ಕೋವಿಡ್ ಮಹಾಮಾರಿಯಿಂದ ಬಹುವಾಗಿ ಬಳಲಿದ್ದ ಚಲನಚಿತ್ರೋದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತದೆ. ಲಾಕ್ ಡೌನ್ ನಲ್ಲಿ ಕೇವಲ ಓಟಿಟಿ ಮಾಧ್ಯಮಗಳಲ್ಲಿ ತೆರೆ ಕಾಣುತ್ತಿದ್ದ ಚಿತ್ರಗಳು, ಚಿತ್ರಮಂದಿರಗಳು ಮತ್ತೆ ಓಪನ್ ಆಗಿರುವುದರಿಂದ ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳು ಬಿಡುಗಡೆಗೆ ತಯಾರಾಗಿವೆ. ಇಲ್ಲಿ ಆಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಚಲನಚಿತ್ರಗಳನ್ನು ನೀಡಲಾಗಿದೆ.
ಸೂರಜ್ ಗೌಡ ನಿರ್ದೇಶಿಸಿ ನಾಯಕನಾಗಿ ನಟಿಸಿರುವ `ನಿನ್ನ ಸನಿಹಕೆ' ಚಿತ್ರ ಆಕ್ಟೋಬರ್ 8 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಯಕಿಯಾಗಿ ಡಾ. ರಾಜ್ ವಂಶದ ಕುಡಿ ಧನ್ಯಾ ರಾಮಕುಮಾರ್ ನಟಿಸಿದ್ದಾರೆ. ಈ ಚಿತ್ರ ಲೀವ್ ಇನ್ ರಿಲೇಷನಷಿಪ್ ಕುರಿತಾಗಿದೆ.
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-ನಿನ್ನ ಸನಿಹಕೆ/top-listing/most-anticipated-top-indian-movies-releasing-in-the-theatres-in-october-3-1018.html#ninna-sanihake
2
ದುನಿಯಾ ವಿಜಯ್ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿರುವ ಸಲಗ ಚಿತ್ರ ಕೂಡ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ. ಡಾಲಿ ದನಂಜಯ್ ಖಡಕ್ ಪೋಲಿಸ್ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.
കൂടുതല് കാണാം
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-ಸಲಗ/top-listing/most-anticipated-top-indian-movies-releasing-in-the-theatres-in-october-3-1018.html#salaga
3
ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್ ಜೊತೆ ನಾಯಕಿಯಾಗಿ ಮಡೋನಾ ಸೆಬಾಸ್ಟಿಯನ್ ನಾಯಕಿಯಾಗಿ ನಟಿಸಿದ್ದಾರೆ. ಸೂರಪ್ಪ ಬಾಬು ಬಂಡವಾಳ ಹಾಕಿರುವ ಈ ಚಿತ್ರ ದಸರಾ ಪ್ರಯುಕ್ತ ಬಿಡುಗಡೆಯಾಗಲಿದೆ.
കൂടുതല് കാണാം
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-ಕೋಟಿಗೊಬ್ಬ 3/top-listing/most-anticipated-top-indian-movies-releasing-in-the-theatres-in-october-3-1018.html#kotigobba-3
4
ಮೈನಾ ನಾಗಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಶ್ರೀಕೃಷ್ಣ@ಜೀಮೇಲ್.ಕಾಮ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಭಾವನಾ ಮೆನನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ. ರಿಷಭ್ ಶೆಟ್ಟಿ ಮತ್ತು ಚಂದು ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
കൂടുതല് കാണാം
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-ಶ್ರೀಕೃಷ್ಣ@Gmail.com/top-listing/most-anticipated-top-indian-movies-releasing-in-the-theatres-in-october-3-1018.html#srikrishna-gmail-com
5
ಎ ಹರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶಿವಣ್ಣ ಮತ್ತೆ ಭಜರಂಗಿಯಾಗಿ ಅಬ್ಬರಿಸಿದ್ದಾರೆ. ಶಿವಣ್ಣನಿಗೆ ನಾಯಕಿಯಾಗಿ ಭಾವನಾ ನಟಿಸಿದ್ದರೆ, ಶೃತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸೌರವ ಲೋಕೇಶ್ ಮೊದಲ ಚಿತ್ರದಂತೆ, ಈ ಚಿತ್ರದಲ್ಲೂ ಖಡಕ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.
കൂടുതല് കാണാം
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-ಭಜರಂಗಿ 2/top-listing/most-anticipated-top-indian-movies-releasing-in-the-theatres-in-october-3-1018.html#bhajarangi-2
6
ರಾಘವೇಂದ್ರ ನಿರ್ದೇಶನದಲ್ಲಿ ಮೂಡಿಬಂದಿರುವ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಪ್ರೇಮ ಕುಮಾರ್ ಮತ್ತು ಬೃಂದಾ ಆಚಾರ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಪ್ರೇಮ್ ರ 25 ನೇ ಚಿತ್ರವಾಗಿದ್ದು, ಆಕ್ಟೋಬರ್ 29 ರಂದು ಬಿಡುಗಡೆಯಾಗಲಿದೆ.
കൂടുതല് കാണാം
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-ಪ್ರೇಮಂ ಪೂಜ್ಯಂ/top-listing/most-anticipated-top-indian-movies-releasing-in-the-theatres-in-october-3-1018.html#premam-poojyam
7
ಶೂಜಿತ್ ಸರ್ಕಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸರ್ದಾರ್ ಉದಾಮ್ ಸಿಂಗ್ ಚಿತ್ರದಲ್ಲಿ ವಿಕ್ಕಿ ಕೌಶಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 1919 ರಲ್ಲಿ ನೆಡೆದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಪ್ರತೀಕಾರವಾಗಿ ಸರ್ದಾರ್ ಉದಾಮ್ ಸಿಂಗ್ ಲಂಡನ್ ನಲ್ಲಿ ಮೈಕಲ್ ಡಾಯರ್ ನನ್ನು ಹತ್ಯೆ ಮಾಡುತ್ತಾನೆ.ಈ ಚಿತ್ರ ಅಮೇಜಾನ್ ಪ್ರೈಮ್ ವೀಡಿಯೋನಲ್ಲಿ ಬಿಡುಗಡೆಯಾಗಲಿದೆ.
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-Sardar Udam Singh/top-listing/most-anticipated-top-indian-movies-releasing-in-the-theatres-in-october-3-1018.html#sardar-udam-singh
ಆಕರ್ಷ್ ಖುರಾನಾ ನಿರ್ದೇಶನದಲ್ಲಿ ಮೂಡಿಬಂದಿರುವ ರಶ್ಮಿ ರಾಕೆಟ್ ಚಿತ್ರದಲ್ಲಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಒಂದು ಚಿಕ್ಕ ಹಳ್ಳಿಯಿಂದ ಬರುವ ಸಾಮಾನ್ಯ ಹುಡುಗಿ ಹೇಗೆ ತನ್ನ ಕ್ರೀಡೆಯಿಂದ ಹೇಗೆ ಯಶಸ್ಸು ಸಾಧಿಸುತ್ತಾಳೆ ಎಂಬುದು ಚಿತ್ರದ ಕಥೆ. ಈ ಚಿತ್ರ ಆಕ್ಟೋಬರ್ 15 ರಂದು ಜೀಫೈನಲ್ಲಿ ಬಿಡುಗಡೆಯಾಗಲಿದೆ.
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-Rashmi Rocket/top-listing/most-anticipated-top-indian-movies-releasing-in-the-theatres-in-october-3-1018.html#rashmi-rocket
9
ಅಮಿತ್ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ ಮೈದಾನ್ ಚಿತ್ರದಲ್ಲಿ ಅಜಯ್ ದೇವಗನ್ ಪುಟ್ಬಾಲ್ ತಂಡದ ಕೋಚ್ ಸಯ್ಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ನಟಿಸಿದ್ದಾರೆ. 1952 ರಿಂದ 1962 ರವರೆಗಿನ ಪುಟ್ಬಾಲ್ ಕ್ರೀಡೆಯ ಬೆಳವಣಿಗೆಗಳ ಬಗೆಯ ಕುರಿತ ಚಿತ್ರವಾಗಿದೆ.
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-Maidaan/top-listing/most-anticipated-top-indian-movies-releasing-in-the-theatres-in-october-3-1018.html#maidaan
10
ಕುನಾಲ್ ದೇಶಮುಖ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿದ್ಧತ್ ಚಿತ್ರದಲ್ಲಿ ರಾಧಿಕಾ ಮದನ್, ಸನ್ನಿ ಕುಶಾಲ್, ಮೋಹಿತ್ ರೈನಾ ಮತ್ತು ಡಯಾನಾ ಪೆಂಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವೂ ಡಿಸ್ನಿ ಪ್ಲಸ್ ಹಾಟಸ್ಟಾರ್ ನಲ್ಲಿ ಆಕ್ಟೋಬರ್ ಒಂದರಂದು ಪ್ರಸಾರವಾಗಲಿದೆ.
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-Shiddat/top-listing/most-anticipated-top-indian-movies-releasing-in-the-theatres-in-october-3-1018.html#shiddat
11
ಆಂಡಿ ಸರ್ಕಿಸ್ ನಿರ್ದೇಶನದಲ್ಲಿ ಮೂಡಿಬಂದಿರುವ ವೆನಮ್: ಲೆಟ್ ದೇರ್ ಬಿ ಕಾರ್ನೇಜ್ ಚಿತ್ರದಲ್ಲಿ ಟಾಮ್ ಹಾರ್ಡಿ, ಮಿಷೆಲ್ ವಿಲಿಯಮ್ಸ್ ಮತ್ತು ವೂಡಿ ಹ್ಯಾರೆಲ್ಸನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 2018 ರಲ್ಲಿ ತೆರೆಕಂಡ ವೆನಮ್ ಚಿತ್ರದ ಮುಂದುವರೆದ ಭಾಗವಾಗಿ ಈ ಚಿತ್ರ ಮೂಡಿ ಬರಲಿದೆ.
ಆಕ್ಟೋಬರ್ 2021 ರಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಚಲನಚಿತ್ರಗಳು-Venom: Let There Be A Carnage/top-listing/most-anticipated-top-indian-movies-releasing-in-the-theatres-in-october-3-1018.html#venom-let-there-be-a-carnage
Disclaimer
The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.