X
ഹോം ടോപ് ലിസ്റ്റിങ്ങ്‌

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಕಂಠಿಯ ನಿಜವಾದ ಹೆಸರು, ವಯಸ್ಸು, ವಿದ್ಯಾರ್ಹತೆ ಸೇರಿದಂತೆ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

Author: Sowmya Bairappa | Published: Friday, April 26, 2024, 11:25 AM [IST]

ಜೀ ಕನ್ನಡ ವಾಹಿನಿಯ 'ಪುಟ್ಟಕ್ಕನ ಮಕ್ಕಳು' ಪ್ರೇಕ್ಷಕರ ನೆಚ್ಚಿನ ಸೀರಿಯಲ್‌ಗಳಲ್ಲೊಂದು. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ವೀಕ್ಷಕರಿಗೆ ಇಷ್ಟವಾಗಿದೆ. ಅದರಲ್ಲಿಯೂ 'ಕಂಠಿ' ಪಾತ್ರ ಹೆಚ್ಚು ಗಮನ ಸೆಳೆಯುತ್ತಿದೆ. ಕಂಠಿಯ ರಗಡ್ ಲುಕ್, ಮಂಡ್ಯ ಶೈಲಿಯ ಭಾಷೆ ಸೀರಿಯಲ್ ಪ್ರಿಯರು ಫಿದಾ ಆಗಿದ್ದಾರೆ. ಇಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಂಠಿ ಪಾತ್ರಧಾರಿಯ ನಿಜವಾದ ಹೆಸರು, ವಯಸ್ಸು, ವಿದ್ಯಾರ್ಹತೆ ಸೇರಿದಂತೆ ಕೆಲ ಇಂಟರೆಸ್ಟಿಂಗ್ ವಿಷಯಗಳನ್ನು ಇಲ್ಲಿ ನೀಡಲಾಗಿದೆ.

Share:
cover image
ನಿಜವಾದ ಹೆಸರು ಮತ್ತು ವಯಸ್ಸು

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಂಠಿ ಪಾತ್ರಧಾರಿಯ ನಿಜವಾದ ಹೆಸರು ಧನುಷ್ ಎನ್‌ ಎಸ್. 1998ರಲ್ಲಿ ಜನಸಿದ ಧನುಷ್ ಅವರಿಗೆ ಈಗ 26 ವರ್ಷ ಎನ್ನಲಾಗಿದೆ. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನಾಯಕರನ್ನು ನೋಡಿ, ಅವರಂತೆಯೇ ತಾನಾಗಬೇಕು ಎಂಬ ಕನಸು ಕಂಡದ್ದ ಧನುಶ್ ಈಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಆ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ.



ಊರು & ವಿದ್ಯಾರ್ಹತೆ

ಕೋಲಾರ ಜಿಲ್ಲೆಯ ಸಂತೆಹಳ್ಳಿ ನಟ ಧನುಷ್ ಅವರ ಹುಟ್ಟೂರು. ಇವರ ತಂದೆ ಉದ್ಯಮಿ ಹಾಗೂ ರಾಜಕೀಯ ಪಕ್ಷವೊಂದರ ಜಿಲ್ಲಾ ಮಟ್ಟದ ಪದಾಧಿಕಾರಿ. ಇವರು ಸಿವಿಲ್‌ ಎಂಜಿನಿಯರಿಂಗ್ ಮುಗಿಸಿರುವ ಇವರು, ಶಿಕ್ಷಣ ಮುಗಿದಿದ್ದೇ ತಡ ನೇರವಾಗಿ ಬಣ್ಣದ ಲೋಕಕ್ಕೆ ಧುಮುಕಿದರು. 


ಕಿರು ಚಿತ್ರಗಳು

ನಟ ಧನುಷ್ ಅವರು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವುದಕ್ಕೂ ಮುನ್ನ ಅನಿರೀಕ್ಷಿತ, 18+2 ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ನನ್ನ ನಗು ಹಾಗೂ ಮನಸ್ಸೆಲ್ಲಾ ನೀನೆ ವಿಡಿಯೋ ಆಲ್ಬಂ ಸಾಂಗ್ ಮಾಡಿದ್ದಾರೆ. ನಂತರ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆಡಿಷನ್‌ನಲ್ಲಿ ಭಾಗವಹಿಸಿ ಧಾರಾವಾಹಿಗೆ ಆಯ್ಕೆ ಆಗಿ, ಈಗ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಬ್ಬರಾಗಿದ್ದಾರೆ.


ಸಾಕಷ್ಟು ಭಾರಿ ಆಡಿಷನ್ ನೀಡಿದ್ದರು

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೂ ಮುನ್ನ ಧನುಷ್ ಸಾಕಷ್ಟು ಸೀರಿಯಲ್‌ಗಳಿಗೆ ಆಡಿಷನ್ ನೀಡಿದ್ದರು. ಆದರೆ, ಅದೃಷ್ಟ ಕೈಹಿಡಿದಿರಲಿಲ್ಲ. ಅದೃಷ್ಟವಶಾತ್ ಹಾಗೂ ಪ್ರತಿಭೆಯ ಕಾರಣಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಆಯ್ಕೆಯಾದರು. ಇದು ಇವರ ಮೊದಲ ಧಾರಾವಾಹಿಯ ಆದರೂ ಅಚ್ಚುಕಟ್ಟಾಗಿ ನಟನೆ ಮಾಡುತ್ತಿದ್ದಾರೆ. ಕೋಲಾರ ಭಾಗದ ಭಾಷೆಗೂ, ಮಂಡ್ಯ ಭಾಷೆಗೂ ಸಾಮ್ಯತೆ ಇರುವುದರಿಂದ ಈ ಧಾರಾವಾಹಿಯಲ್ಲಿ ಮಂಡ್ಯದ ಭಾಷೆ ಬಳಸುವುದು ಧನುಷ್‌ ಅವರಿಗೆ ಸುಲಭವಾಯಿತಂತೆ. 


ಸಿನಿಮಾದಲ್ಲಿ ಆಫರ್ಸ್

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮ ನ ಮಗ ಶ್ರೀಕಂಠನ ಪಾತ್ರದಲ್ಲಿ ಧನುಷ್ ನಟಿಸುತ್ತಿದ್ದಾರೆ. ಶ್ರೀಕಂಠಿಯದ್ದು ರಗಡ್ ಆಗಿರುವ ಪಾತ್ರ. ಕಂಠಿ ಪಾತ್ರಧಾರಿ ನಟನೆ ಬಹಳ ಜನಕ್ಕೆ ಇಷ್ಟವಾಗಿದೆ. ಇವರ ಲುಕ್‌ಗೆ ಹೆಣ್ಣು ಮಕ್ಕಳಂತೂ ಪಿಧಾ ಆಗಿದ್ದಾರೆ. ಇವರಿಗೆ ಸಿನಿಮಾಗಳಿಗೂ ಸಾಕಷ್ಟು ಆಫರ್ಸ್ ಬರುತ್ತಿದೆಯಂತೆ. ಧನುಷ್ ಸಿನಿಮಾದಲ್ಲಿಯೂ ಕಂಠಿಯಂತಹ ಉತ್ತಮ ಪಾತ್ರ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದಾರಂತೆ. 



Disclaimer

The images featured on this page are sourced from publicly available platforms, official press releases, and promotional materials. These images are published strictly for editorial, informational, and news reporting purposes under the principles of fair use.
We do not claim ownership of any images unless explicitly stated. All image copyrights belong to their respective photographers, production houses, or copyright holders.
If you are the rightful owner of any image and believe that its use on this website is unauthorized or objectionable, please contact us ([email protected]) with proper details. We will promptly review and remove the content if required.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+