X
ഹോം ടോപ് ലിസ്റ്റിങ്ങ്‌

ಕನ್ನಡ ಸಿನಿಮಾಗಳಲ್ಲ ನಟಿಸಿದ ಸೌತ್ ಸೂಪರ್ ಸ್ಟಾರ್‌ಗಳಿವರು!

Author: Sowmya Bairappa | Updated: Thursday, May 9, 2024, 01:19 PM [IST]

ಕನ್ನಡ ಚಿತ್ರರಂಗದ ಆರಂಭದಿಂದಲೂ ಪರಭಾಷಾ ನಟ-ನಟಿಯರನ್ನು ಇಲ್ಲಿಗೆ ಕರೆತರುವ ಸಂಪ್ರದಾಯವಿದೆ. ಬೇರೆ ಭಾಷೆಯ ಅನೇಕ ಕಲಾವಿದರು ಕನ್ನಡದಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಕನ್ನಡದ ನಟರು ಬೇರೆ ಭಾಷೆಯ ಸಿನಿಮಾಗಳಲ್ಲಿ, ಬೇರೆ ಭಾಷೆಯ ನಟರು ಕನ್ನಡದಲ್ಲಿ ನಟಿಸುವುದು ಸಾಮಾನ್ಯವಾಗಿದೆ. ಇಲ್ಲಿ ಕನ್ನಡ ಸಿನಿಮಾಗಳಲ್ಲಿ ಬಣ್ಣಹಚ್ಚಿದ ಬೇರೆ ಭಾಷೆಯ ಐದು ಸೂಪರ್‌ ಸ್ಟಾರ್‌ಗಳ ಪಟ್ಟಿಯನ್ನು ನೀಡಲಾಗಿದೆ.

Share:
cover image
ಚಿರಂಜೀವಿ

ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ನಟಿಸಿದ ಮೊದಲ ಕನ್ನಡ ಸಿನಿಮಾ ಸಿಪಾಯಿ. ಈ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಮುದ್ದು ಮುಖದ ಚೆಲುವೆ ಸೌಂದರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸಿಪಾಯಿಯಲ್ಲಿ ಚಿರಂಜೀವಿ ಅವರದ್ದು ಅತಿಥಿ ಪಾತ್ರ. ಅಂದ್ಹಾಗೆ ಮೊದಲು ಸಿಪಾಯಿನ ಕಥೆ ಮಾಡಿದಾಗ ಚಿರಂಜೀವಿ ಪಾತ್ರ ಇರಲಿಲ್ಲ. ಆನಂತರದಲ್ಲಿ ಕಥೆಯಲ್ಲಿ ಬದಲಾವಣೆಯಾಗಿ, ದೊಡ್ಡ ಕ್ಯಾರೆಕ್ಟರ್ ಬರಬೇಕು ಅಂದಾಗ  ಚಿರಂಜೀವಿ ಅವರ ಹೆಸರು ಬಂತು. ಚಿರಂಜೀವಿ ಸಿಪಾಯಿ ಸಿನಿಮಾದಲ್ಲಿ ಸೈನಿಕನಾಗಿ ಅತಿಥಿ ಪಾತ್ರ ಮಾಡಿದ್ದರೂ ಕನ್ನಡ ಸಿನಿರಸಿಕರು ಇನ್ನೂ ಆ ಪಾತ್ರ ಮರೆತಿಲ್ಲ. ಈ ಸಿನಿಮಾವನ್ನು ರವಿಚಂದ್ರನ್ ಅವರೇ ನಿರ್ದೇಶಿಸಿ,  ನಟಿಸಿ, ನಿರ್ಮಾಣ ಕೂಡ ಮಾಡಿದ್ದರು.

കൂടുതല്‍ കാണാം


ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳಿಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿದಂತೆ ತಲೈವಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಮೊಟ್ಟ ಮೊದಲ ಬಾರಿಗೆ ನಟಿಸಿದ ಕನ್ನಡ ಸಿನಿಮಾ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾಸಂಗಮ. ಈ ಚಿತ್ರದಲ್ಲಿ ಪುಟ್ಟಣ್ಣನವರು ಒಂದು ಚಿತ್ರದಲ್ಲಿ ಮೂರು ಭಿನ್ನ ಉಪಕಥೆಗಳನ್ನು ಸೇರಿಸಿ ಚಿತ್ರ ಮಾಡಿದ್ದರು. ಭಾರತೀಯ ಚಿತ್ರರಂಗದಲ್ಲೇ ಇದೊಂದು ಅಭೂತಪೂರ್ವ ಪ್ರಯೋಗವಾಗಿತ್ತು. ಚಿತ್ರದಲ್ಲಿ ರಜನಿಕಾಂತ್ ಮುನಿತಾಯಿ ಕಥಾಭಾಗದಲ್ಲಿ ನಟಿಸಿದ್ದರು. ಇದಾದ ಬಳಿಕ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಐ ಪೈಕಿ ಕಥಾಸಂಗಮ, ಸಹೋದರರ ಸವಾಲ್ ಹಾಗೂ ಗಲಾಟೆ ಸಂಸಾರ ಜನಪ್ರಿಯ ಚಿತ್ರಗಳು.

കൂടുതല്‍ കാണാം

ಕಮಲ್ ಹಾಸನ್

ಕಮಲ್ ಹಾಸನ್ ನಟನೆಯ ಮೊದಲ ಕನ್ನಡ ಸಿನಿಮಾ ಬಾಲು ಮಹೇಂದ್ರ ನಿರ್ದೇಶನದ 'ಕೋಕಿಲ'. ಈ ಚಿತ್ರದಲ್ಲಿ ಕಮಲ್‌ 'ವಿಜಯ್‌ಕುಮಾರ್' ಅನ್ನೋ ಪಾತ್ರ ನಿರ್ವಹಿಸಿದ್ದರು. ಕಮಲ್ ಅವರಿಗೆ ಜೋಡಿಯಾಗಿ ಶೋಭಾ ನಟಿಸಿದ್ದರು. ಈ ಚಿತ್ರದಲ್ಲಿ ಅಭಿನಯಿಸಬೇಕಾದರೆ ಕಮಲ್ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಆದರೂ ಅವರೇ ಡಬ್ ಮಾಡಿರುವುದು ವಿಶೇಷ. ಇದೇ ಚಿತ್ರ ಮಲಯಾಳಂ ಭಾಷೆಗೆ 'ಊಮ ಕುಯಿಲ್‌' ಎಂದು ರಿಮೇಕ್‌ ಆದರೆ, ಹಿಂದಿಗೆ 'ಔರ್ ಏಕ್‌ ಪ್ರೇಮ್‌ ಕಹಾನಿ' ಹೆಸರಿನಲ್ಲಿ ರಿಮೇಕ್ ಆಗಿತ್ತು. ಆನಂತರ ರಾಮ ಶ್ಯಾಮ ಭಾಮ, ಸತಿ ಲೀಲಾತಿ ಚಿತ್ರಗಳಲ್ಲಿ ನಟಿಸಿದ್ದರು.

കൂടുതല്‍ കാണാം


ಮೋಹನ್ ಲಾಲ್

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ ಲಾಲ್ ಅಭಿನಯದ ಮೊದಲ ಕನ್ನಡ ಸಿನಿಮಾ ಆದಿತ್ಯಾ ಮತ್ತು ರಕ್ಷಿತ ಅಭಿನಯದ 'ಲವ್'. ಈ ಸಿನಿಮಾದಲ್ಲಿ ದುಬೈನ ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರಿಗೆ ಮೋಡಿ ಮಾಡಿದ್ದರು. ಆ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ 'ಮೈತ್ರಿ' ಚಿತ್ರದ ದ್ವೀತಿಯಾರ್ಧದಲ್ಲಿ ನಟಿಸಿದ್ದರು. ಈ ಎರಡು ಸಿನಿಮಾಗಳಲ್ಲೂ ತಮ್ಮದೇ ಧ್ವನಿಯಲ್ಲಿ ಡಬ್ಬಿಂಗ್ ಕೂಡ ಮಾಡಿದ್ದರು.   

കൂടുതല്‍ കാണാം

ಮಮ್ಮೂಟಿ

ಮಾಲಿವುಡ್‌ನ ಮೆಗಾ ಸ್ಟಾರ್ ಮಮ್ಮುಟಿ ನಟನೆಯ ಕನ್ನಡ ಸಿನಿಮಾ 'ಶಿಕಾರಿ'. ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಭಯ್ ಸಿಂಹ ನಿರ್ದೇಶನ ಮಾಡಿದ್ದರು. ಶಿಕಾರಿ ಚಿತ್ರದಲ್ಲಿ ಆದಿತ್ಯ, ನೀನಾಸಂ ಅಚ್ಯುತ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್, ಪೂನಂ ಬಾಜ್ವಾ ನಟಿಸಿದ್ದರು. ಈ ಸಿನಿಮಾ ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿತ್ತು.



കൂടുതല്‍ കാണാം


ರವಿತೇಜ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿಯದ  'ವಜ್ರಕಾಯ' ಚಿತ್ರದಲ್ಲಿನ ಇಂಟ್ರೋಡಕ್ಷನ್ ಸಾಂಗ್‌ನಲ್ಲಿ ಟಾಲಿವುಡ್‌ನ ಮಾಸ್ ಮಹಾರಾಜ ರವೀತೇಜ ಹೆಜ್ಜೆ ಹಾಕಿದ್ದರು. ಇನ್ನೊಂಧು ವಿಶೇಷವೆಂದರೆ ರವೀತೇಜ ಅವರು ಕನ್ನಡದಲ್ಲಿ ಸ್ಟೆಪ್ ಹಾಕುವುದಕ್ಕೆ ಒಂದು ರೂಪಾಯಿ ಕೂಡ ಸಂಭಾವನೆ ಪಡೆದಿರಲಿಲ್ಲವಂತೆ. ಶಿವಣ್ಣನ ಮೇಲಿನ ಅಭಿಮಾನದಿಂದ ವಜ್ರಕಾಯ ಸಿನಿಮಾದಲ್ಲಿ ಡಾನ್ಸ್ ಮಾಡಿದ್ದರು. ಇನ್ನು ಇದೇ ಹಾಡಲ್ಲಿ ಯುವ ನಟರಾಗಿರುವ ಕಾಲಿವುಡ್‌ನ ಶಿವಕಾರ್ತಿಕೇಯನ್ ಮತ್ತು ಮಾಲಿವುಡ್ ನಟ ದಿಲೀಪ್ ಕುಮಾರ್ ಕೂಡ ಕಾಣಿಸಿಕೊಂಡಿದ್ದರು. 

കൂടുതല്‍ കാണാം

ಆರ್ಯ

ನಾನ್ ಕಡವಳ್, ರಾಜರಾಣಿಯಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ನಟ ಆರ್ಯ, ಕನ್ನಡದ 'ರಾಜರಥ' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದರು. ಈ ಸಿನಿಮಾವನ್ನು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದರು. 


കൂടുതല്‍ കാണാം


Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+