bairappa | Updated: Friday, May 24, 2024, 10:05 AM [IST]

ಈ ವರ್ಷ ಕನ್ನಡದ ಯಾವ ಸಿನಿಮಾಗಳು ಹಿಟ್ ಆಗಲಿಲ್ಲ. ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಹೀಗಾಗಿ, ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ ಮುಕ್ತಾಯಗೊಂಡಿದ್ದು, ಐಪಿಎಲ್ ಸರಣಿಗೆ ಮೇ ೨೬ರಂದು ತೆರೆ ಬೀಳಲಿದೆ. ಈ ವಾರ ದೊಡ್ಡ ಸಿನಿಮಾಗಳು ಅಲ್ಲದೇ, ಇದ್ದರೂ ಒಂದಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಹಾಗಾದ್ರೆ, ಈ ವಾರ ಬಿಡುಗಡೆಯಾದ ಕನ್ನಡ ಸಿನಿಮಾಗಳು ಯಾವವು ಎಂಬ ಮಾಹಿತಿ ಇಲ್ಲಿದೆ.

Share:
cover image
ದ ಜಡ್ಜ್‌ಮೆಂಟ್

ಕ್ರೇಜಿ ಸ್ಟಾರ್ ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ದ ಜಡ್ಜ್‌ಮೆಂಟ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಗುರುರಾಜ್ ಕುಲಕರ್ಣಿ ನಿರ್ದೇಶನದ ಈ ಚಿತ್ರದಲ್ಲಿ  'ಸೀ ಯು ಇನ್ ಕೋರ್ಟ್' ಎನ್ನುವ ಅಡಿಬರಹವಿದೆ. ಚಿತ್ರದಲ್ಲಿ  ದಿಗಂತ್ ಮಂಚಾಲೆ, ಧನ್ಯಾ ರಾಮ್‌ಕುಮಾರ್, ಮೇಘನಾ ಗಾಂವ್ಕರ್ ಕೃಷ್ಣ ಹೆಬ್ಬಾಳೆ, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ. ಇದೊಂದು ಕೋರ್ಟ್ ಡ್ರಾಮಾ ಸಿನಿಮಾವಾಗಿದೆ.

കൂടുതല്‍ കാണാം


ಮೂರನೇ ಕೃಷ್ಣಪ್ಪ

ಸಂಪತ್ ಮೈತ್ರಿಯಾ ಹಾಗೂ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಮೂರನೇ ಕೃಷ್ಣಪ್ಪ' ಸಿನಿಮಾ ಕೂಡ ಮೇ 24ರಂದು ತೆರೆಗೆ ಬರಲಿದೆ. ಕೋಲಾರ ಭಾಗದ ಭಾಷೆಯ ಸೊಗಡು ಹೊಂದಿರುವ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಶ್ರೀಪ್ರಿಯಾ, ತುಕಾಲಿ ಸಂತೋಷ್, ಉಗ್ರಂ ಮಂಜು ಸೇರಿದಂತೆ ಹಲವರ ತಾರಾಗಣವಿರುವ ಈ ಚಿತ್ರ ಟೈಟಲ್‌ನಿಂದಲೇ ಸಿನಿಮಾ ಗಮನ ಸೆಳೆದಿದೆ. ನವೀನ್ ನಾರಾಯಣ ಘಟ್ಟ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

കൂടുതല്‍ കാണാം

ಎವಿಡೆನ್ಸ್

'ಎವಿಡೆನ್ಸ್' ಸಿನಿಮಾ ಕೂಡ ಈ ಶುಕ್ರವಾರ ರಿಲೀಸ್ ಆಗಲಿದೆ. ಸಿ.ಪಿ ಪ್ರವೀಣ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಕೊಲೆಯೊಂದು ನಡೆದಾಗ ಅದರ ಸಾಕ್ಷ್ಯಾಧಾರ ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್, ಸಸ್ಪೆನ್ಸ್ , ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥೆಯಿದೆ. ಮಂಗಳಗೌರಿ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಮಾನಸ ಜೋಷಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಜೋಶ್ ಖ್ಯಾತಿಯ ರೋಬೊ ಗಣೇಶ್, ಆಕರ್ಷ್ ಆದಿತ್ಯ, ಪೂಜಿತಾ ಬೋಬೆಗೌಡ, ರಚಿತಾ, ಮನಮೋಹನ್ ರೈ ಚಮಕ್ ಚಂದ್ರ, ಶಿವಕುಮಾರ್ ಆರಾದ್ಯ, ಪವನ್ ಸುರೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ.

കൂടുതല്‍ കാണാം


ಬ್ಯಾಡ್

ಪಿ.ಸಿ ಶೇಖರ್ ನಿರ್ದೇಶನದ 'ಬ್ಯಾಡ್' ಚಿತ್ರ ಕೂಡ ಈ ವಾರ ರಿಲೀಸ್ ಆಗಲಿದೆ. ಚಿತ್ರದಲ್ಲಿ ಯುವನಟ ನಕುಲ್ ಗೌಡ ನಾಯಕನಾಗಿ ಹಾಗೂ ಮಾನ್ವಿತಾ ಕಾಮತ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಪೂರ್ವ ಭಾರಧ್ವಾಜ್, ಅಶ್ವಿನಿ, ಮಂಜುನಾಥ್, ಸಾಯಿಕೃಷ್ಣ, ಅಶ್ವಿನಿ ಪೊಲೆಪಲ್ಲಿ ಸೇರಿದಂತೆ ಹಲವರು ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣ ಸಿನಿಮಗಿದೆ. ಎಸ್.ಆರ್ ವೆಂಕಟೇಶ್ ಗೌಡ ಬ್ಯಾಡ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜಪಾನ್ ಶೈಲಿ ಅಳವಡಿಸಿಕೊಳ್ಳನಾಗಿದ್ದು, ನಾಯಕ ಮತ್ತು ನಾಯಕಿ ಅಂತಿಲ್ಲ. ಎಲ್ಲವೂ ವಿಲನ್ ಪಾತ್ರಗಳೇ. ಅದರಲ್ಲಿಯೇ ಕೆಲವು ಮುಖ್ಯ ವಿಲನ್‌ಗಳಿರುತ್ತಾರಷ್ಟೆ. ರೋಷಮಾನ್ ಎಫೆಕ್ಟ್ ಎಂಬ ವಿಧಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.  

കൂടുതല്‍ കാണാം

3ದೇವಿ

ಅಶ್ವಿನ್ ಎ. ಮ್ಯಾಥ್ಯೂ ಆಕ್ಷನ್ ಕಟ್ ಹೇಳಿರುವ 3ದೇವಿ ಸಿನಿಮಾ ಕೂಡ ನಾಳೆ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಶುಭಾ ಪೂಂಜಾ, ಸಂಧ್ಯಾ ಲಕ್ಷ್ಮೀನಾರಾಯಣ, ಜ್ಯೋತ್ಸ್ನಾ ಬಿ.ರಾವ್, ಅಶ್ವಿನ್ ಎ ಮ್ಯಾಥ್ಯೂ, ಜಯದೇವ ಮೋಹನ್, ನಿಖಿಲ್ ಭಾರದ್ವಾಜ್ ಮುಂತಾದವರು ನಟಿಸಿದ್ದಾರೆ. ಡಾಸ್ಮೋಡ್ ಸಂಗೀತ ನಿರ್ದೇಶನ ಸಿನಿಮಾವಾಗಿದೆ.  ಇದರ ಜೊತೆಗೆ 'ಸೆಲ್ಯೂಟ್' ಎನ್ನುವ ಮತ್ತೊಂದು ಕನ್ನಡ ಸಿನಿಮಾ ತೆರೆಗೆ ಬರಲಿದೆ.




കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+